ಅತ್ತ ಗಂಡ ಜೈಲಲ್ಲಿ, ಇತ್ತ ಶಿಲ್ಪಾ, ತಾಯಿ ಸುನಂದಾಗೆ ಬಂಧನ ಭೀತಿ.. ಇದ್ಯಾವ ಪ್ರಕರಣ?

Published : Aug 09, 2021, 09:36 PM IST
ಅತ್ತ ಗಂಡ ಜೈಲಲ್ಲಿ, ಇತ್ತ ಶಿಲ್ಪಾ, ತಾಯಿ ಸುನಂದಾಗೆ ಬಂಧನ ಭೀತಿ.. ಇದ್ಯಾವ ಪ್ರಕರಣ?

ಸಾರಾಂಶ

* ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಆಘಾತ * ಶಿಲ್ಪಾ ಮತ್ತು ತಾಯಿ ಸುನಂದಾ ವಿರುದ್ಧ ವಂಚನೆ ದೂರು * ಲಕ್ನೋದಲ್ಲಿ ದಾಖಲಾದ ಪ್ರಕರಣ * ಶಿಲ್ಪಾ ಶೆಟ್ಟಿಗೆ ಬಂಧನದ ಭೀತಿ

ಮುಂಬೈ(ಆ.  09)  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಆಘಾತ ಎದುರಾಗಿದೆ.  ಅಶ್ಲೀಲ ಚಿತ್ರ ತಯಾರಿಕೆ ಆರೋಪದ ಮೇಲೆ ಪತಿ ರಾಜ್ ಕುಂದ್ರಾ ಜೈಲು ಸೇರಿದ್ದರೆ ಇದೂಗ ಶಿಲ್ಪಾ ತಾಯಿಯ ಮೇಲೆ ವಂಚನೆ ಆರೋಪ ಕೇಳಿಬಂದಿದೆ.

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತವರ ತಾಯಿ ವಿರುದ್ಧ ಲಕ್ನೋನಲ್ಲಿ ಎರಡು ಎಫ್‌ಐಆರ್ ದಾಖಲಾಗಿದೆ.  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ವೆಲ್‌ನೆಸ್ ಸೆಂಟರ್‌ ಎಂಬ ಫಿಟ್‌ನೆಸ್  ಕಂಪನಿ ಹೊಂದಿದ್ದಾರೆ. ಈ ಕಂಪನಿಗೆ ಶಿಲ್ಪಾ ಶೆಟ್ಟಿ ಚೇರ್‌ಮ್ಯಾನ್ ಆಗಿದ್ದರೆ, ತಾಯಿ ಸುನಂದಾ ಶೆಟ್ಟಿ ಡೈರೆಕ್ಟರ್. ಇದೇ ವೆಲ್‌ನೆಸ್ ಸೆಂಟರ್‌ನ ಹೊಸ ಶಾಖೆಯೊಂದನ್ನು ಪ್ರಾರಂಭಿಸುವುದಾಗಿ ಇಬ್ಬರಿಂದ ಶಿಲ್ಪಾ ಶೆಟ್ಟಿ ಹಾಗೂ ಸುನಂದಾ ಶೆಟ್ಟಿ ಕೋಟ್ಯಂತರ ರೂಪಾಯಿ ಹಣ ತೆಗೆದುಕೊಂಡಿದ್ದಾರೆ ಎನ್ನುವುದು ಕೇಳಿಬಂದಿರುವ ಆರೋಪ.

ಶೆರ್ಲಿನ್ ಪೋರ್ನ್ ವಿಡಿಯೋ ಮೆಚ್ಚಿಕೊಂಡಿದ್ದ ಶಿಲ್ಪಾ!

ಈವರೆಗೂ ವೆಲ್‌ನೆಸ್ ಸೆಂಟರ್‌ನ ಹೊಸ ಶಾಖೆ ಆರಂಭಿಸಿಲ್ಲ. ಹೀಗಾಗಿ, ಜ್ಯೋತ್ಸ್ನಾ ಚೌಹಾಣ್ ಮತ್ತು ವೀರ್ ಸಿಂಗ್ ಎಂಬುವರು ಶಿಲ್ಪಾ ಶೆಟ್ಟಿ ಹಾಗೂ ಸುನಂದಾ ಶೆಟ್ಟಿ ವಿರುದ್ಧ ವಂಚನೆಯ ದೂರು ದಾಖಲಿಸಿದ್ದಾರೆ. 

ಲಕ್ನೋದಲ್ಲಿರುವ ಹಜರತ್‌ಗಂಜ್ ಮತ್ತು ವಿಭೂತಿಖಂಡ್ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಚೀಟಿಂಗ್ ಕೇಸ್  ದಾಖಲಾಗಿದೆ.  ಈ ಪ್ರಕರಣದ ಕುರಿತು ತನಿಖೆ ನಡೆಸಲು ಲಕ್ನೋ ಪೊಲೀಸರು ಮುಂಬೈಗೆ ಬಂದಿದ್ದಾರೆ. ಶಿಲ್ಪಾ ಶೆಟ್ಟಿ ಹಾಗೂ ಸುನಂದಾ ಶೆಟ್ಟಿ ಅವರನ್ನು ಪೊಲೀಸರು ಪ್ರಶ್ನಿಸಲಿದ್ದಾರೆ. 

ಶಿಲ್ಪಾ ಹಾಗೂ ತಾಯಿ ಸುನಂದಾ ಶೆಟ್ಟಿಗೂ ಇದೀಗ ಬಂಧನ ಭೀತಿ  ಕಾಡುತ್ತಿದೆ. ರಾಜ್ ಕುಂದ್ರಾ ಪ್ರಕರಣದಲ್ಲಿ ಹೆಚ್ಚಿಗೆ ಏನನ್ನೂ  ಕೇಳಬೇಡಿ ಎಂದು ಶಿಲ್ಪಾ ಮೊರೆ ಇಟ್ಟಿದ್ದರು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