ಬೀದರ್‌ ಹಣ ಲೂಟಿ ಹಿಂದೆ ಬಿಹಾರದ ಅಮಿತ್‌ ಗ್ಯಾಂಗ್‌?

Published : Jan 19, 2025, 06:00 AM IST
ಬೀದರ್‌ ಹಣ ಲೂಟಿ ಹಿಂದೆ ಬಿಹಾರದ ಅಮಿತ್‌ ಗ್ಯಾಂಗ್‌?

ಸಾರಾಂಶ

ಬೀದರ್‌ನ ಎಸ್‌ಬಿಐನಿಂದ ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ಸಿಬ್ಬಂದಿ ಮೇಲೆ ಗುಂಡಿನ ಸುರಿಮಳೆಗರೆಯಲಾಗಿತ್ತು. ಬಳಿಕ ಓರ್ವನ ಹತ್ಯೆ ಮಾಡಿ 83 ಲಕ್ಷ ರು. ನಗದು ದೋಚಿ ಬೈಕಲ್ಲಿ ಪರಾರಿಯಾಗಿರುವ ಇಬ್ಬರು ದುಷ್ಕರ್ಮಿಗಳು ಬಿಹಾರ ಮೂಲದವರು ಎಂದು ಪತ್ತೆ ಹಚ್ಚಲಾಗಿದೆ 

ಅಪ್ಪಾರಾವ್ ಸೌದಿ 

ಬೀದ‌ರ್(ಜ.19): ಹಾಡಹಗಲೇ ಬ್ಯಾಂಕ್ ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ಸಿಬ್ಬಂದಿ ಮೇಲೆ ಗುಂಡು ಹಾರಿಸಿ 83 ಲಕ್ಷ ರು. ದೋಚಿದ ಆರೋಪಿಗಳ ಪತ್ತೆಗೆ ಮುಗಿ ಬಿದ್ದಿರುವ ಪೊಲೀಸ್ ತಂಡ ತನಿಖೆಯಲ್ಲಿ ಕೊಂಚ ಪ್ರಗತಿ ಸಾಧಿಸಿದೆ. ಆರೋಪಿಗಳಿಬ್ಬರೂ ಬಿಹಾರ ಮೂಲದ ಗ್ಯಾಂಗ್‌ಸ್ಟರ್ ಎನ್ನಲಾದ ಅಮಿತ್‌ ಕುಮಾರ ಸಹಚರರು ಎಂಬ ಮಾಹಿತಿ ಲಭ್ಯವಾಗಿದೆ. 

ಬೀದರ್‌ನ ಎಸ್‌ಬಿಐನಿಂದ ಎಟಿಎಂಗಳಿಗೆ ಹಣ ಸಾಗಿಸುತ್ತಿದ್ದ ಸಿಬ್ಬಂದಿ ಮೇಲೆ ಗುಂಡಿನ ಸುರಿಮಳೆಗರೆಯಲಾಗಿತ್ತು. ಬಳಿಕ ಓರ್ವನ ಹತ್ಯೆ ಮಾಡಿ 83 ಲಕ್ಷ ರು. ನಗದು ದೋಚಿ ಬೈಕಲ್ಲಿ ಪರಾರಿಯಾಗಿರುವ ಇಬ್ಬರು ದುಷ್ಕರ್ಮಿಗಳು ಬಿಹಾರ ಮೂಲದವರು ಎಂದು ಪತ್ತೆ ಹಚ್ಚಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. 

ಬೀದರ್‌ ದರೋಡೆ: ಮೃತನ ಕುಟುಂಬಕ್ಕೆ 8 ಲಕ್ಷ ಪರಿಹಾರ

ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಿಸುವ ಸಿಎಂಎಸ್ ಸಂಸ್ಥೆ ಸಿಬ್ಬಂದಿಯನ್ನು ಹತ್ಯೆ ಮಾಡಿ ಹಣ ದೋಚಿ ಹೈದರಾಬಾದ್‌ಗೆ ಪರಾರಿಯಾಗಿ ಅಲ್ಲಿಂದ ಛತ್ತೀಸಗಢದ ರಾಯ್‌ಪುರ ಮಾರ್ಗವಾಗಿ ಬಿಹಾರಕ್ಕೆ ಪರಾರಿಯಾಗಲು ಯತ್ನಿಸಿದ್ದಾರೆ. 
ಹೈದರಾಬಾದ್‌ನ ಅಫ್ಜಲ್‌ಗಂಜ್ ಖಾಸಗಿ ಟ್ರಾವೆಲ್ಸ್ ಸಿಬ್ಬಂದಿ ಮೇಲೆಯೂ ಗುಂಡಿನ ದಾಳಿ ನಡೆಸಿ ಸಿಕಂದರಾಬಾದ್ ರೈಲು ನಿಲ್ದಾಣಕ್ಕೆ ಆಟೋದಲ್ಲಿ ಹೋಗಿದ್ದಾರೆ. ಅಲ್ಲಿಂದ ಉತ್ತರ ಭಾರತಕ್ಕೆ ಪರಾರಿಯಾಗಿರಬಹುದು. ಈ ಮಧ್ಯೆ ಹೋಟೆಲ್‌ವೊಂದಕ್ಕೆ ತೆರಳಿ ದೋಸೆ ಸೇವಿಸಿರುವ ಬಗ್ಗೆಯೂ ಊಹಾಪೋಹಗಳಿವೆ ಎಂದರು. 

