ಮೇಘನಾ ತಂದೆ ಎಂಟ್ರಿ, ಶಂಕರಣ್ಣ ಆತ್ಮಹತ್ಯಗೆ ಬಿಗ್ ಟ್ವಿಸ್ಟ್, ಸಾವಿಗೆ ಇವರಿಬ್ಬರು ಕಾರಣನಾ?

By Suvarna News  |  First Published Mar 29, 2022, 3:13 PM IST

* ತುಮಕೂರಿನ ಶಂಕರಣ್ಣ ಆತ್ಮಹತ್ಯಗೆ ಬಿಗ್ ಟ್ವಿಸ್ಟ್
* 25 ವರ್ಷದ ಯುವತಿಯನ್ನು ಮದುವೆಯಾಗಿ ಸಂಚಲನ ಮೂಡಿಸಿದ್ದ 45 ವರ್ಷದ ಶಂಕರಣ್ಣ
* ಅತ್ತೆ-ಸೊಸೆ ಜಗಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ್ರಾ ಶಂಕರಣ್ಣ..?


ತುಮಕೂರು, (ಮಾ.29): ತುಮಕೂರಿನಲ್ಲಿ 25 ವರ್ಷದ ಯುವತಿಯನ್ನು ಮದುವೆಯಾಗಿ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ 45 ವರ್ಷದ ಶಂಕರಣ್ಣ ಆತ್ಯಹತ್ಯೆಗೆ ಶರಣಾಗಿದ್ದಾನೆ.ಆದ್ರೆ, ಶಂಕರಣ್ಣನ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಕಳೆದ ವರ್ಷ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯದ ಶಂಕರಣ್ಣ ಮತ್ತು ಮೇಘನಾ ಅವರ ಮದುವೆ ನಡೆದಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ  ಸಖತ್ ವೈರಲ್ ಆಗಿತ್ತು. ಆದ್ರೆ, ಇದೀಗ ಮದ್ವೆಯಾದ ಐದೇ ತಿಂಗಳಿಗೆ 45-25ರ ಲವ್ ಮ್ಯಾರೇಜ್ ದುರಂತ ಅಂತ್ಯ ಕಂಡಿದೆ. 

Tap to resize

Latest Videos

"

ನಾನು 4 ತಿಂಗ್ಳು ಪ್ರೆಗ್ನೆಂಟ್, ಎಲ್ಲಾರು ಸೇರಿಕೊಂಡು ಕಾಟ ನೀಡಿದ್ರು, ಶಂಕ್ರಣ್ಣ ಆತ್ಮಹತ್ಯೆ ಸತ್ಯ ಬಿಟ್ಟಿಟ್ಟ ಪತ್ನಿ

ಹೌದು... ಶಂಕರಣ್ಣ ಇಂದು(ಮಂಗಳವಾರ) ತಮ್ಮ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೆಲವರು ಹೆಂಡ್ತಿ ಕಿರಿಕಿರಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಆರೋಪಿಸುತ್ತಿದ್ದಾರೆ. ಇನ್ನು ತನ್ನ ತಾಯಿಯಿಂದಲೇ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಮೇಘನಾ ಆರೋಪ ಮಾಡಿದ್ದಾಳೆ. ಇನ್ನು ಈ ಬಗ್ಗೆ ಮೇಘನಾ ತಂದೆ ಪ್ರತಿಕ್ರಿಯಿಸಿದ್ದು ಅದು ಈ ಕೆಳಗಿನಂತಿದೆ.

ಮೇಘನಾ ತಂದೆ ಹೇಳಿಕೆ
ಕಳೆದ ವರ್ಷ 9ನೇ ತಿಂಗಳಲ್ಲಿ ಇಬ್ಬರು ಪರಸ್ಪರ ಪ್ರೀತಿಸಿಕೊಂಡು ಮದುವೆಯಾದ್ರು.  ವಿಜಯದಶಮಿ ದಿನ ಮದುವೆಯಾಗಿದ್ದರು.‌ ಈ ಬಗ್ಗೆ ನನಗೇನು ಗೊತ್ತಿಲ್ಲ. ಹುಲಿಯೂರು ದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದೆ.  ನಾಲ್ಕು ದಿನಗಳ‌ ಬಳಿಕ ಠಾಣೆಗೆ ಬಂದು ಇಬ್ಬರು ಒಪ್ಪಿಗೆಯಿಂದ ಮದುವೆಯಾಗಿದ್ದೇವೆ ಎಂದು ಹೇಳಿದರು. ತಾಯಿ ಮಗನಿಗೂ ಹೊಂದಾಣಿಕೆ ಇರಲಿಲ್ಲ. ಒಂದೂವರೆ ತಿಂಗಳ ಹಿಂದೆ ಹೆಂಡತಿ- ತಾಯಿ ನಡುವೆ ಜಗಳವಾಗಿತ್ತು. ಹೆಂಡತಿಯನ್ನು ಬೆಂಗಳೂರಿನಲ್ಲಿ ಇರಿಸಿದ್ದರು. ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಏಷ್ಯನೆಟ್ ಸುವರ್ಣ ನ್ಯೂಸ್ ಗೆ ಮೇಘನಾ ತಂದೆ ಶಂಕರಪ್ಪ ಹೇಳಿದ್ದಾರೆ.

