
ಬೆಂಗಳೂರು(ಸೆ.02): ಬಾರ್ ತೆರೆದು ಮದ್ಯ ಕೊಡಲಿಲ್ಲ ಎಂಬ ಕಾರಣಕ್ಕೆ ಮೂವರು ದುಷ್ಕರ್ಮಿಗಳು ಬಾರ್ ಸಪ್ಲೈಯರ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ಮೂಲದ ಸ್ವಾಗತ್‌ಗೌಡ(28) ಚಾಕು ಇರಿತಕ್ಕೆ ಒಳಗಾದ ಸಪ್ಲೈಯರ್. ಯಡಿಯೂರು ಬಳಿಯ ಎಂಬಿಆರ್ ಬಾರ್ ಬಳಿ ಆ.28ರಂದು ಮುಂಜಾನೆ 1.43ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಸಂಬಂಧ ಸ್ವಾಗತ್ ಗೌಡ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಬನಶಂಕರಿ ಠಾಣೆ ಪೊಲೀಸರು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?
ಚಾಕು ಇರಿತಕ್ಕೆ ಒಳಗಾಗಿರುವ ಸ್ವಾಗತ್‌ಗೌಡ ಎಂಬಿಆರ್ ಬಾರ್‌ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದರು.ಆ.28ರಂದು ಮುಂಜಾನೆ 1.43ರ ಸುಮಾರಿಗೆ ಬಾರ್ ಕ್ಲೋಸ್ ಮಾಡಿಕೊಂಡು ಸ್ವಾಗತ್ ಗೌಡ ಹಾಗೂ ಇತರೆ ಸಿಬ್ಬಂದಿ ರೂಮ್‌ಗೆ ತೆರಳುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿರುವ ಮೂವರು ದುಷ್ಕರ್ಮಿಗಳು, ಬಾರ್ ತೆರೆದು ಮದ್ಯ ಕೊಡುವಂತೆ ಕೇಳಿದ್ದಾರೆ. ಸಮಯ ಮೀರಿರುವುದರಿಂದ ಮದ್ಯ ಕೊಡಲು ಸಾಧ್ಯವಿಲ್ಲ ಎಂದು ಸ್ವಾಗತ್ ಗೌಡ ಹೇಳಿದ್ದಾರೆ.
ಬೆಂಗಳೂರು: ವಾಟ್ಸಾಪ್‌ಲ್ಲೇ ಡ್ರಗ್ಸ್ ದಂಧೆ, ನೈಜೀರಿಯಾ ಮೂಲದ ಇಬ್ಬರ ಬಂಧನ
ಇದರಿಂದ ಕೆರಳಿದ ದುಷ್ಕರ್ಮಿಗಳು ಏಕಾಏಕಿ ಸ್ವಾಗತ್‌ಗೌಡನ ಮೇಲೆ ಹಲ್ಲೆ ಮಾಡಿದ್ದಾರೆ. ಈ ನಡುವೆ ದುಷ್ಕರ್ಮಿಯೊಬ್ಬ ಚಾಕು ತೆಗೆದು ಸ್ವಾಗತ್‌ಗೌಡನ ಹೊಟ್ಟೆಭಾಗಕ್ಕೆ ಇರಿದಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವವಾಗಿ ಸ್ವಾಗತ್ ಗೌಡ ಕುಸಿದು ಬಿದ್ದಿದ್ದಾನೆ. ಆಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಬಾರ್‌ನ ಇತರೆ ಸಿಬ್ಬಂದಿ ಸ್ವಾಗತ್ ಗೌಡನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಗಾಯಾಳು ಸ್ವಾಗತ್ ಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೂವರು ದುಷ್ಕರ್ಮಿಗಳ ಪೈಕಿ ಓರ್ವನ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