
ರಾಮನಗರ(ಆ. 09) ಕನ್ನಡ ಸಿನಿಮಾವೊಂದರ ಶೂಟಿಂಗ್ ವೇಳೆ ದುರಂತ ಸಂಭವಿಸಿದ್ದು ವಿದ್ಯುತ್ ಶಾಕ್ ನಿಂದ ಫೈಟರ್ ಮೃತಪಟ್ಟಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಮನಗರ ಪೊಲೀಸ್ ನಾಲ್ವರನ್ನು ವಶಕ್ಕೆ ಪಡೆದಿದೆ.
"
ರಾಮನಗರ ಡಿವೈಎಸ್ಪಿ ಮೋಹನ್ ಕುಮಾರ್ ಹಾಗೂ ಇನ್ಸ್ ಪೆಕ್ಟರ್ ಆರ್ ಆರ್ ನಗರ ಆಸ್ಪತ್ರೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆಹಾಕಿದ್ದಾರೆ. ಪೊಲೀಸರು ಸಿನಿಮಾದ ಸಹ ನಿರ್ದೇಶಕ ಶಂಕರ್ ರಾಜ್, ಸ್ಟೆಂಟ್ ಮಾಸ್ಟರ್ ವಿನೋದ್ ಮತ್ತು ಜೆಸಿಬಿ ಚಾಲಕರನ್ನು ಬಂಧಿಸಿದ್ದಾರೆ. ಶೂಟಿಂಗ್ ಗೆ ಪರವಾನಗಿ ಪಡೆಯದಿರುವ ಕಾರಣ ಜಮೀನು ಮಾಲೀಕ ಪುಟ್ಟರಾಜು ಅವರನ್ನು ವಶಕ್ಕೆ ಪಡೆಯಲಾಗಿದೆ.
ಫೈಟರ್ ಸತ್ತರೂ ಯಾರಿಗೂ ತಿಳಿಸದೆ ಕಾಲು ಕಿತ್ತ ಚಿತ್ರತಂಡ
ಸ್ಥಳದಲ್ಲಿ ಫೈಟಿಂಗ್ ಶೂಟ್ ಇತ್ತು. ಈ ವೇಳೆ ಜೆಸಿಬಿ ಕ್ರೈನ್ ಮೂಲಕ ವೈರ್ ರೋಪ್ ಮೂಲಕ ಸ್ಟಂಟ್ ಇತ್ತು. ಜೆಸಿಬಿ ಸಲ್ಪ ಪಕ್ಕಕ್ಕೆ ಬರಬೇಕಾಗಿತ್ತು. ಕೆಸರು ಇದ್ದಿದ್ದರಿಂದ ಕ್ರೈನ್ ಸ್ಲಿಪ್ ಆಗಿದೆ. ಕ್ರೈನ್ ಜೆಸಿಬಿಗೆ ಹಾಕಿದ್ದ ವೈರ್ ರೋಪ್ ಹೈ ಟೆನ್ಶನ್ ವೈರ್ ಗೆ ತಗುಲಿದೆ ಎಂದು ಹೇಳಲಾಗಿದೆ ಈ ವೇಳೆ ವಿವೇಕ್ ಮತ್ತು ರಂಜಿತ್ ಗೆ ಕರೆಂಟ್ ಶಾಕ್ ತಗುಲಿದೆ. ರಂಜಿತ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ವಿವೇಕ್ ಕೊನೆ ಉಸಿರು ಎಳೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