ಬಿಎಸ್ಸಿ ನರ್ಸಿಂಗ್ ಮಾಡುತ್ತಿದ್ದ ಯುವತಿಗೆ ಅದೆಲ್ಲಿಂದ ಗಂಟು ಬಿದ್ದನೋ ಭೂಪ. ಪ್ರೀತಿ, ಮದುವೆಯನ್ನು ನಿರಾಕರಿಸಿದ ಹುಡುಗಿಯ ರುಂಡವನ್ನೇ ಕತ್ತರಿಸಿ ಪೊಲೀಸ್ ಠಾಣೆಗೆ ತಂದು ಶರಣಾಗಿದ್ದಾನೆ. ಪಾಗಲ್ ಪ್ರೇಮಿಯ ಈ ಕೃತ್ಯ ಕಂಡು ಪೊಲೀಸರೇ ಒಂದು ಕ್ಷಣ ತಬ್ಬಿಬ್ಬಾಗಿ ಹೋಗಿದ್ದಾರೆ. ತಾನು ಬೇರೆಯವರನ್ನು ಮದುವೆಯಾಗಬಹುದು ಆದರೆ, ಆಕೆ ಬೇರೆಯವರನ್ನು ನೋಡಬಾರದು ಎನ್ನುವ ಕಾರಣಕ್ಕೆ ಹುಡುಗಿಯ ಕೊಲೆ ಮಾಡಿದ್ದಾರೆ.
ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ವಿಜಯನಗರ (ಜುಲೈ 21): ಹಾಡುಹಗಲೇ ಮನೆಯಲ್ಲಿದ್ದ ಯುವತಿಯ ಕುತ್ತಿಗೆಯನ್ನು ಕಡಿದು ರುಂಡಮುಂಡವನ್ನು ಬೇರ್ಪಡಿಸೋ ಮೂಲಕ ಪಾಗಲ್ ಪ್ರೇಮಿಯೊಬ್ಬ ವಿಕೃತಿಯನ್ನು ಮೆರೆದಿದ್ದಾನೆ. ಕೊಲೆ ಮಾಡಿದ ಬಳಿಕ ಆಕೆಯ ರುಂಡವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಶರಣಾಗಿದ್ದಾನೆ. ಕೂಡ್ಲಿಗಿ ತಾಲೂಕಿನ ಕನ್ನಬೊರಯ್ಯನ ಹಟ್ಟಿ ಗ್ರಾಮದಲ್ಲಿ ನಡೆದ ಈ ಘಟನೆ ಇಡೀ ಗ್ರಾಮವನ್ನೆ ಬೆಚ್ಚಿ ಬೀಳುವಂತೆ ಮಾಡಿದೆ. ಕನ್ನಬೊರಯ್ಯನ ಹಟ್ಟಿ ಗ್ರಾಮದ ನಿರ್ಮಲಾ(23) ಕೊಲೆಯಾದ ಯುವತಿ. ಅದೇ ಗ್ರಾಮದ ಬೋಜರಾಜ್( 26)ಕೊಲೆ ಮಾಡಿ ಕುಕೃತ್ಯವನ್ನು ಮೆರೆದ ಪ್ರೇಮಿಯಾಗಿದ್ದಾನೆ. ಪರಸ್ಪರ ಸಂಬಂಧಿಕರಾದ ಇಬ್ಬರು ಕಳೆದ ಮೂರು ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ, ಮದುವೆಗೆ ಆರಂಭದಲ್ಲಿ ಮನೆಯವರು ಒಪ್ಪಿದ್ದರೂ, ನಂತರ ನಿರ್ಮಲಾ ಮದುವೆಗೆ ನಿರಾಕರಿಸಿದ್ದಾಳೆಂದು ಪೋಷಕರು ಮದುವೆಯನ್ನು ರದ್ದು ಮಾಡಿದ್ದರು. ಮದುವೆ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ತಾನು ಪ್ರೀತಿಸಿದ ನಿರ್ಮಲಾಗೆ ಬುದ್ದಿ ಕಲಿಸಬೇಕೆಂದು ಕಳೆದ ಎರಡು ತಿಂಗಳ ಹಿಂದೆ ಬೋಜರಾಜ್ ಮತ್ತೊಂದು ಯುವತಿಯೊಂದಿಗೆ ಮದುವೆಯಾಗಿದ್ದಾನೆ. ಆದರೆ, ನಿರ್ಮಲಾ ಮೇಲಿರೋ ಪ್ರೀತಿ ಮಾತ್ರ ಕಡಿಮೆಯಾಗಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಪೋನ್ ಮಾಡೋದು ಕಾಡಿಸೋದು ಮಾಡುತ್ತಿದ್ದ. ಆದರೆ, ಇವತ್ತು ಅದೇನು ಕೋಪ ಬಂತೋ ಗೊತ್ತಿಲ್ಲ ಮನೆಗೆ ನುಗ್ಗಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ಬಿಎಸ್ಸಿ ನರ್ಸಿಂಗ್ ವಿಧ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ: ಬೇರೆ ಹುಡುಗಿಯನ್ನು ಮದುವೆಯಾಗಿದ್ದ ಬೋಜರಾಜ್ ಕಳೆದ ಎರಡು ತಿಂಗಳಿಂದ ತಾನಾಯ್ತು ತನ್ನ ಕುಟುಂಬವಾಯ್ತೋ ಅನ್ನೋ ರೀತಿಯಲ್ಲಿ ಎಲ್ಲರೆದುರು ವರ್ತನೆ ಮಾಡುತ್ತಿದ್ದ. ಆದರೆ, ಒಳಗಿಂದೊಳಗೆ ನಿರ್ಮಲಾ ಕುರಿತಾಗಿ ಅಸೆ ಬೆಳೆಸಿಕೊಂಡಿದ್ದ. ಇನ್ನೂ ಬೇರೆ ಕಡೆ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ನಿರ್ಮಲಾ ಕಳೆದ ಮೂರು ದಿನಗಳ ಹಿಂದೆ ರಜೆ ಇರೋ ಹಿನ್ನೆಲೆ ಊರಿಗೆ ಬಂದಿದ್ದಳು. ನಿತ್ಯ ಒಂದೆರಡು ಬಾರಿ ಆಕೆಯ ಜೊತೆ ಮಾತನಾಡುತ್ತಿದ್ದ ಬೋಜರಾಜ್ ಇಂದು ಕೂಡ ಎಂದಿನಂತೆ ಆಕೆಯ ಮನೆಗೆ ಬಂದಿದ್ದಾನೆ. ಪರಸ್ಪರ ಇಬ್ಬರ ಮಧ್ಯೆ ಯಾವೊದು ಒಂದು ವಿಷಯಕ್ಕೆ ವಾಗ್ವಾದ ನಡೆದಿದೆ. ಆಗ ಕೋಪದ ಕೈಯಲ್ಲಿ ಬುದ್ದಿಕೊಟ್ಟ ಬೋಜರಾಜ್ ತಾನು ತಂದಿದ್ದ ಮಚ್ಚಿನಿಂದ ನಿರ್ಮಲಾಳ ಕುತ್ತಿಗೆಯನ್ನು ಕಡಿದು ಆಕೆಯ ತಲೆಯನ್ನು ಬೈಕ್ ನಲ್ಲಿ ಬಂದು ಪೊಲೀಸರಿಗೆ ಶರಣಾಗಿದ್ದಾನೆ.
ವಿಜಯನಗರದಲ್ಲಿ ಮಾಜಿ ಪ್ರೇಯಸಿ ಕೊಂದ ಪಾಗಲ್ ಪ್ರೇಮಿ!
ಕೊಲೆಗೆ ಅನುಮಾನವೇ ಕಾರಣವಾಯ್ತೇ: ಇನ್ನೂ ಪುರುಷ ಎಷ್ಟು ಸ್ವಾರ್ಥಿ ಅನ್ನೋದಕ್ಕೆ ಈ ಕೊಲೆಯೆ ಉದಾಹರಣೆಯಾಗಿದೆ. ಯಾಕಂದ್ರೇ, ತಾನು ಪ್ರೀತಿಸಿದ ನಿರ್ಮಲಾ ಸಿಗಲಿಲ್ಲವೆಂದು ಬೋಜರಾಜ್ ಇನ್ನೊಂದು ಮದುವೆಯಾಗಿದ್ದ. ಆದರೆ, ಕಾಲೇಜಿನಲ್ಲಿ ನಿರ್ಮಲಾ ಮತ್ತೊಬ್ಬರನನ್ನು ಪ್ರೀತಿಸುತ್ತಿದ್ದಳು ಎನ್ನುವ ಅನುಮಾನಕ್ಕೆ ಈ ಕೊಲೆ ಮಾಡಿದ್ದಾನೆ. ಇದರಲ್ಲಿಯೇ ಬೋಜರಾಜ ಎಷ್ಟು ಕ್ರೂರಿ ಅನ್ನೋದು ತಿಳಿಯುತ್ತದೆ. ಆದರೆ, ನಿರ್ಮಲಾ ಸಹಜವಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದಳು ಅದನ್ನೇ ಬೋಜರಾಜ್ ಪ್ರೀತಿ ಎಂದು ನಂಬಿ ಕೊಲೆ ಮಾಡಿರಬಹುದು ಎಂದು ಪೋಷಕರು ಹೇಳುತ್ತಿದ್ದಾರೆ.
ಪ್ರೀತಿ ನಿರಾಕರಿಸಿದ ವಿದ್ಯಾರ್ಥಿನಿಗೆ ಮಾರಣಾಂತಿಕ ಹಲ್ಲೆ!
ಪೊಲೀಸರೇ ಒಂದು ಕ್ಷಣ ಬೆಚ್ಚಿ ಬಿದ್ದರು: ಇದೊಂದು ಪುಟ್ಟ ಹಟ್ಟಿಯಾಗಿದ್ದು, ಇಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಕೆಲಸಕ್ಕೆ ಹೋಗೋ ಜನರೇ ಹೆಚ್ಚು ಹೀಗಾಗಿ ಮಧ್ಯಾಹ್ನದ ವೇಳೆ ನಡೆದ ಕೊಲೆಯಾದ್ರೂ ಗ್ರಾಮಸ್ಥರಿಗೆ ಇದರ ಅರಿವೆ ಇರಲಿಲ್ಲ. ಕೊಲೆ ಬಳಿಕ ಖಾನಾ ಹೊಸಹಳ್ಳಿ ಠಾಣೆಗೆ ರುಂಡದೊಂದಿಗೆ ಬಂದ ಬಳಿಕವಷ್ಟೆ ಘಟನೆ ಬಗ್ಗೆ ಜನರಿಗೆ ಗೊತ್ತಾಗಿದೆ. ಇನ್ನೂ ಪೊಲೀಸರು ರಕ್ತಸಿಕ್ತವಾದ ಕೈ ಮತ್ತು ಮಚ್ಚನ್ನು ನೋಡಿ ಕ್ಷಣ ಕಾಲ ದಂಗಾಗಿದ್ದರು ಎನ್ನಲಾಗುತ್ತಿದೆ. ಇನ್ನೂ ಈ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ಪಡೆದ ವಿಜಯನಗರ ಎಸ್ಪಿ ಅರುಣ್ ಅನುಮಾನದಿಂದಲೇ ನಡೆದ ಕೊಲೆ ಎಂದು ಹೇಳುತ್ತಿದ್ದು, ಸಂಪೂರ್ಣ ತನಿಖೆ ಬಳಿಕ ಇದರ ಸತ್ಯ ಗೊತ್ತಾಗಲಿದೆ.