ಬೆಂಗಳೂರು: ರಾಜ್‌ ನ್ಯೂಸ್‌ ಹೆಸರಲ್ಲಿ ಹಣಕ್ಕೆ ಬ್ಲ್ಯಾಕ್‌ಮೇಲ್‌..!

By Kannadaprabha NewsFirst Published Jul 5, 2024, 11:52 AM IST
Highlights

ಕನ್ನಡದ ಖಾಸಗಿ ಸುದ್ದಿ ವಾಹಿನಿಯ ಹೆಸರಿನಲ್ಲಿ ಅಶ್ಲೀಲ ವಿಡಿಯೊ ಪ್ರಸಾರ ಮಾಡುವುದಾಗಿ ಮಸಾಜ್‌ ಪಾರ್ಲರ್‌ ಮ್ಯಾನೇಜರ್‌ಗೆ ಬೆದರಿಸಿ 8 ಲಕ್ಷ ರು. ಹಣಕ್ಕೆ ಬೇಡಿಕೆ ಇರಿಸಿದ ಆರೋಪದಡಿ ಜೀವನ ಬಿಮಾನಗರದಲ್ಲಿ ದೂರು ದಾಖಲಾಗಿದೆ. 

ಬೆಂಗಳೂರು(ಜು.05):  ಕನ್ನಡದ ಖಾಸಗಿ ಸುದ್ದಿ ವಾಹಿನಿಯ ಹೆಸರಿನಲ್ಲಿ ಅಶ್ಲೀಲ ವಿಡಿಯೊ ಪ್ರಸಾರ ಮಾಡುವುದಾಗಿ ಮಸಾಜ್‌ ಪಾರ್ಲರ್‌ ಮ್ಯಾನೇಜರ್‌ಗೆ ಬೆದರಿಸಿ 8 ಲಕ್ಷ ರು. ಹಣಕ್ಕೆ ಬೇಡಿಕೆ ಇರಿಸಿದ ಆರೋಪದಡಿ ಜೀವನ ಬಿಮಾನಗರದಲ್ಲಿ ದೂರು ದಾಖಲಾಗಿದೆ. ಇಂದಿರಾನಗರದ 100 ಅಡಿ ರಸ್ತೆ 15ನೇ ಮುಖ್ಯ ರಸ್ತೆಯ 'ಟೀ ಸ್ಪಾ ಅಂಡ್ ಬ್ಯೂಟ' ಎಂಬ ಮಸಾಜ್ ಪಾರ್ಲರ್ ಮ್ಯಾನೇಜರ್ ಶಿವಶಂಕರ್ ದೂರಿನ ಮೇರೆಗೆ ರಾಜ್ ನ್ಯೂಸ್ ವಾಹಿನಿಯ ವೆಂಕಟೇಶ್, ಇತರರ ವಿರುದ್ಧ ಎಫ್ ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಸುದ್ದಿವಾಹಿನಿ ಹೆಸರಿನಲ್ಲಿ ಸ್ಪಾಗೆ ಭೇಟಿ: 

Latest Videos

ಜೂ.27ರಂದು ಮಧ್ಯಾಹ್ನ ಓರ್ವ ಮಹಿಳೆ ಮತ್ತು ಇಬ್ಬರು ಪುರುಷರು ರಾಜ್ ನ್ಯೂಸ್ ಎಂಬ ಹೆಸರಿರುವ ಮೈಕ್ ಹಿಡಿದು ಮಸಾಜ್ ಪಾರ್ಲರ್ ಗೆ ಬಂದಿದ್ದರು. ಈ ವೇಳೆ ರಾಜ್ ನ್ಯೂಸ್ ಸಿಇಓ ಮಾತನಾಡುತ್ತಾರೆ ಎಂದು ಓರ್ವ ವ್ಯಕ್ತಿ ಮೊಬೈಲ್ ನಲ್ಲಿ ಕರೆ ಮಾಡಿ ನನಗೆ ಕೊಟ್ಟರು. ಈ ವೇಳೆ ಫೋನ್ ನಲ್ಲಿ ಮಾತನಾಡಿದ ವ್ಯಕ್ತಿ, 'ಏನಪ್ಪಾ ನೀವು ಸ್ಪಾದಲ್ಲಿ ಮಸಾಜ್ ಮಾಡುತ್ತಿರೋ ಅಥವಾ ವೇಶ್ಯಾವಾಟಿಕೆ ದಂಧೆ ಮಾಡುತ್ತೀರೋ' ಎಂದು ಪ್ರಶ್ನಿಸಿದರು. ಈ ವೇಳೆ ನಾನು ನಾವು ಯಾವುದೇ ಕಾನೂನುಬಾಹಿರ ಚಟುವಟಿಕೆ ಮಾಡುವುದಿಲ್ಲ ಎಂದೆ. ಬಳಿಕ ಆ ವ್ಯಕ್ತಿ ನಿಮ್ಮ ಸ್ಪಾದಲ್ಲಿ ನಡೆಸಿರುವ ವೇಶ್ಯಾವಾಟಿಕೆ ವಿಡಿಯೊ ನಮ್ಮ ಬಳಿ ಇದೆ ಎಂದರು. ಬಳಿಕ ರಾಜ್ ನ್ಯೂಸ್ ಮೈಕ್ ಹಿಡಿದು ಬಂದಿದ್ದ ಮಹಿಳೆ ಮೊಬೈಲ್‌ನಲ್ಲಿ ಆ ವಿಡಿಯೋ ತೋರಿಸಿದರು. ವಿಡಿಯೋದಲ್ಲಿ ಕಿಮ್ ಕೊಂಗೈ, ಗ್ರಾಹಕರ ಸೋಗಿನಲ್ಲಿ ಬಂದಿದ್ದ ಸಂದೇಶ್ ಇಬ್ಬರು ಬೆತ್ತಲಾಗಿರುವುದು ಕಂಡು ಬಂದಿತು ಎಂದು ಶಿವಶಂಕರ್ ದೂರಿದ್ದಾರೆ.

