ಶಾಸಕ ಹಾಗೂ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭಾವಚಿತ್ರವಿದ್ದ ಫ್ಲೆಕ್ಸ್ ಹಾಗೂ ಸಿ.ಟಿ.ರವಿ ಫೋಟೋಗೂ ಕಿಡಿಗೇಡಿಗಳು ಬ್ಲೇಡ್ ಹೊಡೆದಿರೋ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಚಿಕ್ಕಮಗಳೂರು (ಡಿ.16): ಶಾಸಕ ಹಾಗೂ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭಾವಚಿತ್ರವಿದ್ದ ಫ್ಲೆಕ್ಸ್ ಹಾಗೂ ಸಿ.ಟಿ.ರವಿ ಫೋಟೋಗೂ ಕಿಡಿಗೇಡಿಗಳು ಬ್ಲೇಡ್ ಹೊಡೆದಿರೋ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಾಳೆ ಮತ್ತು ನಾಡಿದ್ದು 2 ದಿನ ರಾಜ್ಯ ಯುವಜನೋತ್ಸವ ಆಯೋಜನೆ ಮಾಡಲಾಗಿದೆ. ಸದರಿ ಕಾರ್ಯಕ್ರಮದ ಪ್ರಚಾರಕ್ಕೆಂದು ಚಿಕ್ಕಮಗಳೂರು ನಗರದ ಎಲ್ಲೆಡೆ ಫ್ಲೆಕ್ಸ್ ಬ್ಯಾನರ್‌ಗಳನ್ನು ಹಾಕಿ ಸ್ವಾಗತ ಕೋರಲಾಗಿದೆ.
ನಗರದ ಹನುಮಂತಪ್ಪ ವೃತ್ತದಲ್ಲಿ ಶಾಸಕ ಸಿ.ಟಿ.ರವಿ, ನಗರಸಭೆ ಅಧ್ಯಕ್ಷ ವೇಣು ಗೋಪಾಲ್, ನಗರಸಭೆ ಮಾಜಿ ಅಧ್ಯಕ್ಷ ತಮ್ಮಯ್ಯ ಸೇರಿದಂತೆ ಮುಖಂಡರು ಇದ್ದ ಭಾವಚಿತ್ರಕ್ಕೆ ಕಿಡಿಗೇಡಿಗಳು ಬ್ಲೇಡ್ ಹಾಕಿದ್ದಾರೆ. ಇದರಿಂದ ಫ್ಲೆಕ್ಸ್ ಸಂಪೂರ್ಣ ನಾಶವಾಗಿದೆ. ಶಾಸಕ ಸಿ.ಟಿ. ರವಿ ಫೋಟೋ ಮೇಲೆ ಪೂರ್ತಿ ಬ್ಲೇಡ್ ಹಾಕಿದ್ದು, ವಿಷಯ ತಿಳಿಯುತ್ತಿದ್ದಂತೆ ಡಿ.ವೈ.ಎಸ್ಪಿ. ಪುರುಷೋತ್ತಮ್, ನಗರ ಠಾಣೆಯ ಪಿ.ಎಸ್.ಐ ಹಾಗೂ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬ್ಲೇಡ್ ಹಾಕಿದ್ದ ಫ್ಲೆಕ್ಸ್ ಳನ್ನ ಅಲ್ಲಿಂದ ತೆರವು ಮಾಡಿದ ಪೊಲೀಸರು ಪೊಲೀಸ್ ಠಾಣೆಗೆ ಕೊಂಡೊಯ್ದಿದ್ದಾರೆ. ಯಾರು ಹೀಗೆ ಮಾಡಿರಬಹುದು ಎಂದು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಹನುಮಂತಪ್ಪ ವೃತ್ತದ ಅಕ್ಕ ಪಕ್ಕದಲ್ಲಿರುವ ಸಿಸಿ ಕ್ಯಾಮರಾಗಳ ಪುಟೇಜ್‌ಗಳನ್ನೂ ಸಂಗ್ರಹಿಸಿದ್ದಾರೆ. ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಸಿ.ಟಿ.ರವಿ ವಿರುದ್ಧ ಇ.ಡಿ.ಗೆ ದೂರು: ಕಾಂಗ್ರೆಸ್
ಚಿಕ್ಕಮಗಳೂರಿನಲ್ಲಿ 17, 18ಕ್ಕೆ ರಾಜ್ಯ ಯುವ ಜನೋತ್ಸವ: ನಗರದ ಕುವೆಂಪು ಕಲಾಮಂದಿರದಲ್ಲಿ ಡಿ.17 ಮತ್ತು 18 ರಂದು ರಾಜ್ಯಮಟ್ಟದ ಯುವಜನೋತ್ಸವ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುವೆಂಪು ಕಲಾಮಂದಿರದಲ್ಲಿ ಉದ್ಘಾಟನಾ ಸಮಾರಂಭ ನಡೆಯುತ್ತಿದ್ದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಕೆ.ಸಿ.ನಾರಾಯಣಗೌಡ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು.
