Bulli Bai App: ಶ್ವೇತಾ ಅಲ್ಲ.. ಅಸ್ಸಾಂನಿಂದ ಅಸಲಿ  ಮಾಸ್ಟರ್ ಕರೆತಂದ ಡೆಲ್ಲಿ ಪೊಲೀಸ್!

Published : Jan 06, 2022, 04:45 PM ISTUpdated : Jan 08, 2022, 03:24 AM IST
Bulli Bai App: ಶ್ವೇತಾ ಅಲ್ಲ.. ಅಸ್ಸಾಂನಿಂದ ಅಸಲಿ  ಮಾಸ್ಟರ್ ಕರೆತಂದ ಡೆಲ್ಲಿ ಪೊಲೀಸ್!

ಸಾರಾಂಶ

* ಮುಸ್ಲಿಂ ಮಹಿಳೆಯರನ್ನು ಹರಾಜಿಗೆ ಇಡುತ್ತಿದ್ದ ಬುಲ್ಲಿ ಬಾಯಿ ಆಪ್ ಪ್ರಕರಣ *ಇಂಜಿನಿಯರಿಂಗ್‌ ಪ್ರವೇಶಕ್ಕೆ ಸಿದ್ಧತೆ ನಡೆಸುತ್ತಿದ್ದ ಶ್ವೇತಾ ಮಾಸ್ಟರ್ ಮೈಂಡ್ ಅಲ್ಲ *  ಅಸ್ಸಾಂನಿಂದ ಅಸಲಿ ಆರೋಪಿಯನ್ನು ಕರೆದಂತ ದೆಹಲಿ ಪೊಲೀಸರು

ಮುಂಬೈ(ಜ. 5): ಮುಸ್ಲಿಂ (Muslim) ಮಹಿಳೆಯರನ್ನು ಅವಹೇಳನಕಾರಿ ಚಿತ್ರಿಸಿ ಹರಾಜಿಗೆ ಇಡುತ್ತಿದ್ದ ‘ಬುಲ್ಲಿ ಬಾಯಿ’ ಆ್ಯಪ್‌ ಪ್ರಕರಣ ತಿರುವುಗಳ ಮೇಲೆ ತಿರುವು ಪಡೆದುಕೊಳ್ಳುತ್ತಿದೆ.  ದೇಶದ ವಿವಿಧ ಮೂಲೆಗಳಲ್ಲಿ ಇದರ ಮೂಲ ಪತ್ತೆಯಾಗುತ್ತಲೇ ಇದೆ.

ಆಪ್ ಹಿಂದಿನ ಮಾಸ್ಟರ್ ಮೈಂಡ್ ನ್ನು ಅಸ್ಸಾಂನಿಂದ (Assam) ಬಂಧಿಸಲಾಗಿದೆ ಎಂದು ದೆಹಲಿ (Newdelhi) ಪೊಲೀಸರು (POlice) ಹೇಳಿದ್ದಾರೆ. ಇನ್ನೊಂದು ಕಡೆ ಆಪ್ ಸೃಷ್ಟಿಕರ್ತ ನಾನೇ.. ಅಮಾಯಕರನ್ನು ಬಿಟ್ಟುಬಿಡಿ ಎಂದು ವ್ಯಕ್ತಿಯೊಬ್ಬ  ಟ್ವಿಟ್ ಮಾಡಿದ್ದಾನೆ.

