Chikkamagaluru: ದತ್ತಜಯಂತಿ ವೇಳೆ ದತ್ತಪೀಠದ ರಸ್ತೆಯಲ್ಲಿ ಮೊಳೆ ಹಾಕಿದ್ದವರ ಬಂಧನ

By Govindaraj S  |  First Published Dec 16, 2022, 12:40 PM IST

ದತ್ತಜಯಂತಿ ವೇಳೆ ದತ್ತಪೀಠದ ರಸ್ತೆಯಲ್ಲಿ ಮೊಳೆ ಹಾಕಿದ್ದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಯಶ್ವಸಿಯಾಗಿದ್ದಾರೆ.
 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಡಿ.16): ದತ್ತಜಯಂತಿ ವೇಳೆ ದತ್ತಪೀಠದ ರಸ್ತೆಯಲ್ಲಿ ಮೊಳೆ ಹಾಕಿದ್ದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಯಶ್ವಸಿಯಾಗಿದ್ದಾರೆ. ರಾಜ್ಯದ ವಿವಾದಿತ ಧಾರ್ಮಿಕ ಕೇಂದ್ರವಾದ ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠದಲ್ಲಿ ನಡೆಯುತ್ತಿದ್ದ ದತ್ತಜಯಂತಿ ಉತ್ಸವದ ಸಮಯದಲ್ಲಿ ಕಿಡಿಗೇಡಿಗಳು ಶಾಂತಿಕೆದಡುವ ದುರುದ್ದೇಶದಿಂದ ರಸ್ತೆ ಉದ್ದಕ್ಕೂ ಮೊಳೆ ಹಾಕಿ ದತ್ತಭಕ್ತರ ವಾಹನಗಳಿಗೆ ತೊಂದರೆ ನೀಡುವ ಹುನ್ನಾರ ನಡೆಸಿದ್ದರು.

Tap to resize

Latest Videos

ಬಂಧಿತರಿಬ್ಬರು ಚಿಕ್ಕಮಗಳೂರಿನ ದುಬೈ ನಗರದ ನಿವಾಸಿಗಳು: ದತ್ತ ಜಯಂತಿ ಸಂದರ್ಭದಲ್ಲಿ ಶಾಂತಿಕೆದಡುವ ದುರುದ್ದೇಶದಿಂದ ಕೆಲ ಕಿಡಿಗೇಡಿಗಳು ದತ್ತಪೀಠಕ್ಕೆ  ತೆರಳುವ ಮಾರ್ಗ ಮಧ್ಯದಲ್ಲಿ ಮೊಳೆ ಚೆಲ್ಲಿದ ಪ್ರಕರಣ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿದ್ದಾರೆ. ದತ್ತಜಯಂತಿ ಸಂದರ್ಭ ವಾಹನಗಳ ಮೂಲಕ ದತ್ತಭಕ್ತರು ದತ್ತಪೀಠಕ್ಕೆ ತೆರಳುವ ರಸ್ತೆಯಲ್ಲಿ ಕಿಡಿಗೇಡಿಗಳು ಕಬ್ಬಿಣದ ಮೊಳೆಗಳನ್ನು ಚೆಲ್ಲಿ ವಾಹನಗಳಿಗೆ ತೊಂದರೆ ನೀಡಲು ಹುನ್ನಾರ ಮಾಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Chikkamagaluru: ಹೊಸ ಬೋರ್ ಕೊರೆಯುವಾಗ ಹಳೇ ಬೋರಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ನೀರು

ಬಂಧಿತರನ್ನು ಚಿಕ್ಕಮಗಳೂರು ನಗರದ ದುಬೈ ನಗರದ ನಿವಾಸಿಗಳಾದ ವಾಹಿದ್ ಹುಸೇನ್ (21), ಮುಹಮ್ಮದ್ ಶಹಬಾಸ್ (29) ಎಂದು ಗುರುತಿಸಲಾಗಿದೆ. ಕಳೆದ ಡಿಸೆಂಬರ್ 6ರಿಂದ 8ರವರೆಗೆ ಜಿಲ್ಲೆಯಲ್ಲಿ ನಡೆದ ದತ್ತಜಯಂತಿ ಸಂದರ್ಭ ದತ್ತಪೀಠಕ್ಕೆ ತೆರಳುವ ರಸ್ತೆಯ ಅಲ್ಲಲ್ಲಿ ಕಬ್ಬಿಣದ ಮೊಳೆಗಳು ಪತ್ತೆಯಾಗಿದ್ದವು. ಮೊಳೆಗಳನ್ನು ರಸ್ತೆಗೆ ಚೆಲ್ಲಿ ದತ್ತ ಭಕ್ತರು ಬರುವ ವಾಹನಗಳಿಗೆ ತೊಂದರೆ ನೀಡುವ ಉದ್ದೇಶದಿಂದ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆಂದು ಹಿಂದೂಪರ ಸಂಘಟನೆಗಳ ಮುಖಂಡರು ಆರೋಪಿಸಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 7ರಂದು ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.

Chikkamagaluru: ಸಾಗುವಳಿ ಚೀಟಿ ನಂಬರ್ ಬಳಸಿ ಅಕ್ರಮ: ರೆವಿನ್ಯೂ ಇನ್‌ಸ್ಪೆಕ್ಟರ್ ಬಂಧನ

4 ಕೆಜಿ ಮೊಳೆಗಳನ್ನು ಖರೀದಿ ಮಾಡಿದ್ದ ಆರೋಪಿಗಳು: ತನಿಖೆ ವೇಳೆ ನಗರದ ಹಾರ್ಡ್‌ವೇರ್ ಅಂಗಡಿಯೊಂದರಲ್ಲಿ ಇಬ್ಬರು ವ್ಯಕ್ತಿಗಳು ರಸ್ತೆಯಲ್ಲಿ ಪತ್ತೆಯಾಗಿದ್ದ ಮಾದರಿಯ 4ಕೆಜಿ ಮೊಳೆಗಳನ್ನು ಖರೀದಿ ಮಾಡಿದ್ದ ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ಮೊಳೆ ಖರೀದಿ ಮಾಡಿದ್ದವರ ಗುರುತು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯದಲ್ಲಿ ಇನ್ನು ಕೆಲ ಆರೋಪಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಎಸ್ಪಿ ಉಮಾಪ್ರಶಾಂತ್ ತಿಳಿಸಿದ್ದಾರೆ. ಪೀಠಕ್ಕೆ ತೆರಳುವ ಭಕ್ತರಿಗೆ ತೊಂದರೆ ಕೊಡುವ ಉದ್ದೇಶದಿಂದ ಈ ಕೃತ್ಯವನ್ನು ಇವರು ಎಸಗಿದ್ದು ಕೆಲ ವಾಹನಗಳು ಪಂಚರ್ ಆಗಿದ್ದವು. ದೂರು ಆಧರಿಸಿ ತನಿಖೆಗೆ ಪ್ರತ್ಯೇಕ ತಂಡಗಳನ್ನು ರಚಿಸಿದ್ದು, ಹಾರ್ಡ್‌ವೇರ್ ಅಂಗಡಿಯಲ್ಲಿ ನಾಲ್ಕು ಕೆಜಿ ಮೊಳೆ ಖರೀದಿಸಿರುವುದು ಪತ್ತೆಯಾಗಿದೆ.

click me!