Madhya Pradesh: ಹಾಡಹಗಲೇ ಬಿಜೆಪಿ ನಾಯಕನ ಮೇಲೆ ಗುಂಡಿನ ದಾಳಿ: ಆರೋಪಿಗಳಿಗಾಗಿ ಹುಡುಕಾಟ

By BK AshwinFirst Published Jan 8, 2023, 11:48 PM IST
Highlights

ಹೆಚ್ಚು ಜನರು ಇರುವ ನಡುವೆಯೇ ಮಾರ್ಕೆಟ್‌ ಪ್ರದೇಶದಲ್ಲಿ ಹಾಡಹಗಲೇ ಈ ಘಟನೆ ನಡೆದಿದ್ದು, ಮೂವರು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಧ್ಯಪ್ರದೇಶದ ಮೊರೆನಾದಲ್ಲಿನ ಬ್ಯುಸಿ ಮಾರ್ಕೆಟ್‌ನಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಸ್ಥಳೀಯ ಬಿಜೆಪಿ ನಾಯಕನ ಮೇಲೆ ಗುಂಡಿನ ದಾಳಿ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ. ಹೆಚ್ಚು ಜನರು ಇರುವ ನಡುವೆಯೇ ಮಾರ್ಕೆಟ್‌ ಪ್ರದೇಶದಲ್ಲಿ ಹಾಡಹಗಲೇ ಈ ಘಟನೆ ನಡೆದಿದ್ದು, ಮೂವರು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಿಜೆಪಿ ನಾಯಕನ ಜತೆಗೆ ಆಭರಣ ವ್ಯಾಪಾರಿಯೂ ಆಗಿರುವ ಸಂತೋಷ್ ಕುಮಾರ್ ಶರ್ಮಾ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಅವರು ತಮ್ಮ ಅಂಗಡಿಯಲ್ಲಿದ್ದರು ಎಂದು ತಿಳಿದುಬಂದಿದೆ.

ತನ್ನ ಇಬ್ಬರು ಸ್ನೇಹಿತರೊಂದಿಗೆ (Friends) ಕುಳಿತಿದ್ದ ಸಂತೋಷ್ ಕುಮಾರ್ ಶರ್ಮಾ (Santosh Kumar Sharma) ಅವರು ಕೆಳಕ್ಕೆ ಬಾಗಿ ಗುಂಡಿನ ದಾಳಿಯಿಂದ (Firing Bullets) ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಒಂದೇ ಬೈಕ್‌ನಲ್ಲಿ (Bike) ತಮ್ಮ ಮುಖಗಳನ್ನು ಮುಚ್ಚಿಕೊಂಡು ಬಂದ ಮೂವರು ಗುಂಡು ಹಾರಿಸುತ್ತಿರುವುದನ್ನು ವಿಡಿಯೋದಲ್ಲಿ (Video) ನೋಡಬಹುದಾಗಿದೆ. ಮಧ್ಯದಲ್ಲಿ ಕುಳಿತವನು ತನ್ನ ಎರಡೂ ಕೈಗಳಿಂದ ಆಭರಣ ವ್ಯಾಪಾರಿ (Jeweller) ಸಂತೋಷ್ ಕುಮಾರ್ ಶರ್ಮಾ ಮೇಲೆ ಗುಂಡು ಹಾರಿಸಿದ್ದಾನೆ.

ಇದನ್ನು ಓದಿ: ಬೆಳಗಾವಿಯ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷನ ಮೇಲೆ ಗುಂಡಿನ ದಾಳಿ

A local leader was shot at in full public view at a busy market in Morena by three unidentified men on a bike, in shocking scenes of violence, pic.twitter.com/GaAO7Le6DM

— Anurag Dwary (@Anurag_Dwary)

ಇನ್ನು, ಈ ಗುಂಡಿನ ದಾಳಿ ನಡೆದ ವೇಳೆ ಅಲ್ಲಿ ಸೈಕ್ಲಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದು, ಜತೆಗೆ  ಸ್ವಲ್ಪ ದೂರದಲ್ಲಿ ಮತ್ತೊಬ್ಬ ನಿಂತಿರುವುದು ಕಂಡುಬಂದಿದೆ. ಗುಂಡಿನ ದಾಳಿ ನಡೆದ ಕೆಲ ಕ್ಷಣಗಳಲ್ಲೇ ಸ್ಥಳದಲ್ಲಿ ಒಂದು ಗುಂಪು ಜಮಾಯಿಸಿದೆ.

