Minor Girl Rape: ಅಪ್ರಾಪ್ತೆಗೆ ಬಲವಂತದ ಮದುವೆ, ಅತ್ಯಾಚಾರ, ಇಬ್ಬರ ಬಂಧನ

Kannadaprabha News   | Asianet News
Published : Jan 06, 2022, 12:46 PM IST
Minor Girl Rape: ಅಪ್ರಾಪ್ತೆಗೆ ಬಲವಂತದ ಮದುವೆ, ಅತ್ಯಾಚಾರ, ಇಬ್ಬರ ಬಂಧನ

ಸಾರಾಂಶ

*   ನಿಂಗರಾಜ ಹಾಗೂ ದೇವರಾಜ ಬಂಧಿತ ಆರೋಪಿಗಳು *  ಈ ಸಂಬಂಧ ಹಲುವಾಗಲು ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು *  ಆರೋಪಿತಗಳನ್ನ ಬಂಧಿಸಿ, ವಿಚಾರಣೆ ಕೈಗೊಂಡ ಪೊಲೀಸರು   

ಹರಪನಹಳ್ಳಿ(ಜ.06): ಅಪ್ರಾಪ್ತ(Minor Girl) ವಿದ್ಯಾರ್ಥಿನಿಯನ್ನು ಬಲವಂತದಿಂದ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಮದುವೆಯಾಗಿ(Marriage), ನಂತರ ಅತ್ಯಾಚಾರ(Rape) ಎಸಗಿದ ಆರೋಪದ ಮೇಲೆ ಇಬ್ಬರು ಆರೋಪಿತರನ್ನು ಫೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ(Arrest).

ಹಲುವಾಗಲು ಗ್ರಾಮದ ಸಾಸಲವಾಡದ ನಿಂಗರಾಜ ಹಾಗೂ ದೇವರಾಜ ಬಂಧಿತ ಆರೋಪಿತರು(Accused). ಹರಿಹರದ ಪಪೂ ಕಾಲೇಜಿನ ಪ್ರಥಮ ವರ್ಷದ ಪಿಯು ಯುವತಿಯನ್ನು ನಿಂಗರಾಜ ಪರಿಚಯ ಮಾಡಿಕೊಂಡಿದ್ದ. ಡಿ. 4, 2021ರಂದು ಆಕೆ ಓದುತ್ತಿರುವ ಕಾಲೇಜಿನಿಂದ ಆಟೋದಲ್ಲಿ ಸ್ನೇಹಿತ ಸಾಸಲವಾಡದ ದೇವರಾಜನ ಸಹಕಾರದೊಂದಿಗೆ ಸಾರಥಿ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪ್ರತಿರೋಧದ ನಡುವೆಯೂ ಬಲವಂತವಾಗಿ ಮದುವೆಯಾಗಿದ್ದಾನೆ ಹಾಗೂ ಫೋಟೋಗಳನ್ನು ತೆಗೆಸಿಕೊಂಡಿದ್ದಾನೆ ಎನ್ನಲಾಗಿದೆ.

Rape on woman:ಬುದ್ಧಿಮಾಂದ್ಯ ಮಹಿಳೆಗೆ ಮದ್ಯ ಕುಡಿಸಿ ಹಾಡಹಗಲೇ ಎರಗಿದ ಕಿರಾತಕರು

ಮದುವೆಯಾದ ಬಗ್ಗೆ ಮನೆಯಲ್ಲಿ ಹೇಳಿದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ(Social Media)ಹಾಕಿ ಸಾಯಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ. ಕೊಂಡಜ್ಜಿ ಕೆರೆ, ಸಾರಥಿ ಕೆರೆಗಳಿಗೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ ಎಂದು ಪೋಷಕರು ಹಲುವಾಗಲು ಪೋಲೀಸ್‌ ಠಾಣೆಯಲ್ಲಿ ಪ್ರಕರಣ(Case) ದಾಖಲಿಸಿದ್ದಾರೆ.

