* ಧಾರವಾಡ ತಾಲೂಕಿನ ಮರೆವಾಡ ಗ್ರಾಮದಲ್ಲಿ ನಡೆದ ಘಟನೆ
* ಕುಡಿದ ಮತ್ತಿನಲ್ಲಿ ಪತ್ನಿ ಜತೆ ಗಲಾಟೆ ಮಾಡುತ್ತಿದ್ದ ಪತಿ
* ಮಗಳೊಂದಿಗೆ ಸೇರಿ ತನ್ನ ಪತಿಯನ್ನೇ ಹತ್ಯೆ ಮಾಡಿದ ಶೋಭಾ ಅಮರಗೋಳ್
ಧಾರವಾಡ(ಮಾ.12): ಪತ್ನಿಯೇ ಗಂಡನನ್ನ ಬರ್ಬರವಾಗಿ ಕೊಲೆ(Murder) ಮಾಡಿದ ಘಟನೆ ಧಾರವಾಡ(Dharwad) ತಾಲೂಕಿನ ಮರೆವಾಡ ಗ್ರಾಮದಲ್ಲಿ ನಡೆದ ನಿನ್ನೆ(ಶುಕ್ರವಾರ) ರಾತ್ರಿ ನಡೆದಿದೆ. ಬಿಜೆಪಿ(BJP) ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ಅಮರಗೋಳ್ ಎಂಬುವರೇ ಪತಿಯನ್ನ ಕೊಂದ ಆರೋಪಿಯಾಗಿದ್ದಾಳೆ.
ಕುಡಿದ ಮತ್ತಿನಲ್ಲಿ ಪತಿ ಗಲಾಟೆ ಮಾಡುತ್ತಿದ್ದನು ಎಂದು ಹೇಳಲಾಗುತ್ತಿದೆ. ಹೀಗಾಗಿ ಮಗಳೊಂದಿಗೆ ಸೇರಿ ಶೋಭಾ ಅಮರಗೋಳ್ ತನ್ನ ಪತಿಯನ್ನೇ ಕೊಲೆ ಮಾಡಿದ್ದಾಳೆ. ಘಟನಾ ಸ್ಥಳಕ್ಕೆ ಸಿಪಿಐ ಮಂಜುನಾಥ್ ಕುಸುಗಲ್ ಭೇಟಿ ಪರಿಶಿಲನೆ ನಡೆಸಿದ್ದಾರೆ. ಈ ಸಂಬಂಧ ಧಾರವಾಡ ಗ್ರಾಮಿಣ ಪೋಲಿಸ್(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರೀತಿಸಿ ಮದ್ವೆಯಾದ ಹೆಂಡ್ತಿ ಮೇಲೆ ಅನುಮಾನ, ಅದೇ ಅನುಮಾನದಿಂದಲೇ ಪತಿ ಅಂದರ್
ಪತ್ನಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ
ಧಾರವಾಡ: ಕೌಟುಂಬಿಕ ಕಾರಣದಿಂದ(Family Issues) ಪತ್ನಿಯನ್ನು ಹತ್ಯೆ ಮಾಡಿ ಪತಿಯು ಕೊನೆಗೆ ತಾನೂ ಆತ್ಮಹತ್ಯೆಗೆ(Suicide) ಶರಣಾದ ದುರ್ಘಟನೆ ಇಲ್ಲಿಯ ಗಣೇಶ ನಗರದಲ್ಲಿ ಶುಕ್ರವಾರ ನಡೆದಿದೆ.
ಗೌಳಿ ಜನಾಂಗದ ಚೆಟ್ಟು ಹಾಗೂ ಮನಿಶಾ ದಂಪಂತಿಯೇ ಸಾವಿಗೀಡಾದವರು. ಮೊದಲಿಗೆ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ ಚೆಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ರಮೇಶ ಹೂಗಾರ ಭೇಟಿ ನೀಡಿದ್ದರು. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ(Investigation) ನಡೆಸಲಾಗುತ್ತಿದೆ.
