18 ದಿನಗಳಲ್ಲಿ ಕೋಟಿ ಮೌಲ್ಯದ ಚಿನ್ನ ವಶ: ಮಂಗಳೂರು ಏರ್‌ಪೋರ್ಟ್‌ನಲ್ಲಿ ಹೆಚ್ಚಿದ ಗೋಲ್ಡ್ ಸ್ಮಗ್ಲಿಂಗ್!

By Ravi Janekal  |  First Published Jan 20, 2023, 10:04 AM IST

ಮಂಗಳೂರು ಏರ್ಪೋರ್ಟ್ ನಲ್ಲಿ ವರ್ಷದ ಆರಂಭದಲ್ಲೇ ಕೋಟ್ಯಂತರ ಮೌಲ್ಯದ ಚಿನ್ನ ಕಳ್ಳಸಾಗಣೆ ಪತ್ತೆಯಾಗಿದ್ದು, ಕೇವಲ 18 ದಿನಗಳಲ್ಲಿ ಬರೋಬ್ಬರಿ 2.01 ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ. ಚಿನ್ನ ಕಳ್ಳಸಾಗಣಿಕೆ ಹಿಂದೆ ಕೇರಳದ ಜ್ಯುವೆಲ್ಲರಿ ಮಾಫಿಯಾ ಕೈವಾಡ ಇರುವ ಬಗ್ಗೆ ಅನುಮಾನ ಮೂಡಿಸಿದೆ.


ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಜ.20): ಮಂಗಳೂರು ಏರ್ಪೋರ್ಟ್ ನಲ್ಲಿ ವರ್ಷದ ಆರಂಭದಲ್ಲೇ ಕೋಟ್ಯಂತರ ಮೌಲ್ಯದ ಚಿನ್ನ ಕಳ್ಳಸಾಗಣೆ ಪತ್ತೆಯಾಗಿದ್ದು, ಕೇವಲ 18 ದಿನಗಳಲ್ಲಿ ಬರೋಬ್ಬರಿ 2.01 ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ. 

Tap to resize

Latest Videos

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(international airport)ದಲ್ಲಿ ಜನವರಿ 1ರಿಂದ 18ರವರೆಗೆ ವಿವಿಧ ಪ್ರಕರಣಗಳಲ್ಲಿ ಒಟ್ಟು 2,01,69,800 ರೂ. ಮೌಲ್ಯದ 3,677 ಚಿನ್ನವನ್ನು ಕಸ್ಟಮ್ಸ್ ಅಧಿಕಾರಿ(Customs Officer)ಗಳು ವಶಪಡಿಸಿಕೊಂಡಿದ್ದಾರೆ. ದುಬೈ ಮತ್ತು ಅಬುಧಾಬಿ(dubai and abu dhabi)ಯಿಂದ ಆಗಮಿಸಿದ ಎಂಟು ಮಂದಿ ಪ್ರಯಾಣಿಕರು ವಿವಿಧ ರೀತಿಯಲ್ಲಿ ಚಿನ್ನವನ್ನು ಕಳ್ಳ ಸಾಗಾಣಿಕೆ(gold smuggling) ಮಾಡಲು ಪ್ರಯತ್ನಿಸಿದ್ದರು. ಟ್ರಾಲಿ ಬ್ಯಾಗ್‌ನ ಬೀಡಿಂಗ್‌ನಲ್ಲಿ ಎರಡು ಲೇಯರ್ ಇರುವ ಬನಿಯನ್‌ನ ಒಳಗೆ ಪೇಸ್ಟ್ ರೂಪದಲ್ಲಿ ಬಾಯಿ ಒಳಗೆ ಮತ್ತು ಗುದದ್ವಾರದಲ್ಲಿ ಹೀಗೆ ವಿವಿಧ ರೀತಿಯಲ್ಲಿ ತರಲಾಗಿದೆ. ಇದರೊಂದಿಗೆ ದುಬೈನಿಂದ ಬಂದಿಳಿದಿದ್ದ ಪ್ರಯಾಣಿಕನಿಂದ 3,20,265 ರೂ. ಮೌಲ್ಯದ ಇ-ಸಿಗರೇಟ್‌(E-cigarettes)ಗಳಲ್ಲಿ ಬಳಸುವ ಇ-ನಿಕೊಟಿನ್ ಲಿಕ್ವಿಡ್(E-nicotine liquid) ಮತ್ತು ಸಿಗರೇಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆತ ಬ್ಯಾಗ್‌ನಲ್ಲಿ ಮರೆಮಾಚಿ ಸಾಗಾಣಿಕೆಗೆ ಯತ್ನಿಸಿದ್ದ. ಪ್ರಕರಣಗಳ ಕುರಿತ ವಿಚಾರಣೆ ಮುಂದುವರಿದಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Sports Braದಲ್ಲಿ ಅಕ್ರಮ ಚಿನ್ನ ಸಾಗಾಟ; ಕಸ್ಟಮ್ಸ್ ಬಲೆಗೆ ಬಿದ್ದ ಮಹಿಳೆ

