ಪ್ರೀತಿಸಿದ ಅಪ್ರಾಪ್ತ ಮಗಳು ಸಾಂತ್ವಾನ‌ ಕೇಂದ್ರಕ್ಕೆ, ಅನ್ಯಜಾತಿಯವನ ಪ್ರೀತಿಸಿದ ಇನ್ನೊಬ್ಬ ಮಗಳನ್ನು ಕೊಂದ ತಂದೆ!

By Gowthami K  |  First Published Oct 12, 2023, 1:37 PM IST

ಅನ್ಯಜಾತಿಯ ಯುವಕನ ಪ್ರೀತಿ ಮಾಡುತ್ತಿರುವ ವಿಚಾರ ತಿಳಿದು  ಇದಕ್ಕೆ  ಒಪ್ಪದ ತಂದೆ ಮಗಳ  ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ. ಈಕೆಯ ತಂಗಿಯೂ ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದು ಮಹಿಳಾ ಸಾಂತ್ವಾನ ಕೇಂದ್ರದಲ್ಲಿದ್ದಾಳೆ.


ಬೆಂಗಳೂರು (ಅ.12): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಿದಲೂರು ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದೆ. ಅನ್ಯಜಾತಿಯ ಯುವಕನ ಪ್ರೀತಿ ಮಾಡುತ್ತಿರುವ ವಿಚಾರ ತಿಳಿದು  ಇದಕ್ಕೆ  ಒಪ್ಪದ ತಂದೆ ಮಗಳ  ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಆರೋಪಿ ತಂದೆ ಮಂಜುನಾಥ್  (45)  ತನ್ನ 20 ವರ್ಷದ ಮಗಳು ಕವನಾಳನ್ನ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಅನ್ಯಜಾತಿಯವನನ್ನು ಪ್ರೀತಿಸಿದ್ದಕ್ಕೆ ಈ ಕೊಲೆ ನಡೆದಿದೆ. ಪ್ರೀತಿ ಪ್ರೇಮದಲ್ಲಿದ್ದ ಮಗಳು ಮತ್ತು ತಂದೆಯ ಮಧ್ಯೆ ಗಲಾಟೆ ನಡೆದಿದೆ. ಮಗಳು ಮರ್ಯಾದೆ ತೆಗೆಯುತ್ತಾಳೆ ಎಂದು ತಡರಾತ್ರಿ ಮಗಳ ಕತ್ತು ಕೊಯ್ದು ಆರೋಪಿ ತಂದೆ ಕೊಲೆ ಮಾಡಿದ್ದಾನೆ.

ಅನ್ಯ ಜಾತಿ ಯುವಕನನ್ನ ಪ್ರೀತಿಸಿದ್ದಕ್ಕೆ ಮಗಳ ಕೊಂದ ತಂದೆ..!

Tap to resize

Latest Videos

undefined

ಕೊಲೆಯಾದ ಕವನ ಅನ್ಯ ಜಾತಿಯ ಯುವಕನ ಪ್ರೀತಿಯಲ್ಲಿದ್ದಳು. ಈ ಬಗ್ಗೆ ಮಗಳಿಗೆ ತಂದೆ ವಾರ್ನಿಂಗ್ ಮಾಡಿದ್ದರು. ಆದರೂ ಯುವತಿ ತನ್ನ ಪ್ರೀತಿ ಮುಂದುವರೆಸಿದ್ದಳು. ಈ  ಹಿನ್ನೆಲೆ ತಂದೆ ಮಗಳನ್ನೆ ಮರ್ಯಾದೆ ಹತ್ಯೆ ಮಾಡಿದ್ದಾರೆ. ಮೃತ ಕವನ ನಾಯಕ ಜಾತಿಗೆ ಸೇರಿದ್ದಳು. ಈಕೆಯ ಪ್ರಿಯಕರ ದೇವನಹಳ್ಳಿ ತಾಲೂಕಿನ ಯಲಿಯೂರು ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದ. ಹೀಗಾಗಿ ಪದೇ ಪದೇ ಮಗಳಿಗೆ ತಂದೆ ಮಂಜುನಾಥ್ ಬುದ್ಧಿವಾದ ಹೇಳಿದ್ದನು.

ಶಾಸಕ ಮುನಿರತ್ನ ಹನಿಟ್ರ್ಯಾಪ್‌ಗೆ ಬಿಬಿಎಂಪಿ ಆಯುಕ್ತೆ ತುಳಸಿ

ತಂದೆ ಮಂಜುನಾಥ್ ಬಿದಲೂರು ಗ್ರಾಮದಲ್ಲೇ ಚಿಕನ್ ಅಂಗಡಿ ಹಾಕಿಕೊಂಡಿದ್ದ,  ಅನ್ಯ ಜಾತಿಯ ಯುವಕನ ಜೊತೆ ಪ್ರೀತಿ ಪ್ರೇಮ ಬೇಡ ಎಂದು ಬುದ್ಧಿವಾದ ಹೇಳಿದ್ದ. ಆದರೆ ಮಗಳು ಕೇಳಿರಲಿಲ್ಲ. ಇದಲ್ಲದೆ ಮಂಜುನಾಥ್‌ನ ಮೂರನೇ ಮಗಳು ಕೂಡ ಲವ್ ನಲ್ಲಿ ಇದ್ದಳು.  ಈ‌ ವಿಚಾರವು ಕೂಡ ಮಂಗಳವಾರವಷ್ಟೇ ಪೊಲಿಸ್ ಠಾಣೆ ಯಲ್ಲಿ ರಾಜಿ ಸಂಧಾನ ಆಗಿತ್ತು. ಸಂಧಾನದ ಬಳಿಕ ಬಾಲಕಿಗೆ 18 ವರ್ಷ ಆಗದ ಕಾರಣ ಮಹಿಳಾ ಸಾಂತ್ವಾನ‌ ಕೇಂದ್ರಕ್ಕೆ ಅಧಿಕಾರಿಗಳು ಕರೆದೊಯ್ದಿದ್ದರು. ಇದರಿಂದ ನಿನ್ನೆ ಮನೆಯಲ್ಲಿ ಗಲಾಟೆ ಆಗಿತ್ತು. ಇದೆಲ್ಲದಕ್ಕೆ ಅಕ್ಕನ ಸ್ಥಾನದಲ್ಲಿರುವ ಕವನಾನೆ ಕಾರಣ ಎಂದು‌ ಕೊಲೆ ನಡೆದಿದೆ. ಸ್ಥಳಕ್ಕೆ ವಿಶ್ವನಾಥಪುರ ಪೊಲೀಸ್‌ ಠಾಣೆಯ ಎ ಎಸ್ ಪಿ ಪುರುಷೋತ್ತಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
 

click me!