ನೇಣು ಹಾಕಿಕೊಂಡು ರೈತ ಆತ್ಮಹತ್ಯೆ
ಹಿರೇಕೆರೂರು: ಸಾಲದ ಬಾಧೆ ತಾಳಲಾರದೆ ರೈತನೊಬ್ಬ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ(Haveri) ಜಿಲ್ಲೆಯ ಹಿರೇಕೆರೂರು(Hirekrur) ತಾಲೂಕಿನ ಬೆಟಕೇರೂರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸುರೇಶ ಶಿವಪ್ಪ ಹಾರೋಮುಚುಡಿ (57) ಮೃತ ರೈತ(Farmer). ಅವರು ಕೃಷಿಗಾಗಿ ಕೆನರಾ ಬ್ಯಾಂಕಿನಲ್ಲಿ 2.50 ಲಕ್ಷ, ಸೈಟ್ ಖರೀದಿಗಾಗಿ 20 ಲಕ್ಷ ಹಾಗೂ ಸೊಸೈಟಿಯಲ್ಲಿ 50 ಸಾವಿರ ಸೇರಿದಂತೆ ಒಟ್ಟು 23 ಲಕ್ಷ ಸಾಲ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗೆ ಮಾಡಿದ ಸಾಲವನ್ನು ಹೇಗೆ ಮರುಪಾವತಿಸಬೇಕು ಎಂದು ತಿಳಿಯದೆ ಮನ ನೊಂದು ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಆಲದ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಈ ಸಂಬಂಧ ತಾಲೂಕಿನ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆ ಬಳಿಕವೂ ಮುಂದುವರೆದ ಅಕ್ರಮ ಸಂಬಂಧ, ಮನೆಯವರೊಂದಿಗೆ ಸೇರಿ ಪ್ರೇಮಿಯ ಹತ್ಯೆ!
ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ
ಮುಳಬಾಗಿಲು: ಸಾಲಭಾದೆ(Loan) ತಾಳಲಾರದೆ ರೈತನೊಬ್ಬ ನೇಣಿಗೆ ಶರಣಾದ ಘಟನೆ ತಾಲೂಕಿನ ಮನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತನನ್ನು ರೈತ ರಾಮಪ್ಪ(45) ಎಂದು ಗುರುತಿಸಲಾಗಿದೆ. ಕೃಷಿಯನ್ನೇ(Agriculture) ನಂಬಿ ಜೀವನ ಸಾಗಿಸುತ್ತಿದ್ದ ಈತ ಕಳೆದ ಭಾರಿ ಹಾಕಲಾಗಿದ್ದ ಬೆಳೆ ಮಳೆಗೆ ನಷ್ಟವಾಗಿತ್ತು. ಆದರೂ ಧೈರ್ಯ ಮಾಡಿ ಮತ್ತೆ ಬಿತ್ತಿದ ಬೆಳೆ ಬಂದರೂ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ತೀವ್ರ ನಷ್ಟ ಹೊಂದಿದ್ದ ಎನ್ನಲಾಗಿದೆ. ಅಲ್ಲದೆ ಸ್ಥಳೀಯ ಬ್ಯಾಂಕ್‌ನಲ್ಲಿ ಎರಡು ಲಕ್ಷ ಹಾಗೂ ಖಾಸಗಿಯಾಗಿ ಸಾಲ ಮಾಡಿರುವ ಬಗ್ಗೆ ಕುಟುಂಬಸ್ಥರ ಮಾಹಿತಿ ನೀಡಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಈ ಸಂಬಂಧ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಡಿಯಲು ಕಾಸು ಕೊಡಲಿಲ್ಲ ಎಂದು ಗೆಳತಿಗೆ ಬೆಂಕಿ ಹಚ್ಚಿದ
ಬೆಂಗಳೂರು: ಕುಡಿಯಲು ಹಣ ನೀಡದ ಕಾರಣಕ್ಕೆ ಕೋಪಗೊಂಡು ಗೆಳತಿಗೆ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಕೂಲಿ ಕಾರ್ಮಿಕನೊಬ್ಬನನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಳೇ ಬ್ಯಾತನಹಳ್ಳಿ ನಿವಾಸಿ ಬಾಬು ಬಂಧಿತನಾಗಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಮೀನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ದಿನಗಳ ಹಿಂದೆ ಮನೆಯಲ್ಲಿ ವೈಯಕ್ತಿಕ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆರೋಪಿ ಬೆಂಕಿ ಹಚ್ಚಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.