Bitcoin ವಂಚನೆ: ದೂರು ಕೊಟ್ಟರೆ ಕ್ರಮ-​ಆರಗ ಜ್ಞಾನೇಂದ್ರ

By Kannadaprabha NewsFirst Published Sep 16, 2022, 5:37 AM IST
Highlights

ಸಾವಿರಾರು ಕೋಟಿ ರು. ವಂಚನೆಯಾಗಿದೆ ಎಂದು ಹೇಳಲಾಗುತ್ತಿರುವ ಬಿಟ್‌ಕಾಯಿನ್‌ ಹಗರಣ ‘ಗಾಳಿ ಗಂಟು’ ಆಗಿದೆ. ಹಣ ಕಳೆದುಕೊಂಡವರು ಈ ಬಗ್ಗೆ ಸಾಕ್ಷಿ ನೀಡಿದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ವಿಧಾನಪರಿಷತ್‌ (ಸೆ.16) : ಸಾವಿರಾರು ಕೋಟಿ ರು. ವಂಚನೆಯಾಗಿದೆ ಎಂದು ಹೇಳಲಾಗುತ್ತಿರುವ ಬಿಟ್‌ಕಾಯಿನ್‌ ಹಗರಣ ‘ಗಾಳಿ ಗಂಟು’ ಆಗಿದೆ. ಹಣ ಕಳೆದುಕೊಂಡವರು ಈ ಬಗ್ಗೆ ಸಾಕ್ಷಿ ನೀಡಿದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಜೆಡಿಎಸ್‌ ಸದಸ್ಯ ಟಿ.ಎ. ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಬಂಧಿತನಾಗಿರುವ ಶ್ರೀಕೃಷ್ಣ (ಶ್ರೀಕಿ) ಯಾರಾರ‍ಯರಿಗೋ ವಂಚನೆ ಮಾಡಿರುವುದಾಗಿ ಹೇಳಿದ್ದಾನೆ. ಆದರೆ ವಂಚನೆಗೆ ಒಳಗಾದ ಯಾರೂ ದೂರು ನೀಡಿಲ್ಲ. ವಂಚನೆ ಆಗಿದೆ ಎಂದು ಹೇಳುವವರು ಸಾಕ್ಷಿ ನೀಡಿದರೆ ತನಿಖೆ ಮಾಡಲಾಗುವುದು. ಅಮೆರಿಕದಲ್ಲಿ ಬಿಟ್‌ಕಾಯಿನ್‌ ವಂಚಕರು ಸಿಕ್ಕಿಬಿದ್ದಿದ್ದಾರೆ. ಆದರೆ ಅಲ್ಲಿ ನಡೆದಿರುವ ವಂಚನೆಗೆ ಭಾರತ ಇಲ್ಲವೇ ರಾಜ್ಯದ ಸಂಪರ್ಕ ಇದೆ ಎಂದು ಅಮೆರಿಕ ಸರ್ಕಾರ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಕ್ರಿಪ್ಟೋ ಕರೆನ್ಸಿ ಖರೀದಿದಾರರಿಗೆ ಶಾಕ್. ಬಜೆಟ್‌ನಲ್ಲಿ ಘೋಷಿಸಿದ್ದ ಪ್ರಸ್ತಾವ ಈಗ ಜಾರಿಗೆ!

ಬಿಟ್‌ಕಾಯಿನ್‌ ಹಗರಣ ಸಂಬಂಧ ಶ್ರೀಕಿ ಸೇರಿದಂತೆ ಐವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇದಲ್ಲದೇ ವಿವಿಧ ಸೈಬರ್‌ ಠಾಣೆಗಳಲ್ಲಿ 79 ಪ್ರಕರಣಗಳು ದಾಖಲಾಗಿವೆ. ಕೆಲವು ಪ್ರಕರಣಗಳಲ್ಲಿ ಮಾತ್ರ ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯದಲ್ಲಿ ವಿವಿಧ ಹಂತದಲ್ಲಿ ವಿಚಾರಣೆಯಲ್ಲಿದೆ ಎಂದು ಸಚಿವರು ತಿಳಿಸಿದರು.

ಸಚಿವರ ಮಾತಿಗೆ ಸಮಾಧಾನಗೊಳ್ಳದ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು, ಹಗರಣದ ಬಗ್ಗೆ ನಾವು ಸಾಕ್ಷಿ ತರಲು ಹೇಗೆ ಸಾಧ್ಯ? ಸಾಕ್ಷಿ ಹುಡುಕುವುದು ಸರ್ಕಾರದ ಕೆಲಸ. ಈ ಹಗರಣದಲ್ಲಿ ದೊಡ್ಡ ಕುಳಗಳಿವೆ. ಹಾಗಾಗಿ ಮಾತನಾಡಲು ಎಲ್ಲರಿಗೂ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಟಿ.ಎ. ಶರವಣ ಅವರು ದನಿಗೂಡಿಸಿದಾಗ ಈ ಬಗ್ಗೆ ಪ್ರಸ್ತಾವನೆ ನೀಡಿದರೆ ಚರ್ಚಿಸಲು ಅವಕಾಶ ಕೊಡುವುದಾಗಿ ತಿಳಿಸಿದರು.ಇಂಟರ್ ನ್ಯಾಷನಲ್ ಹ್ಯಾಕರ್ ಶ್ರೀಕಿ ಹಿಂದೆ ಬಿದ್ದ ಕೇರಳ ಪೊಲೀಸ್!

click me!