Night Curfew ಇದ್ರೂ ಪಾರ್ಟಿ: ಗಟ್ಟಿಮೇಳ ಸೀರಿಯಲ್‌ ನಟ ರಕ್ಷ್‌ ಮೇಲೆ ಕೇಸ್‌

By Kannadaprabha NewsFirst Published Jan 29, 2022, 6:59 AM IST
Highlights

*   ತಡರಾತ್ರಿ ತನಕ ಪಾರ್ಟಿ
*   ನೈಟ್‌ ಕರ್ಫ್ಯೂ ಉಲ್ಲಂಘನೆ
*   ಹೋಟೆಲ್‌ ಮಾಲಿಕ, ಮ್ಯಾನೇಜರ್‌ ಮೇಲೂ ಕೇಸ್‌
 

ಬೆಂಗಳೂರು(ಜ.29):  ಖಾಸಗಿ ವಾಹಿನಿಯ ಗಟ್ಟಿಮೇಳ(Gattimela) ಧಾರವಾಹಿ(Serial) ಖ್ಯಾತಿಯ ನಟ ರಕ್ಷ್‌(Rakksh Gowda) ಮತ್ತು ಆತನ ಸ್ನೇಹಿತರು ಉತ್ತರಹಳ್ಳಿ ರಸ್ತೆಯ ಹೋಟೆಲ್‌ವೊಂದರಲ್ಲಿ ತಡರಾತ್ರಿವರೆಗೂ ಪಾರ್ಟಿ ಮಾಡಿ ರಂಪಾಟ ಮಾಡಿರುವ ಆರೋಪ ಕೇಳಿ ಬಂದಿದೆ.

ನೈಟ್‌ ಕರ್ಫ್ಯೂ(Night Curfew) ನಿಯಮ ಉಲ್ಲಂಘಿಸಿ ತಡರಾತ್ರಿವರೆಗೂ ಪಾರ್ಟಿ ಮಾಡಿದ ಆರೋಪದಡಿ ನಟ ರಕ್ಷ್‌ ಸೇರಿದಂತೆ ರಂಜನ್‌, ರವಿಚಂದ್ರನ್‌, ಅನುಷಾ, ಅಭಿಷೇಕ್‌, ಶರಣ್ಯ, ರಾಕೇಶ್‌ ಕುಮಾರ್‌ ಎಂಬುವರ ವಿರುದ್ಧ ಕೆಂಗೇರಿ ಠಾಣೆ ಪೊಲೀಸರು(Police) ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ನಿಯಮ ಉಲ್ಲಂಘಿಸಿ(Violate the Rule) ತಡರಾತ್ರಿವರೆಗೂ ಪಾರ್ಟಿಗ ಅವಕಾಶ ನೀಡಿದ ಆರೋಪದಡಿ ಜಿಂಜರ್‌ ಲೇಕ್‌ವ್ಯೂವ್‌ ಹೋಟೆಲ್‌(Lakeview Hotel) ಮಾಲೀಕ ಹಾಗೂ ಮ್ಯಾನೇಜರ್‌ ವಿರುದ್ಧವೂ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Chintamani Crime ಮನೆಯಿಂದ ಮಗನನ್ನು ಹೊರಹಾಕಲು ಕೇಸ್‌ ಹಾಕಿ ಗೆದ್ದ ತಂದೆ, ಸೇಡಿಗೆ ಸೇಡು!

ನಟ ರಕ್ಷ್‌ ಹಾಗೂ ಆತನ ಆರು ಮಂದಿ ಸ್ನೇಹಿತರು ಇಲ್ಲಿನ ಜಿಂಜರ್‌ ಲೇಕ್‌ವ್ಯೂವ್‌ ಹೋಟೆಲ್‌ನಲ್ಲಿ ತಡರಾತ್ರಿ 1.30ರವರೆಗೂ ಪಾರ್ಟಿ ಮಾಡಿ ಜೋರಾಗಿ ಗಲಾಟೆ ಮಾಡುತ್ತಿದ್ದರು. ಈ ವೇಳೆ ಸ್ಥಳೀಯರು ಹೊಯ್ಸಳ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು, ರಕ್ಷ್‌ ಮತ್ತು ಆತನ ಸ್ನೇಹಿತರನ್ನು ಪ್ರಶ್ನಿಸಿದಾಗ, ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ರಕ್ಷ್‌ ಹಾಗೂ ಆತನ ಸ್ನೇಹಿತರು ಮದ್ಯ ಅಮಲಿನಲ್ಲಿ ಹೋಟೆಲ್‌ನಲ್ಲಿ ರಂಪಾಟ ಮಾಡುತ್ತಿದ್ದರು. ಇದರಿಂದ ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿಯಾಗಿದ್ದು, ಬಳಿಕ ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಆರೋಪಿಗಳು(Accused) ಮದ್ಯ(Alcohol) ಸೇವಿಸಿರುವ ಬಗ್ಗೆ ಮಾಹಿತಿ ಇಲ್ಲ. ಅವರು ಊಟಕ್ಕೆ ಬಂದಿದ್ದಾಗಿ ತಿಳಿದು ಬಂದಿದೆ. ಇನ್ನು ಹೊಯ್ಸಳ ಪೊಲೀಸರೊಂದಿಗೆ ಯಾವುದೇ ಮಾತಿನ ಚಕಮಕಿ ನಡೆದಿಲ್ಲ. ನೈಟ್‌ ಕರ್ಫ್ಯೂ ಉಲ್ಲಂಘಿಸಿ ಹೋಟೆಲ್‌ ಬಂದಿದ್ದಕ್ಕಾಗಿ ರಕ್ಷ್‌ ಸೇರಿ ಏಳು ಮಂದಿ ವಿರುದ್ಧ ಪ್ರಕರಣ(Case) ದಾಖಲಿಸಲಾಗಿದೆ. ಪಾರ್ಟಿಗೆ ಅವಕಾಶ ನೀಡಿದ ಹೋಟೆಲ್‌ನ ಮಾಲೀಕ ಹಾಗೂ ಮ್ಯಾನೇಜರ್‌ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಪೊಲೀಸರು ತಿಳಿಸಿದ್ದಾರೆ.

ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್‌ ಕೇಸ್‌ಗೆ ಸೂಚನೆ

ಅಕ್ರಮವಾಗಿ ಕಬ್ಬಿಣದ ಅದಿರು ಮಾರಾಟ ಮತ್ತು ಸರ್ಕಾರಕ್ಕೆ ರಾಯಲ್ಟಿ ಹಾಗೂ ಇತರೆ ತೆರಿಗೆ ವಂಚನೆ ಆರೋಪ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ(Janardhana Reddy) ಸೇರಿದಂತೆ ಮೂವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ(Criminal Case) ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚನೆ ನೀಡಿ, ಫೆ.12ಕ್ಕೆ ಖುದ್ದು ಹಾಜರಾತಿಗೆ ಸೂಚನೆ ನೀಡಿದೆ.

ತನಿಖಾಧಿಕಾರಿಗಳು ನೀಡಿದ ಖಾಸಗಿ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು(Court) ಆರೋಪಿಗಳಾದ ಜನಾರ್ದನ ರೆಡ್ಡಿ, ಅವರ ಆಪ್ತ ಕಾರ್ಯದರ್ಶಿ ಮೆಹಪೂಜ್‌ ಅಲಿಖಾನ್‌, ಓಬಳಾಪುರಂ ಮೈನಿಂಗ್‌ ಕಂಪನಿ ನಿರ್ದೇಶಕ ಬಿ.ವಿ.ಶ್ರೀನಿವಾಸ ರೆಡ್ಡಿ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಸೂಚನೆ ನೀಡಿದೆ. ಜತೆಗೆ ಫೆ. 12ರಂದು ಹಾಜರಾಗುವಂತೆ ಸಮನ್ಸ್‌(Summons) ಜಾರಿಗೊಳಿಸಿದೆ.

Belagavi: ಕೋವಿಡ್‌ ರೂಲ್ಸ್‌ ಬ್ರೇಕ್‌: ಬಿಜೆಪಿ ಶಾಸಕ ಅನಿಲ್‌ ಬೆನಕೆ ವಿರುದ್ಧ FIR

2009-10ನೇ ಸಾಲಿನಲ್ಲಿ ಐಟಿ ಅಧಿಕಾರಿಗಳು(IT Officers) ಆರೋಪಿತರ ಸ್ಥಳಗಳ ಮೇಲೆ ದಾಳಿ(Raid) ನಡೆಸಿದಾಗ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಅಕ್ರಮವಾಗಿ ಕಬ್ಬಿಣದ ಅದಿರು ತೆಗೆದು ಸಾಗಿಸಿರುವುದು ಗೊತ್ತಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 23 ಲಕ್ಷ ರು. ನಷ್ಟವನ್ನುಂಟು ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು.

3 ವರ್ಷದ ಬಳಿಕ ತವರಿಗೆ ರೆಡ್ಡಿ ಎಂಟ್ರಿ: ಬಳ್ಳಾರಿ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆ

ಅಕ್ರಮ ಗಣಿಗಾರಿಕೆ ಆರೋಪಿ, ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಸುಪ್ರೀಂ ಕೋರ್ಟ್​ ಷರತ್ತುಬದ್ಧ ಅನುಮತಿ ನೀಡಿದೆ. 8 ವಾರ ಕಾಲ ಬಳ್ಳಾರಿಯಲ್ಲಿ ತಂಗಬಹುದು ಎಂದೂ ಕೋರ್ಟ್​ ಹೇಳಿದೆ. ಈ ಹಿನ್ನೆಲೆಯಲ್ಲಿ 2020 ರ ಆ. 20 ರಂದು ತವರಿಗೆ ಗಣಿ ಧಣಿ ಎಂಟ್ರಿ ಕೊಟ್ಟಿದ್ದು, ಕುಟುಂಬಸ್ಥರ ಜೊತೆಗೂಡಿ ವರಮಹಾಲಕ್ಷ್ಮೀ ಪೂಜೆ ಮಾಡಿದ್ದರು. 
 

click me!