ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್‌, 1.9 ಕೆಜಿ ಚಿನ್ನ ಸುಲಿದ ಲವರ್ ಬಾಯ್!

By Suvarna News  |  First Published Aug 28, 2022, 7:49 AM IST

ಮತ್ತು ಬರಿಸುವ ನೀರು ಕುಡಿಸಿ ಅಶ್ಲೀಲ ಫೋಟೋ ಸೆರೆ. ಜಾಲತಾಣದಲ್ಲಿ ಫೋಟೋ ಹಾಕೋದಾಗಿ ಬೆದರಿಸಿ 1.9 ಕೆಜಿ ಚಿನ್ನ ಸುಲಿದ ಹಿರಿಯ ವಿದ್ಯಾರ್ಥಿ.


ಬೆಂಗಳೂರು (ಆ.28): ತನ್ನೊಂದಿಗಿರುವ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಗೆ ಬ್ಲಾಕ್‌ಮೇಲ್‌ ಮಾಡಿ 1.9 ಕೆಜಿ ಚಿನ್ನ ಹಾಗೂ 5 ಕೆಜಿ ಬೆಳ್ಳಿ ವಸ್ತುಗಳನ್ನು ಸುಲಿಗೆ ಮಾಡಿದ ಆರೋಪದ ಮೇರೆಗೆ ಯುವಕನೊಬ್ಬನನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುಮಿತ್‌ ಬಂಧಿತನಾಗಿದ್ದು, ಆರೋಪಿಯಿಂದ 300 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ನೆಲೆಸಿರುವ 18 ವರ್ಷದ ಬಾಲಕಿಗೆ ಬ್ಲಾಕ್‌ಮೇಲ್‌ ಮಾಡಿ 1.9 ಕೆಜಿ ಚಿನ್ನ ಹಾಗೂ 5 ಕೇಜಿ ಬೆಳ್ಳಿ ಮಾತ್ರವಲ್ಲದೆ ಹಣವನ್ನು ಸುಮಿತ್‌ ಪಡೆದಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರು ನೀಡಿದ್ದಳು. ಖಾಸಗಿ ಶಾಲೆಯಲ್ಲಿ ಸಂತ್ರಸ್ತೆ ಎಸ್‌ಎಲ್‌ಎಸ್‌ಸಿ ಓದುವಾಗ ಆ ಶಾಲೆಯ ಹಿರಿಯ ವಿದ್ಯಾರ್ಥಿ ಸುಮಿತ್‌ ಪರಿಚಯವಾಗಿತ್ತು. ಈ ಸ್ನೇಹ ಕ್ರಮೇಣ ಪ್ರೇಮಕ್ಕೆ ತಿರುಗಿದೆ. ಆಗ ಖಾಸಗಿ ಭೇಟಿ ಫೋಟೋಗಳನ್ನು ಮೊಬೈಲ್‌ನಲ್ಲಿ ಆರೋಪಿ ತೆಗೆದಿದ್ದ. ಇತ್ತೀಚೆಗೆ ಆಕೆಯನ್ನು ಭೇಟಿಯಾಗಿ ನೀನು ಹಣ ಕೊಡದೆ ಹೋದರೆ ನನ್ನ ಮೊಬೈಲ್‌ನಲ್ಲಿರುವ ತೆಗೆದಿರುವ ಫೋಟೋಗಳನ್ನು ಆಶ್ಲೀಲ ರೀತಿ ಎಡಿಟ್‌ ಮಾಡಿ ನಿಮ್ಮ ತಂದೆಗೆ ತೋರಿಸುತ್ತೇನೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸಹ ಹರಿಬಿಡುತ್ತೇನೆ ಎಂದು ಸಂತ್ರಸ್ತೆಗೆ ಆತ ಬೆದರಿಸಿದ್ದ.

ಈ ಬ್ಲಾಕ್‌ಮೇಲ್‌ಗೆ ಹೆದರಿ ಆಕೆ, ಮೊದ ಮೊದಲು ಮನೆಯಲ್ಲಿ ತಂದೆಗೆ ತಿಳಿಯದಂತೆ .2,500 ರಿಂದ 10 ಸಾವಿರ ರವರೆಗೆ ಕೊಟ್ಟಿದ್ದಳು. ಪದೇ ಪದೇ ಆತ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಕೆಲ ದಿನಗಳ ಹಿಂದೆ ಮಾತನಾಡುವ ನೆಪದಲ್ಲಿ ಸಂತ್ರಸ್ತೆಯನ್ನು ಆರೋಪಿ ಕರೆಸಿಕೊಂಡಿದ್ದ. ಆಗ ಕುಡಿಯಲು ನೀರಿನ ಬಾಟಲ್‌ ಕೊಟ್ಟಿದ್ದ ಆತ, ‘ನೀರು ಕುಡಿದ ಬಳಿಕ ಅದರಲ್ಲಿ ಡ್ರಗ್‌್ಸ ಮಿಶ್ರಣ ಮಾಡಲಾಗಿತ್ತು.

