ತಾನು ಇಷ್ಟಪಟ್ಟ ಹುಡುಗನನ್ನು ಮದುವೆಯಾಗಲು ನಿರಾಕರಿಸಿದ ಮಗಳನ್ನು ಕೊಂದ ಅಪ್ಪ!

Published : Apr 05, 2022, 04:06 PM IST
ತಾನು ಇಷ್ಟಪಟ್ಟ ಹುಡುಗನನ್ನು ಮದುವೆಯಾಗಲು ನಿರಾಕರಿಸಿದ ಮಗಳನ್ನು ಕೊಂದ ಅಪ್ಪ!

ಸಾರಾಂಶ

ಇಂದಿಗೂ ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸ್ವಂತ ಇಚ್ಛೆಯಂತೆ ಬದುಕುವ ಹಕ್ಕಿಲ್ಲ. ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಇಂತಹದ್ದೇ ಉದಾಹರಣೆ ಬೆಳಕಿಗೆ ಬಂದಿದೆ. ತನ್ನ ಇಷ್ಟದ ಹುಡುಗನನ್ನು ಮದುವೆಯಾಗಲು ನಿರಾಕರಿಸಿದ ಮಗಳನ್ನು ತಂದೆಯೇ ಕತ್ತು ಸೀಳಿ ಕೊಂದಿದ್ದಾನೆ.

ಪಾಟ್ನಾ (ಏ.5): ಮಹಿಳೆಗೆ ಅದೆಷ್ಟೇ ಸ್ವಾತಂತ್ರ್ಯ ನೀಡಿದ್ದೇವೆ ಎಂದು ಹೇಳಿದ್ದರೂ ಕೆಲವೊಂದು ವಿಚಾರದಲ್ಲಿ ಆಕೆಯ ಇಚ್ಛೆಯಂತೆ ಬದುಕಲು ಸಮಾಜ ಬಿಡುವುದಿಲ್ಲ. ಅಪ್ಪನ ಮನೆ, ಗಂಡನ ಮನೆ ಅಂಥಲ್ಲ, ಎಲ್ಲಾ ಕಡೆಗಳಲ್ಲೂ ಆಕೆಯ ಇಚ್ಛೆಗೆ ಬೆಲೆ ಕೊಡದ ಸಾಕಷ್ಟು ಪ್ರಕರಣಗಳು ನಡೆಯುತ್ತಲೇ ಇದೆ. ಅಂಥದ್ದೊಂದು ಪ್ರಕರಣ ಇತ್ತೀಚೆಗೆ ಬಿಹಾರದ (Bihar) ಪಾಟ್ನಾದಲ್ಲಿ (Patna) ವರದಿಯಾಗಿದೆ. ತನಗೆ ಇಷ್ಟವಾದ ಹುಡುಗನನ್ನು ಮದುವೆಯಾಗಲು ನಿರಾಕರಿಸಿದ ಮಗಳನ್ನು ಅಪ್ಪ ಹಾಗೂ ಆಕೆಯ ಇಬ್ಬರು ಚಿಕ್ಕಪ್ಪಂದಿರುವ ಸೇರಿ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಬಿಹಾರದ ಗೋಪಾಲ್ ಗಂಜ್ (Gopalganj ) ಬಳಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. 19 ವರ್ಷದ ಮಗಳನ್ನು ಆಕೆಯ ತಂದೆಯೇ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ತಂದೆಯ ಆಯ್ಕೆಯ ಹುಡುಗನನ್ನು ಮದುವೆಯಾಗಲು ಆಕೆ ಒಪ್ಪಿರಲಿಲ್ಲ. ಅಪ್ಪನ ನಿರ್ಧಾರವನ್ನು ಅವಳು ಒಪ್ಪಲು ನಿರಾಕರಿಸಿದ್ದಳು. ಅದೊಂದೇ ಕಾರಣಕ್ಕೆ ಅವಳನ್ನು ಕೊಲೆ ಮಾಡಲಾಗಿದೆ ಎಂದು ಹುಡುಗಿಯ ತಾಯಿ ಕಲಾವತಿ ದೇವಿ (Kalavati Devi) ಹೇಳಿದ್ದಾಳೆ ಎಂದು ಎಂದು ಎಸ್‌ಡಿಪಿಒ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಮರ್ಯಾದಾ ಹತ್ಯೆ ಪ್ರಕರಣ (Honor Killing) ಎಂದು ಇದನ್ನು ಹೇಳಲಾಗಿದ್ದು, ಇನ್ನೂ ಬಾಲಿ ಬದುಕಬೇಕಾಗಿದ್ದ ತನ್ನ 19 ವರ್ಷದ ಮಗಳ ಕತ್ತು ಸೀಳು ದುಷ್ಕೃತ್ಯ ಎಸಗಿದ್ದಾನೆ. ಸ್ಥಳೀಯ ಪೊಲೀಸರ ಪ್ರಕಾರ, ಆರೋಪಿ ಇಂದ್ರದೇವ್ ರಾಮ್ (Indradev Ram) ತನ್ನ ಇಬ್ಬರು ಸಹೋದರರ ಸಹಕಾರದೊಂದಿಗೆ ಈ ಅಪರಾಧವನ್ನು ನಡೆಸಿದ್ದಾನೆ. ಸಂತ್ರಸ್ತೆಯ ತಾಯಿ ಕಲಾವತಿ ದೇವಿ ಹೇಳಿಕೆ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಗೋಪಾಲಗಂಜ್ ಎಸ್‌ಡಿಪಿಒ (ನಗರ) ಸಂಜೀವ್ ಕುಮಾರ್ ಈ ಬಗ್ಗೆ ಮಾತನಾಡಿದ್ದು, ಮೃತಳಾಗಿರುವ ಕಿರಣ್ ಕುಮಾರಿ (Kiran Kumari) ಗ್ರಾಮದ ಯುವಕನೊಬ್ಬನನ್ನು ಪ್ರೀತಿ ಮಾಡುತ್ತಿದ್ದಳು. ಮಗಳ ಪ್ರೀತಿಯ ಬಗ್ಗೆ ತಿಳಿದಿದ್ದ ತಂದೆ ಇಂದ್ರದೇವ್ ಈ ಬಗ್ಗ ಸಾಕಷ್ಟು ಬಾರಿ ಎಚ್ಚರಿಕೆಯನ್ನೂ ನೀಡಿದ್ದ. ಮನೆಯಲ್ಲಿ ಈ ಕುರಿತಾಗಿ ಹಲವು ಬಾರಿ ಗಲಾಟೆಯೂ ಆಗಿತ್ತು. ಬಳಿಕ ಮಸಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಬಿರ್ಚಾ ಗ್ರಾಮದ ಮತ್ತೊಬ್ಬ ಯುವಕ ನಾತಿ ಶರ್ಮಾ ಜತೆ ಕಿರಣ್‌ನ ಮದುವೆ ನಿಶ್ಚಯ ಮಾಡಿದ್ದ. ಆದರೆ, ನಾತಿ ಶರ್ಮ ಅವರನ್ನು ಮದುವೆಯಾಗಲು ಕಿರಣ್ ಸುತಾರಾಂ ಒಪ್ಪಿರಲಿಲ್ಲ. ಇದರಿಂದ ಆಕೆಯ ಮೇಲೆ ತಂದೆ ಆಕ್ರೋಶಗೊಂಡಿದ್ದ.

