ಮುಸ್ಲಿಂ ಹುಡುಗನ ಪ್ರೀತಿಗೆ ಬಿದ್ದ ಅಕ್ಕ, ವಿರೋಧಿಸಿದ ತಮ್ಮನನ್ನು ಕೊಂದು ಕೋಣೆಯಲ್ಲೇ ಹೂತಿಟ್ಟಳು!

By Santosh NaikFirst Published Sep 30, 2022, 4:27 PM IST
Highlights

ಜಾರ್ಖಂಡ್‌ನಲ್ಲಿ ಅಂದು ಮ್ಯಾಜಿಸ್ಟೇಟ್‌, ಪೊಲೀಸ್‌, ವಿಧಿವಿಜ್ಞಾನ ತಂಡ ಸೇರಿದಂತೆ ಸರ್ಕಾರಿ ನೌಕರರು ಪತ್ರಾಟುವಿನ ಪಾಂಚ್ ಮಂದಿರ ಪ್ರದೇಶದ ಸರ್ಕಾರಿ ಕ್ವಾಟ್ರಸ್‌ನ ಮನೆಯೊಂದರ ಎದುರು ಹಾಜರಿದ್ದರು. ಮ್ಯಾಜಿಸ್ಟ್ರೇಟ್‌ ಹಾಗೂ ಪೊಲೀಸರ ಸಮ್ಮುಖದಲ್ಲಿ ಕಾರ್ಮಿಕರು ಮನೆಯ ಕೋಣೆಯೊಂದರ ನೆಲವನ್ನು ಒಡೆದು ಅಂದಾಜು ಎರಡೂವರೆ ತಿಂಗಳ ಕೊಲೆ ಪ್ರಕರಣದ ಸಾಕ್ಷ್ಯವನ್ನು ಪತ್ತೆ ಹಚ್ಚಿದರು.
 

ರಾಂಚಿ (ಸೆ. 30): ಪ್ರೇಮ ಕುರುಡು... ಪ್ರೀತಿ ಕುರುಡು... ಅಂತಾ ಹೇಳ್ತಾರಲ್ಲ ಆ ರೀತಿಯ ಪ್ರಕರಣವಿದು. ಪ್ರೀತಿ ಏನು ಬೇಕಾದರೂ ಮಾಡಿಸುತ್ತದೆ, ಅದು ಒಳ್ಳೆದಾದ್ರೂ ಸರಿ ಕೆಟ್ಟದಾದ್ರೂ ಸರಿ. ಇದು ಜಾರ್ಖಂಡ್‌ನ ರಾಮಗಢದ ಪತ್ರಾಟು ಪೊಲೀಸ್‌ ಠಾಣೆ ವ್ಯಾಪ್ತಿಯ ಪಾಂಚ್‌ ಮಂದಿರ್‌ ಪಂಚಾಯತ್‌ ಪ್ರದೇಶದಲ್ಲಿ ನಡೆದಿರುವ ಘಟನೆ. ಮುಸ್ಲಿಂ ಹುಡುಗನ್ನು ಅಕ್ಕ ಪ್ರೀತಿ ಮಾಡ್ತಿದ್ದಳು. ಅದೇಗೋ ಈ ವಿಚಾರ ತಮ್ಮನಿಗೆ ಗೊತ್ತಾಗಿ ಹೋಯಿತು. 25 ವರ್ಷದ ಅಕ್ಕನಿಗೆ 21 ವರ್ಷದ ಹುಡುಗ ಕೂರಿಸಿ ಬುದ್ಧಿಮಾತು ಹೇಳಿದ್ದ. ಆದರೆ, ಅಕ್ಕ ತನ್ನ ಸ್ವಂತ ತಮ್ಮನ ಮಾತನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಸತನ್ನ ದಾರಿಗೆ ಅಡ್ಡ ಬರುತ್ತಿರುವ ತಮ್ಮನನ್ನು ಹೇಗಾದರೂ ಮಾಡಿ ದೂರ ಮಾಡಬೇಕು ಎಂದುಕೊಂಡಳು. ಅಚಾನಕ್‌ ಆಗಿ ಒಂದು ದಿನ ತಮ್ಮ ನಾಪತ್ತೆಯಾಗಿ ಹೋದ. ಎರಡೂವರೆ ತಿಂಗಳಾದರೂ ಆತನ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಆದರೆ, ಪೊಲೀಸರು ಎರಡೂವರೆ ತಿಂಗಳ ಬಳಿಕ ಆಕೆಯ ತಮ್ಮನ ಮಾಹಿತಿ ಸಿಕ್ಕಿತ್ತು. ಸಿಕ್ಕಿದ ಮಾಹಿತಿ ಹುಡುಕಿಕೊಂಡು ವಿಚಾರಣೆ ನಡೆಸಿದಾಗ  ಪೊಲೀಸರಿಗೆ ಕಾದಿದ್ದು ಅಚ್ಚರಿ ಮಾತ್ರ. ಯಾಕೆಂದರೆ, ಆಕೆಯ ತಮ್ಮ ಬೇರೆ ಎಲ್ಲೂ ಇದ್ದಿರಲಿಲ್ಲ. ಅಕ್ಕನ ಕೋಣೆಯಲ್ಲೇ ಇದ್ದ. ಆದರೆ, ಭೂಮಿಯ ಮೇಲೆ, ನೆಲದ ಕೆಳಗೆ..!

