
ಮೈಸೂರು(ಸೆ.02): ಗೃಹಿಣಿಗೆ ಮೆಸೇಜ್ ಮಾಡಿದಕ್ಕೆ ಯುವಕನ ಕೊಲೆ ಪ್ರಕರಣಕ್ಕೆ ರೋಚಕ ತಿರುವು ಪಡೆದುಕೊಂಡಿದೆ. ಹೌದು, ಮತ್ತೊಬ್ಬನ ಮೇಲೆ ದ್ವೇಷ ತೀರಿಸಿಕೊಳ್ಳಲು ಕಿರಾತಕ ಸ್ನೇಹಿತನನ್ನೇ ಕೊಲೆ ಮಾಡಿ ಮತ್ತೊಬ್ಬರ ಮೇಲೆ ಎತ್ತಿ ಹಾಕಲು ಪ್ಲಾನ್ ಮಾಡಿದ ಅಂತ ಬೆಳಕಿಗೆ ಬಂದಿದೆ.
ಪ್ರಕರಣದ ಹಿನ್ನಲೆ:
ಹೆಂಡತಿಗೆ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಮೈಸೂರು ಜಿಲ್ಲೆಯ ಹೆಚ್‌ಡಿ.ಕೋಟೆ ತಾಲೂಕಿನ ನೇರಳೆಹುಂಡಿ ಗ್ರಾಮದಲ್ಲಿ ಭಾನುಪ್ರಕಾಶ್ ಎಂಬ ಯುವಕನನ್ನ ಕೊಲೆ ಮಾಡಲಾಗಿತ್ತು. ಯುವಕನ ಕೊಲೆ ಸಂಬಂಧ ಗಲಾಟೆ ಮಾಡಿದ್ದ 6 ಮಂದಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಭಾನುಪ್ರಕಾಶ್ ಕೊಲೆ ಮಾಡಿದ್ದು ಆತನ ಸ್ನೇಹಿತ ದಿನೇಶ್ ಎಂಬುದು ಇದೀಗ ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ.
ಮಗು ಪಡೆಯಲು 11 ವರ್ಷ ತಪಸ್ಸು ಮಾಡಿದ ತಾಯಿ : ಆಸ್ತಿಗಾಗಿ ಐದೇ ತಿಂಗಳಿಗೆ ಬಲಿ ಪಡೆದಳು ಮಲತಾಯಿ
ದಿನೇಶ್ ಆತನ ಗೆಳೆಯ ಭೀಮನ ಜೊತೆ ಸೇರಿ ಭಾನುಪ್ರಕಾಶ್‌ನ ಕತ್ತು ಸೀಳಿ ಕೊಲೆ ಮಾಡಿದ್ದರು. ಗ್ರಾಮದ ಹೊರ ವಲಯದಲ್ಲಿ ಶವ ಬಿಟ್ಟು ಡ್ರ್ಯಾಗರ್ ಕಬಿನಿ ನದಿಗೆ ಬಿಸಾಕಿದ್ದರು. ಈ ಕೊಲೆಯನ್ನು ಅದೇ ಗ್ರಾಮದ ಎನ್.ಪ್ರಕಾಶ್ ಎಂಬುರವ ಮೇಲೆ ಬರುವಂತೆ ಮಾಡಿದ್ದ. ಕೊನೆಗೆ ಮೊಬೈಲ್ ಟವರ್ ಲೊಕೇಶನ್ ಮೂಲಕ ಕೊಲೆ ಆರೋಪಿಯನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕೊಲೆಗೆ ಆರೋಪಿ ದಿನೇಶ್ ಹಾಗೂ ಎನ್.ಪ್ರಕಾಶ್ ನಡುವೆ ಹಳೆ ದ್ವೇಷದಿಂದ ಆತ್ಮೀಯ ಸ್ನೇಹಿತನನ್ನ ದಿನೇಶ್ ಕೊಂದಿದ್ದಾನೆ. ಈ ಸಂಬಂಧ ಅಂತರಸಂತೆ ಪೊಲೀಸರು ಆರೋಪಿಗಳ ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