ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ:  ₹47 ಲಕ್ಷ ಮೌಲ್ಯದ ಗಾಂಜಾ ಜಪ್ತಿ

By Ravi Janekal  |  First Published Oct 12, 2023, 7:27 PM IST

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಧನ್ನೂರಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 47 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿದರು.


ವರದಿ- ಲಿಂಗೇಶ್ ಮರಕಲೆ ಏಷ್ಯಾನೆಟ್ ಸುವರ್ಣ ಬೀದರ್,

ಬೀದರ್ (ಅ.12) :  ಬೀದರ್- ನಾಂದೇಡ್ ರಾಷ್ಟ್ರೀಯ ಹೆದ್ದಾರಿ 50ರ ಹಾಲಹಿಪ್ಪರಗಾ ಕ್ರಾಸ್ ಬಳಿ ಆಂಧ್ರಪ್ರದೇಶದಿಂದ  ಮಹಾರಾಷ್ಟ್ರದ ಸೋಲಾಪುರಕ್ಕೆ ಇಂಡಿಕಾ ವಿಸ್ಟಾ ಕಾರ್ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವೇಳೆ‌ ಖಚಿತ ಮಾಹಿತಿ ಮೇರೆಗೆ ಭಾಲ್ಕಿ ಗ್ರಾಮೀಣ ಠಾಣೆ ಸಿಪಿಐ, ಧನ್ನೂರಾ ಪೊಲೀಸರು ದಾಳಿ ನಡೆಸಿದರು.

Latest Videos

undefined

ಈ ವೇಳೆ ಕಾರಿನಲ್ಲಿ 25.65 ಲಕ್ಷ ರೂ. ಮೌಲ್ಯದ 25.65 ಕೆ.ಜಿ ಗಾಂಜಾ ಸಿಕ್ಕಿದೆ. ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳ ಬಂಧಿಸಿ ವಿಚಾರಣೆ ನಡೆಸಿದಾಗ ಬೀದರ್ ನಗರದ ಹೊರವಲಯದ ಗುನ್ನಳಿ ರಸ್ತೆ ರಿಕ್ಷಾ ಕಾಲೂನಿ ಮನೆಯೊಂದರಲ್ಲಿ ಗಾಂಜಾ ಶೇಖರಣೆ ಮಾಡಿಟ್ಟಿರುವ ಬಗ್ಗೆ ಆರೋಪಿಗಳು ಮಾಹಿತಿ ಬಿಚ್ಚಿಟ್ಟಿರುವ ಮಾಹಿತಿ ಸಿಕ್ಕಿದೆ. ಕೂಡಲೇ ಆರೋಪಿ ಹೇಳಿದ ವಿಳಾಸದ ಮೇಲೂ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಅಲ್ಲಿನ ರೂಮ್ ನಲ್ಲಿ 21.44 ಕೆ.ಜಿ ಗಾಂಜಾ ಜಪ್ತಿ ಮಾಡಿರುವ ಪೊಲೀಸರು.

ಅನ್ಯ ಜಾತಿ ಯುವಕನನ್ನ ಪ್ರೀತಿಸಿದ್ದಕ್ಕೆ ಮಗಳ ಕೊಂದ ತಂದೆ..!

ಮನೆ ಕಾಯುತ್ತಿದ್ದ ಇನ್ನೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದರು. ಪೊಲೀಸರ ಕಾರ್ಯಾಚರಣೆಯಲ್ಲಿ ಒಟ್ಟು 41.09ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ. ಗಾಂಜಾದ ಅಂದಾಜಿ‌ ಮೌಲ್ಯ 47 ಲಕ್ಷ 5 ಸಾವಿರ ಆದರೆ 3 ಲಕ್ಷ ಮೌಲ್ಯದ ವಿಸ್ಟಾ ಕಾರು ಸೇರಿ ಒಟ್ಟು 55 ಲಕ್ಷದ 5 ಸಾವಿರ ಮೌಲ್ಯದ ಸ್ವತ್ತು ಪೊಲೀಸರು ಜಪ್ತಿ ಮಾಡಿಕೊಳ್ಳಲಾಗಿದೆ ಎಸ್ಪಿ ಚನ್ನಬಸವಣ್ಣ ಲಂಗೋಟಿ ತಿಳಿಸಿದರು.

ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದ್ದು, ಇನ್ನು ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಎಸ್ಪಿ ಹೇಳಿದಾರೆ.

ಮಲಗಿದ್ದಲ್ಲೇ ಹೆಣವಾದ ಅಣ್ಣ-ತಂಗಿ: ಸೂಸೈಡ್ ಅಂದ ಗಂಡ.. ಕೊಲೆ ಎಂದ ಮಗ..!

 

ಕಾರ್ಯಾಚರಣೆ ನಡೆಸಿದ ಭಾಲ್ಕಿ ಗ್ರಾಮೀಣ ಸಿಪಿಐ ಗುರುಪಾದ ಬಿರಾದರ, ಧನ್ನೂರಾ ಪಿಎಸ್ಐ ವಿಶ್ವರಾಧ್ಯ ಸೇರಿದಂತೆ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಪ್ರಶಂಸನೀಯ ಪತ್ರ ನೀಡಿ, ಬಹುಮಾನದ ಪತ್ರ ನೀಡಿ ಎಸ್ಪಿ ಚನ್ನಬಸವಣ್ಣ ಲಂಗೋಟಿ ಗೌರವಿಸಿದರು.

click me!