ಜಾರ್ಖಂಡ್‌ನ ಪತ್ರಾಟುವಿನ ಪಾಂಚ್‌ ಮಂದಿರ ಪ್ರದೇಶ, ಸಾಮಾನ್ಯವಾಗಿ ಶಾಂತವಾಗಿರುತ್ತದೆ. ಆದರೆ, ಇತ್ತೀಚೆಗೆ, ಪೊಲೀಸರು, ಮ್ಯಾಜಿಸ್ಟ್ರೇಟ್‌, ವಿಧಿವಿಜ್ಞಾನ ಇಲಾಖೆಯ ಅಧಿಕಾರಿಗಳು ಪಾಂಚ್‌ ಮಂದಿರ ಪ್ರದೇಶದ ಸರ್ಕಾರ ಕ್ವಾಟ್ರಸ್‌ನ ಒಂದು ಮನೆಯ ಮುಂದೆ ನಿಂತಿದ್ದರು. ಮ್ಯಾಜಿಸ್ಟ್ರೇಟ್‌ ಹಾಗೂ ಪೊಲೀಸರ ಸಮ್ಮುಖದಲ್ಲಿ ಮನೆಯ ಕೋಣೆಯೊಂದರ ನೆಲವನ್ನು ಕಾರ್ಮಿಕರು ಅಗಿಯುತ್ತಿದ್ದರು. ಅಂದಾಜು ಎರಡು ಗಂಟೆಗಳ ಕೆಲಸ ಬಳಿಕ, ನೆಲದ ಒಳಗೆ ಸಿಕ್ಕಿದ್ದು ಸಂಪೂರ್ಣವಾಗಿ ಕೊಳೆತು ಹೋದ ಮೃತ ದೇಹ. ಇದು ರೋಹಿತ್‌ ಕುಮಾರ್‌ ಎನ್ನುವ 21 ವರ್ಷದ ಹುಡುಗನ ಮೃತದೇಹ. ಈತನನ್ನು ಕೊಂದಿದ್ದು ಮತ್ಯಾರೂ ಅಲ್ಲ. ಆಕೆಯ ಅಕ್ಕ 25 ವರ್ಷದ ಚಂಚಲಾ ಕುಮಾರಿ. ಹೌದು, ಕೋಣೆಯೊಳಗೆ ನೆಲದಡಿಯಿಂದ ಮೃತದೇಹ ಪತ್ತೆಯಾಗಿದೆ. ಶವ ಸಂಪೂರ್ಣವಾಗಿ ಕೊಳೆತು ಹೋಗಿತ್ತು. ಅದೆ, ಜನವಸತಿ ಪ್ರದೇಶದಲ್ಲಿ, ಒಬ್ಬ ವ್ಯಕ್ತಿಯ ಶವವನ್ನು ಮನೆಯ ಕೋಣೆಯೊಂದರಲ್ಲಿ ಹೂತಿದ್ದು ಹೇಗೆ ಎನ್ನುವ ಅನುಮಾನ ಎಲ್ಲರನ್ನು ಕಾಡಿದೆ. ಇದನ್ನು ಚಂಚಲ ಕುಮಾರಿ ಒಬ್ಬಳೇ ಮಾಡಿರಲು ಸಾಧ್ಯವಿಲ್ಲ. ಅದಲ್ಲದೆ ಇಷ್ಟು ದೊಡ್ಡ ಘೋರ ಅಪರಾಧ ಮಾಡಿದರೂ ಒಂಚೂರು ಅನುಮಾನ ಯಾರಿಗೂ ಬರಲಿಲ್ಲ ಎನ್ನುವುದು ಅಚ್ಚರಿಗೆ ಕಾರಣವಾಗಿದೆ.

