ಬೆಂಗಳೂರು: ಕಾರ್ ಶೆಡ್ಡಲ್ಲಿ ಹತ್ಯೆ ಮುನ್ನ 2 ದಿನ ಸ್ಕೆಚ್, ಇಬ್ಬರ ಬಂಧನ

By Kannadaprabha News  |  First Published Jul 5, 2024, 8:31 AM IST

ದೊಡ್ಡಗುಬ್ಬಿಯ ಕಿರಣ್‌ ಹಾಗೂ ರಾಹುಲ್ ಬಂಧಿತರಾಗಿದ್ದು, ಕೃತ್ಯ ಎಸಗಿ ಪರಾರಿಯಾಗಿರುವ ಮತ್ತೊಬ್ಬ ಆರೋಪಿ ಪತ್ತೆಗೆ ತನಿಖೆ ನಡೆದಿದೆ. ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಅಜಿತ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದರು. ಆರೋಪಿಗಳನ್ನು ಪೂರ್ವ ವಿಭಾಗದ ಡಿ.ದೇವರಾಜ್ ಮಾರ್ಗದರ್ಶನದಲ್ಲಿ ನಗರದಲ್ಲಿ ಕಾರ್ಯಾಚರಣೆ ನಡೆಸಿ ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು(ಜು.05):   ನಗರದ ಪಿಎಸ್‌ಕೆ ನಾಯ್ಡು ಲೇಔಟ್‌ನಲ್ಲಿ ಬುಧವಾರ ನಡೆದಿದ್ದ ಖಾಸಗಿ ಕಂಪನಿ ಉದ್ಯೋಗಿ ಅಜಿತ್ ಹತ್ಯೆ ನಡೆದು 24 ತಾಸಿನೊಳಗೆ ಇಬ್ಬರು ಪ್ರಮುಖ ಆರೋಪಿಗಳನ್ನು ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೊಡ್ಡಗುಬ್ಬಿಯ ಕಿರಣ್‌ ಹಾಗೂ ರಾಹುಲ್ ಬಂಧಿತರಾಗಿದ್ದು, ಕೃತ್ಯ ಎಸಗಿ ಪರಾರಿಯಾಗಿರುವ ಮತ್ತೊಬ್ಬ ಆರೋಪಿ ಪತ್ತೆಗೆ ತನಿಖೆ ನಡೆದಿದೆ. ವೈಯಕ್ತಿಕ ಕಾರಣ ಹಿನ್ನೆಲೆಯಲ್ಲಿ ಅಜಿತ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದರು. ಆರೋಪಿಗಳನ್ನು ಪೂರ್ವ ವಿಭಾಗದ ಡಿ.ದೇವರಾಜ್ ಮಾರ್ಗದರ್ಶನದಲ್ಲಿ ನಗರದಲ್ಲಿ ಕಾರ್ಯಾಚರಣೆ ನಡೆಸಿ ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Latest Videos

undefined

ಹಮಾಲಿ ಕೆಲಸಕ್ಕೆ ಹೋಗಿದ್ದ ತಂದೆ ನಾಪತ್ತೆ! ಅಪ್ಪನ ಹುಡುಕಿಕೊಡುವಂತೆ ಒಬ್ಬನೇ ಮಗ ಕಣ್ಣೀರು!

ಹುಟ್ಟು ಹಬ್ಬದ ದಿನ ಅವಾಜ್: 

