ಪಾವಗಡ: ಸ್ಫೋಟಕ ಬಳಸಿ ಗ್ರಾಪಂ ಕಚೇರಿ ಧ್ವಂಸಕ್ಕೆ ಯತ್ನ

By Govindaraj SFirst Published Sep 17, 2022, 4:15 AM IST
Highlights

ಸ್ಫೋಟಕಗಳನ್ನು ಬಳಸಿ ಕಿಡಿಗೇಡಿಗಳು ಗ್ರಾಪಂ ಕಚೇರಿಯನ್ನು ಧ್ವಂಸಗೊಳಿಸಲು ಯತ್ನಿಸಿರುವ ಘಟನೆ ತಾಲೂಕಿನ ಬೂದಿಬೆಟ್ಟ ಗ್ರಾಮದಲ್ಲಿ ನಡೆದಿದೆ. ಬೂದಿಬೆಟ್ಟಗ್ರಾಪಂ ಕಚೇರಿಯಲ್ಲಿ ಗುರುವಾರ ರಾತ್ರಿ 10 ಗಂಟೆಗೆ ಭಾರಿ ಸ್ಫೋಟದ ಸದ್ದು ಕೇಳಿಸಿದೆ. 

ಪಾವಗಡ (ಸೆ.17): ಸ್ಫೋಟಕಗಳನ್ನು ಬಳಸಿ ಕಿಡಿಗೇಡಿಗಳು ಗ್ರಾಪಂ ಕಚೇರಿಯನ್ನು ಧ್ವಂಸಗೊಳಿಸಲು ಯತ್ನಿಸಿರುವ ಘಟನೆ ತಾಲೂಕಿನ ಬೂದಿಬೆಟ್ಟ ಗ್ರಾಮದಲ್ಲಿ ನಡೆದಿದೆ. ಬೂದಿಬೆಟ್ಟಗ್ರಾಪಂ ಕಚೇರಿಯಲ್ಲಿ ಗುರುವಾರ ರಾತ್ರಿ 10 ಗಂಟೆಗೆ ಭಾರಿ ಸ್ಫೋಟದ ಸದ್ದು ಕೇಳಿಸಿದೆ. ಕೂಡಲೇ ಸ್ಥಳೀಯರು ದೌಡಾಯಿಸಿ ನೋಡಿದ್ದು ಅಷ್ಟರಲ್ಲಾಗಲೇ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಸ್ಫೋಟದ ತೀವ್ರತೆಗೆ ಗ್ರಾಪಂ ಕಚೇರಿಯ ಗೋಡೆ ಬಿರುಕು ಹಾಗೂ ಲಕ್ಷಾಂತರ ಮೌಲ್ಯದ ಚೇರು, ಟೇಬಲ್‌ ಇತರೆ ಪರಿಕರಗಳು ಧ್ವಂಸಗೊಂಡಿದೆ. 

ಕಿಡಿಗೇಡಿಗಳು ಸ್ಫೋಟ ಮಾಡುವುದಕ್ಕೂ ಮೊದಲು ಯಾವುದೋ ದಾಖಲೆಗಳಿಗಾಗಿ ಪಂಚಾಯಿತಿ ಕಚೇರಿಗೆ ನುಗ್ಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ದಾಖಲೆಗಳು ಸಿಗದೇ ಇದ್ದಾಗ ಸಂಪೂರ್ಣ ಕಚೇರಿಯನ್ನು ಧ್ವಂಸ ಮಾಡುವ ಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಗ್ರಾಮ ಪಂಚಾಯಿತಿ ಕಚೇರಿ ಊರಿನ ಮದ್ಯ ಭಾಗದಲ್ಲಿದ್ದು ರಾತ್ರಿ ವೆಸಗಿಸಿದ ಕೃತ್ಯಕ್ಕೆ ಗ್ರಾಮಸ್ಥರು ತೀವ್ರ ಆತಂಕಕ್ಕೀಡಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ತಾಪಂ ಇಒ ಶಿವರಾಜಯ್ಯ ಹಾಗೂ ಗ್ರಾಪಂ ಪಿಡಿಒ ಮುದ್ದರಾಜ್‌ ಬೂದಿಬೆಟ್ಟಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