ಜೂನ್‌ 30 ರಂದು ನಾಪತ್ತೆಯಾಗಿದ್ದ ರೋಹಿತ್‌: ಈ ಕಥೆಯು ಜೂನ್ 24 ರಿಂದ ಪ್ರಾರಂಭವಾಗುತ್ತದೆ. 21 ವರ್ಷದ ರೋಹಿತ್ ಕುಮಾರ್, ಪತ್ರಾಟುವಿನ ಬರ್ತುವಾ ಗ್ರಾಮದ ನಿವಾಸಿಯಾಗಿದ್ದು, ರಾಂಚಿಯಲ್ಲಿರುವ ತನ್ನ ಮಾವನ ಮನೆಗೆ ಆ ದಿನ ಹೋಗಿದ್ದ. ಅಲ್ಲಿ ಆತ ಸುಮಾರು ಒಂದು ವಾರ ವಾಸವಿದ್ದ. ಆದರೆ 30 ಜೂನ್ 2022 ರಂದು ಇದ್ದಕ್ಕಿದ್ದಂತೆ ಅವರು ಎಲ್ಲೋ ನಿಗೂಢವಾಗಿ ಕಣ್ಮರೆಯಾದರು. ಜೂನ್ 30 ರಂದು ಅವರ ಮೊಬೈಲ್ ಫೋನ್ ಮತ್ತೆ ಆನ್ ಆಗದ ರೀತಿಯಲ್ಲಿ ಸ್ವಿಚ್ ಆಫ್ ಆಗಿತ್ತು. ಇನ್ನೊಂದೆಡೆ, ರೋಹಿತ್‌ ಅವರ ಇಡೀ ಕುಟುಂಬದ ಸದಸ್ಯರು ಇವರ ಹುಡುಕಾಟ ನಡೆಸಿದ್ದಾರೆ. ಇದಾದ ನಂತರ, ರಾಂಚಿಯ ಸಂಬಂಧಿಕರು ತಮ್ಮ ಮಗ ಹಠಾತ್ ಕಾಣೆಯಾದ ಬಗ್ಗೆ ಪತ್ರಾಟುದಲ್ಲಿ ವಾಸಿಸುವ ಅವನ ಪೋಷಕರಿಗೆ ತಿಳಿಸಿದ್ದಾರೆ. ಅದರ ನಂತರ ರೋಹಿತ್‌ನ ತಂದೆ ನರೇಶ್ ಮಹತೋ ಅವರು ತಮ್ಮ ಮಗ ನಾಪತ್ತೆಯಾದ ಬಗ್ಗೆ ಮೊದಲು ಪತ್ರಾಟು ಪೊಲೀಸರಿಗೆ ದೂರು ನೀಡಿದ್ದರು, ಆದರೆ ಪೊಲೀಸರು ಇದನ್ನು ಹೆಚ್ಚು ಗಮನ ಹರಿಸಬೇಕಾದ ಅಗತ್ಯವಿಲ್ಲ, ಇದನ್ನು ರಾಂಚಿ ಪ್ರಕರಣ ಎಂದು ಕರೆದರು. ಇದಾದ ನಂತರ ದಿನಗಳು, ವಾರಗಳು, ತಿಂಗಳುಗಳು ಕಳೆದರೂ ರೋಹಿತ್‌ನ ಪತ್ತೆಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಪತ್ರಾಟು ಪೊಲೀಸ್‌ ಠಾಣೆಯ ನೀರಸ ಪ್ರತಿಕ್ರಿಯೆ ಬಳಿಕ, ರಾಂಚಿಯ ಚೌಟಿಯಾ ಸ್ಟೇಷನ್‌ನಲ್ಲೂ ರೋಹಿತ್‌ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಪೊಲೀಸರು ಇದರ ವಿಚಾರನೆ ಆರಂಭಿಸಿದ ಬಳಿಕ, ಈ ತನಿಖೆಯು ರಾಂಚಿಯ ಚಾಂದನಿ ಚೌಕ್‌ ಬಸ್‌ ನಿಲ್ದಾಣದವರೆಗೆ ಬಂದು ತಲುಪಿತ್ತು. ಯಾಕೆಂದರೆ, ರೋಹಿತ್‌ ಅವರ ಫೋನ್‌ ದಾಖಲೆ ಅಲ್ಲಿಗೆ ಕೊನೆಯಾಗಿತ್ತು. ಆ ಬಳಿಕ ಪೊಲೀಸರು ಕಾಲ್‌ ಡಿಟೇಲ್‌ ರೆಕಾರ್ಡ್‌ ಅಥವಾ ಸಿಡಿಆರ್‌ ತೆಗೆಸಿ ತನಿಖೆಯನ್ನು ಆರಂಭ ಮಾಡಿದರು. ಇದಾದ ಬಳಿಕವೂ ಪೊಲೀಸರಿಗೆ ಯಾವುದೇ ವಿಶೇಷ ಮಾಹಿತಿ ಸಿಗಲಿಲ್ಲ. ರೋಹಿತ್‌ ಕೊನೆಯ ಬಾರಿಗೆ ತನ್ನ ಅಕ್ಕ ಚಂಚಲಾ ಕುಮಾರಿ ಅವರೊಂದಿಗೆ ಮಾತನಾಡಿದ್ದರು ಎನ್ನುವುದನ್ನು ಬಿಟ್ಟು ಮತ್ತೆ ಯಾವ ಮಾಹಿತಿಯೂ ಸಿಕ್ಕಿರಲಿಲ್ಲ.  ಪತ್ರಾಟು ನಿವಾಸಿಯಾಗಿದ್ದ ಚಂಚಲಾ ತನ್ನ ಸಹೋದರನ ನಿಗೂಢ ನಾಪತ್ತೆಯಿಂದ ತುಂಬಾ ಅಚ್ಚರಿಗೊಂಡಿದ್ದಳು ಮತ್ತು ಹೇಗಾದರೂ ಮಾಡಿ ತನ್ನ ಸಹೋದರನನ್ನು ಹುಡುಕಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡುತ್ತಿದ್ದಳು.