ಕಳ್ಳತನಕ್ಕೆ ಬಂದೋನು ಹಾಸಿಗೆ ಮೇಲಿದ್ದ ಪತಿ ಪತ್ನಿ ವಿಡಿಯೋ ಮಾಡ್ದ! ವಾಟ್ಸಪ್ ಮೆಸೇಜ್ ನೋಡಿ ದಂಪತಿ ಕಂಗಾಲು!

15 ಲಕ್ಷ ರು. ಬೇಡಿಕೆ: 

ಬಳಿಕ ರಾಜ್ ನ್ಯೂಸ್‌ನವರು ಎಂದು ಬಂದಿದ್ದ ವ್ಯಕ್ತಿ ಮತ್ತೆ ರಾಜ್ ನ್ಯೂಸ್ ಸಿಇಓ ಮಾತನಾಡುತ್ತಿದ್ದಾರೆ ಎಂದು ಫೋನ್ ಮಾಡಿ ಕೊಟ್ಟರು. ಆಗ ಪೋನ್‌ನಲ್ಲಿ ಮಾತನಾಡಿದ ವ್ಯಕ್ತಿ, ವಿಡಿಯೊ ನೋಡಿದೆಯಾ? 15 ಲಕ್ಷ ರು. ಕೊಡು. ಎಲ್ಲಾ ವಿಡಿಯೊ ಡಿಲೀಟ್ ಮಾಡಿಸುತ್ತೇನೆ ಎಂದರು. ಅಷ್ಟು ಹಣ ಕೊಡಲು ಸಾಧ್ಯವಿಲ್ಲ ಎಂದಾಗ, ಕರೆ ಸ್ಥಗಿತಗೊಳಿಸಿದರು.

ಜೂ.28ರಂದು ಮೊಬೈಲ್‌ಗೆ ವಾಟ್ಸಾಪ್ ಕರೆ ಮಾಡಿದ್ದ ವ್ಯಕ್ತಿ ಹಣ ಹೊಂದಿಸಿದೆಯಾ ಎಂದು ಕೇಳಿದರು. ಅಷ್ಟು ಹಣ ಕೊಡಲು ಸಾಧ್ಯವಿಲ್ಲ. 50 ಸಾವಿರರು. ಅಥವಾ ಒಂದು ಲಕ್ಷರು. ಹೊಂದಿಸಬಲ್ಲೆ ಎಂದು ಹೇಳಿದೆ. ಅದಕ್ಕೆ ಆತ, ಸಣ್ಣ ಪತ್ರಿಕೆಯವರು. ಯುಟ್ಯೂಬ್ ಚಾನೆಲ್‌ನವರು ಇಷ್ಟು ಹಣ ತೆಗೆದು ಕೊಳ್ಳುವುದಿಲ್ಲ, ಒಂದು ಟಿ.ವಿ.ಚಾನೆಲ್ ನಡೆಸಲು ತಿಂಗಳಿಗೆ 84 ಲಕ್ಷ ರು. ಬೇಕು. ನಾನು ಒಂದು ಮೊತ್ತ ಹೇಳುತ್ತೇನೆ ಎಂದು ಸೂಚಿಸಿದರು.