ಈಗಾಗಲೇ ಸಿಸಿಟಿವಿ ವಿಡಿಯೋ ಪರಿಶೀಲಿಸಿ, ನೆರೆಯ ರಾಜ್ಯದ ಪೊಲೀಸರ ಸಹಕಾರ ಪಡೆದು ತನಿಖೆ ನಡೆಸಿದಾಗ ಓರ್ವ ದುಷ್ಕರ್ಮಿ ಮನೀಶ್ ಎಂದು ಪತ್ತೆಯಾಗಿದೆ. ಇವನು ಬಿಹಾರದ ಗ್ಯಾಂಗ್‌ಸ್ಟರ್‌ ಅಮಿತ್ ಕುಮಾರ್‌ ಎಂಬಾತನ ಸಹಚರ ಮತ್ತು ಛತ್ತೀಸಗಢ ರಾಜ್ಯದಲ್ಲಿ ನಡೆದ 70 ಲಕ್ಷ ರು. ಲೂಟಿ ಪ್ರಕರಣ ಮತ್ತು ಬೀದರ್‌ ಪ್ರಕರಣದಲ್ಲಿ ಸಾಮ್ಯತೆ ಕಂಡುಬರುತ್ತಿದೆ. ಹೀಗಾಗಿ ಅಮಿತ್‌ ಕುಮಾರ ಹಾಗೂ ಗ್ಯಾಂಗ್‌ನ ಕೃತ್ಯ ಇದಾಗಿರಬಹುದು ಎಂದೂ ಪೊಲೀಸರು ಶಂಕಿಸಿದ್ದಾರೆ. 

ಈ ನಿಟ್ಟಿನಲ್ಲಿ ಪೊಲೀಸರು ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಛತ್ತೀಸಗಢ ಅಷ್ಟೇ ಅಲ್ಲ, ಬಿಹಾರ ಪೊಲೀಸರ ಸಹಕಾರ ಪಡೆಯುತ್ತಿದ್ದು, ಪೊಲೀಸರ 10 ತಂಡಗಳನ್ನು ರಚಿಸಿ ದುಷ್ಕರ್ಮಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ. ಈ ನಡುವೆ, ಬೀದರ್‌ ಪೊಲೀಸರು ಕೂಡ ಹಗಲು-ರಾತ್ರಿ ಶೋಧ ಮುಂದುವರಿಸಿದ್ದು, ಶೀಘ್ರ ಅವರ ಬಂಧನವಾಗಲಿದೆ ಎಂಬ ವಿಶ್ವಾಸವಿದೆ ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಬೀದರ್‌ನಲ್ಲಿ ಎಟಿಎಂ ಸಿಬ್ಬಂದಿ ಮೇಲೆ ದಾಳಿ, ಲಕ್ಷ ಲಕ್ಷ ರೂಪಾಯಿ ದರೋಡೆ: ಇಬ್ಬರು ಸಾವು

ಎಲ್ಲರಿಗಿಂತ ಮೊದಲು ತಿಳಿಯುವುದು ಇಲ್ಲೇ 

'ಬೀದ‌ರ್ ಎಟಿಎಂ ಹಣ ಲೂಟಿ ಮಾಡಿದ್ದು ಬಿಹಾರಿ ಗ್ಯಾಂಗ್' ಎಂದು ಎಲ್ಲರಿಗಿಂತ ಮೊದಲು 'ಕನ್ನಡಪ್ರಭ' ನಿನ್ನೆಯೇ ವರದಿ ಮಾಡಿತ್ತು. 

ಬೀದರ್ ಎಟಿಎಂ ಹಣ ಲೂಟಿ ಮಾಡಿದ್ದು ಬಿಹಾರಿ ಗ್ಯಾಂಗ್? 

ಹೈದರಾಬಾದ್: ಬೀದರ್‌ನಲ್ಲಿ ಶೂಟೌಟ್ ನಡೆಸಿ 93 ಲಕ್ಷ ರು. ಹಣ ಲೂಟಿ ಮಾಡಿ ಪರಾರಿಯಾಗಿರುವ ಇಬ್ಬರು ಬಿಹಾರ ಮೂಲದವರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ನಡುವೆ, ಆರೋಪಿಗಳ ಸೆರೆಗೆ ತೆಲಂಗಾಣ ಪೊಲೀಸರು 10 ತಂಡ ರಚಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಂಗಗಳಿಗೆ ಹಣ್ಣು ತಿನ್ನಿಸಿದ್ದೇ ತಪ್ಪಾಗೋಯ್ತು: ದೇವಾಲಯದ ಬೆಟ್ಟದಿಂದ ಬಿದ್ದು ನವವಿವಾಹಿತೆ ಸಾವು
ಮೊಹರಂ ಮೆರವಣಿಗೆ: 40 ಅಡಿ ಎತ್ತರದಲ್ಲಿ ನಡೆದ ಆ ಭಯಾನಕ ಸ್ಫೋಟ- ಉದ್ದೇಶ ಏನು? ಶಾಕಿಂಗ್​ ವಿಡಿಯೋ ವೈರಲ್​