ಮುಖ್ಯ ಸಂಚುಕೋರ ಮತ್ತು  ಅಪ್ಲಿಕೇಶನ್‌ನ  ಹ್ಯಾಂಡಲ್ ಮಾಡುತ್ತಿದ್ದ  ನೀರಜ್  ಬಿಷ್ಣೋಯ್  ಎಂಬಾತನ ಬಂಧಿಸಿ ಕರೆತಂದಿದ್ದಾರೆ.  ಇಂಟಲಿಜನ್ಸ್ ವಿಭಾಗದ ಡೆಪ್ಯೂಟಿ ಕಮಿಷನರ್   ಕೆಪಿಎಸ್ ಮಲ್ಹೋತ್ರಾ ಮಾಹಿತಿ  ನೀಡಿದ್ದಾರೆ. 21 ವರ್ಷದ ಬಿಷ್ಣೋಯ್ ಭೋಪಾಲ್ ಮೂಲದ ಸಂಸ್ಥೆಯಲ್ಲಿ ಎರಡನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ. ಆರೋಪಿಯನ್ನು ಅಸ್ಸಾಂನ ಜೋರ್ಹತ್‌ನಲ್ಲಿರುವ ಅವರ ಸ್ವಗ್ರಾಮದಿಂದ ಬಂಧಿಸಲಾಗಿದ್ದು ಮಧ್ಯಾಹ್ನ ದೆಹಲಿಗೆ ಕರೆತರಲಾಗುವುದು ಎಂದು ಮೂಲಗಳು ತಿಳಿಸಿವೆ.

Bulli Bai row: ಗಿಟ್‌ಹಬ್‌ನಲ್ಲಿ ಮುಸ್ಲಿಂ ಮಹಿಳೆಯರ ಹರಾಜು: ಬೆಂಗಳೂರಲ್ಲಿ ಯುವಕ ವಶಕ್ಕೆ!

ಸಾಮಾಜಿಕ ಮತ್ತು ರಾಜಕೀಯ ವಿಷಯಗಳ ಬಗ್ಗೆ ದನಿಯೆತ್ತಿರುವ ಪ್ರಮುಖ ಮುಸ್ಲಿಂ ಮಹಿಳಾ ಪತ್ರಕರ್ತರು, ವಕೀಲರು ಮತ್ತು ಹೋರಾಟಗಾರರನ್ನು ಅಸಹ್ಯಕರ ರೀತಿಯಲ್ಲಿ ಪ್ರೊಜೆಕ್ಟ್ ಮಾಡಿ ಮಾರಾಟಕ್ಕೆ ಇದ್ದಾರೆ ಎಂಬಂತೆ ಜಾಹೀರಾತು ಮಾಡುತ್ತಿದ್ದ.  ಈ ಪ್ರಕರಣದಲ್ಲಿ ಇದು ನಾಲ್ಕನೇ ಬಂಧನವಾಗಿದೆ. 

ಮುಂಬೈ ಪೊಲೀಸರ ಸೈಬರ್ ಸೆಲ್ ಈ ಹಿಂದೆ ಮೂವರನ್ನು ಬಂಧಿಸಿತ್ತು. 21 ವರ್ಷದ ವಿದ್ಯಾರ್ಥಿ ಮಯಾಂಕ್ ರಾವಲ್, 19 ವರ್ಷದ ಶ್ವೇತಾ ಸಿಂಗ್ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ ಝಾ ರನ್ನು ಬಂಧಿಸಲಾಗಿದ್ದು ಶ್ವೇತಾ ಸಿಂಗ್ ಮಾಸ್ಟರ್ ಮೈಂಡ್ ಎಂದು ಭಾವಿಸಲಾಗಿತ್ತು.  ತಮ್ಮನ್ನು ಹರಾಜಿಗೆ  ಇಟ್ಟಿದ್ದನ್ನು ಕಂಡ ಮುಸ್ಲಿಂ ಮಹಿಳೆಯರು ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. 

