ಹಣ ದುರ್ಬಳಕೆ ಹಾಗೂ ಸುಳ್ಳು ಪ್ರಕರಣ ದಾಖಲು ವಿವಾದದಲ್ಲಿ ಸಿಲುಕಿರುವ ರಾಮನಗರ ಜಿಲ್ಲೆ ಬಿಡದಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಿ.ಕೆ.ಶಂಕರ್ ನಾಯಕ್ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಈಗ ಕರ್ತವ್ಯಲೋಪ ಸಂಬಂಧ ಪಿಐ ವಿರುದ್ಧ ಮತ್ತೆರಡು ಪ್ರಕರಣಗಳಲ್ಲಿ ಶಿಸ್ತು ಕ್ರಮಕ್ಕೆ ವರದಿ ಸಲ್ಲಿಕೆಯಾಗಿದ್ದ ಸಂಗತಿ ತಡವಾಗಿ ಬೆಳಕಿಗೆ ಬಂದಿವೆ.
ಬೆಂಗಳೂರು (ಡಿ.12) ಹಣ ದುರ್ಬಳಕೆ ಹಾಗೂ ಸುಳ್ಳು ಪ್ರಕರಣ ದಾಖಲು ವಿವಾದದಲ್ಲಿ ಸಿಲುಕಿರುವ ರಾಮನಗರ ಜಿಲ್ಲೆ ಬಿಡದಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಜಿ.ಕೆ.ಶಂಕರ್ ನಾಯಕ್ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಈಗ ಕರ್ತವ್ಯಲೋಪ ಸಂಬಂಧ ಪಿಐ ವಿರುದ್ಧ ಮತ್ತೆರಡು ಪ್ರಕರಣಗಳಲ್ಲಿ ಶಿಸ್ತು ಕ್ರಮಕ್ಕೆ ವರದಿ ಸಲ್ಲಿಕೆಯಾಗಿದ್ದ ಸಂಗತಿ ತಡವಾಗಿ ಬೆಳಕಿಗೆ ಬಂದಿವೆ.
ಬ್ಯಾಟರಾಯನಪುರದ ಸಂಧ್ಯಾ ರಮೇಶ್ ಮತ್ತು ಕೆ.ಆರ್.ಪುರದ ವಂಸತ ಆರೋಪ ಮಾಡಿದ್ದು, ಈ ಆರೋಪಗಳ ಬಗ್ಗೆ ಇಲಾಖಾ ಮಟ್ಟದ ವಿಚಾರಣೆ ನಡೆಸಿ ಆರೋಪಿತ ಪಿಐ ಶಂಕರ್ ನಾಯಕ್ ವಿರುದ್ಧ ಶಿಸ್ತು ಕ್ರಮಕ್ಕೆ ಹಿರಿಯ ಅಧಿಕಾರಿಗಳಿಗೆ ಕೆಂಗೇರಿ ಉಪ ವಿಭಾಗದ ಎಸಿಪಿ ವರದಿ ಸಲ್ಲಿಸಿದ್ದರು. ಈ ವರದಿಗಳು ಈಗ ಬಹಿರಂಗವಾಗಿದೆ.
ಆಟೋ ಚಾಲಕನ ಹತ್ಯೆ ಮಾಡಿದ್ದು ಮಾಜಿ ಗೆಳತಿಯ ಸೋದರ, ಕಾರಣ ಇಲ್ಲಿದೆ
ಈಗಾಗಲೇ 2022ರಲ್ಲಿ ಬ್ಯಾಟರಾಯನಪುರ ಠಾಣೆ ಪಿಐ ಆಗಿದ್ದಾಗ ಉದ್ಯಮಿಯೊಬ್ಬರ ಕಾರು ಚಾಲಕನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಆತನಿಂದ ಜಪ್ತಿ ಮಾಡಿದ ₹72 ಲಕ್ಷವನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ಶಂಕರ್ ನಾಯಕ್ ವಿರುದ್ಧ ಪ್ರಕರಣ ದಾಖಲಾಗಿ ಸಿಸಿಬಿ ತನಿಖೆ ನಡೆದಿದೆ. ಅದೇ ರೀತಿಯ ಮತ್ತೆರಡು ಕೃತ್ಯಗಳು ಬಯಲಾಗಿವೆ.
