ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಎ.5) : ಅವರೆಲ್ಲರೂ 23 ವರ್ಷದ ಯುವಕರು, ಮನೆಮಂದಿಗೆಲ್ಲ ಮುದ್ದಿನ ಮಕ್ಕಳು, ನಾಡಿಗೆ ಸತ್ಪ್ರಜೆಯಾಗಿ ಬಾಳಬೇಕಾದ ಯುವಕರು ಮಾಡಬಾರದ ಕೆಲಸವನ್ನು ಮಾಡಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ದಂಧೆಯೂ, ಚಕ್ರಬಡ್ಡಿ ದಂಧೆಯೋ, ಬದುಕಿ ಬಾಳಬೇಕಾದ ಯುವಕ ನಡುರಸ್ತೆಯಲ್ಲಿ ಹೆಣವಾಗಿ ಬೀಳುವಂತೆ ಮಾಡಿದೆ.
undefined
ಚಿಕ್ಕಮಗಳೂರು (Chikkamagaluru) ನಗರದ ಕೋಟೆ ಬಡಾವಣೆ ಜನರು ಸೋಮವಾರ ರಾತ್ರಿ 8.30ಕ್ಕೆ ಆಗಷ್ಟೇ ಕೆಲಸ ಮುಗಿಸಿ ಮನೆಗೆ ಬಂದಿದ್ದರು, ಅದೊಂದು ನಿರ್ಜನವಾದಂತಹ ಪ್ರದೇಶ. ಆ ಪ್ರದೇಶದಲ್ಲಿ ವಾಹನಗಳ ಸದ್ದು ಜೋರಾಗಿ ಕೇಳಿ ಬಂತು. ಏನಾಗಿದೆ ಅಂತ ಬಡಾವಣೆಯ ಜನರು ಮನೆಯಿಂದ ಹೊರಬಂದು ನೋಡಿದರೆ ನಡುರಸ್ತೆಯಲ್ಲಿ ಯುವಕ ರಕ್ತದ ನಡುವಲ್ಲಿಒದ್ದಾಡುತ್ತಿದ್ದ, ತಕ್ಷಣ ಅವನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಕೂಡ ಆ ಯುವಕ ಉಳಿಯಲಿಲ್ಲ, ಅಂದಹಾಗೆ ಈ ಘಟನೆ ಕಾರಣವಾಗಿರುವುದು ಯುವಕರ ನಡುವಿನ ಹಣಕಾಸಿನ ವಿಚಾರ.
ಚಿಕ್ಕಮಗಳೂರು ನಗರದ ಗವನಹಳ್ಳಿಯ ವನರಾಜ್ ಮತ್ತು ನಾಗರತ್ನ ದಂಪತಿಗಳ ಒಬ್ಬನೇ ಮಗ ದೃವರಾಜ್ ಅರಸ್ . ಪಿಯುಸಿ ತನಕ ಓದಿ, ಮನೆವರಿಗೆ ಸಹಾಯವಾಗಲಿ ಎಂದು ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸಕ್ಕೆಂದು ಹೋಗುತ್ತಿದ್ದ. ತಾನಾಯಿತು ತನ್ನ ಪಾಡಾಯಿತು ಎಂದು ಗವನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ ಯುವಕನ ಬಾಳಿನಲ್ಲಿ ಆ ಯುವಕರು ಬಿರುಗಾಳಿಯಂತೆ ಬಂದು ಅವನ ಬದುಕನ್ನೇ ಛದ್ರಗೊಳಿಸಿದ್ದಾರೆ.
VIMS Bellary Recruitment 2022: ಉಪನ್ಯಾಸಕ ಹುದ್ದೆಗಳಿಗೆ ವಿಮ್ಸ್ ನೇಮಕಾತಿ
ಧೃವರಾಜ್ ನಿಗೆ ಚಿಕ್ಕಮಗಳೂರಿನ ವಸ್ತಾರೆ ಗ್ರಾಮದ ಪ್ರಮೋದ್ ಸ್ನೇಹಿತ, ಆ ಸ್ನೇಹವೇ ಇಂದು ಧೃವರಾಜ್ ಹೆಣವಾಗಿ ಬೀಳುವಂತೆ ಮಾಡಿದೆ. ಈಗಷ್ಟೇ ಆರಂಭವಾಗಿರುವ ಐಪಿಎಲ್ ಅಲ್ಲಿ ಹಣ ಹಾಕುವುದಕ್ಕೂ ಅಥವಾ ಮನೆಯ ಸಂಸಾರದ ಕಾರಣಕ್ಕೂ ಈ ಯುವಕ ಬಡ್ಡಿಯ ಸಾಲದ ಸುಳಿಗೆ ಸಿಲುಕಿದ್ದ ಅದೇ ಇವನ ಕೊಲೆಗೆ ಮೂಲವಾಯಿತು ಏನು ಅನ್ನುವ ಅನುಮಾನ ಕಾಡುತ್ತಿದೆ.