ಜ್ಯುವೆಲ್ಲರಿ ಮಾಫಿಯಾ ಕೈವಾಡ:

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿನೇ ದಿನೇ ಅಕ್ರಮ ಚಿನ್ನ ಸಾಗಾಟಕ್ಕೆ ಸಾಕ್ಷಿಯಾಗ್ತಿದೆ. ತಿಂಗಳಿಗೆ ನಾಲ್ಕೈದು ಅಕ್ರಮ ಚಿನ್ನ ಸಾಗಾಟದ ಕೇಸ್ ಗಳು ಪತ್ತೆಯಾಗ್ತಿದ್ದು, ದುಬೈನಿಂದ ಭಾರೀ ಪ್ರಮಾಣದಲ್ಲಿ ಚಿನ್ನವನ್ನ ಸಾಗಿಸಲಾಗ್ತಿದೆ.  ಹೀಗೆ ಚಿನ್ನ ಸಾಗಿಸಿ ಸಿಕ್ಕಿಬೀಳೋರು ಮಧ್ಯಮ ವರ್ಗದ ಯುವಕರಾಗಿದ್ದು, ಈ ಸಾಗಾಟದ ಹಿಂದೆ ಕೇರಳದ ಜ್ಯುವೆಲ್ಲರಿ ಮಾಫಿಯಾ(Jewelery Mafia) ಕೈವಾಡದ ಅನುಮಾನ ಎದ್ದಿದೆ.

 ಪ್ರತಿನಿತ್ಯ ಹತ್ತಾರು ವಿದೇಶಿ ವಿಮಾನಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತೆ. ಕರ್ನಾಟಕದ ಕರಾವಳಿ, ಮಲೆನಾಡು ಭಾಗದ ಪ್ರಯಾಣಿಕರಿಗಿಂತಲೂ ಹೆಚ್ಚಾಗಿ ಕೇರಳ ಭಾಗದ ಕಾಸರಗೋಡು, ಕೊಚ್ಚಿ ಭಾಗದ ಪ್ರಯಾಣಿಕರೇ ಹೆಚ್ಚಾಗಿ ಮಂಗಳೂರಿನಲ್ಲಿ ಲ್ಯಾಂಡ್ ಆಗ್ತಿದಾರೆ. ಅದರಲ್ಲೂ ದುಬೈನಿಂದ ನಿತ್ಯ ನೂರಾರು ಕೇರಳ ಪ್ರಯಾಣಿಕರು ಬರ್ತಾ ಇದ್ದು, ಮಂಗಳೂರು ಏರ್ ಪೋರ್ಟ್ ಇವರಿಗೆ ಪ್ರಮುಖ ಕೇಂದ್ರ. ಆದ್ರೆ ಹೀಗೆ ದುಬೈನಿಂದ ಬರೋ ಪ್ರಯಾಣಿಕರ ತಪಾಸಣೆಯ ವೇಳೆ ಹಲವು ಪ್ರಯಾಣಿಕರ ಬಳಿ ಅಕ್ರಮ ಚಿನ್ನ ಪತ್ತೆಯಾಗಿದೆ. 

ಕೇವಲ ಕಳೆದ ಅಕ್ಟೋಬರ್ ನಿಂದ ಈ ಜನೆವರಿವರೆಗೆ ಹತ್ತಾರು ಗೋಲ್ಡ್ ಸ್ಮಗ್ಲಿಂಗ್ ಕೇಸ್ ಗಳು ಮಂಗಳೂರು ಏರ್ ಪೋರ್ಟ್ ನಲ್ಲಿ ಪತ್ತೆಯಾಗಿದೆ. ಏರ್ ಪೋರ್ಟ್ ನ ಕಸ್ಟಮ್ ಅಧಿಕಾರಿಗಳ ತಪಾಸಣೆ ವೇಳೆ ನಾನಾ ವಿಧದಲ್ಲಿ ಚಿನ್ನ ಸಾಗಿಸೋದು ಬೆಳಕಿಗೆ ಬಂದಿದೆ. ಗುದದ್ವಾರ, ಪೇಸ್ಟ್ ಮೈಗೆ ಹಚ್ಚಿಕೊಂಡು, ಕುಕ್ಕರ್ ಸೇರಿ ಹತ್ತಾರು ವಿಧದಲ್ಲಿ ಚಿನ್ನವನ್ನ ಸಾಗಾಟ ಮಾಡಿರೋದು ಬೆಳಕಿಗೆ ಬಂದಿದೆ. ಆದ್ರೆ ಹೀಗೆ ಅಕ್ರಮ ಚಿನ್ನ ಸಾಗಾಟದಲ್ಲಿ ಕೇರಳದ ಕಾರಗೋಡು ಭಾಗದ ಪ್ರಯಾಣಿಕರೇ ಅರೆಸ್ಟ್ ಆಗ್ತಿದಾರೆ. 

