* ಯುವಕನ ಕೈಗೆ ಮಗು ಕೊಟ್ಟು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
* ಪ್ರೀತಿಗೆ ಅಡ್ಡಿಯಾದ ಮಗುವನ್ನು ಅನಾಥ ಮಗುವೆಂದು ಬಿಂಬಿಸಿದ್ದ ಕಳ್ಳ ಪ್ರೇಮಿಗಳು
* ಪ್ರೇಮಿಗಳನ್ನ ವಶಕ್ಕೆ ಪಡೆದ ಪೊಲೀಸರು
ಮೈಸೂರು/ರಾಯಚೂರು, (ಮೇ.23): 15 ದಿನಗಳ ಹಿಂದೆ ರಾಯಚೂರು ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯೊಬ್ಬಳು ಯುವಕನ ಕೈಗೆ ಮಗು ಕೊಟ್ಟು ಪರಾರಿಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಮದುವೆ ಆಗಿ ಒಂದು ಮಗು ಇದ್ದ ಮಹಿಳೆ, ಬೇರೊಬ್ಬನ ಯುವಕನ ಪ್ರೇಮದ ಮೋಹಕ್ಕೆ ಬಿದ್ದು ಹೆತ್ತ ಮಗುವನ್ನೇ ಅನಾಥ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾಳೆ.
undefined
ಹೌದು.. ಇತ್ತೀಚೆಗೆ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ಯುವಕನೊಬ್ಬ ಮಗು ಎತ್ತಿಕೊಂಡು ಬಂದಿದ್ದ. ತಾನು ರಾಯಚೂರು ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಅಪರಿಚಿತ ಮಹಿಳೆ ತನ್ನ ಮಗುವನ್ನು ತನ್ನ ಕೈಯಲ್ಲಿ ಇಟ್ಟು 10 ನಿಮಿಷದಲ್ಲಿ ಬರುತ್ತೇನೆ ಎಂದು ಹೇಳಿ ಪರಾರಿಯಾದಳು ಎಂದು ಹೇಳಿ ಮಗುವನ್ನು ನೀವೇ ರಕ್ಷಿಸಿ ಎಂದು ಪೊಲೀಸರಿಗೆ ಒಪ್ಪಿಸಿ ಹೋಗಿದ್ದ. ಈ ಪ್ರಕರಣದ ಅಸಲಿಯತ್ತನ್ನು ಮೈಸೂರು ಪೊಲೀಸರು ಈಗ ಬೇಧಿಸಿದ್ದಾರೆ. ಇದು ವಿವಾಹಿತ ಮಹಿಳೆ ಹಾಗೂ ಆಕೆಯ ಜೊತೆ ಸಂಬಂಧ ಹೊಂದಿದ್ದ ಯುವಕ ಎಣೆದ ನಾಟಕದ ಎಂಬುದು ಬಟಾಬಯಲಾಗಿದೆ.
ರಾಯಚೂರು ಜಿಲ್ಲೆಗೆ ಕಾಡುತ್ತಿದೆ ಅಪೌಷ್ಟಿಕತೆ, ಅವಧಿಗೂ ಮುನ್ನವೇ ಶೇ.3ರಷ್ಟು ಗರ್ಭಿಣಿಯರ ಹೆರಿಗೆ
ಅಪರಿಚಿತ ಮಹಿಳೆ ರಾಯಚೂರು ಬಸ್ ಸ್ಟ್ಯಾಂಡ್ ನಲ್ಲಿ ಮಗುವನ್ನ ಕೊಟ್ಟು ನಾಪತ್ತೆಯಾದ್ದು, ದಾರಿ ಕಾಣದೆ ಮೈಸೂರಿಗೆ ತಂದಿರುವುದಾಗಿ ರಘು ಪೊಲೀಸರ ಮುಂದೆ ಕಥೆ ಕಟ್ಟಿದ್ದ. ಇದರಿಂದ ಅನುಮಾನಗೊಂಡ ಲಷ್ಕರ್ ಪೊಲೀಸರು ಮಗುವಿನ ತಂದೆಯನ್ನ ಪತ್ತೆ ಮಾಡಿ ವಿಚಾರಿಸಿದಾಗ ಇವರಿಬ್ಬರ ಸಂಬಂಧ ಹಾಗೂ ಡ್ರಾಮಾ ಗೊತ್ತಾಗಿದೆ. ಇಬ್ಬರನ್ನ ಬಂಧಿಸಿರುವ ಲಷ್ಕರ್ ಪೊಲೀಸರು, ಕಳ್ಳ ಪ್ರೇಮಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಹೀಗೆ ಅಕ್ರಮ ಸಂಬಂಧಕ್ಕೆ ರಾಯಚೂರಿನ ಮಹಿಳೆ ಹಾಗೂ ಹೆಚ್.ಡಿ.ಕೋಟೆ ಮೂಲದ ರಘು ಆಡಿದ ನಾಟಕವನ್ನು ಪೊಲೀಸರು ಬಯಲು ಮಾಡಿದ್ದಾರೆ
ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆಯ ಯುವಕ ರಘು ಗಂಡು ಮಗು ಸಮೇತ ಠಾಣೆಗೆ ಬಂದು ಕಥೆ ಎಣೆದಿದ್ದ. ಅಸಲಿಯತ್ತು ಏನೆಂದರೆ ರಘು, ಇನ್ಸ್ಟಾಗ್ರಾಮ್ ನಲ್ಲಿ ರಾಯಚೂರು ಮೂಲದ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ. ಅದು ಪ್ರೀತಿ, ಮದುವೆ ಅಂತ ಅಕ್ರಮ ಸಂಬಂಧಕ್ಕೆ ತಿರುಗಿತ್ತು.ಕೊನೆಗೆ ಅವಳನ್ನೆ ಮದುವೆ ಆಗಲು ನಿರ್ಧರಿಸಿದ್ದ. ಈ ಸಂಬಂಧಕ್ಕೆ ಆ ಮಹಿಳೆಯ ಮಗು ಅಡ್ಡಿಯಾಗಿತ್ತು. ಹೇಗಾದರೂ ಮಾಡಿ ಮಗುವನ್ನು ಹೊರಗೆ ಹಾಕಬೇಕೆಂದು ಇಬ್ಬರು ಸೇರಿ ಈ ಪ್ಲಾನ್ ಮಾಡಿದ್ದರು.
ಪ್ರೀತಿಗೆ ಅಡ್ಡಿಯಾದ ಮಗುವನ್ನ ಅನಾಥ ಎಂದು ಬಿಂಬಿಸಲು ಯತ್ನಿಸಿದ ಕಳ್ಳ ಪ್ರೇಮಿಗಳು ಲಷ್ಕರ್ ಠಾಣಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪ್ರೇಮಿಗಳನ್ನ ವಶಕ್ಕೆ ಪಡೆದ ಪೊಲೀಸರು ಕ್ರಮ ಕೈಗೊಂಡಿದ್ದು ಮಗುವನ್ನು ಬಾಪುಜಿ ಚಿಲ್ಡ್ರನ್ ಕೇರ್ ಸೆಂಟರ್ ಗೆ ಸೇರಿಸಿದ್ದಾರೆ.