ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ಜಾಮೀನು ಮಂಜೂರಾದ ಬೆನ್ನಲ್ಲೇ ಅರಣ್ಯ ಇಲಾಖೆ ಮಾಡಿರುವ ಎಡವಟ್ಟು ಕೂಡ ಬೆಳಕಿಗೆ ಬಂದಿದೆ. ಈ ಬಗ್ಗೆ ಸಂತೋಷ್ ಪರ ವಕೀಲ ನಟರಾಜ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಬೆಂಗಳೂರು (ಅ.27): ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿದ ಪ್ರಕರಣದಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಅದಕ್ಕೂ ಮುನ್ನವೇ ಜಾಮೀನಿನ ಮೇಲೆ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹೊರಬಂದಿದ್ದಾರೆ. 4 ಸಾವಿರ ರೂಪಾಯಿ ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ನೀಡುವಂತೆ ಷರತ್ತು ವಿಧಿಸಿ ನ್ಯಾಯಾಲಯ ಜಾಮೀನು ನೀಡಿದ ಬೆನ್ನಲ್ಲೇ ಅರಣ್ಯ ಇಲಾಖೆ ಮಾಡಿರುವ ಎಡವಟ್ಟು ಕೂಡ ಬೆಳಕಿಗೆ ಬಂದಿದೆ.
ಇದೀಗ ಅರಣ್ಯ ಅಧಿಕಾರಿಗಳು ಮಾಡಿರುವ ಎಡವಟ್ಟು ಬಯಲಾಗಿದೆ. ವರ್ತೂರು ಸಂತೋಷ್ ಪರ ವಕೀಲ ನಟರಾಜ್ ಅವರು ಈ ಬಗ್ಗೆ ಮಾತನಾಡಿದ್ದಾರೆ, ನಿಜವಾಗಲೂ ಸಂತೋಷ್‌ಗೆ ಅದು ಹುಲಿ ಉಗುರು ಎಂಬುದು ಗಮನಕ್ಕೆ ಬಂದಿಲ್ಲ. ಅವರೊಬ್ಬ ಉತ್ತಮ ಮನೆತನದಿಂದ ಬಂದ ಕೃಷಿಕನಾಗಿದ್ದಾರೆ. ಈ ಬಗ್ಗೆ ಯಾವುದೇ ನೊಟೀಸ್ ನೀಡದೆ ಅವರನ್ನು ಬಂಧನ ಮಾಡಿ ಜೈಲಿಗೆ ಹೋಗುವಂತೆ ಮಾಡಿದ್ದಾರೆ. ಇದರಲ್ಲಿ ಪಿತೂರಿ ಇದೆ. ಅರಣ್ಯ ಇಲಾಖೆ ಅವರ ನಡೆ ಕಾನೂನಿಗೆ ವಿರುದ್ಧವಾಗಿರುವಂತದ್ದು ಎಂದಿದ್ದಾರೆ.
ಅರಣ್ಯ ಇಲಾಖೆ ವಿರುದ್ಧ ಲೋಕಾಯುಕ್ತಕ್ಕೆ ದೂರು, ನವಿಲು ಗರಿ ಇದ್ದರೂ ಅಪರಾಧ, ನಿದ್ದೆಯಲ್ಲಿದ್ದ ಅಧಿಕಾರಿಗಳು
ವರ್ತೂರು ಸಂತೋಷ್ ಬಂಧನದ ಹಿಂದೆ ಖಂಡಿತಾ ಪಿತೂರಿ ಇದೆ. ಬಡವರಿಗೊಂದು ಕಾನೂನು ಶ್ರೀಮಂತರಿಗೆ ಒಂದು ಕಾನೂನು ಎಂಬಂತಿದೆ. ವನ್ಯಜೀವಿ ಕಾಯ್ದೆಯಲ್ಲಿ ಎಲ್ರೂ ಒಂದೇ. ಈ ಬೇದ ಭಾವಕ್ಕೆ ಕಾರಣ ಏನೆಂಬುದು ಗೊತ್ತಿಲ್ಲ. ಈ ಬಗ್ಗೆ ಸಂತೋಷ್ ಬಂದ ಬಳಿಕ ಮುಂದೆ ಏನು ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಯಾಕೆಂದರೆ ನಿನ್ನೆ ಅರಣ್ಯ ಸಚಿವರು ಮಾತನಾಡಿದ್ದರು, ಎಲ್ಲರಿಗೂ 41A ನೋಟೀಸ್ ನೀಡಿದ್ದೇವೆ ಸಂತೋಷ್ ನಮಗೆ ಸ್ಪಂದಿಸಿಲ್ಲ ಎಂದು ಹೇಳಿರುವುದನ್ನು ನಾನು ಗಮನಿಸಿದ್ದೇನೆ. ಅದು ಶುದ್ಧ ಸುಳ್ಳು.
