
ಮಂಡ್ಯ (ಮೇ.30): ಬಾಲಿವುಡ್ ನಟಿ ಕಂಗನಾ ರಣಾವತ್ ಬಾಡಿಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಂಡ್ಯದ ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಮೂಲದ ಕುಮಾರ್ ಹೆಗ್ಡೆ ಅವರನ್ನು ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಶನಿವಾರ ಕಿಕ್ಕೇರಿಯಲ್ಲಿ ಬಂಧಿಸಿದ್ದಾರೆ.
ಕುಮಾರ್ ಮುಂಬೈನಲ್ಲಿ ಹುಡುಗಿಯೊಬ್ಬಳನ್ನು ವಿವಾಹವಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮುಂಬೈನ ಅಂದೇರಿ ಪೊಲೀಸ್ ಠಾಣೆಯಲ್ಲಿ ವಂಚಿತ ಯುವತಿ ದೂರು ದಾಖಲಿಸಿದ್ದಳು. ಇದು ಮುಂಬೈ ಸುದ್ದಿ ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗಿತ್ತು.
ನಟಿ ಕಂಗನಾ ಬಾಡಿಗಾರ್ಡ್ ವಿರುದ್ಧ ಅತ್ಯಾಚಾರ ಆರೋಪ..! ...
ಯುವತಿ ದೂರು ದಾಖಲಿಸಿರುವ ವಿಷಯ ತಿಳಿದ ಕುಮಾರ್ ಹೆಗ್ಡೆ ಮುಂಬೈನಿಂದ ತಲೆಮರೆಸಿಕೊಂಡು ಬಂದು ಕಳೆದೊಂದು ತಿಂಗಳಿಂದ ಹೆಗ್ಗಡಹಳ್ಳಿಯಲ್ಲಿ ನೆಲೆಸಿದ್ದನು. ಈ ಬಗ್ಗೆ ಮಾಹಿತಿ ಪಡೆದು ಆಗಮಿಸಿದ ಮುಂಬೈನ ಅಂಧೇರಿ ಪೋಲೀಸರು ಕಿಕ್ಕೇರಿ ಪೋಲೀಸರ ಸಹಕಾರದೊಂದಿಗೆ ಈತನನ್ನು ವಶಕ್ಕೆ ಪಡೆದಿದ್ದು ಮುಂಬೈಗೆ ಕರೆದೊಯ್ದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