ಪಿಎಸ್‌ಐ ಪ್ರಶಾಂತ ಪ್ರಕರಣ ದಾಖಲಿಸಿಕೊಂಡು ಆರೋಪಿತರನ್ನು ಬಂಧಿಸಿ, ವಿಚಾರಣೆ ಕೈಗೊಂಡಿದ್ದಾರೆ.

ಅಪ್ರಾಪ್ತೆ ಮೇಲೆ ಮಲತಂದೆಯಿಂದ ಅತ್ಯಾಚಾರ

ಚಾಮರಾಜನಗರ(Chamarajanagar): 5 ವರ್ಷದ ಬಾಲಕಿ ಮೇಲೆ ಮಲತಂದೆಯೇ(Stepfather) ಅತ್ಯಾಚಾರ ಎಸಗಿ ಮೃಗೀಯ ವರ್ತನೆ ತೋರಿರುವ ಘಟನೆ ನಗರದ ಗಾಳಿಪುರ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಸೈಯಿದ್‌ ಮುಜೀಬ್‌(45) ಬಂಧಿತ ಆರೋಪಿ. ಈತ ಕಳೆದ ಎರಡೂವರೆ ತಿಂಗಳುಗಳ ಹಿಂದೆಯಷ್ಟೇ ಪತ್ನಿಯಿಂದ ಬೇರ್ಪಟ್ಟಿದ್ದ ಮೂರು ಮಕ್ಕಳ ತಾಯಿಯೊಬ್ಬಳನ್ನು ಮದುವೆಯಾಗಿದ್ದ. ಮಂಗಳವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮುಖ ತೊಳೆದುಕೊಳ್ಳುತ್ತಿದ್ದ ಮಗಳ ಮೇಲೆ ಮೃಗೀಯ ವರ್ತನೆ ತೋರಿದ್ದಾನೆ. ಬಾಲಕಿಯು ತನಗೆ ನೋವೆಂದು ಅಲವತ್ತುಕೊಂಡಾಗ ಘಟನೆ ಬೆಳಕಿಗೆ ಬಂದಿದ್ದು ಚಾಮರಾಜನಗರ ಠಾಣೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಮಹಾದೇವಶೆಟ್ಟಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಬಾಲಕಿಗೆ ಅಗತ್ಯ ವೈದ್ಯಕೀಯ ಉಪಚಾರ ಮಾಡಲಾಗಿದೆ.

ಮಗು ಮೇಲೆ ಅತ್ಯಾಚಾರ ಯತ್ನಿಸಿದ ವೃದ್ಧಗೆ ಗೂಸಾ

ತುಮಕೂರು(Tumakuru):  ಎರಡೂವರೆ ವರ್ಷದ ಮಗು ಮೇಲೆ ವೃದ್ಧನೊಬ್ಬ(Old man) ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ತುಮಕೂರು ಜಿಲ್ಲೆಯ ಬೇತಲ್ಲೂರು ಗ್ರಾಮದಲ್ಲಿ ಬುಧವಾರ ಬೆಳಕಿಗೆ ಬಂದಿದೆ. 60 ವರ್ಷದ ವಿನ್ಸನ್‌ ಜಾನ್ಸನ್‌ ಎಂಬಾತನೇ ಅತ್ಯಾಚಾರಕ್ಕೆ ಯತ್ನಿಸಿರುವ ವ್ಯಕ್ತಿ. ಮಗುವನ್ನು ತೋಟಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ ವೇಳೆ ಗಮನಿಸಿದ ಗ್ರಾಮದ ಮಹಿಳಾ ನಿವಾಸಿಗಳು ವೃದ್ಧನಿಗೆ ಗೂಸಾ ಕೊಟ್ಟಿದ್ದಾರೆ. ಅಲ್ಲದೆ ಈತನನ್ನು ಹೆಬ್ಬೂರು ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ. ಈ ಹಿಂದೆಯೂ ಕೂಡ ಈತ ಇದೇ ತರಹದ ಕೃತ್ಯ ಎಸಗಿದ್ದು, ಮತ್ತೆ, ಮತ್ತೆ ಈ ರೀತಿಯ ದುಷ್ಕೃತ್ಯಕ್ಕೆ ಮುಂದಾಗುತ್ತಿದ್ದಾನೆ, ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದರು.

