BMTC ಬಸ್‌ನಲ್ಲಿ ಕೆನ್ನೆಗೆ ಬಾರಿಸಿದ ಯುವತಿಗೆ ಹಲ್ಲೆಗೈದ ಕಂಡಕ್ಟರ್; ಅಮಾನತು ಬೆನ್ನಲ್ಲೇ ಬಂಧನ

By Ravi Janekal  |  First Published Mar 26, 2024, 7:44 PM IST

ಟಿಕೆಟ್ ವಿಚಾರಕ್ಕೆ ನಡೆದ ಜಗಳದಲ್ಲಿ ಬಿಎಂಟಿಸಿ ಕಂಡಕ್ಟರ್ ಮಹಿಳೆ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಸಿದ್ದಾಪುರ ಠಾಣಾ ವ್ಯಾಪ್ತಿಯ ಡೈರಿ ಸರ್ಕಲ್ ಬಳಿ ನಡೆದಿದೆ. ತನ್ಜುಲಾ (24) ಹಲ್ಲೆಗೊಳಗಾದ ಯುವತಿ. ಹೊನ್ನಪ್ಪ ಹಲ್ಲೆ ಮಾಡಿರುವ ಆರೋಪಿ. ಯುವತಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್.


ಬೆಂಗಳೂರು (ಮಾ.26): ಟಿಕೆಟ್ ವಿಚಾರಕ್ಕೆ ನಡೆದ ಜಗಳದಲ್ಲಿ ಬಿಎಂಟಿಸಿ ಕಂಡಕ್ಟರ್ ಮಹಿಳೆ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ಸಿದ್ದಾಪುರ ಠಾಣಾ ವ್ಯಾಪ್ತಿಯ ಡೈರಿ ಸರ್ಕಲ್ ಬಳಿ ನಡೆದಿದೆ. ತನ್ಜುಲಾ (24) ಹಲ್ಲೆಗೊಳಗಾದ ಯುವತಿ. ಹೊನ್ನಪ್ಪ ಹಲ್ಲೆ ಮಾಡಿರುವ ಆರೋಪಿ. ಯುವತಿಯ ಮೇಲೆ ಹಲ್ಲೆ ಮಾಡಿರುವ ಆರೋಪಿ ಕಂಡಕ್ಟರ್ ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದು, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354, 323, 506 ಹಾಗೂ 509 ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಘಟನೆ ಹಿನ್ನೆಲೆ:

Tap to resize

Latest Videos

undefined

ಬೆಂಗಳೂರಿನ ಎಸ್‌ಎಸ್‌ಎನ್ ಲೇಡೀಸ್ ಪಿಜಿಯಲ್ಲಿ ವಾಸವಿದ್ದ ಯುವತಿ ತನ್ಜುಲಾ. ಕಮರ್ಷಿಯಲ್ ಸ್ಟ್ರೀಟ್‌ನ ಲ್ಯಾಂಡ್‌ ಮಾರ್ಕ್ ಗ್ರೂಪ್ ಮ್ಯಾಕ್ಸ್ ಫ್ಯಾಶನ್‌ ಎಂಬಲ್ಲಿ ಕೆಲಸ ಮಾಡುತ್ತಿರುವ ಯುವತಿ. ಇಂದು ಬೆಳಗ್ಗೆ ಬಿಳೇಕಳ್ಳಿಯಿಂದ ಶಿವಾಜಿನಗರಕ್ಕೆ ಕೊತ್ತನೂರು ದಿಣ್ಣೆಯ 34 ನೇ ಡಿಪೋಗೆ ಸೇರಿದ ಬಸ್ ನಂ 368 ರಲ್ಲಿ ಪ್ರಯಾಣಿಸುತ್ತಿದ್ದ ಯುವತಿ. ಪ್ರಯಾಣದ ವೇಳೆ ಕಂಡಕ್ಟರ್ ಮತ್ತು ಯುವತಿ ನಡುವೆ ಉಚಿತ ಪ್ರಯಾಣದ ವಿಚಾರವಾಗಿ ವಾಗ್ವಾದವೇ ಜಗಳಕ್ಕೆ ಕಾರಣವಾಗಿದೆ ಎನ್ನಲಾಗಿದೆ. 

