ದಾಂಡೇಲಿ: ಅಕ್ರಮವಾಗಿ ನಾಡ ಬಂದೂಕು ತಯಾರಿಕೆ, ನಾಲ್ವರ ಬಂಧನ

Published : Mar 26, 2023, 12:45 PM ISTUpdated : Mar 26, 2023, 12:46 PM IST
ದಾಂಡೇಲಿ: ಅಕ್ರಮವಾಗಿ ನಾಡ ಬಂದೂಕು ತಯಾರಿಕೆ, ನಾಲ್ವರ ಬಂಧನ

ಸಾರಾಂಶ

ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಕಾಡಿನ ಪ್ರದೇಶಗಳಲ್ಲಿ ಅಕ್ರಮವಾಗಿ ನಾಡಬಂದೂಕು ತಯಾರಿಸಿ ಸಂಗ್ರಹಿಸಿಟ್ಟಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ದಾಂಡೇಲಿ (ಮಾ.26) : ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಕಾಡಿನ ಪ್ರದೇಶಗಳಲ್ಲಿ ಅಕ್ರಮವಾಗಿ ನಾಡಬಂದೂಕು ತಯಾರಿಸಿ ಸಂಗ್ರಹಿಸಿಟ್ಟಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿಟ್ನಾಳ ಗ್ರಾಮ(Vitnal village)ದ ಇಸ್ಮಾಯಿಲ್‌ ಕುಟ್ಟ(31), ಬಸವರಾಜ ಹೆಸರಂಜಿ(25), ಗಾಂವಠಾಣ ನಿವಾಸಿ ಸುರೇಶ ಚೌಡು ಪಾರದೆ(33), ಜೋಯಿಡಾ ನಿವಾಸಿ ರವಿದಾಸ ವಾಸು ಆಚಾರಿ(39) ಬಂಧಿತ ಆರೋಪಿಗಳು.

18 ನಾಡ ಬಂದೂಕು ವಶ: ಇಬ್ಬರಿಗೆ ನ್ಯಾಯಾಂಗ ಬಂಧನ

ಬಂಧಿತರಿಂದ ಒಂದು ಡಬಲ್‌ ಬ್ಯಾರಲ್‌ ನಾಡ ಬಂದೂಕು(Double barrel gun), ಐದು ಸಿಂಗಲ್‌ ಬ್ಯಾರಲ್‌ ನಾಡ ಬಂದೂಕು, ಕಾಡತೋಸು (ಕಾರ್ಟೇೕಜ…) ಮೋಟಾರ್‌ ಸೈಕಲ್‌ ಕಬ್ಬಿಣದ ಏರಗನ್‌ ಪಾರ್ಚ್‌, ಸ್ಟೀಲ್‌ ರಾಡ್‌, ಸಣ್ಣ ಕಬ್ಬಿಣದ ಪೈಪ್‌, ನಾಡ ಬಂದೂಕು ತಯಾರಿಸಲು ಈಗಾಗಲೇ ಉಪಯೋಗಿಸಿದ ಕಟ್ಟಿಗೆಯ ಹಳೆಯ ತುಂಡುಗಳನ್ನು ವಶಪಡಿಸಿಕೊಂಡಿದ್ದು, ಇವರ ಮೇಲೆ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ದಾಂಡೇಲಿ(Dandeli) ಉಪ-ವಿಭಾಗದ ಡಿವೈಎಸ್ಪಿ ಶಿವಾನಂದ ಕಟಗಿ(DYSp Shivananda katagi) ಮಾರ್ಗದರ್ಶನದಲ್ಲಿ, ಸಿಪಿಐ ಬಿ.ಎಸ್‌. ಲೋಕಾಪುರ ನೇತೃತ್ವದಲ್ಲಿ ಪಿಎಸ್‌ಐಗಳಾದ ಕೃಷ್ಣಗೌಡ ಅರಕೇರಿ, ಪಿಎಸ್‌ಐ ಶಿವಾನಂದ ನಾವದಗಿ, ಎಎಸ್‌ಐ ಗಳಾದ ಮಹಾವೀರ ಕಾಂಬಳೆ, ವೆಂಕಟೇಶ ತಗ್ಗಿನ, ಬಸವರಾಜ ಒಕ್ಕುಂದ, ಪೊಲೀಸ ಸಿಬ್ಬಂದಿಗಳಾದ ದಯಾನಂದ ಲೊಂಡಿ, ಗಂಗಾಧರ ಹನಕಹಳ್ಳಿ, ಮಂಜುನಾಥ ಶೆಟ್ಟಿ, ರೇವಪ್ಪ ಬಂಕಾಪುರ, ರವಿ ಚೌಹಾಣ್‌, ಪ್ರದೀಪ ವರ್ದಿ, ಅಶೋಕ, ನಾಗನಗೌಡ ತಿಪ್ಪನಗೌಡ್ರು, ದಶರಥ ಲಕ್ಕಾಪುರ ದಾಳಿಯಲ್ಲಿ ಸಹಕರಿಸಿದ್ದಾರೆ.

ಚಾಮರಾಜನಗರ: ಕಾಡಿಗೆ ಅಕ್ರಮ ಪ್ರವೇಶಿಸಿದ್ದ ವೈದ್ಯ ಸೇರಿ ಮೂವರ ಬಂಧನ

ಅಕ್ರಮ ಮದ್ಯ ಸಾಗಾಟ, ಓರ್ವ ಬಂಧನ

ಕಾರವಾರ:  ತಾಲೂಕಿನ ಮಾಜಾಳಿ ಚೆಕ್‌ಪೋಸ್ಟ್‌ ಮೂಲಕ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಮುಡಗೇರಿಯ ಅಂಗಡಿ ರೋಡ್‌ನ ನಿಜಾಮುದ್ದೀನ್‌ (ಬಾಬಜಿ) ಬುದ್ರುದ್ದೀನ್‌ ಖತೀಬ್‌ (42) ಆರೋಪಿಯಾಗಿದ್ದಾನೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದು, .36,300 ಮೌಲ್ಯದ ಗೋವಾ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಚಿತ್ತಾಕುಲ ಪೊಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು