ನೀಲಂ ದೇವಿಯೊಂದಿಗೆ ಹತ್ತಿರವಾಗುತ್ತಿರುವುದಕ್ಕೆ ಶಕೀಲ್‌ಗೆ ಮಹಿಳೆಯ ಮನೆಯವರು ಬೆದರಿಕೆ ಹಾಕಿದ್ದರು. ಅಲ್ಲದೆ, ಆಕೆ ತನಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದು ಆತ ಆಕ್ರೋಶಗೊಂಡು ಈ ಕೃತ್ಯವೆಸಗಿದ್ದಾನೆ ಎಂದು ಹೇಳಲಾಗಿದೆ.
ವ್ಯಕ್ತಿಯೊಬ್ಬ ಸಾರ್ವಜನಿಕ ಮಾರುಕಟ್ಟೆಯಲ್ಲಿ (Public Market) ಮಹಿಳೆಯ ಎದೆ, ಕೈ, ಕಿವಿ ಮತ್ತು ಮೂಗನ್ನು ಕತ್ತರಿಸಿರುವ ಭೀಕರ ಘಟನೆ ಬಿಹಾರದ (Bihar) ಭಾಗಲ್ಪುರ (Bhagalpur) ಜಿಲ್ಲೆಯಲ್ಲಿ ನಡೆದಿದೆ. ಭಾಗಲ್ಪುರ ಜಿಲ್ಲೆಯ ಪರಪೈಂಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದೃಢೀಕರಿಸದ ವರದಿಗಳ ಪ್ರಕಾರ, ಪುರುಷನು ಮಹಿಳೆಯೊಂದಿಗೆ ಸಲುಗೆಯಿಂದ ಇದ್ದನು. ಆದರೆ, ಮಹಿಳೆ ಆತನಿಂದ ದೂರವಿರಲು ನಿರ್ಧರಿಸಿದ್ದರಿಂದ ಹಾಗೂ ತನ್ನ ಮನೆಗೆ ಬರುವುದನ್ನ ವಿರೋಧಿಸಿದ್ದಕ್ಕೆ ಈ ಅಪರಾಧ ಎಸಗಿದ್ದಾನೆ ಎಂದು ಹೇಳಲಾಗಿದೆ. ಆರೋಪಿಯನ್ನು ಮೊಹಮ್ಮದ್ ಶಕೀಲ್ (Mohammed Shakeel) ಎಂದು ಗುರುತಿಸಲಾಗಿದ್ದು, ಆತ ಮೊದಲೇ ಪ್ಲ್ಯಾನ್ ಮಾಡಿ ಆಯುಧವನ್ನು ಮಡಕೆಯೊಳಗೆ (Pot) ಬಚ್ಚಿಟ್ಟಿದ್ದ ಎಂದು ತಿಳಿದುಬಂದಿದೆ.
ದಿನಸಿ (Grocery) ಖರೀದಿಸಲು ಹೋದ ಮಹಿಳೆಗೆ ಹೊಂಚು ಹಾಕಿ ಈ ಕೃತ್ಯ ಎಸಗಿದ್ದು, ಆರೋಪಿ ಮೊದಲು ನೀಲಂ ದೇವಿ (Neelam Devi) ಎಂಬ ಮಹಿಳೆಯನ್ನು ಕೆಳಕ್ಕೆ ತಳ್ಳಿ, ನಂತರ ಆಕೆಯ ದೇಹದ ವಿವಿಧ ಭಾಗಗಳನ್ನು ಕತ್ತರಿಸಿದ್ದಾನೆ. ಬಳಿಕ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನೀಲಂ ದೇವಿ ಅವರನ್ನು ಭಾಗಲ್ಪುರದ ಜವಾಹರಲಾಲ್ ನೆಹರೂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಕೆಯ ದೇಹದಿಂದ ತೀವ್ರ ರಕ್ತ ಸೋರಿಕೆಯಾಗಿ ಮೃತಪಟ್ಟಿದ್ದಾರೆ ಎಂದೂ ವರದಿಯಾಗಿದೆ.
ಇದನ್ನು ಓದಿ: ಕಳ್ಳನ ತಪ್ಪೊಪ್ಪಿಗೆ ವಿಡಿಯೋ ವೈರಲ್: ಪೊಲೀಸರನ್ನೇ ಬೈಯ್ಯಲು ಶುರು ಮಾಡಿದ ಜನ
Horrid incident of M chopping off a hindu woman alive from Bihar!!
Mohd Shakeel cut off hands,feet, ears and one breast of 42yr old Neelam Yadav in broad day light when she was out shopping in the market with a sharp weapon!!