ಹಣ ವಿಚಾರಕ್ಕಾಗಿ ಗಲಾಟೆ : ಕೊಲೆಯಲ್ಲಿ ಅಂತ್ಯ: ಧೃವರಾಜ್ ಗೆ ಸರಿಸುಮಾರು 2ಲಕ್ಷಕ್ಕೂ ಅಧಿಕ ಹಣವನ್ನು ಪ್ರಮೋದ್ ನೀಡಿದ್ದಾನೆ. ಅದೇ ಹಣದ ವಿಚಾರವಾಗಿ ಒಂದು ಗುಂಪು ಕಟ್ಟಿಕೊಂಡು ಪ್ರಮೋದ್ ಧೃವರಾಜ್ಅರಸ್ ಬಳಿ ಹೋಗಿದ್ದಾನೆ. ಆಗ ಇಬ್ಬರ ನಡುವೆ ನಗರದ ಕೋಟೆ ಟ್ಯಾಂಕ್ ಬಳಿ ಗಲಾಟೆ ನಡೆದಿದೆ. ಹಲವು ಭಾರೀ ಹಣಕಾಸಿನ ವಿಚಾರಕ್ಕಾಗಿ ಧೃವರಾಜ್ ಮತ್ತು ಪ್ರಮೋದ್ ನಡುವೆ ಗಲಾಟೆ ನಡೆದಿದೆ.
ಕೊಟ್ಟಿರುವ ಹಣ ವಸೂಲಿ ಮಾಡಲೇಬೇಕೆಂಬ ಕಾರಣಕ್ಕಾಗಿ ಎಪ್ರಿಲ್ 3ರ ಸಂಜೆ ಧೃವರಾಜ್ ಅರಸ್ ನ್ನು ಕೋಟೆ ಬಡಾವಣೆಗೆ ಕರೆಸಿಕೊಂಡಿದ್ದಾರೆ. ಧೃವರಾಜ್ ಅರಸ್ ಜೊತೆಗೆ ಇಬ್ಬರ ಯುವಕರು ಕರೆದುಕೊಂಡು ಹೋಗಿದ್ದಾನೆ. ಆಗ ಇಬ್ಬರ ನಡುವೆ ಗಲಾಟೆ, ಮಾತಿನ ಚಕಮಕಿಯಾಗಿ ಧೃವರಾಜ್ ಅರಸ್ ಗೆ ಡ್ರ್ಯಾಗರ್ ನಿಂದ ಇರಿದು ಪ್ರಮೋದ್ ಸಹಚರರು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಕೊಲೆಮಾಡುವ ದ್ರಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Ballari ಭವಿಷ್ಯ ಹೇಳೋ ನೆಪದಲ್ಲಿ ವಾಮಾಚಾರ ಮಾಡಿ ಕಣ್ಣೆದುರೇ ಕತ್ತಿನ ಸರ ಎಗರಿಸಿದ ಚಾಲಾಕಿ!
ಕೊಲೆ ಮಾಡಿದ ಆರೋಪಿ ಪೊಲೀಸರ ವಶಕ್ಕೆ: ಹಣದ ವಿಚಾರವಾಗಿ ಗಲಾಟೆ ನಡೆಯುವ ವೇಳೆಯಲ್ಲಿ ಯುವಕರು ಗಾಂಜಾ ಸೇವನೆ ಮಾಡಿದರು ಎನ್ನುವ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ. ನಿರ್ಜನವಾದ ಅಂತಹ ಪ್ರದೇಶದಲ್ಲಿ ಹಲವು ಯುವಕರು ಸಂಜೆ ವೇಳೆಯಲ್ಲಿ ಗಾಂಜಾ ಸೇವೆನಯಂತಹ ಚಟುವಟಿಕೆಗಳನ್ನು ನಡೆಸುತ್ತಾರೆ ಎನ್ನುವ ಆರೋಪ ಸ್ಥಳೀಯ ಬಡಾವಣೆಯ ನಿವಾಸಿಗಳಿಂದ ಕೇಳಿಬಂದಿದೆ. ನಿನ್ನೆಯೂ ಕೂಡ ಗಾಂಜಾ ಸೇವನೆ ಮಾಡಿ ಧೃವರಾಜ್ ಅರಸ್ ನ್ನು ಹತ್ಯೆ ಮಾಡಲಾಗಿದೆ.
ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಪ್ರಮೋದ್ ನ್ನು ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳಕ್ಕೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಘಟನೆಗೆ ಕ್ರಿಕೆಟ್ ಬೆಟ್ಟಿಂಗ್ ಕಾರಣವೂ ಮೀಟರ್ ಬಡ್ಡಿ ದಂಧೆಯಿಂದ ಕೊಲೆ ಆಗಿರುವ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಕ್ರಿಕೆಟ್ ಬೆಟ್ಟಿಂಗ್ ದಂಧೆಗೂ ಈ ಕೊಲೆಗೂ ಯಾವುದೇ ಸಂಬಂಧವಿಲ್ಲ, ಬಡ್ಡಿ ಹಣದ ವಿಚಾರಕ್ಕೆ ಗಲಾಟೆ ನಡೆದಿರುವ ಶಂಕೆ ಇದ್ದು ಈ ಬಗ್ಗೆ ನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದ ಸಂಬಂಧ ಈಗಾಗಲೇ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದು ಇನ್ನುಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಎಸ್ ಪಿ ಅಕ್ಷಯ್ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಶಾಂತವಾಗಿದ್ದ ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ನಡೆದಿರುವ ಭೀಕರ ಹತ್ಯೆ ತಲ್ಲಣ ಮೂಡಿಸಿದೆ.