ಸಾಕಷ್ಟು ಶ್ರಮದ ಹೊರತಾಗಿಯೂ ಪೊಲೀಸರಿಗೆ ರೋಹಿತ್‌ ಕುರುತಾಗಿ ಯಾವುದೇ ಮಾಹಿತಿ ಸಿಗಲಿಲ್ಲ. ಅಲ್ಲದೆ, ಆತ ನಾಪತ್ತೆಯಾಗಲು ಕಾರಣವೇನು ಎನ್ನುವುದಕ್ಕೂ ಯಾವುದೇ ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಈ ಕಾರಣದಿಂದ ಪೊಲೀಸರು ಇಡೀ ಕುಟುಂಬದ ಮಾಹಿತಿ ಕಲೆ ಹಾಕಲು ಆರಂಭಿಸಿದರು. ಈ ವೇಳೆ ಪೊಲೀಸರಿಗೆ ರೋಹಿತ್‌ನ ಅಕ್ಕ ಚಂಚಲ ಕುಮಾರಿ ಮುಸ್ಲಿಂ ಹುಡುಗನನ್ನು ಪ್ರೀತಿ ಮಾಡುತ್ತಿದ್ದಳು ಹಾಗೂ ಅದಕ್ಕೆ ರೋಹಿತ್‌ನ ವಿರೋಧವಿತ್ತ ಎನ್ನುವುದು ತಿಳಿದುಬಂದಿತ್ತು. ಇದರಿಂದಾಗಿ ಪೊಲೀಸರಿಗೆ ಸೂಜಿಮೊನೆಯಷ್ಟು ಸಣ್ಣದಾದ ಅನುಮಾನ ಚಂಚಲಾ ಮೇಲೆ ಬಂದಿತ್ತು. ಸಿಡಿಆರ್‌ ಮಾಹಿತಿ ಆಧರಿಸಿ ಚಂಚಲಾಳನ್ನು ವಿಚಾರಿಸಲು ಆರಂಭಿಸಿದ್ದಾರೆ. ರಾಂಚಿಯ ಚಾಂದನಿ ಚೌಕ್‌ ಬಸ್‌ ಸ್ಟ್ಯಾಂಡ್‌ಗೆ ಬಂದಿದ್ದ ರೋಹಿತ್‌ನನ್ನು ಕರೆತರಲು ಚಂಚಲಾ ಪತ್ರಾಟುವಿನಿಂದ ಬಂದಿದ್ದರು ಎನ್ನುವ ಏಕೈಕ ಮಾಹಿತಿ ಆಧರಿಸಿ, ತೀವ್ರ ವಿಚಾರಣೆ ಮಾಡಿದಾಗ ಆಕೆ ಕೊಲೆಯನ್ನು ಒಪ್ಪಿಕೊಂಡಿದ್ದಾಳೆ.

CRIME NEWS: ರೈಲು ಪ್ರಯಾಣದ ವೇಳೆ ಸಹಾಯದ ನೆಪದಲ್ಲಿ ಮಹಿಳೆ ಮೇಲೆ ಅತ್ಯಾಚಾರ

ಅದೇ ಸಂಚು ಮೊದಲು ತನ್ನ ಸಹೋದರನನ್ನು ರಾಂಚಿಯಿಂದ ಪತ್ರಾಟುಗೆ ಕರೆದೊಯ್ದು, ನಂತರ ಅವನ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಅವನ ಜೀವವನ್ನು ತೆಗೆದುಕೊಂಡಿತು ಎಂದು ರೋಹಿತ್ ಸಹೋದರಿ ಚಂಚಲಾ ಪೊಲೀಸರಿಗೆ ತಿಳಿಸಿದ್ದಾರೆ. ಇದಾದ ನಂತರ ತನ್ನ ಗೆಳೆಯ ಇಸ್ರೇಲ್ ಅನ್ಸಾರಿ ಜೊತೆ ಸೇರಿ ಎರಡು ದಿನಗಳ ಕಾಲ ಶವವನ್ನು ವಿಲೇವಾರಿ ಮಾಡಲು ಪ್ರಯತ್ನಿಸುತ್ತಿದ್ದಳು. ನಂತರ ತನ್ನ ಸರ್ಕಾರಿ ಕ್ವಾರ್ಟರ್ಸ್‌ನ ಕೊಠಡಿಯಲ್ಲಿ ಗುಂಡಿ ತೋಡಿ ಅದರಲ್ಲಿ ತನ್ನ ಸಹೋದರನ ಶವವನ್ನು ಹೂತು ಹಾಕಿದ್ದಾನೆ.

ಹೋಮ್‌ವರ್ಕ್‌ ಮಾಡದ್ದಕ್ಕೆ 6 ವರ್ಷದ ವಿದ್ಯಾರ್ಥಿಯನ್ನು ಬಡಿದು ಸಾಯಿಸಿದ ಶಿಕ್ಷಕ!