ಲೋನ್‌ಗೆಂದು ಬಂದಳು ಬ್ಯಾಂಕ್ ಸಿಇಒನನ್ನೇ ದಿವಾಳಿ ಮಾಡಿದಳು: 108 ಇನ್ಸ್ಟಾಲ್‌ಮೆಂಟ್‌ 4 ಕೋಟಿಗೂ ಅಧಿಕ ವಸೂಲಿ

ಫೈನಲ್ 8 ಲಕ್ಷರು. ಬೇಡಿಕೆ:

ಜೂ.30ರಂದು ಮತ್ತೆ ವಾಟ್ಸಾಪ್ ಕರೆ ಮಾಡಿದ್ದ ಆ ವ್ಯಕ್ತಿ ಅಂತಿಮವಾಗಿ 8 ಲಕ್ಷರು. ಕೊಡು ಎಂದು ಕೇಳಿದರು. ಅಷ್ಟು ಕೊಡಲು ಸಾಧ್ಯವಿಲ್ಲ ಎಂದೆ. ನಿಮ್ಮ ಬಳಿ ಇರುವ ವಿಡಿಯೊ ಕಳುಹಿಸಿ ಎಂದುಕೇಳಿದೆ. ಅದಕ್ಕೆ ಆ ವ್ಯಕ್ತಿ ವಿಡಿಯೋದ ಸ್ಟೀನ್ ಶಾಟ್ ಮಾತ್ರ ಕಳುಹಿಸಿದರು. ನನಗೆ ಕರೆ ಮಾಡಿದ್ದ ವ್ಯಕ್ತಿಯ ಹೆಸರು ಟೂ ಕಾಲರ್‌ನಲ್ಲಿ ವೆಂಕಟೇಶ್ ಎಂದು ಬಂದಿದೆ. ಹೀಗಾಗಿ ರಾಜ್ ನ್ಯೂಸ್ ಸಿಇಓ ಎಂದು ಕೇಳಿಕೊಂಡು ಕರೆ ಮಾಡಿದ್ದ ವೆಂಕಟೇಶ್, ಇತರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿವಶಂಕರ್‌ ದೂರಿನಲ್ಲಿ ಮನವಿ ಮಾಡಿದ್ದಾರೆ.

ದೂರಿನಲ್ಲಿ ಏನಿದೆ?

ರಿಯಾನ್ ಜಗದೇವ್ ಮತ್ತು ರೂಪಂ ರೋಹಟಗಿ ಎಂಬುವವರು ಟೀ ಸ್ಟಾ ಆ್ಯಂಡ್ ಬ್ಯೂಟಿ ಮಸಾಜ್ ಪಾರ್ಲರ್ ನಡೆಸುತ್ತಿದ್ದಾರೆ. ಈ ಮಸಾಜ್ ಪಾರ್ಲ‌ರ್ನನಲ್ಲಿ ನಾನು ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದಾನೆ. ಈ ಮಸಾಜ್ ಪಾರ್ಲರ್ ನಡೆಸಲು ಸಂಬಂಧಪಟ್ಟ ಇಲಾಖೆಗಳಿಂದ ಪರವಾನಗಿ ಪಡೆಯಲಾಗಿದೆ. ಈ ಮಸಾಜ್ ಪಾರ್ಲ‌್ರನಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿಲ್ಲ. ಜೂ.21ರಂದು ಈಶಾನ್ಯ ಭಾರತದ ಕಡೆಯವಳು ಎಂದು ಹೇಳಿಕೊಂಡು ಕಿಮ್ ಕೊಂಗೈ ಹೆಸರಿನ ಯುವತಿ ಜಸ್ಟ್‌ ಡಯಲ್‌ ಮಸಾಜ್‌ ಪಾರ್ಲರ್‌ ನಂಬರ್‌ ತೆಗೆದುಕೊಂಡು ಕರೆ ಮಾಡಿ ಕೆಲಸ ಕೇಳಿ ಬಂದಿದ್ದರು. ಅಂದು ನಾವು 10 ದಿನಗಳ ಮಟ್ಟಿಗೆ ಪ್ರಾಯೋಗಿಕ ಕೆಲಸಕ್ಕೆ ಸೇರಿಕೊಂಡಿದ್ದೆವು. ಜೂ.26ರಂದು ಸಂದೇಶ್ ಹೆಸರಿನ ವ್ಯಕ್ತಿ ಮಸಾಜ್ ಪಾರ್ಲರ್‌ಗೆ ಬಂದು ಜಕೂಸಿ ಮಸಾಜ್ ಮಾಡಿಸಬೇಕು. ಈಶಾನ್ಯ ಭಾರತ ಯುವತಿ ಇದ್ದರೆ ಕಳುಹಿಸಿ ಎಂದು ಕೇಳಿದರು. ಅದರಂತೆ ನಾವು ಕಿಮ್ ಕೊಂಗ್ರೆನನ್ನು ಮಸಾಜ್ ಸೇವೆಗೆ ನಿಯೋಜಿಸಿದ್ದೆವು. 90 ನಿಮಿಷ ಮಸಾಜ್ ಬಳಿಕ ಸಂದೇಶ್ ಎಂಬಾತ 7500 ರು. ಪಾವತಿಸಿ ಹೊರಟಿದ್ದರು. ಬಳಿಕ ಕೊಂಗ್ಲೆ ಕೆಲಸಕ್ಕೆ ಬಾರದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತೆರಳಿದ್ದಳು ಎಂದು ತಿಳಿಸಲಾಗಿದೆ.

click me!