 

 ರಣ ರಣ ಬೇಸಗೆಯಲ್ಲಿ ಕುಡುಕರ ಪುಂಡಾಟ; ಏನು ಮಾಡ್ತಿದೆ ಪೊಲೀಸ್ ಇಲಾಖೆ? ಸಾರ್ವಜನಿಕರು ಗರಂ

ಟಿಕೆಟ್ ನೀಡಲು ಆಧಾರ್ ಕಾರ್ಡ್ ತೋರಿಸುವಂತೆ ಕಂಡಕ್ಟರ್ ಕೇಳಿದ್ದಾರೆ. ಆದರೆ ಎರಡು ಬಸ್ ಸ್ಟಾಪ್ ಬಂದ್ರೂ ಆಧಾರ್ ತೋರಿಸಿರಲಿಲ್ಲ. ಸ್ಟೇಜ್ ಮುಕ್ತಾಯ ಆಗುತ್ತೆ ಬೇಗ ಆಧಾರ್ ಕಾರ್ಡ್ ತೋರಿಸಿ, ಆಧಾರ್ ಕಾರ್ಡ್ ಇಲ್ಲದಿದ್ರೆ ಹಣ ಕೊಟ್ಟು ಟಿಕೆಟ್ ಖರೀದಿಸುವಂತೆ ಕಂಡಕ್ಟರ್ ಹೇಳಿದ್ದಾನೆ. ಇದೇ ವಿಚಾರಕ್ಕೆ ಕಂಡಕ್ಟರ್ ಜೊತೆಗೆ ವಾಗ್ವಾದ ಮಾಡಿರುವ ಯುವತಿ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಯುವತಿ ಕಂಡಕ್ಟರಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಇದರಿಂದ ರೊಚ್ಚಿಗೆದ್ದು ಕಂಡಕ್ಟರ್ ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ.

ಹಲ್ಲೆ ವಿಡಿಯೋ ವೈರಲ್:

ಮಹಿಳೆಯ ಮೇಲೆ ಕಂಡಕ್ಟರ್ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಬಸ್‌ನಲ್ಲಿನ ಓರ್ವ ಪ್ರಯಾಣಿಕ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಕಂಡಕ್ಟರ್ ಗೂಂಡಾ ವರ್ತನೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಂಡಕ್ಟರ್ ಅಮಾನತು: ಯುವತಿ ಮೇಲೆ ಹಲ್ಲೆ ಮಾಡಿರುವ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕಂಡಕ್ಟರ್ ಹೊನ್ನಪ್ಪ ನಾಗಪ್ಪ ಅಗಸರನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.

ಪರೀಕ್ಷೆ ಬರೆಯಲು ತಂಗಿಗೆ ಚೀಟಿ ತಂದ ಅಣ್ಣ, ಬಿಡದ್ದಕ್ಕೆ ಪೊಲೀಸ್‌ ವಿರುದ್ಧ ಹಿಗ್ಗಾಮುಗ್ಗಾ ಥಳಿತ!

ಆದೇಶದಲ್ಲಿ ಏನಿದೆ?

ಘಟಕ -34 (ಕೊತ್ತನೂರು ದಿಣ್ಣೆ) ರ ನಿರ್ವಾಹಕರಾಗಿ  ಹೊನ್ನಪ್ಪ ನಾಗಪ್ಪ ಅಗಸರ್ ಕಾರ್ಯನಿರ್ವಹಿಸುತ್ತಿದ್ದು, ಇಂದು ಮಾರ್ಗ ಸಂಖ್ಯೆ 368/6 ರಲ್ಲಿ ಕರ್ತವ್ಯದಲ್ಲಿದ್ದ ವೇಳೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹೊರ ರಾಜ್ಯದ ಓರ್ವ ಮಹಿಳಾ ಪ್ರಯಾಣಿಕರೊಂದಿಗೆ ಟಿಕೆಟ್ ಪಡೆಯುವ ನೀಡುವ ವಿಚಾರವಾಗಿ ಮಾತಿನ ಚಕಮಕಿ ನಡೆದು ಹಲ್ಲೆ ಮಾಡಿರುತ್ತಾನೆ. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿರುವ ಹಿನ್ನೆಲೆ ಸದರಿ ಅಂತರ್ಜಾಲದ ಸುದ್ದಿಯ ಆಧಾರದ  ಮೇಲೆ  ಹೊನ್ನಪ್ಪ ನಾಗಪ್ಪ ಅಗಸರ್ ರನ್ನು ಅಮಾನತ್ತು ಮಾಡಲಾಗಿದೆ ಎಂದು ಬಿಎಂಟಿಸಿಯಿಂದ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದೆ.

click me!