Gang Rape: ಸ್ನೇಹಿತರಿಂದಲೇ ಗೆಳತಿ ಮೇಲೆ ಗ್ಯಾಂಗ್‌ ರೇಪ್...  ಇಂಥವರು ಇರ್ತಾರ?

ಅತ್ಯಾಚಾರ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ

ಭದ್ರಾವತಿ(Bhadravathi): ಮಧ್ಯರಾತ್ರಿ ಮನೆಗೆ ನುಗ್ಗಿ ಗೃಹಿಣಿಯೊಬ್ಬಳ(House Wife) ಮೇಲೆ ಅತ್ಯಾಚಾರವೆಸಗಲು ಮುಂದಾಗಿದ್ದ ವ್ಯಕ್ತಿಯನ್ನು ತಡೆಯಲು ಹೋದ ಪತಿ ಮೇಲೆ ತೀವ್ರ ಹಲ್ಲೆ(Assault) ನಡೆದು ಹತ್ಯೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ(Court) ಬುಧವಾರ ಆರೋಪಿಗೆ ಜೀವಾವಧಿ ಶಿಕ್ಷೆ(Life Imprisonment) ಹಾಗೂ 20,000 ರು. ದಂಡ ವಿಧಿಸಿ ತೀರ್ಪು ನೀಡಿದೆ.

ಮನ್ಸೂರ್‌ ಆಲಿಖಾನ್‌ (29) ಶಿಕ್ಷೆಗೊಳಗಾದ ವ್ಯಕ್ತಿ. ಮೂಲತಃ ಅಸ್ಸಾಂ ರಾಜ್ಯದ ನಬೀಕುಲ್‌ ಇಸ್ಲಾಂ (21) ಹತ್ಯೆಯಾಗಿದ್ದ ವ್ಯಕ್ತಿ. 3 ವರ್ಷಗಳ ಹಿಂದೆ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಗೌಡರಹಳ್ಳಿಯಲ್ಲಿ ಪ್ರಕರಣ ನಡೆದಿತ್ತು. ಮೃತನ ಪತ್ನಿ ಹಳೇನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಂದಿನ ಗ್ರಾಮಾಂತರ ವೃತ್ತ ನಿರೀಕ್ಷಕ ಕೆ.ಎಂ ಯೋಗೇಶ್‌ ಪ್ರಕರಣದ ತನಿಖೆ ಕೈಗೊಂಡು ಆರೋಪಿ ಮನ್ಸೂರ್‌ ಆಲಿಖಾನ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್‌.ವೈ. ಶಶಿಧರ್‌ ಆರೋಪ ಸಾಬೀತಾದ ಹಿನ್ನೆಲೆ ಜೀವಾವಧಿ ಶಿಕ್ಷೆ ಮತ್ತು 20,000 ರು. ದಂಡ ವಿಧಿಸಿದ್ದಾರೆ. ಈ ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿಯಾಗಿ 3 ವರ್ಷ ಸಾದಾ ಸಜೆ ಮತ್ತು ಕಲಂ 450ರ ಅಡಿಯಲ್ಲಿ ಆರೋಪ ದೃಢಪಟ್ಟಹಿನ್ನೆಲೆ 3 ವರ್ಷ ಕಠಿಣ ಸಜೆ ಮತ್ತು 10,000 ರು. ದಂಡ ಹಾಗೂ ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿಯಾಗಿ 2 ತಿಂಗಳು ಸಾದಾ ಸಜೆ ವಿಧಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ.ರತ್ನಮ್ಮ ವಾದ ಮಂಡಿಸಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?