ಅಕ್ಕನ ಗಂಡನೊಂದಿಗೆ ಅಕ್ರಮ ಸಂಬಂಧಕ್ಕೆ ಗಂಡನಿಗೆ ಗುಂಡಿ ತೋಡಿದ ಸುಪನಾತಿ ಹೆಂಡತಿ!

By Sathish Kumar KH  |  First Published Oct 26, 2024, 11:28 AM IST

ಬೆಂಗಳೂರಿನಲ್ಲಿ ಅಕ್ಕನ ಗಂಡನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಹೆಂಡತಿ, ಗಂಡನನ್ನು ಕೊಲೆ ಮಾಡಿಸಿ ನಾಟಕವಾಡಿದ್ದಳು. ಪೊಲೀಸರಿಗೆ ದೂರು ನೀಡಿ, ಗಂಡನ ಶವದ ಮುಂದೆ ಕಣ್ಣೀರಿಟ್ಟಿದ್ದ ಆಕೆಯ ಕೃತ್ಯ ಬಯಲಾಗಿದೆ.


ಬೆಂಗಳೂರು (ಅ.26): ಅಕ್ಕನ ಗಂಡ ಭಾವನೊಂದಿಗೆ ಅಕ್ರಮ ಸಂಬಂಧವನ್ನು ಇಟ್ಟುಕೊಳ್ಳಲು ಬೆಂಗಳೂರಿಗೆ ಬಂದ ಸುಪನಾತಿ ಸುಬ್ಬಿ, ಗಂಡನನ್ನು ಕೊಲೆ ಮಾಡಿಸಿದ್ದಾಳೆ. ನಂತರ ಗಂಡನ ಶವದ ಮುಂದೆ ಕಣ್ಣೀರಿಟ್ಟು ಪೊಲೀಸರಿಗೆ ದೂರು ನೀಡಿದ್ದ ಹೆಂಡತಿ, ಇದೀಗ ತಾನು ತೋಡಿದ ಗುಂಡಿಗೆ ತಾನೇ ಬಿದ್ದಿದ್ದಾಳೆ.

ಅಕ್ಕ ನಿನ್ ಗಂಡ ಹೆಂಗಿರಬೇಕು ಎಂದು ಕೇಳುವ ತಂಗಿ, ಅಕ್ಕ ನಿನ್ ಗಂಡ ನಂಗೆ ಬೇಕು ಎಂದು ಕೇಳಿದ್ದಾಳೆ. ಇದಕ್ಕೆ ಅಕ್ಕ ಒಪ್ಪದಿದ್ದರೂ ಅಕ್ಕನ ಗಂಡ ಮಾತ್ರ ತನ್ನ ಹೆಂಡತಿಯ ತಂಗಿಯ (ನಾದಿನಿ) ಪ್ರೀತಿಗೆ ಒಪ್ಪಿಕೊಂಡಿದ್ದಾನೆ. ಜೊತೆಗೆ, ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ನಾದಿನಿಯ ಗಂಡನನ್ನು ಕೊಲೆ ಮಾಡಿ ನೀಲಗಿರಿ ತೋಪಿನಲ್ಲಿ ಹೆಣ ಬೀಸಾಡಿ ಬಂದಿದ್ದಾನೆ. ಆದರೆ, ಗಂಡನ ಕೊಲೆಗೆ ಸಾತ್ ಕೊಟ್ಟಿದ್ದ ಸುಪನಾತಿ ಹೆಂಡ್ತಿ, ಯಾರಿಗೂ ಅನುಮಾನ ಬರಬಾರದು ಎಂದು ಗಂಡನ ಹೆಣದ ಮುಂದೆ ಗೋಳಾಡಿ ಕಣ್ಣೀರಿಟ್ಟಿದ್ದಾಳೆ. ನಂತರ ತಾನೇ ಗಂಡನ ಕೊಲೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿ, ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಈ ಘಟನೆಯ ಬಳಿಕ ಆರೋಪಿಗಳಾದ 5 ಜನರನ್ನು ಪೊಲೀಸರು ಬಂಧಿಸಿದ್ದಾರೆ.

Tap to resize

Latest Videos

undefined

ಇದನ್ನೂ ಓದಿ: ನಿಮ್ಮ ಹೆಂಡತಿ 'ಕರಿಮಣಿ ಮಾಲೀಕ ನೀನಲ್ಲ' ಎಂದು ರೀಲ್ಸ್ ಮಾಡಿದರೆ ಗಂಡಂದಿರೇ ಹುಷಾರ್!

ಹೌದು, ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆ ಮಾಡಿದ್ದ ಹೆಂಡತಿಯನ್ನು ಬಂಧಿಸಲಾಗಿದೆ. ನೀಲಗಿರಿ ತೋಪಿನ ಮಧ್ಯದಲ್ಲಿ ಗಂಡನ ಹತ್ಯೆ ಮಾಡಲಾಗಿದೆ. ಮೃತನ ಹೆಂಡತಿ ನಾಗರತ್ನ (27) ಸೇರಿದಂತೆ ಐವರು ಆರೋಪಿಗಳನ್ನು ಬೆಂಗಳೂರಿನ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಪತಿ ತಿಪ್ಪೇಶನನ್ನು (30) ಕೊಲೆ ಮಾಡಿಸಿದ್ದ ಪತ್ನಿ ನಾಗರತ್ನ ಗಂಡನ ಶವದ ಮುಂದೆ ಕಣ್ಣೀರಿಟ್ಟು ನಾಟಕವಾಡಿದ್ದಳು. ಅಕ್ಟೋಬರ್ 14ರಂದು ಭೋಗನಹಳ್ಳಿ ಕೆರೆ ಬಳಿಯ ನೀಲಗಿರಿ ತೋಪಿನಲ್ಲಿ ಈ ಕೊಲೆ ನಡೆದಿತ್ತು. ಸ್ಥಳೀಯರು ನಿನ್ನ ಗಂಡನನ್ನು ಕೊಲೆ ಮಾಡಲಾಗಿದೆ ಎಂದು ನಾಗರತ್ನಗೆ ಮಾಹಿತಿ ನೀಡಿದ್ದರು. ಆಗ ಕಣ್ಣೀರು ಹಾಕುತ್ತಾ ನಾಟಕ ಮಾಡಿದ್ದ ಈಕೆ, ಪೊಲೀಸರಿಗೆ ದೂರು ಕೊಟ್ಟು ಕುಟುಂಬ ಸದಸ್ಯರೊಂದಿಗೆ ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದಳು.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಕರೂರು ಗ್ರಾಮದ ದಂಪತಿ ನಾಗರತ್ನ ಮತ್ತು ತಿಪ್ಪೇಶ್‌ಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ನಾಗರತ್ನಗೆ ಅಕ್ಕನ ಗಂಡನ ಜೊತೆಗೆ ಅಕ್ರಮ ಸಂಬಂಧವಿತ್ತು. ಆದರೆ, ಅಕ್ಕ ಹಾಗೂ ಆಕೆಯ ಕುಟುಂಬ ಬೆಂಗಳೂರಿಗೆ ದುಡಿಮೆಗಾಗಿ ಬಂದು ಇಲ್ಲಿಯೇ ವಾಸವಾಗಿತ್ತು. ಇನ್ನು ಅಕ್ಕನ ಗಂಡನನ್ನು ಬಿಟ್ಟಿರಲಾಗದೇ ನಾಗರತ್ನ ಆಕೆಯ ಗಂಡನನ್ನು ಪುಸಲಾಯಿಸಿ ನಾವೂ ಕೂಡ ನಮ್ಮ ಅಕ್ಕ-ಭಾವ ಇರುವಲ್ಲಿಗೆ ಹೋಗಿ ದುಡಿಮೆ ಮಾಡಿಕೊಂಡು ಬರೋಣ ಎಂದು ಮನವೊಲಿಸಿದ್ದಾಳೆ. ಹೆಂಡತಿ ದುಡಿಮೆಯ ಬಗ್ಗೆ ಕಾಳಜಿವಸಿದ್ದನ್ನು ನೋಡಿ ಸಂತಸಗೊಂಡ ಗಂಡ ಸರಿ ಹೋಗೋಣ ಎಂದು ಬಳ್ಳಾರಿಯಿಂದ ಬೆಂಗಳೂರಿಗೆ ಬಂದು ಹೆಂಡತಿಯ ಅಕ್ಕನ ಕುಟುಂಬವಿರುವ ಸ್ಥಳಕ್ಕೆ ಬಂದು ತಾತ್ಕಾಲಿಕ ವಸತಿ ಶೆಡ್‌ನಲ್ಲಿ ವಾಸ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಹಣಕ್ಕಾಗಿ ಪತ್ನಿಯನ್ನೇ ಕೊಂದ ಪತಿ! ದಾವಣಗೆರೆಯಲ್ಲೊಂದು ದಾರುಣ ಘಟನೆ

ಬೆಂಗಳೂರಿನ ಹೊರವಲಯ ಭೋಗನಹಳ್ಳಿ ಕೆರೆ ಬಳಿಯ ಲೇಬರ್ ಶೆಡ್‌ನಲ್ಲಿ ನಾಗರತ್ನ ಮತ್ತು ಆಕೆಯ ಕುಟುಂಬ ವಾಸ ಮಾಡಿಕೊಂಡಿದ್ದರು. ಇನ್ನು ಪತಿ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಈಕೆ ಅಕ್ಕನ ಗಂಡನೊಂದಿಗೆ ಸೇರುತ್ತಿದ್ದಳು. ಆದರೆ, ಇದನ್ನು ಕಣ್ಣಾರೆ ನೋಡಿದ್ದ ಗಂಡ ಇವರಿಬ್ಬರ ಅನೈತಿಕ ಸಂಬಂಧವನ್ನು ಪ್ರಶ್ನೆ ಮಾಡಿ ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದನು. ಜೊತೆಗೆ, ಇಲ್ಲಿರುವುದು ಬೇಡ ನಾವು ಊರಿಗೆ ಹೋಗೋಣ ಎಂದು ಹೇಳಿ, ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದಾರೆ. ನಂತರ, ಸ್ವಲ್ಪ ಹಣವನ್ನು ಕೊಟ್ಟು ಪತ್ನಿ ಹಾಗೂ ಭಾವ ಸೇರಿಕೊಂಡು 5 ಜನರಿಂದ ಪತಿ ತಿಪ್ಪೇಶನನ್ನು ಕೊಲೆ ಮಾಡಿಸಿದ್ದಳು. ಪತಿ ಸಾವಿನ ವಿಚಾರವನ್ನು ಸ್ಥಳೀಯರು ಆತನ ಪತ್ನಿಗೆ ತಿಳಿಸಿದ್ದರು. ಓಡೋಡಿ ಬಂದು ಕಣ್ಣೀರು ಹಾಕಿದ್ದ ನಾಗರತ್ನ, ಪೊಲೀಸರು ದೂರು ಕೊಟ್ಟಿದ್ದಳು. ನಂತರ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಿಸಿದಾಗ ಕೃತ್ಯ ಬಯಲಿಗೆ ಬಂದಿದೆ. ಪ್ರಿಯತಮನ ಜೊತೆ ಸೇರಿ ಕೊಲೆ ಮಾಡಿರೋದು ಬೆಳಕಿಗೆ ಬಂದಿದೆ.

click me!