Tap to resize

Latest Videos

ನೀನು ಮನೆಯಲ್ಲಿರುವ ಬಂಗಾರ ತಂದು ಕೊಡದೆ ಹೋದರೆ ಆಶ್ಲೀಲ ವಿಡಿಯೋ ಜತೆ ಡ್ರಗ್‌್ಸ ಸೇವನೆ ಫೋಟೋಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತೇನೆ. ನಿಮ್ಮ ಕುಟುಂಬದವರನ್ನು ಮುಗಿಸುತ್ತೇನೆ’ ಎಂದು ಬೆದರಿಸಿದ್ದ. ಈ ಮಾತಿಗೆ ಭೀತಿಗೊಂಡ ಆಕೆ, ಮನೆಯಲ್ಲಿದ್ದ 1.900 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ವಸ್ತುಗಳನ್ನು ತೆಗೆದುಕೊಂಡು ಹೋಗಿ ಆರೋಪಿಗೆ ಕೊಟ್ಟಿದ್ದಳು ಎಂದು ದೂರಿನಲ್ಲಿ ಹೇಳಲಾಗಿದೆ.

ಬೆಂಗಳೂರು: ದೂರವಾಗಿದ್ದ ಪ್ರಿಯಕರನ ಅಪಹರಿಸಿ ಥಳಿಸಿದ ಪ್ರಿಯತಮೆ..!

ಕೆಲ ದಿನಗಳ ಹಿಂದೆ ಮನೆಯಲ್ಲಿದ್ದ ಚಿನ್ನಕ್ಕೆ ವಿಮೆ ನವೀಕರಣ ಮಾಡಿಸುವ ಮಾಡಿಸುವ ಸಲುವಾಗಿ ಸಂತ್ರಸ್ತೆಯ ತಂದೆ, ಮನೆಯಲ್ಲಿದ್ದ ಬಂಗಾರವನ್ನು ತೆಗೆದುಕೊಳ್ಳಲು ಹೋಗಿದ್ದಾರೆ. ಆದರೆ ಆ ವೇಳೆ ಬಾಕ್ಸ್‌ಗಳಲ್ಲಿ ಚಿನ್ನ ಕಾಣದೆ ಗಾಬರಿಗೊಂಡಿದ್ದಾರೆ. ಆಗ ಮಗಳನ್ನು ವಿಚಾರಿಸಿದಾಗ ಸುಲಿಗೆ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಒಡಿಸ್ಸಾದಿಂದ ಗಾಂಜಾ ತರಿಸಿ ಬೆಂಗಳೂರಿನಲ್ಲಿ ಮಾರಾಟ: ಡ್ರಗ್‌್ಸ ಮಾರಾಟ ದಂಧೆಯಲ್ಲಿ ತೊಡಗಿದ್ದ ಹೊರರಾಜ್ಯದ ಡ್ರಗ್‌್ಸ ಪೆಡ್ಲರ್‌ನನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಬಂಧಿಸಿ, .10 ಲಕ್ಷ ಮೌಲ್ಯದ 10 ಕೆ.ಜಿ. ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ ಫೋನ್‌ ಜಪ್ತಿ ಮಾಡಿದ್ದಾರೆ.

ತುಮಕೂರು: ಮಹಿಳೆಗೆ ವಂಚಿಸಿ 9.60 ಲಕ್ಷ ಲಪಟಾಯಿಸಿದ್ದ ಖದೀಮರ ಬಂಧನ

ಬಿಹಾರ ಮೂಲದ ಆರೋಪಿ ಮನೀಶ್‌ಕುಮಾರ್‌ (42) 10 ವರ್ಷದ ಹಿಂದೆ ನಗರಕ್ಕೆ ಬಂದು ಬೇಕರಿ ಹಾಗೂ ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡಿದ್ದ. ಒಡಿಸ್ಸಾದಿಂದ ತನ್ನ ಸಹಚರನ ಮೂಲಕ ಮಾದಕವಸ್ತು ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿ, ಆತನದಿಂದಲೇ ನಗರಕ್ಕೆ ತರಿಸಿಕೊಳ್ಳುತ್ತಿದ್ದ. ಬಳಿಕ ಪರಿಚಿತ ಗ್ರಾಹಕರು ಹಾಗೂ ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!