ಶಾಸಕ ಸಿ.ಟಿ.ರವಿ ಅಧ್ಯಕ್ಷತೆ ವಹಿಸುತ್ತಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಉಪಸ್ಥಿತರಿರುವರು. 31 ಜಿಲ್ಲೆಗಳಿಂದ 1200 ರಿಂದ 1500 ಸ್ಪರ್ಧಿಗಳು ಪಾಲ್ಗೊಳ್ಳುವರು. ಡಿ.17 ರಂದು ಕುವೆಂಪು ಕಲಾಮಂದಿರದಲ್ಲಿ ಮಧ್ಯಾಹ್ನ 3ಕ್ಕೆ ಜನಪದಗೀತೆ, ಬಸವನಹಳ್ಳಿಯ ಓಂಕಾರೇಶ್ವರ ದೇವಾಲಯಲ್ಲಿ ಹಾರ್ಮೋನಿಯಂ, ಗಿಟಾರ್, ಬಸವನಹಳ್ಳಿ ಶಂಕರಮಠದ ವಿದ್ಯಾಭಾರತಿ ಸಭಾಮಂಟಪದಲ್ಲಿ ಕರ್ನಾಟಕ ಸಂಗೀತ, ಲಯನ್ಸ್ ಭವನದಲ್ಲಿ ಶಾಸ್ತ್ರೀಯನೃತ್ಯ, ಸ್ಕೌಟ್ಸ್‌ಭ ವನದಲ್ಲಿ ಏಕಪಾತ್ರಭಿಯ ಸ್ಪರ್ಧೆಗಳು ನಡೆಯಲಿವೆ ಎಂದರು.
ನನ್ನ ಅಭಿವೃದ್ಧಿ ಕಾರ್ಯ ಕಣ್ಣಿದ್ದವರು ನೋಡುತ್ತಾರೆ: ಸಿ.ಟಿ.ರವಿ
ಮರುದಿನ ಕಲಾಮಂದಿರದಲ್ಲಿ ಬೆಳಗ್ಗೆ 9ಕ್ಕೆ ಜನಪದ ನೃತ್ಯ, ಓಂಕಾರೇಶ್ವರ ದೇವಾಲಯದಲ್ಲಿ ಶಾಸ್ತ್ರೀಯವಾದನ, ವಿದ್ಯಾಭಾರತಿ ಸಭಾಮಂಟಪದಲ್ಲಿ ಹಿಂದೂಸ್ತಾನಿ ಸಂಗೀತ, ಲಯನ್ಸ್‌ಭವನದಲ್ಲಿ ಭಟತನಾಟ್ಯ, ಸ್ಕೌಟ್ಸ್ ಮತ್ತು ಗೈಡ್‌್ಸ ಭವನದಲ್ಲಿ ಆಶುಭಾಷಣ ಸ್ಪರ್ಧೆ ನಡೆಯಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ, ನವಚೇತನ ಯುವಕ ಸಂಘದ ಅಧ್ಯಕ್ಷ ರೇವನಾಥ ಇದ್ದರು.