Spine chilling! pic.twitter.com/FXOdHiYERV
ನೀಲಂ ದೇವಿಯೊಂದಿಗೆ ಹತ್ತಿರವಾಗುತ್ತಿರುವುದಕ್ಕೆ ಶಕೀಲ್‌ಗೆ ಮಹಿಳೆಯ ಮನೆಯವರು ಬೆದರಿಕೆ ಹಾಕಿದ್ದರು. ಅಲ್ಲದೆ, ಆಕೆ ತನಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದು ಆತ ಆಕ್ರೋಶಗೊಂಡಿದ್ದಾನೆ. ಈ ಮಧ್ಯೆ, ಮಹಿಳೆಯ ಪತಿ ತನಗೆ ಶಕೀಲ್‌ನೊಂದಿಗೆ ಯಾವುದೇ ದ್ವೇಷವಿಲ್ಲ ಮತ್ತು ಅವನು ಯಾಕೆ ಈ ರೀತಿ ಕೃತ್ಯವೆಸಗಿದ್ದಾನೆ ಎಂಬುದು ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಮಹಿಳೆ ನೀಲಂ ದೇವಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆರೋಪಿಯನ್ನು ಹಿಡಿಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಅಪರಾಧ ಕೃತ್ಯವೆಸಗಿ ವ್ಯಕ್ತಿ ಓಡಿಹೋದ ನಂತರ, ಮಹಿಳೆಯನ್ನು ಸುತ್ತುವರೆದ ಜನರು ಪೊಲೀಸರಿಗೆ ಕರೆ ಮಾಡಿ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಕೆಯನ್ನು ಉನ್ನತ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು 2 ಬಾರಿ ಶಿಫ್ಟ್ ಮಾಡಲಾಯಿತು ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: Davanagere Crime News: 80 ವರ್ಷದ ಒಂಟಿ ವೃದ್ಧೆ ಮೇಲೆ ಅತ್ಯಾಚಾರ ಎಸಗಿದ 30ರ ಯುವಕ
ಮಹಿಳೆಗೆ ಚಿಕಿತ್ಸೆ ನೀಡಿದ ಡಾ. ಕೃಷ್ಣ ಅವರು ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಮಹಿಳೆಯ ಎರಡೂ ಕೈಗಳನ್ನು ಮತ್ತು ಸ್ತನಗಳನ್ನು ಸಂಪೂರ್ಣವಾಗಿ ಕತ್ತರಿಸಲಾಗಿದೆ ಎಂದು ಹೇಳಿದ್ದಾರೆ. ಆಕೆಯ ಬೆನ್ನಿನ ಮೇಲೆ ಆಳವಾದ ಗಾಯಗಳಿದ್ದವು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟಿದ್ದಾಳೆ. ಮಹಿಳೆ ಮೇಲೆ ಹರಿತವಾದ ಆಯುಧದಿಂದ ದಾಳಿ ಮಾಡಿದ್ದರಿಂದ ಆಕೆ ಸಾವಿಗೀಡಾಗಿದ್ದಾಳೆ ಎಂದೂ ತಿಳಿದುಬಂದಿದೆ.
ಮಹಿಳೆ ತನ್ನ ಮೇಲೆ ದಾಳಿ ಮಾಡಿದ ಆರೋಪಿಯ ಹೆಸರನ್ನು ಗಾಯಗೊಂಡ ಸ್ಥಿತಿಯಲ್ಲೇ ಹೇಳಿದ್ದು, ಇದನ್ನು ಸ್ಥಳೀಯರು ರೆಕಾರ್ಡ್ ಮಾಡಿಕೊಂಡಿದ್ದಾರೆ. ಹಾಗೂ, ಈ ಅಪರಾಧ ಕೃತ್ಯಕ್ಕೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಐವರನ್ನು ಪೊಲೀಸರು ವಶಕಕೆ ಪಡೆದಿದ್ದಾರೆ. ಆದರೆ, ಹೀನ ಕೃತ್ಯವೆಸಗಿದ ಆರೋಪಿ ಶಕೀಲ್ ನಾಪತ್ತೆಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.
ಇದನ್ನೂ ಓದಿ : Hubli Crime: ಉಪಟಳ ತಾಳಲಾರದೆ ಮಗನನ್ನೇ ಕೊಲೆ ಮಾಡಿಸಿದ ತಂದೆ
ರಾಷ್ಟ್ರ ರಾಜಧಾನಿಯಲ್ಲಿ ಶ್ರದ್ಧಾ ವಾಕರ್‌ಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆಕೆಯನ್ನು 35 ಪೀಸ್ ಮಾಡಿ ಕೊಂಡು ಹಾಕಿ, ದೇಹದ ವಿವಿಧ ಭಾಗಗಳನ್ನು ವಿವಿಧೆಡೆ ಎಸೆಯಲಾಗಿತ್ತು. ಹಾಗೂ, ಹಲವು ದಿನಗಳ ಕಾಲ ಫ್ರಿಡ್ಜ್‌ನಲ್ಲೂ ಇಡಲಾಗಿತ್ತು. ಈ ಸಂಬಂಧ ಪೊಲೀಸರು ಆರೋಪಿ ಅಫ್ತಾಬ್ ಪೂನಾವಾಲಾನನ್ನು ಘಟನೆ ನಡೆದು 6 ತಿಂಗಳ ನಂತರ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.