ಮುಂಬೈ, ಅಸ್ಸಾಂ, ದೆಹಲಿ, ಬೆಂಗಳೂರು ಹೀಗೆ ದೇಶದ ಎಲ್ಲ ಮೂಲೆಗಳಲ್ಲಿಯೂ ಆಪ್ ಗೆ ಸಂಬಂಧಿಸಿದ ವ್ಯಕ್ತಿಗಳ ಬಂಧನವಾಗುತ್ತಿದೆ. ಬಂಧಿತೆ  ಶ್ವೇತಾ ಪೋಷಕರನ್ನು ಕಳೆದುಕೊಂಡಿದ್ದಳು. ಶ್ವೇತಾ ತಂದೆಯ ಕಳೆದ ವರ್ಷ ಕೋವಿಡ್‌ ಸೋಂಕಿನಿಂದ ಸಾವಿಗೀಡಾಗಿದ್ದರು. ತಂದೆಯ ಸಾವಿಗೂ ಮೊದಲೇ ಶ್ವೇತಾಳ ತಾಯಿ ಕ್ಯಾನ್ಸರ್‌ಗೆ ಬಲಿಯಾಗಿದ್ದರು. ಈಕೆಗೆ ಒಬ್ಬಳು ಹಿರಿಯ ಸಹೋದರಿ ಇದ್ದು, ಆಕೆ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾಳೆ. ಹಾಗೆಯೇ ಓರ್ವ ಕಿರಿಯ ಸಹೋದರಿ ಹಾಗೂ ಸಹೋದರ ಇದ್ದು ಇಬ್ಬರು ಶಿಕ್ಷಣ ಪಡೆಯುತ್ತಿದ್ದಾರೆ. ಇತ್ತ ಶ್ವೇತಾ ಎಂಜಿನಿಯರಿಂಗ್‌ ಪ್ರವೇಶ ಪರೀಕ್ಷೆ ಬರೆಯಲು ಸಿದ್ಧಳಾಗುತ್ತಿದ್ದಳು. 

Bulli Bai Deal: ಮುಸ್ಲಿಂ ಮಹಿಳೆಯರ ಹರಾಜು, 18 ವರ್ಷದ ಯುವತಿಯೇ ಮಾಸ್ಟರ್ ಮೈಂಡ್!

ಶ್ವೇತಾ, ಜಟ್‌ಖಲ್ಸಾ07 (JattKhalsa07) ಎಂಬ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಬಳಸುತ್ತಿದ್ದಳು. ಈ ಖಾತೆಯೂ ದ್ವೇಷದ ಪೋಸ್ಟ್‌ಗಳು ಮತ್ತು ಆಕ್ಷೇಪಾರ್ಹ ಫೋಟೋಗಳು ಮತ್ತು ಕಾಮೆಂಟ್‌ಗಳನ್ನು ಅಪ್‌ಲೋಡ್ ಮಾಡಲು ಬಳಸಲಾಗುತ್ತಿತ್ತು. ಈ ಖಾತೆಯೊಂದಿಗೆ ಸಂಪರ್ಕ ಹೊಂದಿದ್ದವರು ಕೂಡ ಅದೇ ಸಿದ್ಧಾಂತವನ್ನು ಅನುಸರಿಸಿದ್ದರು. 

ಅಲ್ಲದೇ ಈಕೆ ನೇಪಾಳದಲ್ಲಿರುವ ತನ್ನ ಸ್ನೇಹಿತನ ಸೂಚನೆಯಂತೆ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ. ಆರೋಪಿಯಿಂದ ಸಂಗ್ರಹಿಸಿದ ಪ್ರಾಥಮಿಕ ಮಾಹಿತಿಯ ಪ್ರಕಾರ ನೇಪಾಳಿ ಪ್ರಜೆಯಾಗಿರುವ  ಗಿಯೂ (Giyou) ಎಂಬಾತ ಈಕೆಗೆ, ಆ್ಯಪ್‌ನಲ್ಲಿ ಕೈಗೊಳ್ಳಬೇಕಾದ ಚಟುವಟಿಕೆಗಳ ಕುರಿತು ಸೂಚನೆ ನೀಡುತ್ತಿದ್ದ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ. ಈತನ ಪಾತ್ರ ಹಾಗೂ ಆಕೆಯೊಂದಿಗೆ ಶಾಮೀಲಾಗಿರುವ ಇತರರ ಪಾತ್ರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು