Road Accident: ಮರಣದ ಮನೆಗೆ ಹೋಗಿದ್ದವರೆ ಮಸಣಕೆ.. ಬೆಳ್ತಂಗಡಿ ಭೀಕರ ಅಪಘಾತ, ಸಹೋದರರ ದುರ್ಮರಣ

By Kannadaprabha News  |  First Published Mar 19, 2022, 2:14 AM IST


* ರಸ್ತೆ ದುರಂತ: ಸಹೋದರರು ಸ್ಥಳದಲ್ಲೇ ಸಾವು
* ಉಪ್ಪಿನಂಗಡಿ ಸನಿಹದ ಹಿರೆಬಂಡಾಡಿ ನಿವಾಸಿಗಳು
* ಮರಣದ ಮನೆಗೆ ಹೋಗಿ ವಾಪಾಸಾಗುತ್ತಿದ್ದವರು ಮಸಣಕೆ
*ಸಾವಾಗಿ ಬಂದ ಸರ್ಕಾರಿ ಬಸ್


ಬೆಳ್ತಂಗಡಿ(ಮಾ. 19)  ತಾಲೂಕಿನ ಪಡಂಗಡಿ ಗ್ರಾಮದ ಗರ್ಡಾಡಿ ನಂದಿಬೆಟ್ಟಬಳಿ ಕೆಎಸ್‌ಆರ್‌ಟಿಸಿ (KSRTC) ಬಸ್‌ ಹಾಗೂ ಸ್ಕೂಟರ್‌ ನಡುವೆ ನಡೆದ (Road Accident) ಅಪಘಾತದಲ್ಲಿ ಹಿರೆಬಂಡಾಡಿಯ ಸಹೋದರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಉಪ್ಪಿನಂಗಡಿ ಸನಿಹದ ಹಿರೆಬಂಡಾಡಿ ನಿವಾಸಿ, ನಿವೃತ ಶಿಕ್ಷಕ ಅಬ್ದುಲ್‌ ರಝಾಕ್‌ ಪುತ್ರರಾದ ಹಮ್ಮಬ್ಬ ಸಿರಾಜ್ (28 )ಮತ್ತು ಕಜುತುಬುದ್ದೀನ್‌ ಸಾದಿಕ್‌ (32) ಎಂಬುವರೆಂದು ಗುರುತಿಸಲಾಗಿದೆ.

Tap to resize

Latest Videos

undefined

ಗುರುವಾರವಷ್ಟೇ ವೇಣೂರಿನಲ್ಲಿ ಅನಾರೋಗ್ಯದಿಂದ (Health) ಮೃತಪಟ್ಟಿದ್ದ ನಾಲ್ಕು ವರ್ಷ ಪ್ರಾಯದ ಅಣ್ಣನ ಮಗನ ಮರಣದ ಮನೆಗೆ ಹೋಗಿ ವಾಪಾಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ತಕ್ಷಣ ಗಂಭೀರ ಸ್ಥಿತಿಯಲ್ಲಿದ್ದವರನ್ನು ಸ್ಥಳೀಯ ಗೋಳಿಯಂಗಡಿಯ ಸಾರ್ವಜನಿಕರು ಇನ್ನಿತರ ಸಹಕಾರದೊಂದಿಗೆ ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆತಂದರೂ ಅದಾಗಲೇ ಅವರು ಮೃತಪಟ್ಟಿದ್ದರು. 

ಇಬ್ಬರೂ ಸಹೋದರರು ವಿದೇಶದಲ್ಲಿ ಉದ್ಯೋಗಿಗಳಾಗಿದ್ದರು. ಕಳೆದ ಐದು ತಿಂಗಳ ಹಿಂದೆ ಊರಿಗೆ ಮರಳಿದ್ದರೆಂದು ತಿಳಿದುಬಂದಿದೆ. ತಾಯಿ, 8 ಸಹೋದರರು, 6 ಸಹೋದರಿಯರನ್ನು ಅಗಲಿದ್ದಾರೆ.

