
ಬೆಂಗಳೂರು, (ಜ.23): ಆಟೋದಲ್ಲಿ ಬಂದ ಕಳ್ಳರು ಬಟ್ಟೆ ಶೋರೂಮ್ ಶೆಟರ್ ಮುರಿದು ಬ್ರಾಂಡೆಡ್ ಬಟ್ಟೆಗಳ ಕಳವು ಮಾಡಿರುವ ಘಟನೆ ಬೆಂಗಳೂರಿನ ಕತ್ರಿಗುಪ್ಪೆಯ ಫೇವರೆಟ್ ಸಾಚ್ ಬಟ್ಟೆ ಶೋರೂಮ್‌ನಲ್ಲಿ ನಡೆದಿದೆ.
ಕಳೆದ ಜನವರಿ 21 ರ ಬೆಳಗಿನ ಜಾವ 5ರ ಸುಮಾರಿಗೆ ಅಂಗಡಿಗೆ ಎಂಟ್ರಿಕೊಟ್ಟಿರೋ ಕಳ್ಳರು, ಕಬ್ಬಿಣದ ರಾಡ್ ಬಳಸಿ ಅಂಗಡಿಯ ಶೆಟರ್ ಮುರಿದು ಒಳಗೆ ನುಸುಳಿದ್ದಾರೆ.
ನಂತರ ಬಟ್ಟೆ ಶೋ ರೋಂ ಒಳಗೆ ಮೊಬೈಲ್ ಟಾರ್ಚ್ ಬಳಸಿ ಕ್ಯಾಶ್ ಬಾಕ್ಸ್ನಲ್ಲಿದ್ದ 20 ಸಾವಿರ ನಗದು ಹಾಗೂ ಲಕ್ಷ ರೂ ಬೆಲೆಬಾಳುವ ಬ್ರಾಂಡೆಡ್ ಬಟ್ಟೆಗಳನ್ನು ದೋಚಿ ಪರಾರಿಯಾಗಿದ್ದಾರೆ.
ಕಾವಲುಗಾರನ ಕೈಕಾಲು ಕಟ್ಟಿ ಮುತ್ತೂಟ್ ಫೈನಾನ್ಸ್‌ಗೆ ನುಗ್ಗಿ 7 ಕೋಟಿ ದರೋಡೆ
ಆರೋಪಿಗಳು ತಮಗಿಷ್ಟವಾದ ಬಟ್ಟೆಗಳನ್ನ ಸೆಲೆಕ್ಟ್ ಮಾಡಿ, ಬ್ರಾಂಡ್ಗಳನ್ನ ನೋಡಿ ಬಟ್ಟೆ ಕದ್ದಿರುವುದು ಅಚ್ಚರಿ ಮೂಡಿಸಿದೆ. ಕಳವು ಮಾಡಿದ ಬ್ರಾಂಡೆಡ್ ಬಟ್ಟೆಗಳನ್ನ ಮೂಟೆಯಲ್ಲಿ ತುಂಬಿಕೊಂಡು ಆಟೋದಲ್ಲಿ ಎಸ್ಕೇಪ್ ಆಗಿದ್ದಾರೆ.
ಆರೋಪಿಗಳ ಈ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಟ್ಟೆ ಅಂಗಡಿ ಮಾಲೀಕ ಬಾಬು ಎಂಬುವವರು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಯಲ್ಲಿ ದೂರು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