ಪೊಲೀಸರಿಂದ ಶೋಧ ಕಾರ್ಯ 

ಈ ಘಟನೆ ಸಂಬಂಧ ಮಧ್ಯ ಪ್ರದೇಶ ಪೊಲೀಸರು ಆರೋಪಿಗಳಿಗಾಗಿ ಶೋಧಕಾರ್ಯ ಆರಂಭಿಸಿದ್ದು, ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ: ಶಿಕ್ಷಕಿಗೆ ಗುಂಡು ಹಾರಿಸಿದ 6 ವರ್ಷದ ಬಾಲಕ: ಸಾವು - ಬದುಕಿನ ನಡುವೆ ಟೀಚರ್ ಹೋರಾಟ

ಜಮ್ಮು ಕಾಶ್ಮೀರದಲ್ಲಿ ಹಿಂದೂಗಳನ್ನು ಗುರಿಯಾಗಿಸಿ ದಾಳಿ
ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಭಾನುವಾರ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ನಾಲ್ವರು ನಾಗರಿಕರು ಮೃತಪಟ್ಟಿದ್ದರು. ಈ ದಾಳಿಯಲ್ಲಿ ಇಬ್ಬರು ಉಗ್ರರು ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು, ನಿರ್ದಿಷ್ಟ ಸಮುದಾಯದ ಮನೆಗಳಿಗೆ ನುಗ್ಗಿದ ಬಂದೂಕುಧಾರಿಗಳು ಅವರನ್ನು ಗುರಿಯಾಗಿಸೇ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಅಂದರೆ ಹೊಸ ವರ್ಷದ ಮೊದಲ ದಿನ ರಾತ್ರಿ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಇಬ್ಬರು ಉಗ್ರರು ಅರಣ್ಯದ ಮೂಲಕ ಸಾಗಿ ಹಿಂದೂ ಸಮುದಾಯದ 3 ಮನೆಗಳಿಗೆ ನುಗ್ಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮನೆಯ ಒಳಗಿದ್ದವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. 

ಭಯೋತ್ಪಾದಕರು ಮೊದಲು ಅವರ ಆಧಾರ್‌ ಕಾರ್ಡ್‌ ಮೂಲಕ ಗುಂಡಿನ ದಾಳಿ ನಡೆಸುವವರ ಗುರುತನ್ನು ದೃಢಪಡಿಸಿಕೊಂಡಿದ್ದರು ಎಂದೂ ಮೂಲಗಳು ತಿಳಿಸಿವೆ. ಈ ದಾಳಿಯು ಕಳೆದ ಹಲವು ವರ್ಷಗಳಲ್ಲಿ ಶಾಂತಿಯುತವಾದ ಜಮ್ಮು ಪ್ರದೇಶದಲ್ಲಿ ನಡೆದ ಮೊದಲ ದಾಳಿಯಾಗಿದೆ ಮತ್ತು ಹೊಸ ವರ್ಷದ ಮೊದಲ ದಿನದಂದೇ ಈ ದಾಳಿ ನಡೆದಿದ್ದು, ಹಲವರನ್ನು ಬೆಚ್ಚಿ ಬೀಳಿಸಿದೆ. ಇನ್ನು, ಈ ದಾಳಿಯ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, 10 ನಿಮಿಷಗಳಲ್ಲಿ ಗುಂಡಿನ ದಾಳಿ ಕೊನೆಗೊಂಡಿದೆ. ಮೊದಲು ಅವರು ಅಪ್ಪರ್ ಡ್ಯಾಂಗ್ರಿಯಲ್ಲಿನ ಮನೆಯೊಂದರ ಮೇಲೆ ದಾಳಿ ಮಾಡಿದರು ಮತ್ತು ನಂತರ ಅವರು 25 ಮೀಟರ್ ದೂರಕ್ಕೆ ತೆರಳಿ ಅಲ್ಲಿದ್ದ ಹಲವರಿಗೆ ಗುಂಡು ಹಾರಿಸಿದರು. ನಂತರ, ಅವರು ಹಳ್ಳಿಯಿಂದ ಓಡಿಹೋಗುವಾಗ 25 ಮೀಟರ್ ದೂರದಲ್ಲಿರುವ ಎರಡನೇ ಮನೆಯ ಮೇಲೂ ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮತ್ತೊಂದು ಕಾಶ್ಮೀರ್ ಫೈಲ್ಸ್‌..? ಹಿಂದೂಗಳನ್ನು ಗುರಿಯಾಗಿಸಿ ಉಗ್ರರಿಂದ ಗುಂಡಿನ ದಾಳಿ..!

click me!