Dharwad ಅಂತರ್ಜಾತಿ ಪ್ರೀತಿಗೆ ಮನೆಯವರು ಒಪ್ಪಲಿಲ್ಲವೆಂದು ಪ್ರೇಮಿಗಳ ಆತ್ಮಹತ್ಯೆ

ಇತ್ತೀಚೆಗೆ ಸಂಜೆ ಕುಡಿದ ಅಮಲಿನಲ್ಲಿ ಇಂದ್ರದೇವ್ ತನ್ನ ಸಹೋದರರೊಂದಿಗೆ ಮನೆಗೆ ಬಂದಿದ್ದ. ನಂತರ ಮಗಳ ಕೈಕಾಲು ಕಟ್ಟಿ ಕತ್ತು ಸೀಳಿದ್ದಾನೆ. ಸಂತ್ರಸ್ತೆಯ ತಾಯಿ ಕಲಾವತಿ ದೇವಿಯ ಮೇಲೂ ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಆತನ ಮೇಲೂ ಚಾಕುವಿನಿಂದ ಇರಿದ ಗಾಯಗಳಾಗಿವೆ. ಮರು ದಿನ ಬೆಳಗ್ಗೆ ಆಕೆಯ ತಾಯಿ ಮಾಹಿತಿ ನೀಡಿದ ನಂತರ ಘಟನೆಯ ಬಗ್ಗೆ ಅರಿವಿಗೆ ಬಂದಿದೆ  ಎಂದು ಕುಮಾರ್ ಹೇಳಿದ್ದಾರೆ. ಇಂದ್ರದೇವ್ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದರು. ಅವರೆಲ್ಲರೂ ತಲೆಮರೆಸಿಕೊಂಡಿದ್ದು, ಹುಡುಕುವ ಪ್ರಯತ್ನಗಳು ನಡೆದಿವೆ ಎಂದಿದ್ದಾರೆ.

Chikkamagaluru ಹಣಕಾಸಿನ ವಿಚಾರಕ್ಕೆ ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ ‌

ಘಟನೆಯ ನಂತರ ಮಾತನಾಡಿರುವ ಎಸ್‌ಡಿಪಿಒ ಸಂಜೀವ್ ಕುಮಾರ್ , “ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ  ನೀಡಿದಾಗ, ಅದು ತಕ್ಷಣವೇ ಸ್ಥಳಕ್ಕೆ ಧಾವಿಸಿದೆವು. ನಗರ ನಿರೀಕ್ಷಕ ಲಲ್ಲನ್ ಕುಮಾರ್ ಅವರ ನೇತೃತ್ವದಲ್ಲಿ  ಈಗಾಗಲೇ ತನಿಖೆ ಆರಂಭಿಸಲಾಗಿದೆ. ಹುಡುಗಿ  ಬೇರೆ ಹುಡುಗನನ್ನು ಮದುವೆಯಾಗಲು ಬಯಸಿದ್ದಳು ಮತ್ತು ಆಕೆಯ ಕುಟುಂಬದವರು ಬೇರೆಯವರೊಂದಿಗೆ ಮದುವೆ ನಿಶ್ಚಯ ಮಾಡಲು ಬಯಸಿದ್ದರು. ಇದೇ ವಾದದಿಂದ ಕೊಲೆ ನಡೆದಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು' ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