ಎರಡೂರು ವರ್ಷಗಳಿಂದ ಕ್ಷುಲ್ಲಕ ವಿಚಾರಕ್ಕೆ ಕಿರಣ್ ಹಾಗೂ ಅಜಿತ್ ಮಧ್ಯೆ ಮನಸ್ತಾಪವಾಗಿತ್ತು. ಒಂದೂವರೆ ವರ್ಷದ ಹಿಂದೆ ರಾಮಮೂರ್ತಿ ನಗರ ಸಮೀಪ ಗುರಾಯಿಸಿದ ಎಂಬ ಕಾರ ಣಕ್ಕೆ ಕಿರಣ್ ಮೇಲೆ ಹಲ್ಲೆ ನಡೆಸಿದ್ದ. ಈ ಘಟನೆ ಬಳಿಕ ಇಬ್ಬರ ನಡುವೆ ದ್ವೇಷ ಹೆಚ್ಚಾಗಿತ್ತು. ಕಳೆದ ತಿಂಗಳ 19ರಂದು ತನ್ನ ಹುಟ್ಟು ಹಬ್ಬ ಆಚರಿಸಲು ಸ್ನೇಹಿತರ ಜತೆ ಪಿಎಸ್‌ಕೆ ನಾಯ್ಡು ಲೇಔಟ್‌ಗೆ ಬಂದಿದ್ದ ಕಿರಣ್‌ ಮತ್ತೆ ಅಜಿತ್ ಹೊಡೆದು ಕಳುಹಿಸಿದ್ದ. ಆ ವೇಳೆ ರಾಮಮೂರ್ತಿ ಕೊಟ್ಟಿದ್ದ ಹೊಡೆತ ಸಾಕಾಗಿಲ್ವಾ ಎಂದು ಅಜಿತ್ ಲೇವಡಿ ಮಾಡಿದ್ದ. ಈ ಮಾತುಗಳಿಂದ ಕೆರಳಿದ ಕಿರಣ್, ಕೊನೆಗೆ ಅಜಿತ್ ಕೊಲೆಗೆ ನಿರ್ಧರಿಸಿದ್ದಾನೆ. ಈ ಕೃತ್ಯಕ್ಕೆ ಆತನ ಇಬ್ಬರು ಸ್ನೇಹಿತರು ಸಾಥ್ ಕೊಟ್ಟಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಫಸ್ಟ್‌ ನೈಟ್‌ ರೂಮ್‌ನಲ್ಲೇ ನೇಣು ಬಿಗಿದುಕೊಂಡ ಗಂಡ, ಹಾಲು ಹಿಡ್ಕೊಂಡು ಬಂದ ವಧುವಿಗೆ ಶಾಕ್‌!

ಏಳೆಂಟು ದಿನಗಳಿಂದ ಪುಲಕೇಶಿನಗರ ಸಮೀಪದ ಲಾಡ್ಜ್‌ನಲ್ಲಿ ರೂಂ ಮಾಡಿ ಕೊಂಡು ಅಜಿತ್ ಅನ್ನು ಆರೋಪಿಗಳು ಹಿಂಬಾಲಿಸಿ ಚಲನವಲನಗಳ ಮಾಹಿತಿ ಸಂಗ್ರಹಿಸಿದ್ದರು. ಅಂತಿಮವಾಗಿ ಪಿಎಸ್‌ಕೆ ನಾಯ್ಡು ಲೇಔಟ್‌ನ ಕಾರಿನ ಶೆಡ್‌ ಅಜಿತ್ ಬರುವುದು ಖಚಿತ ಪಡಿಸಿಕೊಂಡು ಬುಧವಾರ ಬೆಳಗ್ಗೆ ಆರೋಪಿಗಳು ಹತ್ಯೆ ಕೃತ್ಯ ಎಸಗಿದ್ದಾರೆ. 

ಈ ಕೊಲೆ ಬಳಿಕ ತಪ್ಪಿಸಿಕೊಂಡಿದ್ದ ಆರೋಪಿಗಳನ್ನು ತಾಂತ್ರಿಕ ಮಾಹಿತಿ ಆಧರಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಲಾಯಿತು. ವಿಚಾರಣೆಗೊಳಪಡಿಸಿದಾಗ ಹತ್ಯೆ ಹಿಂದಿನ ಕಾರಣವನ್ನು ಆರೋಪಿಗಳು ಬಾಯ್ದಿಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!