ಮಗಳು ಪ್ರೆಗ್ಮೆಂಟ್. ನನ್ನ ಮಗಳದ್ದು ತಪ್ಪಿಲ್ಲ,  ತಾಯಿಯಿಂದಲೇ ಮಗ ಸಾವನಪ್ಪಿದರು ಅಂತ ದೂರು ನೀಡುತ್ತೇನೆ.  ಶಂಕ್ರಪ್ಪನ ಸಾವಿಗೆ ತಾಯಿಯೇ ಕಾರಣ ಅಂತ ದೂರು ನೀಡುತ್ತೇವೆ ಎಂದು ಮೇಘನಾ ತಂದೆ ಶಂಕರಪ್ಪ ಸ್ಪಷ್ಟಪಡಿಸಿದ್ದಾರೆ. 

ಅತ್ತೆ-ಸೊಸೆ ಜಗಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ್ರಾ?
ಶಂಕರಣ್ಣ, ಮೇಘನಾ ಮದುವೆಯಾದ ಹೊಸತರಲ್ಲಿ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದರು. ಇಬ್ಬರ ಮಧ್ಯೆ ವಯಸ್ಸಿನ ಅಂತರವಿತ್ತು. ಆದರೂ ಇಬ್ಬರು ಹೊಂದಿಕೊಂಡು ಜೀವನ ನಡೆಸುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಮನೆಯಲ್ಲಿ ಅತ್ತೆ, ಸೊಸೆ ಮಧ್ಯೆ ಕಲಹ ಉಂಟಾಗಿತ್ತು. ಹೀಗಾಗಿ ಮೇಘನಾ, ಶಂಕರಣ್ಣನನ್ನು ಮೈಸೂರು ಅಥವಾ ಬೆಂಗಳೂರಿಗೆ ಹೋಗಿ ವಾಸಿಸೋಣ ಎಂದು ಪಟ್ಟು ಹಿಡಿದು ಕುಳಿತಿದ್ದಳು. ಇದಕ್ಕೆ ಶಂಕರಣ್ಣ ಮತ್ತು ಅವರ ತಾಯಿ ಒಪ್ಪಿಕೊಂಡಿರಲಿಲ್ಲ.

ಇತ್ತ ಮೇಘನಾ ಮಾತ್ರ ಊರಿನಲ್ಲಿರುವ ಜಮೀನು ಮಾರಿ ಸಿಟಿಗೆ ಹೋಗೊಣ ಎಂದು ಶಂಕರಣ್ಣನ ಮೇಲೆ ಒತ್ತಡ ಹೇರುತ್ತಿದ್ದಳು. ಈ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಲೇ ಇತ್ತು. 2.5 ಎಕರೆ ಜಮೀನು ಮಾರಾಟ ಮಾಡುವುದು ಬೇಡ. ತಾಯಿ ಜೊತೆಗೆ ಹಳ್ಳಿಯಲ್ಲಿ ಇರೋಣ ಎಂದು ಹೇಳುತ್ತಾ ಮೇಘನಾ ಮನವೊಲಿಸಲು ಶಂಕರಣ್ಣ ಪ್ರಯತ್ನಿಸುತ್ತಿದ್ದರು. ಆದರೆ ಮೇಘನಾ ಮಾತ್ರ ಯಾವುದಕ್ಕೂ ಒಪ್ಪಿರಲಿಲ್ಲ. ತನ್ನ ತಾಯಿಗೆ ಬಿಟ್ಟು ಹೋಗಲ್ಲ, ನೀನು ಹೀಗೆ ಗಲಾಟೆ, ಕಾಟ ಕೊಟ್ಟರೆ ನಾನು ಸಾಯುತ್ತೇನೆ ಎಂದು ಹಲವು ಬಾರಿ ಮೇಘನಾ ಬಳಿ ಹೇಳಿಕೊಂಡಿದ್ದನು. ಸಾಯ್ತೀನಿ ಎಂದರೂ ಮೇಘನಾ ಮಾತ್ರ ತಲೆಕೆಡಿಸಿಕೊಂಡಿರಲಿಲ್ಲ. ನಿನ್ನೆ ಮೇಘನಾ ಮತ್ತು ಶಂಕರಣ್ಣ ತಾಯಿ ನಡುವೆ ಜಗಳವಾಗಿದೆ. ಈ ಹಿನ್ನೆಲೆಯಲ್ಲಿ ಶಂಕರಣ್ಣ ಬೇಸತ್ತು ಇಂದು(ಮಂಗಳವಾರ) ತಮ್ಮ ತೋಟಕ್ಕೆ ಹೋಗಿ ನೇಣುಬಿಗುದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.

 ಮಗನ ಸಾವಿಗೆ ಹೆಂಡ್ತಿ ಕಾರಣ ಅಂತಿದ್ರೆ, ಮತ್ತೊಂದೆಡೆ ಶಂಕರಣ್ಣನ ಸಾವಿಗೆ ಅವರ ಅಮ್ಮನೇ ಕಾರಣ ಎಂದು ಪತ್ನಿ ಮೇಘನಾ ಕಣ್ಣೀರಿಡುತ್ತಿದ್ದಾಳೆ.

ಒಟ್ಟಿನಲ್ಲಿ ಅತ್ತೆ-ಸೊಸೆ ನಡುವಿನ ಜಗಳದಿಂದ ಬೇಸತ್ತು ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡ್ರಾ ಎನ್ನುವ ಅನುಮಾಗಳು ಉದ್ಭವಿಸಿವೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಂತರ ಸತ್ಯಾಸತ್ಯತೆ ಬಯಲಿಗೆ ಬರಲಿದೆ.
 

click me!