ಹುಟ್ಟುಹಬ್ಬದ ಖುಷಿಯಲ್ಲಿ ಕೆರೆಗೆ ಈಜಲು ಹೋಗಿದ್ದ ಸ್ನೇಹಿತರ ಸಾವು. ಕೆರೆ ಹೂಳಲ್ಲಿ ಸಿಲುಕಿ ಅವಘಡ ಬೆಂಗಳೂರಿನ ಚಿಕ್ಕಕಮ್ಮನಹಳ್ಳಿಯಲ್ಲಿ ಘಟನೆ.
ಬೆಂಗಳೂರು (ಆ.27): ಹುಟ್ಟುಹಬ್ಬದ ಸಂಭ್ರಮಾಚರಣೆ ಖುಷಿಯಲ್ಲಿ ಕೆರೆಯಲ್ಲಿ ಈಜಾಡಲು ಹೋಗಿ ಇಬ್ಬರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಕಮ್ಮನಹಳ್ಳಿ ನಿವಾಸಿ ಸೋಲೋಮನ್ (28) ಹಾಗೂ ಬಿಟಿಎಂ ಲೇಔಟ್ ನಿವಾಸಿ ಅಭಿಷೇಕ್ (29) ಮೃತರು. ಮೂರು ದಿನಗಳ ಹಿಂದೆ ಚಿಕ್ಕಕಮ್ಮನಹಳ್ಳಿ ಕೆರೆಯಲ್ಲಿ ಕುಡಿದ ಮತ್ತಿನಲ್ಲಿ ಈ ಗೆಳೆಯರು ಈಜಾಡಲು ನೀರಿಗಿಳಿದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸೋಲೊಮನ್‌ಗೆ ಮದುವೆ ನಿಶ್ಚಿತಾರ್ಥ: ಸೆಕೆಂಡ್ ಹ್ಯಾಂಡ್ ಕಾರ್ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದ ಸೋಲೋಮನ್‌ಗೆ ಇತ್ತೀಚೆಗೆ ಯುವತಿಯ ಜತೆ ಮದುವೆ ನಿಶ್ಚಿಯವಾಗಿತ್ತು. ಹೀಗಾಗಿ ಕೆಂಬತ್ತನಹಳ್ಳಿಯಲ್ಲಿ ನೆಲೆಸಿದ್ದ ಆತನ ಪೋಷಕರು, ಚಿಕ್ಕಕಮ್ಮನಹಳ್ಳಿಯಲ್ಲಿ ಮಗನಿಗೆ ಪ್ರತ್ಯೇಕವಾಗಿ ಮನೆ ಭೋಗ್ಯಕ್ಕೆ ಹಾಕಿಕೊಟ್ಟಿದ್ದರು. ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಅಭಿಷೇಕ್, ಬಿಟಿಎಂ ಲೇಔಟ್‌ನಲ್ಲಿ ನೆಲೆಸಿದ್ದ. ಹಲವು ವರ್ಷಗಳಿಂದ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
undefined
ಅಡ್ಡಾದಿಡ್ಡಿ ಚಲಿಸಿದ ಲಾರಿ, ಸಿಕ್ಕ ಸಿಕ್ಕ ವಾಹನಗಳಿಗೆ ಗುದ್ದಿ ಸರಣಿ ಅಪಘಾತ: ಸವಾರ ಬಲಿ
ಬುಧವಾರ ಸಂಜೆ ಸೋಲೋಮನ್ ಹುಟ್ಟುಹಬ್ಬದ ಆಚರಣೆಗೆ ಆತನ ಮನೆಗೆ ಅಭಿಷೇಕ್ ಬಂದಿದ್ದ. ಆ ವೇಳೆ ಮನೆಯಲ್ಲೇ ಇಬ್ಬರು ಮದ್ಯ ಸೇವಿಸಿದ್ದಾರೆ. ಬಳಿಕ ಮನೆ ಸಮೀಪದ ಕೆರೆಗೆ ಈಜಾಡಲು ತೆರಳಿದ್ದಾರೆ. ಆದರೆ ಹೂಳಿನಲ್ಲಿ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಸೊಲೊಮನ್ ನಗರದ ಕೆಂಬತ್ತನಹಳ್ಳಿ ನಿವಾಸಿಯಾಗಿದ್ದು, ಮದುವೆ ಮಾಡಿಕೊಳ್ಳವ ಉದ್ದೇಶದಿಂದ ಚಿಕ್ಕಕಮ್ಮನಹಳ್ಳಿಯ ಮನೆಯೊಂದನ್ನು ಲೀಜ್ಗೆ ಪಡೆದು ವಾಸವಿದ್ದ ಎನ್ನಲಾಗಿದೆ. ಅದೇ ಮನೆಯಲ್ಲಿಯೇ ಬರ್ತ್ ಡೇ ಸೆಲೆಬ್ರೆಟ್ ಮಾಡುವ ಉದ್ದೇಶದಿಂದ ಮಹಾರಾಷ್ಟ್ರ ಮೂಲದ ಕಾಲ್ ಸೆಂಟರ್ ಉದ್ಯೋಗಿ ಅಭಿಷೇಕ್ ಮತ್ತು ಸ್ನೇಹಿತರು ಬಂದಿದ್ದಾರೆ. ಬರ್ತ್ ಡೇ ಪಾರ್ಟಿಯಲ್ಲಿ ಕಂಠಪೂರ್ತಿ ಕುಡಿದ ಬರ್ತ್ ಡೇ ಬಾಯ್ ಸೊಲೊಮನ್ ಮತ್ತು ಅಭಿಷೇಕ್ ಈಜಾಡಲು ಸಮೀಪದ ಕೆರೆಗೆ ತೆರಳಿದ್ದಾರೆ. ಆಗ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಅಲ್ಲದೆ ಕೆರೆಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿಲ್ಲ. ಕಳೆದ ಐದಾರು ತಿಂಗಳಿಂದ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ರಕ್ಷಣೆ ಇಲ್ಲದಂತಾಗಿದೆ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ವಿದ್ಯಾರ್ಥಿ ಅಪಹರಿಸಿ ಹಲ್ಲೆ: ಎಸ್‌ಡಿಪಿಐ ಮುಖಂಡನ ಪುತ್ರ ಸಹಿತ 7 ಜನರ ಬಂಧನ
ಘಟನೆ ಸಂಬಂದ ಹುಳಿಮಾವು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದ್ರೆ ಬರ್ತ್ ಡೇ ಪಾರ್ಟಿ ನಶೆಯಿಂದಾಗಿ ತಡರಾತ್ರಿ ಕೆರೆಗಿಳಿದು ಯುವಕರು ತಮ್ಮ ಸಾವನ್ನು ತಾವೇ ತಂದುಕೊಂಡರಾ? ಅಥವಾ ಯಾರಾದರೂ ಕೊಲೆ ಮಾಡಿ ಕೆರೆಗೆ ಎಸೆದರು ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.