ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್ ಚಾಲನೆ: ಖಾಸಗಿ ಬಸ್ ಚಾಲಕನಿಗೆ ಪಾಠ ಕಲಿಸಿದ ಪ್ರಯಾಣಿಕ!

By Ravi Janekal  |  First Published Jul 8, 2023, 9:16 AM IST

ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್ ಚಾಲನೆ ಮಾಡಿದ ಚಾಲಕನಿಗೆ ಪ್ರಯಾಣಿಕನೋರ್ವ ಸರಿಯಾಗಿ ಪಾಠ ಕಲಿಸಿದ ಘಟನೆ ನಡೆದಿದೆ.


ಶಿವಮೊಗ್ಗ (ಜು.8) : ಮೊಬೈಲ್‌ನಲ್ಲಿ ಮಾತನಾಡುತ್ತ ಬಸ್ ಚಾಲನೆ ಮಾಡಿದ ಚಾಲಕನಿಗೆ ಪ್ರಯಾಣಿಕನೋರ್ವ ಸರಿಯಾಗಿ ಪಾಠ ಕಲಿಸಿದ ಘಟನೆ ನಡೆದಿದೆ.

ಖಾಸಗಿ ಬಸ್ ಚಾಲಕ ಮನ್ಸೂರ್ ಆಲಿ ಎಂಬಾತನೇ ಮೊಬೈಲ್ ನಲ್ಲಿ ಮಾತನಾಡುತ್ತ ಅಪಾಯಕಾರಿ ಚಾಲನೆ ಮಾಡಿರುವ ಆರೋಪಿ. ಅದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಇದರ ವಿಡಿಯೋವೊಂದನ್ನು ಸ್ಟಿಂಗ್ ಮಾಡಿ, ಪ್ರಯಾಣಿಕರ ಸುರಕ್ಷತಾ ದೃಷ್ಠಿಯಿಂದ  ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಶಿವಮೊಗ್ಗ ಸಂಚಾರ ಪೊಲೀಸ್ ನವರಿಗೆ ವಾಟ್ಸ್ ಅಪ್ ಮುಖಾಂತರ ಕಳುಹಿಸಿದ್ದಾನೆ.

Tap to resize

Latest Videos

ವಿಡಿಯೋವನ್ನು  ಸಂಚಾರಿ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ರಿಂದ  ಪರಿಶೀಲನೆ ಮಾಡಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿರುವ ಬಗ್ಗೆ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಈ ಹಿನ್ನೆಲೆ ಖಾಸಗಿ ಬಸ್‌ ಚಾಲಕನ ಸಕ್ರೆಬೈಲು ಮನ್ಸೂರ್ ಆಲಿ ವಿರುದ್ಧ ಐಎಂವಿ ಕಾಯ್ದೆಯಡಿಯಲ್ಲಿ ರೂ 5,000 ದಂಡ ವಿಧಿಸಿ ಕ್ರಮ ಕೈಗೊಂಡ ಪೊಲೀಸರು.

ದೇಗುಲ ಕಳವು ಪ್ರಕರಣ: ಖದೀಮರ ಬೆನ್ನುಬಿದ್ದ ಪೊಲೀಸರಿಗೆ ಒಂದಲ್ಲ, ಹನ್ನೆರಡು ದೇಗುಲ ಕಳ್ಳತನ ಪತ್ತೆ!

ಅಪಘಾತದ ಗಾಯಾಳು ಮಹಿಳೆ ಸಾವು

ಮೂಲ್ಕಿ: ಮೂಲ್ಕಿ ಬಸ್‌ ನಿಲ್ದಾಣ ಬಳಿ ರಸ್ತೆ ದಾಟುತ್ತಿದ್ದ ಸಂದರ್ಭ ಟ್ಯಾಂಕರ್‌ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮಂಗಳೂರು ಆಸತ್ರೆಗೆ ದಾಖಲಾಗಿದ್ದ ಮೂಲ್ಕಿ ಪೊಲೀಸ್‌ ಸ್ಟೇಷನ್‌ ಸಮೀಪದ ಬೋರ್ಡ್‌ ಶಾಲೆಯ ಬಳಿಯ ನಿವಾಸಿ ವೆರೋನಿಕಾ ಅರಾಹ್ನ(53) ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಜೂ.29ರ ಮಧ್ಯಾಹ್ನ ಹಾಲು ತರಲೆಂದು ಮೂಲ್ಕಿ ಬೋರ್ಡ್‌ ಶಾಲಾ ಬಳಿಯ ತಮ್ಮ ಮನೆಯಿಂದ ಪೇಟೆಗೆ ಬಂದು ಮಧ್ಯಾಹ್ನ ವಾಪಸ್‌ ಹೆದ್ದಾರಿ ದಾಟುತ್ತಿದ್ದಾಗ ಮೂಲ್ಕಿ ಬಸ್ಸು ನಿಲ್ದಾಣ ಬಳಿ ಟ್ಯಾಂಕರ್‌ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಿಂದ ತಲೆಗೆ ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಸ್ಥಳೀಯರ ನೆರವಿನೊಂದಿಗೆ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಪ್ರಾಪ್ತನಿಗೆ ಬೈಕ್ ಕೊಟ್ಟಿದ್ದಕ್ಕೆ ಮಾಲೀಕನಿಗೆ ₹20 ಸಾವಿರ ದಂಡ ವಿಧಿಸಿದ ಕೋರ್ಟ್!

click me!