 ಹೀಗೆ ಕಳೆದ ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ಬರೋಬ್ಬರಿ ಹತ್ತು ಕೋಟಿಗೂ ಮಿಕ್ಕಿದ ಮೌಲ್ಯದ ಅಕ್ರಮ ಚಿನ್ನ ಮಂಗಳೂರು ಏರ್ ಪೋರ್ಟ್ ‌ನಲ್ಲಿ ಪತ್ತೆಯಾಗಿದೆ. ಅಲ್ಲದೇ ಈ ಎಲ್ಲಾ ಪ್ರಕರಣದಲ್ಲಿ ಬಂಧಿತರಾದವರು ಬಹುತೇಕ ಕೇರಳದ ಕಾಸರಗೋಡು ಮೂಲದವರೇ ಆಗಿದ್ದು, ಇವರೆಲ್ಲಾ ವರ್ಷಗಳ ಹಿಂದಷ್ಟೇ ದುಬೈಗೆ ಹೋಗಿ ವಾಪಾಸ್ ಬಂದಿರೋದು ಗೊತ್ತಾಗಿದೆ. ಸ್ಟೈಸ್ ಜೆಟ್, ಇಂಡಿಗೋ ಮತ್ತು ಏರ್ ಇಂಡಿಯಾ ವಿಮಾನಗಳಲ್ಲಿ ಚಿನ್ನ ಸಾಗಿಸಿ ಮಂಗಳೂರು ಏರ್ ಪೋರ್ಟ್ ತಪಾಸಣೆ ವೇಳೆ ಕಸ್ಟಮ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.  ಆದ್ರೆ ಈ ಎಲ್ಲಾ ಪ್ರಕರಣಗಳಲ್ಲಿ ಬಂಧಿತರಾಗಿರೋ ಆರೋಪಿಗಳ ಹಿನ್ನೆಲೆ ಮತ್ತು ದುಬೈನ ಕೆಲಸದ ಆಧಾರದಲ್ಲಿ ನೋಡಿದ್ರೂ ಇಷ್ಟೊಂದು ಆದಾಯ ಲೆಕ್ಕಕ್ಕೆ ಸಿಕ್ಕಿಲ್ಲ. ಹೀಗಿರುವಾಗ ಇಷ್ಟೊಂದು ಲಕ್ಷ, ಕೋಟಿ ಮೌಲ್ಯದ ಚಿನ್ನ ಸಾಗಾಟ ಅನುಮಾನ ಹುಟ್ಟಿಸಿದೆ. ಅಲ್ಲಿ ಯಾವುದೇ ತಪಾಸಣೆ ಇಲ್ಲದ ಕಾರಣ ಚಿನ್ನವನ್ನು ಮಂಗಳೂರಿಗೆ ಸಾಗಿಸಿ ಇಲ್ಲಿ ಆರೋಪಿಗಳ ತಗಲಾಕಿಕೊಳ್ತಾರೆ.

ಬೆನ್ನು ನೋವಿನ ಬೆಲ್ಟ್‌ನಲ್ಲಿ 1.277 ಕೇಜಿ ಚಿನ್ನ ಸಾಗಾಟ

ವಿದೇಶದಿಂದ ವಾಪಾಸ್ ಆಗುವ ವೇಳೆ ಅಕ್ರಮ ಚಿನ್ನ ಸಾಗಾಟ ಕೆಲಸ ಮಾಡಿಸುತ್ತಿರುವ ಅನುಮಾನ ಮೂಡಿದೆ. ಮಂಗಳೂರು ಸೇರಿ ರಾಜ್ಯದ ಅನೇಕ ಕಡೆಗಳಲ್ಲಿ ಕೇರಳದ ಹತ್ತಾರು‌ ಚಿನ್ನದ ಮಳಿಗೆಗಳಿದ್ದು, ಇವುಗಳು ಭಾರೀ ಮಾರುಕಟ್ಟೆ ಹೊಂದಿದೆ. ಹೀಗಾಗಿ ಯುವಕರಿಗೆ ಹಣದಾಸೆ ತೋರಿಸಿ ದುಬೈನಲ್ಲಿ ಕಡಿಮೆ ಬೆಲೆಗೆ ಚಿನ್ನ ಖರೀದಿಸಿ ಪ್ರಯಾಣಿಕರ ಮೂಲಕ ಮಂಗಳೂರಿಗೆ ಸಾಗಿಸಿ ಈ ಜ್ಯುವೆಲ್ಲರಿಗಳು ಕೇರಳದಲ್ಲಿ ಚಿನ್ನ ಉತ್ಪಾದಿಸಿ ಮಾರ್ಕೆಟ್ ಗೆ ಬಿಡೋ ಅನುಮಾನ ಹುಟ್ಟಿದೆ. ಇಲ್ಲದೇ ಇದ್ರೆ ಚಿಲ್ಲರೆ ಕಾಸು ದುಡಿಯೋಕೆ ಅಂತ ವಿದೇಶಕ್ಕೆ ಹೋಗುವ ಯುವಕರು ಇಷ್ಟು ಕೋಟಿ ಬೆಲೆಯ ಚಿನ್ನ ಖರೀದಿಸಲು ಹೇಗೆ ಸಾಧ್ಯ ಅನ್ನೋದೇ ಈಗಿರೋ ಪ್ರಶ್ನೆ.

click me!