ಜೇಮ್ಸ್‌ ಸಂಭ್ರಮಾಚರಣೆ  ವೇಳೆ ಹೃದಯಾಘಾತ, ಅಪ್ಪು ಅಭಿಮಾನಿ ಸಾವು:  ಪುನೀತ್‌ ರಾಜಕುಮಾರ್‌(Puneeth Rajkumar) ಹುಟ್ಟುಹಬ್ಬ ಹಾಗೂ ಜೇಮ್ಸ್‌ ಚಿತ್ರದ ಸಂಭ್ರಮಾಚರಣೆ ವೇಳೆ ಹೃದಯಾಘಾತವಾಗಿ ಅಪ್ಪು ಅಭಿಮಾನಿಯೊಬ್ಬರು ಮೃತಪಟ್ಟಘಟನೆ ಗುರುವಾರ ರಾತ್ರಿ ತಾಲೂಕಿನ ಯಡಿಯಾಲ ಗ್ರಾಮದಲ್ಲಿ ನಡೆದಿದೆ. ಯಡಿಯಾಲ ಗ್ರಾಪಂ ಅಧ್ಯಕ್ಷೆ ಮಂಜುಳಾ ಎಂಬುವರ ಪುತ್ರ ಆಕಾಶ್‌(22) ಮೃತ ದುರ್ದೈವಿ. ಅಪ್ಪು ಅಭಿಮಾನಿ ಬಳಗದವರು ಗ್ರಾಮದ ಬಸ್‌ನಿಲ್ದಾಣ ಸಮೀಪ ಸಂಭ್ರಮಾಚರಣೆ ಹಮ್ಮಿಕೊಂಡಿದ್ದರು. ಈ ವೇಳೆ ಎದೆನೋವು ಕಾಣಿಸಿಕೊಂಡು ಆಕಾಶ್‌ ದಿಢೀರ್‌ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಫಸ್ಟ್ ನೈಟ್‌ಗೆ ಹೊರಟ  ಜಿಮ್ ರವಿಗೆ ಬಾಗಿಲು ತೆರೆದಿದ್ದು ಪರಪ್ಪನ ಅಗ್ರಹಾರ!

ಮಗನ ನೆನಪಿಗೆ ಪ್ರತಿಮೆ: ವಯಸ್ಸಿಗೆ ಬಂದ ಮಕ್ಕಳು ಕಣ್ಣ ಮುಂದೆಯೇ ತೀರಿ ಹೋಗುವುದನ್ನು ಯಾವ ತಂದೆ ತಾಯಿಗೂ ಸಹಿಸಲಾಗದು. ತಮಿಳುನಾಡಿನ ಕುಟುಂಬಬ ನೋವನ್ನು ಕಡಿಮೆ ಮಾಡಿಕೊಳ್ಳಲು ಒಂದು ಕೆಲಸ ಮಾಡಿದೆ. ಪ್ರಾಯಕ್ಕೆ ಬಂದ 24 ರ ಹರೆಯದ ಪುತ್ರನೋರ್ವ ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ಮೃತಪಟ್ಟಿದ್ದಾನೆ. ಇದನ್ನು ಸಹಿಸಿಕೊಳ್ಳಲಾಗದ ಮನೆಯವರು ಅವನ ಗಾತ್ರದ ಸಿಲಿಕಾನ್ ಪ್ರತಿಮೆಯನ್ನು ಮನೆಯಲ್ಲಿ ಸ್ಥಾಪಿಸಿದ್ದಾರೆ. 

ಜೂನ್ 28, 2020 ರಂದು, ತಮಿಳುನಾಡಿನ (TamilNadu) ದಿಂಡಿಗಲ್ (Dindigul) ಜಿಲ್ಲೆಯ ಒಡ್ಡಂಛತ್ರಂನಲ್ಲಿ (Oddamchathram) ನಡೆದ ರಸ್ತೆ ಅಪಘಾತದಲ್ಲಿ ಯುವಕ ಎಸ್.ಪಾಂಡಿದುರೈ ಪ್ರಾಣ ಕಳೆದುಕೊಂಡಿದ್ದರು 24 ವರ್ಷದ ಯುವಕನ ಈ ಸಾವು ಅವರ ಕುಟುಂಬಕ್ಕೆ ಸಿಡಿಲಿನಂತೆ ಎರಗಿತ್ತು.

click me!