ಮಂಗಳೂರು: ಸೈಟ್ ತೋರಿಸುವುದಾಗಿ ಹೇಳಿ ಮಹಿಳೆಗೆ ಲೈಂಗಿಕ ಕಿರುಕುಳ

By Kannadaprabha News  |  First Published Oct 26, 2024, 11:47 AM IST

ಕಾರಿನಲ್ಲಿ ಮಂಗಳೂರಿಗೆ ವಾಪಸಾಗುತ್ತಿದ್ದಾಗ ದಾರಿ ಮಧ್ಯೆ ಹಣದ ಆಮಿಷ ತೋರಿಸಿ ಮಾನಭಂಗ ಮಾಡಿದ್ದಾರೆ. ಬಳಿಕ ಫ್ಲ್ಯಾಟ್‌ಗೆ ತಂದು ಬಿಟ್ಟಿದ್ದಾರೆ. ಈ ವಿಚಾರವನ್ನು ನನ್ನ ಮ್ಯಾನೇಜರ್‌ಗೆ ತಿಳಿಸಿದಾಗ ರಶೀದ್ ಅವಾಚ್ಯ ಶಬ್ದಗಳಿಂದ ಬೈದು ಕೆನ್ನೆಗೆ ಹೊಡೆದು ಜೀವಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ನೀಡಿದ ದೂರಿನಂತೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 


ಮಂಗಳೂರು(ಅ.26):  ಸೈಟ್ ತೋರಿಸುವುದಾಗಿ ಹೇಳಿ ಮಹಿಳೆಯೋರ್ವರನ್ನು ಕರೆದೊಯ್ದು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ನಗರದ ಬಿಲ್ಡರ್ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಶೀದ್ ಪ್ರಕರಣದ ಆರೋಪಿ. 

ಕುಶಾಲನಗರದಲ್ಲಿ ಒಳ್ಳೆಯ ಸೈಟ್ ಇದ್ದು ಅದನ್ನು ಖರೀದಿ ಮಾಡಬಹುದು ಎಂದು ರಶೀದ್ ಹೇಳಿದಾಗ ಅದಕ್ಕೆ ಒಪ್ಪಿದ್ದೆ. ಅ.21ರಂದು ರಶೀದ್ ಕಾರಿನಲ್ಲಿ ಕುಶಾಲನಗರಕ್ಕೆ ಕರೆದೊಯ್ದಿದ್ದರು. ಅಲ್ಲಿನ ಹೊಟೇಲ್‌ನಲ್ಲಿ ಇಬ್ಬರಿಗೆ ಪ್ರತ್ಯೇಕ ರೂಮ್ ಬುಕ್ ಮಾಡಿದ್ದೆ. ಆಗ ರಶೀದ್ ಒಂದೇ ರೂಮ್‌ನಲ್ಲಿ ಇರುವ ಇಂಗಿತ ವ್ಯಕ್ತಪಡಿಸಿದ್ದರು. ಅದಕ್ಕೆ ಹೆದರಿ ವಿರಾಜಪೇಟೆಯಲ್ಲಿರುವ ತಂಗಿಯ ಮನೆಯಲ್ಲಿ ಉಳಿದುಕೊಂಡಿದ್ದೆ. ಮರುದಿನ ರಶೀದ್ ಕರೆ ಮಾಡಿ ಸೈಟ್ ನೋಡಲು ಹೋಗುವುದಕ್ಕೆ ಕರೆದಾಗ ಅಲ್ಲಿಗೆ ಹೋಗಿದ್ದೆ. ಆಗ ರಶೀದ್ ಅಸಭ್ಯವಾಗಿ ವರ್ತಿಸಿದ್ದಾರೆ. 

Tap to resize

Latest Videos

undefined

ನಿಮ್ಮ ಹೆಂಡತಿ 'ಕರಿಮಣಿ ಮಾಲೀಕ ನೀನಲ್ಲ' ಎಂದು ರೀಲ್ಸ್ ಮಾಡಿದರೆ ಗಂಡಂದಿರೇ ಹುಷಾರ್!

ಬಳಿಕ ಕಾರಿನಲ್ಲಿ ಮಂಗಳೂರಿಗೆ ವಾಪಸಾಗುತ್ತಿದ್ದಾಗ ದಾರಿ ಮಧ್ಯೆ ಹಣದ ಆಮಿಷ ತೋರಿಸಿ ಮಾನಭಂಗ ಮಾಡಿದ್ದಾರೆ. ಬಳಿಕ ಫ್ಲ್ಯಾಟ್‌ಗೆ ತಂದು ಬಿಟ್ಟಿದ್ದಾರೆ. ಈ ವಿಚಾರವನ್ನು ನನ್ನ ಮ್ಯಾನೇಜರ್‌ಗೆ ತಿಳಿಸಿದಾಗ ರಶೀದ್ ಅವಾಚ್ಯ ಶಬ್ದಗಳಿಂದ ಬೈದು ಕೆನ್ನೆಗೆ ಹೊಡೆದು ಜೀವಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ನೀಡಿದ ದೂರಿನಂತೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!