
ಉಡುಪಿ (ಜೂ.14) ಕಾಪು ವಿಧಾನಸಭಾ ಕ್ಷೇತ್ರದ ಬೊಮ್ಮರಬೆಟ್ಟು ಗ್ರಾಪಂ ಅಧ್ಯಕ್ಷ ಪ್ರಗತಿಪರ ರೈತ ಸುರೇಶ್ ನಾಯಕ್ ಮತ್ತು ಅವರ ಪತ್ನಿ ಪ್ರೇಮಾ ನಾಯಕ್ ಅವರಿಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಜೀವ ಬೇದರಿಕೆ ಒಡ್ಡಿದ್ದಾರೆ. ದಂಪತಿಗೆ ರಕ್ಷಣೆ ನೀಡಿ, ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಎಸ್ಪಿ ಅವರಿಗೆ ಮನವಿ ಸಲ್ಲಿಸಿದೆ.
ಮೇ 13ರಂದು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗ ಬಿಜೆಪಿ ಕಾರ್ಯಕರ್ತರು ಹಿರಿಯಡ್ಕದಲ್ಲಿರುವ ಸುರೇಶ್ ನಾಯಕ್ ಅವರ ತರಕಾರಿ ಅಂಗಡಿ ಮುಂದೆ ಪಟಾಕಿ ಸಿಡಿಸಿದ್ದರು. ಅದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ ಪ್ರೇಮ ಅವರಿಂದ ಮೊಬೈಲ್ ಕಸಿದುಕೊಂಡು ಡಿಲಿಟ್ ಮಾಡಿದ್ದಾರೆ ಮತ್ತುಅವಾಚ್ಯವಾಗಿ ಬೈದು ದಂಪತಿಗೆ ಜೀವ ಬೆದರಿಕೆ ಹಾಕಿದ್ದಾರೆ. ಹಿರಿಯಡ್ಕ ಠಾಣೆಗೆ ದೂರು ನೀಡಿದ್ದರೂ ಪ್ರಕರಣ ದಾಖಲು ಮಾಡಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಬರೋಬ್ಬರಿ 16 ಕೊಲೆ ಬೆದರಿಕೆ ಪತ್ರ, ಸಾಹಿತಿ ಕುಂ.ವೀ.ಗೆ ಗನ್‌ಮ್ಯಾನ್ ಭದ್ರತೆ
ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್, ಸುರೇಶ್ ನಾಯಕ್ ಮತ್ತು ಪ್ರೇಮ ನಾಯÜಕ್, ಕಾಂಗ್ರೆಸ್ ನಾಯಕರಾದ ಪ್ರಶಾಂತ್ ಜತ್ತನ್ನ, ಸಂತೋಷ್ ಕುಲಾಲ್ ಪಕ್ಕಾಲು ಮತ್ತಿತರರು ಉಪಸ್ಥಿತರಿದ್ದರು.
ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ: ದೂರು ದಾಖಲು
ಮೂಲ್ಕಿ: ಜಾಗದ ವಿಚಾರದಲ್ಲಿ ಜಗಳ ನಡೆದು ತಾಯಿಗೆ ಮಗಳೇ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿರುವ ಘಟನೆ ಕೊಲ್ನಾಡುವಿನಲ್ಲಿ ನಡೆದಿದ್ದು, ಈ ಸಂಬಂಧ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ನಾಡು ನಿವಾಸಿ ಮನೋರಮಾ ಹೆನ್ರಿ ಎಂಬವರ ಮಕ್ಕಳಾದ ಅನಿಟಾ ಸೋನ್ಸ್ ಮತ್ತು ಸ್ಯಾಂಡ್ರಾ ಬಂಗೇರ ಅವರು ಜಾಗದ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದು, ಸೋಮವಾರ ಮನೋರಮ ಹೆನ್ರಿ ಅಡುಗೆ ಕೋಣೆಯಲ್ಲಿದ್ದ ವೇಳೆ ಅಲ್ಲಿಗೆ ಬಂದ ಪುತ್ರಿ ಅನಿಟಾ ಸೋನ್ಸ್ ಕೈಯಲ್ಲಿದ್ದ ನಾಯಿಗೆ ಊಟ ಹಾಕುವ ತಟ್ಟೆಯಿಂದ ತಾಯಿಗೆ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ. ಮನೆಯ ಹೊರಗಿದ್ದ ಇನ್ನೊಬ್ಬ ಮಗಳು ಸ್ಯಾಂಡ್ರಾ ಬಂಗೇರ, ಮನೆಗೆ ಕೇಬಲ್ ಬಿಲ್ ಪಡೆಯಲು ಬಂದಿದ್ದ ಇಕ್ಬಾಲ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಮನೋರಮಾ ಹೆನ್ರಿ ದೂರಿನಲ್ಲಿ ತಿಳಿಸಿದ್ದಾರೆ.
Bengaluru: ಐಟಿಬಿಟಿ ಕಂಪನಿಗೆ ಬಾಂಬ್ ಬೆದರಿಕೆ ಕರೆ, ಬಾಂಬ್ ನಿಷ್ಕ್ರಿಯದಳ ದೌಡು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