ವಿಷಯ ತಿಳಿದ ತಕ್ಷಣ ಖುದ್ದಾಗಿ ನಾನೇ ಕಗ್ಗಲಿಪುರ ವಲಯ ಅರಣ್ಯಾಧಿಕಾರಿಗಳ ಬಳಿ ಹೋಗಿ ಮಾತನಾಡಿದೆ. ಮೆಟೀರಿಯಲ್ ತೆಗೆದುಕೊಳ್ಳಿ ಆದರೆ ನೊಟೀಸ್ ಕೊಡಿ ಎಂದು ಹೇಳಿದೆ. ಆ ತರಹದ ಯಾವುದೇ ದಾಖಲೆಯನ್ನು ಅರಣ್ಯ ಇಲಾಖೆ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಇದರ ಹಿಂದೆ ಏನು ಹುನ್ನಾರವಿದೆ ಎಂಬುದು ಗೊತ್ತಿಲ್ಲ. ಸರಿಯಾದ ರೀತಿಯಲ್ಲಿ ದೂರು ಕೂಡ ಅರಣ್ಯ ಇಲಾಖೆ ದಾಖಲಿಸಿಕೊಂಡಿಲ್ಲ. ವನ್ಯಜೀವಿ ಕಾಯ್ದೆ ಪ್ರಕಾರ ಇಲಾಖೆ ಮೊದಲು ದೂರು ದಾಖಲಿಸಿಕೊಂಡು ಅದರ ಆಧಾರದಲ್ಲಿ ನ್ಯಾಯಾಲಯದ ಆದೇಶ ತೆಗೆದುಕೊಂಡು ಹೋಗಿ ಬಳಿಕಷ್ಟೇ ತನಿಖೆ ನಡೆಸಬೇಕು. ಇದು ಯಾವುದನ್ನೂ ಇಲಾಖೆ ಮಾಡಿಲ್ಲ.
ಹುಲಿ ಉಗುರು ಲಾಕೆಟ್ ಪ್ರಕರಣ, ವರ್ತೂರು ಸಂತೋಷ್ ಗೆ ಜಾಮೀನು ಮಂಜೂರು
ವರ್ತೂರು ಸಂತೋಷ್ ಅವರಿಗೆ ಜಾಮೀನು ಸಿಗುವ ಬಗ್ಗೆ ನನಗೆ ವಿಶ್ವಾಸವಿತ್ತು. ಅರಣ್ಯ ಅಧಿಕಾರಿಗಳು ಹಾಕಿರುವ ರಿಪೂರ್ಟ್ ಸರಿಯಾಗಿ ಇರಲಿಲ್ಲ. ನ್ಯಾಯಾಲಯ ವಿಶ್ವಾಸಕ್ಕೆ ತೆಗೆದುಕೊಂಡು ಜಾಮೀನು ಮಂಜೂರು ಮಾಡಿದೆ.
ನನ್ನ ಮತ್ತು ಸಂತೋಷ್ ಕುಟುಂಬದ ಬಾಂಧವ್ಯ ಕಳೆದ 20 ವರ್ಷಗಳಿಂದ ಇದೆ. ಈ ಘಟನೆ ಬಳಿಕ ಅವರ ಕುಟುಂಬ ತುಂಬಾ ನೊಂದಿದೆ. ಒಳ್ಳೆ ಮನೆತನ ಇರುವ ಕುಟುಂಬ. ಅವರ ಕಣ್ಣೀರಿಗೆ ಎಲ್ಲೂ ಪರಿಹಾರ ಸಿಗುವುದಿಲ್ಲ. ಒಂದು ವೇಳೆ ಅರಣ್ಯ ಇಲಾಖೆ ವಶಪಡಿಸಿಕೊಂಡ ಲಾಕೆಟ್ ಹುಲಿದು ಅಲ್ಲ ಎಂದಾದರೆ ಅದಕ್ಕೆ ಪರಿಹಾರ ಯಾರು ಕೊಡುತ್ತಾರೆ. ಅದಕ್ಕೆ ಅರಣ್ಯ ಇಲಾಖೆಯವರೇ ಹೊಣೆಯಾಗುತ್ತಾರೆ.
ನಿಜವಾಗಲು ಅದು ಹುಲಿ ಉಗುರು ಎಂದು ಅರಣ್ಯ ಇಲಾಖೆಯವರು ವಶಪಡಿಸಿಕೊಂಡಿದ್ದರೆ ಅವರು ಮಾನ್ಯ ನ್ಯಾಯಾಲಯದ ಮುಂದೆ. ಅರ್ಜಿ ಸಲ್ಲಿಸಿ ಬಳಿಕ ವಶಕ್ಕೆ ಪಡೆಯಬೇಕಾಗಿತ್ತು. ಅವರು ಭಾನುವಾರ ಸಂಜೆ ಬಂಧಿಸಿ ಸೋಮವಾರ ಕೋರ್ಟ್ ಗೆ ಹಾಜರುಪಡಿಸುವ ಉದ್ದೇಶ ಏನಿದೆ? ಅರಣ್ಯ ಇಲಾಖೆ ಹಾಕಿರುವ ಸೆಕ್ಷನ್ ನಲ್ಲಿ ಸಂತೋಷ್ ಕಾಡಿಗೆ ಹೋಗಿ ಹುಲಿ ಬೇಟೆಯಾಡಿ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದಾರೆ. ಒಟ್ಟು 9 ಸೆಕ್ಷನ್ ಹಾಕಿದ್ದಾರೆ. ಅದು ಯಾವುದು ನಮಗೆ ಸಂಬಂಧಿಸುವುದಿಲ್ಲ ಎಂದು ಖಡಕ್ ಆಗಿ ವಕೀಲರು ಪ್ರತಿಕ್ರಿಯೆ ನೀಡಿದ್ದಾರೆ.