ಯಾದಗಿರಿ: ಅಕ್ರಮವಾಗಿ ಸಾಗಿಸುತ್ತಿದ್ದ 25 ಹಸುಗಳ ರಕ್ಷಣೆ, ಆರೋಪಿಗಳು ವಶಕ್ಕೆ

By Kannadaprabha NewsFirst Published Jun 13, 2023, 10:43 PM IST
Highlights

ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 25 ಹಸುಗಳನ್ನು ಪೊಲೀಸರು  ಸುಮಾರಿಗೆ ರಕ್ಷಣೆ ಮಾಡಿ 8 ಜನರನ್ನು ಬಂಧಿಸಿದ್ದಾರೆ.

ಯಾದಗಿರಿ (ಜೂ.13): ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ 25 ಹಸುಗಳನ್ನು ಪೊಲೀಸರು ಬೆಳಗಿನ ಜಾವ 2 ಗಂಟೆ ಸುಮಾರಿಗೆ ರಕ್ಷಣೆ ಮಾಡಿ 8 ಜನರನ್ನು ಬಂಧಿಸಿದ್ದಾರೆ. ಯಾದಗಿರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ವೆಂಕಟೇಶ್‌ ನಗರ ತಾಂಡಾ ಕ್ರಾಸ್‌ ಬಳಿ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಂಶಯಾಸ್ಪದ ವಾಹನಗಳನ್ನು ಚೆಕ್‌ ಮಾಡುವ ವೇಳೆ ಸುಮಾರು ನಾಲ್ಕು ಬೊಲೆರೋ ಪಿಕಪ್‌ ವಾಹನಗಳಲ್ಲಿ 25 ಹಸುಗಳನ್ನು ಕಳ್ಳತನದಿಂದ ಸಾಗಿಸುತ್ತಿದ್ದು ಕಂಡುಬಂದ ಹಿನ್ನೆಲೆ 8 ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಆರೋಪಿಗಳು ಶಹಾಬಾದ್‌ ಮತ್ತು ಕಣದಾಳ ಗ್ರಾಮದವರಾಗಿದ್ದು, ಜಾನುವಾರುಗಳನ್ನು ಸುತ್ತಮುತ್ತಲಿನ ಸ್ಥಳಗಳಿಂದ ಕಳ್ಳತನ ಮಾಡಿಕೊಂಡು ಕಸಾಯಿ ಖಾನೆಗಳಿಗೆ ಸಾಗಾಟ ಮಾಡುತ್ತಿರುವುದಾಗಿ ತಿಳಿದು ಬಂದಿದೆ ಎಂದು ಯಾದಗಿರಿ ಜಿಲ್ಲಾ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಅವರು ತಿಳಿಸಿದ್ದಾರೆ.

 

12 ವರ್ಷಗಳ ಹಸು ಕಟಕರಿಗೆ ನೀಡಬೇಕೆಂದು ಕಾಯ್ದೆಯಲ್ಲಿಲ್ಲ: ಶಾಸ​ಕ ಚನ್ನಬಸಪ್ಪ ಕಿಡಿ

ಕಾಲುವೆಯಲ್ಲಿ ಬಿದ್ದಿದ್ದ ಕೋಣ ರಕ್ಷಣೆ

ಗೋಕರ್ಣ: ಕಾಲುವೆಯಲ್ಲಿ ಬಿದ್ದು ಹೊರಬರಲಾರದೆ ಒದ್ದಾಡುತ್ತಿದ್ದ ಕೋಣವನ್ನು ರಕ್ಷಿಸಿದ ಘಟನೆ ಇಲ್ಲಿನ ರಥಬೀದಿಯಲ್ಲಿ ನಡೆದಿದೆ. ಹಿತ್ತಲ ಗಣಪತಿ ದೇವಸ್ಥಾನದ ಹಿಂದಿನ ಕಾಲುವೆಯಲ್ಲಿ ಆಯತಪ್ಪಿ ಬಿದ್ದ ಕೋಣ ಹಲವು ದಿನಗಳಿಂದ ಹೊರ ಬರಲಾರದೆ ನರಳಾಡುತ್ತಿರುವುದನ್ನು ಹತ್ತಿರದ ನಿವಾಸಿಗಳು ಗಮನಿಸಿದ್ದು, ನಂತರ ಪ್ರಾಣಿಪ್ರಿಯ ಹಾಗೂ ಗೋಕರ್ಣ ಗ್ರಾಪಂ ಸದಸ್ಯ ಸುಜಯ ಶೆಟ್ಟಿಯವರಿಗೆ ಈ ವಿಷಯ ತಿಳಿಸಿದ್ದು, ತಕ್ಷಣ ಆಗಮಿಸಿ ಕೋಣದ ಕಿವಿಯಲ್ಲಿರುವ ಇಯರ್‌ ಟ್ಯಾಗ್‌ ಸಹಾಯದಿಂದ ಕೋಣದ ಮಾಲೀಕ ಬಂಡಿಕೇರಿಯ ವೆಂಕಟ ಗೌಡರನ್ನು ಸ್ಥಳಕ್ಕೆ ಕರೆತಂದು ಸ್ಥಳೀಯರ ಸಹಾಯಯದಿಂದ ಕೋಣವನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ.

ಗೋ ಹತ್ಯೆ ನಿಷೇಧ ಕಾಯ್ದೆ ವಾಪಸಾತಿಗೆ ಶ್ರೀರಾಮಸೇನೆ ವಿರೋಧ

ಸಮುದ್ರದ ಸೇರುವ ಸಂಗಮ ನಾಲಾಕ್ಕೆ ಸೇರುವ ಕಾಲುವೆ ಇದಾಗಿದ್ದು, ಇಕ್ಕಟ್ಟಿನ ಜಾಗದಲ್ಲಿ ಮೂಕ ಪ್ರಾಣಿಯ ರೋದನ ಹೇಳ ತೀರದಾಗಿತ್ತು, ಈ ಕಾಲುವೆಯಲ್ಲಿ ನಿಂತ ಹೊಲಸು ನೀರು ಲೆಕ್ಕಿಸದೆ ಒಂದು ಜೀವ ಉಳಿಸಿದ್ದು ಪ್ರಶಂಸನೀಯ ಕಾರ್ಯವಾಗಿದೆ. ಈ ಕಾರ್ಯಾಚರಣೆಯಲ್ಲಿ ರಾಮ ಗೌಡ, ಲಂಬೋದರ ಸಭಾಹಿತ್‌, ವಿನಾಯಕ ಶಾಸ್ತ್ರಿ ಮುಂತಾದವರು ಸಹಕರಿಸಿದರು.

click me!