ತಮ್ಮನನ್ನು ಹೂತಿಟ್ಟ ಕೋಣೆಯಲ್ಲೇ ಒಂದೂವರೆ ತಿಂಗಳು ವಾಸವಿದ್ದ ಚಂಚಲಾ: ಮಣ್ಣಿನಲ್ಲಿ ಸಮಾಧಿ ಮಾಡಿದ ನಂತರ ಚಂಚಲಾ ಒಂದೇ ಮನೆಯಲ್ಲಿ ಒಂದೂವರೆ ತಿಂಗಳು ಇದ್ದಳು, ಆದರೆ ಯಾರೂ ಅದನ್ನು ಕೇಳಲಿಲ್ಲ. ರೋಹಿತ್ ನಾಪತ್ತೆಯ ಬಗ್ಗೆ ತನಿಖೆ ನಡೆಸುತ್ತಿರುವ ರಾಂಚಿ ಪೊಲೀಸರು ಪತ್ರಾಟು ತಲುಪದಿದ್ದರೆ ಈ ರಹಸ್ಯವೂ ಹೊರಬರದಿರಬಹುದು. ಆದ್ದರಿಂದಲೇ ಹೇಳುವುದು ಅಪರಾಧಿ ಎಷ್ಟೇ ಬುದ್ದಿವಂತನಾದರೂ ಮುಂದೊಂದು ದಿನ ಕಾನೂನಿನ ಕಪಿಮುಷ್ಠಿಗೆ ಒಳಗಾಗುತ್ತಾನೆ. ಪೊಲೀಸರು ಚಂಚಲಾ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಕೊಲೆ ಮಾಡುವ ಸಂಚಿನಿಂದಲೇ ತಮ್ಮನನ್ನು ರಾಂಚಿಯಿಂದ ಪತ್ರಾಟುವಿಗೆ ಕರೆತಂದಿದ್ದೆ. ಆತನ ಆಹಾರದಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿದ್ದೆ. ಬಳಿಕ ಬಾಯ್‌ಫ್ರೆಂಡ್‌ ಇಸ್ರೇಲ್‌ ಅನ್ಸಾರಿ, ಜೊತೆ ಸೇರಿ ತಮ್ಮನನ್ನು ಕೊಲೆ ಮಾಡಿದೆ. ಅಂದಾಜು ಎರಡು ದಿನಗಳ ಬಳಿಕ ಆತನನ್ನು ಹೂಳುವ ನಿರ್ಧಾರ ಮಾಡಿದೆವು.  ಸರ್ಕಾರಿ ಕ್ವಾಟ್ರಸ್‌ನಲ್ಲಿ ನನ್ನ ಕೋಣೆಯಲ್ಲಿಯೇ ಗುಂಡಿ ತೋಡಿ, ಆತನನ್ನು ಹೂತಿಟ್ಟಿದ್ದಾಗಿ ಹೇಳಿದರು. ತಮ್ಮನನ್ನು ತನ್ನ ಕೋಣೆಯಲ್ಲಿಯೇ ಗುಂಡಿ ತೆಗೆದು ಹೂತಿಟ್ಟ ನಡುವೆಯೂ ಚಂಚಲಾ ಅದೇ ಮನೆಯಲ್ಲಿ ಒಂದೂವರೆ ತಿಂಗಳು ವಾಸವಿದ್ದಳು. ಇದರಿಂದಾಗಿ ಯಾರಿಗೂ ಈ ಬಗ್ಗೆ ಅನುಮಾನ ಬಂದಿರಲಿಲ್ಲ. ರಾಂಚಿಯ ಪೊಲೀಸರು ಹಾಗೇನಾದರೂ, ಪತ್ರಾಟುವಿಗೆ ಬರದೇ ಇದ್ದಿದ್ದರೆ ಈ ಕೊಲೆ ರಹಸ್ಯ ಬಯಲಾಗುತ್ತಲೇ ಇದ್ದಿರಲಿಲ್ಲ.

click me!