ಕೊಪ್ಪಳದಲ್ಲಿ ಶುರುವಾಯಿತು ಮಾಟಮಂತ್ರ: ಸಚಿವ ಹಾಲಪ್ಪ ಆಚಾರ ಸೋಲಿಗೆ ವಿರೋಧಿಗಳಿಂದ 10 ವಾಮಾಚಾರ!

By Kannadaprabha News  |  First Published Mar 26, 2023, 1:06 PM IST

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ ಸೋಲಿಗೆ ತಾಲೂಕಿನ ಮಲ್ಕಸಮುದ್ರ, ನಿಲೋಗಲ್‌, ಗುನ್ನಾಳ ಸೇರಿದಂತೆ ಸುಮಾರು ಹತ್ತು ಗ್ರಾಮಗಳ ಪ್ರಮುಖ ರಸ್ತೆಯಲ್ಲಿ ವಾಮಾಚಾರ ಮಾಡಿಸಿರುವುದು ಪತ್ತೆ ಆಗಿದೆ.


ಯಲಬುರ್ಗಾ (ಮಾ.26) : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ ಸೋಲಿಗೆ ತಾಲೂಕಿನ ಮಲ್ಕಸಮುದ್ರ, ನಿಲೋಗಲ್‌, ಗುನ್ನಾಳ ಸೇರಿದಂತೆ ಸುಮಾರು ಹತ್ತು ಗ್ರಾಮಗಳ ಪ್ರಮುಖ ರಸ್ತೆಯಲ್ಲಿ ವಾಮಾಚಾರ ಮಾಡಿಸಿರುವುದು ಪತ್ತೆ ಆಗಿದೆ.

ತಾಲೂಕಿನ ಮಲ್ಕಸಮುದ್ರ ಗ್ರಾಮ(Mallasamudra village)ದ ಗಂಗೂರೇಶ್ವರ ದೇವಸ್ಥಾನ(Gangureshwar temple)ದ ಹತ್ತಿರ ಶನಿವಾರ ತಾಮ್ರದ ತಗಡು, ತೆಂಗಿನಕಾಯಿ ಸಿಕ್ಕಿದ್ದರಿಂದ ಬಿಜೆಪಿ ಕಾರ್ಯಕರ್ತರು ಬಿಚ್ಚಿ ನೋಡಿದಾಗ ಅದರಲ್ಲಿ ಸಚಿವ ಹಾಲಪ್ಪ ಆಚಾರ ಹಾಗೂ ಜಿಲ್ಲಾ ಆರ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ಗೌರ ಬಸವರಾಜ ಹೆಸರು ಬರೆಯಲಾಗಿದ್ದ ವಸ್ತುಗಳು ನೋಡಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tap to resize

Latest Videos

undefined

ಮುಟ್ಟಿನ ರಕ್ತ ಸಂಗ್ರಹಿಸಿ ವಾಮಾಚಾರಕ್ಕೆ ಮಾರಾಟ ಮಾಡಿದ ಪತಿ, ಕರುಳು ಹಿಂಡುವ ಕತೆ ಬಿಚ್ಚಿಟ್ಟ ಮಹಿಳೆ!

ಸಚಿವ ಆಚಾರ, ಬಸವರಾಜ ವಿರುದ್ಧ ವಾಮಾಚಾರ:

ವಾಮಾಚಾರ ವಸ್ತುಗಳನ್ನು ಕಂಡು ಗ್ರಾಮಸ್ಥರು ಇಂತಹ ಹೀನ ಕೃತ್ಯ ಮಾಡುವಂತಹ ಕೀಳುಮಟ್ಟಕ್ಕೆ ಇಳಿಯಬಾರದು. ಧೈರ್ಯದಿಂದ ಚುನಾವಣೆಯಲ್ಲಿ ಹಾಲಪ್ಪ ಆಚಾರ(Halappa achar) ಅವರನ್ನು ಎದುರಿಸಲಾಗದವರು ಈ ವಾಮಾಚಾರ ಮಾಡಿದ್ದಾರೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಇದೊಂದು ವಿರೋಧಿಗಳ ಕುತಂತ್ರವಾಗಿದ್ದು, ಸಚಿವ ಹಾಲಪ್ಪ ಆಚಾರ ಚುನಾವಣೆಯಲ್ಲಿ ಸೋಲಬೇಕೆಂದು ಬರೆಯಲಾಗಿರುವ ವಸ್ತುಗಳಿಂದ ವಾಮಾಚಾರ ಮಾಡಿಸಿದ್ದಾರೆ.

Black magic: ಬೆಟ್ಟತ್ತೂರು ಗ್ರಾಮದ ದಟ್ಟಾರಣ್ಯದ ಮಧ್ಯೆ ವಾಮಾಚಾರ ಕುರುಹು ಪತ್ತೆ

ಕೃತ್ಯ ಮಾಡಿದವರಿಗೆ ಕ್ರಮಕೈಗೊಳ್ಳಿ:

ಇಂತಹ ತಂತ್ರ, ಮಂತ್ರ ಫಲಿಸುವುದಿಲ್ಲ ಇದು ಮಾಡಿದವರಿಗೆ ತಿರುಗು ಬಾಣವಾಗಲಿದೆಂದು ಬಸವರಾಜ ಬಿಸೆರೊಟ್ಟಿ(Basavara Biserotti)ಸೇರಿ ಬಿಜೆಪಿಯ ಅನೇಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ಕೃತ್ಯ ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಮಲ್ಕಸಮುದ್ರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

click me!