* ಶಿರಸ್ತೇದಾರ್‌ನನ್ನು ಹನಿ ಟ್ರ್ಯಾಪ್‌ಗೆ ಸಿಲುಕಿಸಿದ ಯುವತಿ
* 25 ಲಕ್ಷ ರೂಪಾಯಿ ಹಣ ನೀಡುವಂತೆ ಯುವತಿ ಅಂಡ್ ಟೀಂ ನಿಂದ ಡಿಮ್ಯಾಂಡ್
* ಕೆಆರ್ ಪುರಂ ಪೊಲೀಸರಿಂದ ಮೂವರ ಬಂಧನ
* ಗಣಪತಿ ನಾಯ್ಕ್, ಕೇಶವನ್ ಮತ್ತು ಮತ್ತು ಕಿಶನ್ ಬಂಧಿತರು
ಬೆಂಗಳೂರು(ಮಾ. 20) ಸಾಮಾಜಿಕ ಜಾಲತಾಣ (Social Media) ದಿನ ದಿಂದ ದಿನ ಬಹಳ ವೇಗವಾಗಿ ಬೆಳೆಯುತ್ತಿದೆ. ಅದೇ ರೀತಿ ಗೊತ್ತು ಗುರಿ ಇಲ್ದೇ ಇರೋರ ಸ್ನೇಹ ಸಂಪಾದನೆ ಮಾಡಿ ವಾಟ್ಸಾಪ್ಫೇ, ಸ್ ಬುಕ್ (Facebook) ಮೆಸೆಂಜರ್ ನಲ್ಲಿ ಚಾಟ್ ಮಾಡ್ತಾ ಕಾಲ ಕಳಿತಾರೆ. ಹೀಗೆ ಶಿರಸ್ತೇದಾರರೊಬ್ಬರು ಫೇಸ್ಬುಕ್ ನಲ್ಲಿ ಪರಿಚಿತಳಾದ ಯುವತಿಯೊಂದಿಗೆ ಸ್ನೇಹ ಮಾಡಿದ್ದಾರೆ.
ಹೋಟೇಲ್ ವೊಂದಕ್ಕೆ ಹೋಗುತ್ತಿದ್ದಂತೆ ಶಿರಸ್ತೇದಾರರಿಗೆ ತಂಪು ಪಾನೀಯ ನೀಡಿದ್ದಾರೆ. ಅದರಲ್ಲಿ ಮತ್ತು ಬರೋ ಔಷಧ ಮಿಶ್ರಣ ಮಾಡಿದ್ದ ಯುವತಿ.. ಯಾವಾಗ ಶಿರಸ್ತೇದಾರ ಆ ತಂಪುಪಾನೀಯವನ್ನ ಕುಡಿದ್ರೊ ನಿತ್ರಾಣರಾಗಿದ್ದಾರೆ. ಈ ವೇಳೆ ಶಿರಸ್ತೇದಾರರ ಖಾಸಗಿ ವಿಡಿಯೋವನ್ನ ಚಿತ್ರೀಕರಿಸಿ 25 ಲಕ್ಷ ಹಣಕ್ಕಾಗಿ ಡಿಮ್ಯಾಂಡ್ (Blackmail) ಮಾಡಿದ್ದಾರೆ.
ಇದರಿಂದ ನೊಂದ ಶಿರಸ್ತೇದಾರ್ ಕೆ ಆರ್ ಪುರಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಯಾವಾಗ 25 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ರೊ ತಕ್ಷಣವೇ ಕೆ ಆರ್ ಪುರಂ ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ಗಣಪತಿ ನಾಯ್ಕ್, ಕೇಶವ ಮತ್ತು ಕಿಶನ್ ಎಂಬಾತನನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
Sexual Harassment : ಕೆಲಸ ಕೊಡಿಸುವ ನೆಪದಲ್ಲಿ ವಿವಾಹಿತೆಯನ್ನು ಹೋಟೆಲ್‌ಗೆ ಕರೆದ!
ಇನ್ನು ನಿಖಿತಾ ಅಲಿಯಾಸ್ ಜ್ಯೋತಿ ಪ್ರಕರಣ ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿದ್ದಾರೆ. ಸದ್ಯ ಮೂವರನ್ನ ಬಂಧಿಸಿರುವ ಕೆ ಆರ್ ಪುರಂ ಪೊಲೀಸರು ಮೂರು ಮಂದಿ ಆರೋಪಿಗಳನ್ನ ನ್ಯಾಯಾದೀಶರ ಮುಂದೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮೂವರು ಆರೋಪಿಗಳನ್ನ 5ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ.
ಕೋಣೆಗೆ ಕರೆಸಿ ವಿಡಿಯೋ ಮಾಡಿಕೊಂಡರು: ಶಿರಸಿಯಲ್ಲಿ ಹನಿ ಟ್ರ್ಯಾಪ್ (Honeytrap) ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು (Arrest) ಬಂಧಿಸಲಾಗಿತ್ತು. ಹನಿಟ್ರ್ಯಾಪ್ ಮಾಡಿ ಸಂತ್ರಸ್ತನಿಂದ 15 ಲಕ್ಷ ರೂ. ಬೇಡಿಕೆಯಿಟ್ಟಿದ್ದ(Blackmail) ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಿದ್ದರು.