40 ಪರ್ಸೆಂಟ್‌ ಕಮಿಷನ್‌ಗೆ ದಾಖಲೆ ಕೊಡಿ: ಈಶ್ವರಪ್ಪ ಕಿಡಿ

ಘಟನೆ ಕುರಿತು ಗ್ರಾಪಂ ಅಭಿವೃದ್ಧಿ ಅಧಿಕಾರಿ ನೀಡಿದ ದೂರಿನ ಮೇರೆಗೆ ತಾಲೂಕಿನ ವೈ.ಎನ್‌ ಹೊಸಕೋಟೆ ಪೊಲೀಸರು ಗ್ರಾಪಂಗೆ ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಸ್ಪೋಟದ ತೀವ್ರತೆಗೆ ಬೆಂಕಿ ವ್ಯಾಪಿಸಿಕೊಂಡಿದ್ದು ಕೆಲ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿ ಹುರಿದ ಪರಿಣಾಮ ಲಕ್ಷಾಂತರ ರು. ಮೌಲ್ಯದ ಕಚೇರಿಯ ಪರಿಕರಗಳು ನಾಶವಾಗಿದ್ದು ಬಿರುವಿನಲ್ಲಿದ್ದ ವಿವಿಧ ಯೋಜನೆಯ ದಾಖಲಾತಿ ಫೈಲ್‌ಗಳು ಸುರಕ್ಷಿತವಾಗಿವೆ. ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮುದ್ದರಾಜ್‌ ತಿಳಿಸಿದ್ದಾರೆ.

ಕಚೇರಿಯ ಪರಿಕರಗಳು ನಾಶ: ತಾಲೂಕಿನ ಬೂದಿಬೆಟ್ಟ ಗ್ರಾಪಂ ಕಚೇರಿಯ ಪಿಡಿಒ ಆಗಿ ಕೆಲಸ ನಿರ್ವಹಿಸುತ್ತಿದ್ದು ರಾತ್ರಿ ವೇಳೆ ಗ್ರಾಪಂ ಅವರಣಕ್ಕೆ ಆಗಮಿಸಿದ್ದ ದುಷ್ರ್ಕಮಿಗಳು ಸಿಡಿಮದ್ದುಗಳಿಂದ ಸಿಡಿಸಿದ ಪರಿಣಾಮ ಕಚೇರಿಯ ಕಟ್ಟಡ ಬಿರುಕು ಬಿಟ್ಟಿದೆ. ಸ್ಪೋಟಕದ ತೀವೃತೆಗೆ ಬೆಂಕಿ ವ್ಯಾಪಿಸಿಕೊಂಡಿದ್ದು ಕೆಲ ಸ್ಥಳೀಯರು ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿ ಹುರಿದ ಪರಿಣಾಮ ಲಕ್ಷಾಂತರ ರು ಮೌಲ್ಯದ ಕಚೇರಿಯ ಪರಿಕರಗಳು ನಾಶವಾಗಿದ್ದು ಬಿರುವಿನಲ್ಲಿದ್ದ ವಿವಿಧ ಯೋಜನೆಯ ದಾಖಲಾತಿ ಪೈಲ್‌ಗಳು ಸೆಪಾಗಿವೆ. ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಲಾಗಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮುದ್ದರಾಜ್‌ ತಿಳಿಸಿದ್ದಾರೆ.

ಭಾರತ್‌ ಜೋಡೋ ಯಾತ್ರೆಗೆ ಗುಂಡ್ಲುಪೇಟೆಯಲ್ಲಿ ಸ್ಥಳ ಪರಿಶೀಲಿಸಿದ ಸಂಸದ ಡಿ.ಕೆ.ಸುರೇಶ್‌

ಗ್ರಾಮದ ಜನತೆ ಬೆಚ್ಚಿ ಬಿದ್ದಿದೆ: ತಾಲೂಕಿನ ಬೂದಿಬೆಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಉತ್ತಮ ಜನರಿದ್ದು, ಸೌಹಾರ್ಧತೆಯಿಂದ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೇ ಎಂದಿಗೂ ಇಂತಹ ಘಟನೆಗಳು ಸಂಭವಿಸಿರಲಿಲ್ಲ. ಗ್ರಾಪಂ ಸ್ಪೋಟಕ ಮಾಹಿತಿ ತೀವ್ರ ಆತಂಕಕ್ಕೆ ಎಡೆಮಾಡಿದೆ. ಇದರಿಂದ ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದು ಯಾಕಾಗಿ ಈ ರೀತಿ ದುಷ್ಕತ್ಯಕ್ಕೆ ಮುಂದಾದರೂ ಗೊತ್ತಿಲ್ಲ. ಸ್ಥಳೀಯರ ಅಥವಾ ಹೊರಗಿನವರ ಕೈವಾಡವೋ ತನಿಖೆಯಿಂದ ಪತ್ತೆಯಾಗಬೇಕಿದೆ ಎಂದು ತಾಲೂಕು ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಹಾಗೂ ಬೂದಿಬೆಟ್ಟ ಗ್ರಾಪಂ ಸ್ಥಳೀಯ ಮುಖಂಡ ಸಾರವಾಟಪುರ ಗೋವಿಂದಬಾಬು ತಿಳಿಸಿದ್ದಾರೆ.

click me!