ಶಿರಸಿ (Sirsi)ಉಂಚಳ್ಳಿಯ ಅಜಿತ್ ಶ್ರೀಕಾಂತ್ ನಾಡಿಗ್ (25), ಬನವಾಸಿ ರಸ್ತೆಯ ಗೊಲಕೇರಿ ಓಣಿಯ ಧನುಷ್ಯ ಕುಮಾರ್ ಯಾನೆ ದಿಲೀಪ್ ಕುಮಾರ್ ಶೆಟ್ಟಿ (25) ಹಾಗೂ ಶಿವಮೊಗ್ಗ (Shivamogga)ಗೋಪಾಳ ರಂಗನಾಥ್ ಬಡಾವಣೆಯ ಪದ್ಮಜಾ ಡಿ.ಎನ್. (50) ಬಂಧಿಸಿದಾಗ ಅನೇಕ ಮಾಹಿತಿಗಳು ಹೊರಕ್ಕೆ ಬಂದಿದ್ದವು.
ಆರೋಪಿ ಅಜಿತ್ ಜತೆ ಸಂತ್ರಸ್ತ ಕಳೆದ 5 ವರ್ಷದಿಂದ ಪರಿಚಯ ಹೊಂದಿದ್ದ ಈ ಕಾರಣದಿಂದ ಸರಕಾರಿ ಖಾಯಂ ಉಪನ್ಯಾಸ ಹುದ್ದೆ ಕೊಡಿಸೋದಾಗಿ ಸಂತ್ರಸ್ತನನ್ನು ಆರೋಪಿ ಅಜಿತ್ ಹಾಗೂ ಧನುಷ್ಯ ನಂಬಿಸಿದ್ದರು.
ಜನವರಿ 17ರಂದು ಸಂತ್ರಸ್ತನನ್ನು ಶಿವಮೊಗ್ಗಕ್ಕೆ ಕರೆಯಿಸಿ ಆತನನ್ನು ರೂಂ ಒಂದರಲ್ಲಿ ಕೂಡಿಹಾಕಿದ್ದರು. ಬಳಿಕ ಆತನನ್ನು ನಗ್ನಗೊಳಿಸಿ ಮಹಿಳೆಯ ಜತೆ ರಾಸ ಲೀಲೆ ನಡೆಸಿದಂತೆ ಫೋಟೊ ಹಾಗೂ ವಿಡಿಯೋ ಚಿತ್ರೀಕರಿಸಿದ್ದರು. 15 ಲಕ್ಷ ರೂ.ನೀಡದಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದರು. ಅಲ್ಲದೇ, ಜನವರಿ 18ರಂದು ಆತನ ತಂದೆಯ ಬಳಿ ತೆರಳಿ ಫೋಟೊ, ವಿಡಿಯೋ ತೋರಿಸಿ ಪುತ್ರ ಜೀವಂತವಾಗಿ ಬೇಕಂದ್ರೆ ಹಣ ನೀಡುವಂತೆ ಧಮ್ಕಿ ಹಾಕಿದ್ದರು. ಕೊನೆಗೂ ಆರೋಪಿಗಳ ಹೆಡೆ ಮುರಿ ಕಟ್ಟಲಾಗಿತ್ತು.
ವೈದ್ಯರೊಬ್ಬರಿಗೆ ಚಾಟಿಂಗ್ ರುಚಿ ಹತ್ತಿಸಿದ ಆಂಟಿಯರು ಸಾಕಷ್ಟು ಹಣ ಪೀಕಿದ್ದರು. ವೈದ್ಯನೊಬ್ಬನ್ನು ಬಲೆಗೆ ಬೀಳಿಸಿ ಆತನಿಂದ 60 ಲಕ್ಷ ರೂ. ವಂಚನೆಗೆ ಯತ್ನಿಸಿ ಮಾಡಿದ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ಚೆಕ್ ಅಪ್ ಗೆ ಎಂದು ಬಂದವರು ವೈದ್ಯನ ನಂಬರ್ ಪಡೆದುಕೊಂಡು ನಿಧಾನವಾಗಿ ಚಾಟಿಂಗ್ ಆರಂಭಿಸಿದ್ದಾರೆ.
ನಿಮ್ಮ ಮೇಲೆ ನಮಗೆ ಪ್ರೀತಿ ಹುಟ್ಟಿದೆ ಎಂದು ವೈದ್ಯರ ಜತೆ ಮಾತನಾಡಿ ನಿಧಾನವಾಗಿ ಚಾಟಿಂಗ್ ಮಾಡುತ್ತ ಬುಟ್ಟಿಗೆ ಹಾಕಿಕೊಂಡಿದ್ದರು. ಬಂಧಿತ ಮಹಿಳೆಯರನ್ಜು ಪೂನಂ ಪಾಟೀಲ್, ಪ್ರಾಚಿ ಗಾಯಕ್ವಾಡ್ ಎಂದು ಗುರುತಿಸಲಾಗಿದೆ. ಮಹಿಳೆಯರ ಜತೆ ಅಪ್ರಾಪ್ತ ಬಾಲಕಿಯೊಬ್ಬಳ ವಿಚಾರಣೆಗೆ ಒಳಪಡಿಸಿದ್ದ ಪ್ರಕರಣ ಕೊಲ್ಲಾಪುರದಿಂದ ವರದಿಯಾಗಿತ್ತು.