ಮಗನ ಅಕ್ರಮ ಬಂಧನದಲ್ಲಿಟ್ಟು ಸುಲಿಗೆ?:
2022ರ ಆಗಸ್ಟ್ 19ರಿಂದ 25ರವರೆಗೆ ಸುಮಿತ್ ಎಂಬಾತನನ್ನು ಅಂದು ಬ್ಯಾಟರಾಯನಪುರ ಠಾಣೆ ಪಿಐ ಶಂಕರ್ ನಾಯಕ್ ಅಕ್ರಮ ಬಂಧನದಲ್ಲಿಟ್ಟು, ಆತನಿಂದ ಸಿಪಿಯು, ಲ್ಯಾಪ್‌ಟಾಪ್ ಮತ್ತು ಪೆನ್‌ಡ್ರೈವನ್ನು ಜಪ್ತಿ ಮಾಡಿದ್ದರು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಸಂತ್ರಸ್ತ ಸುಮಿತ್ ತಾಯಿ ಸಂಧ್ಯಾ ದೂರು ನೀಡಿದ್ದರು. ಆಗ ಈ ಬಗ್ಗೆ ವಿಚಾರಣೆ ನಡೆಸಿದ ಕೆಂಗೇರಿ ಗೇಟ್ ಉಪವಿಭಾಗ ಎಸಿಪಿ ಭರತ್ ಎಸ್.ರೆಡ್ಡಿ ಅವರು, ಠಾಣೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸುಮಿತ್‌ನನ್ನು ಅಕ್ರಮ ಬಂಧನದಲ್ಲಿಟ್ಟಿದ್ದ ಸಂಗತಿ ಖಚಿತವಾಗಿತ್ತು. ಅಲ್ಲದೆ ಈ ಸಂಬಂಧ ಸಬ್ ಇನ್‌ಸ್ಪೆಕ್ಟರ್ ಕರಿಯಣ್ಣ ಹಾಗೂ ಠಾಣೆ ಸಿಬ್ಬಂದಿ ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದರು ಎನ್ನಲಾಗಿದೆ.
ಬೆಂಗಳೂರು ಹೆಂಡ್ತಿ ಹಳ್ಳಿ ಮನೆಗೆ ಬರ್ತಿಲ್ಲಾಂತ ಆತ್ಮಹತ್ಯೆ ಮಾಡಿಕೊಂಡ ಚಾಮರಾಜನಗರ ಗಂಡ
ಜಪ್ತಿ ಮಾಡಿದ್ದ ಹಣ ಮರಳಿಸದೆ ವಂಚನೆ
ಅಪರಾಧ ಪ್ರಕರಣದಲ್ಲಿ ಜಪ್ತಿ ಮಾಡಿದ ₹8.32 ಲಕ್ಷವನ್ನು ಮರಳಿಸುವಂತೆ ನ್ಯಾಯಾಲಯ ಆದೇಶ ನೀಡಿದರೂ ಸಹ ಸಂತ್ರಸ್ತರಿಗೆ ನೀಡದೆ ವಂಚಿಸಿದ ಆರೋಪ ಪಿಐ ಶಂಕರ್ ನಾಯಕ್ ವಿರುದ್ಧ ಕೇಳಿ ಬಂದಿದೆ.
2022ರಲ್ಲಿ ಅಪರಾಧ ಪ್ರಕರಣದಲ್ಲಿ ₹8.85 ಲಕ್ಷವನ್ನು ಪಿಐ ಶಂಕರ್ ನಾಯಕ್ ಜಪ್ತಿ ಮಾಡಿದ್ದರು. ಈ ಹಣವನ್ನು ಮರಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ ಮನವಿ ಪುರಸ್ಕರಿಸಿದ ನ್ಯಾಯಾಲಯವು, ಹಣ ಮರಳಿಸುವಂತೆ ತನಿಖಾಧಿಕಾರಿಗೆ ಸೂಚಿಸಿತ್ತು. ಆದರೆ ತಮ್ಮಿಂದ ಬಲವಂತವಾಗಿ ಖಾಲಿ ಹಾಳೆ ಮೇಲೆ ಸಹಿ ಪಡೆದು ಹಣ ನೀಡಲು ಶಂಕರ್ ನಾಯಕ್ ನಿರಾಕರಿಸಿದ್ದರು. ಅಷ್ಟರಲ್ಲಿ ಬ್ಯಾಟರಾಯಪುರ ಠಾಣೆಯಿಂದ ಶಂಕರ್ ನಾಯಕ್ ವರ್ಗಾವಣೆಗೊಂಡಿದ್ದರು. ಆದರೆ ತಮ್ಮ ಸ್ಥಾನಕ್ಕೆ ಹೊಸದಾಗಿ ಬಂದ ಪಿಐ ನಿಂಗಣ್ಣಗೌಡ.ಎ.ಪಾಟೀಲ್ ಅವರಿಗೆ ಈ ಪ್ರಕರಣದಲ್ಲಿ ಜಪ್ತಿಯಾದ ಹಣದ ಬಗ್ಗೆ ಮಾಹಿತಿ ನೀಡದೆ ಶಂಕರ್ ನಾಯಕ್ ತೆರಳಿದ್ದರು. ಅಲ್ಲದೆ ಜಪ್ತಿಯಾದ ₹20 ಲಕ್ಷವನ್ನು ಖಜಾನೆಗೆ ಜಮೆ ಮಾಡದೆ ಮರೆಮಾಚಿರುವುದು ಎಸಿಪಿ ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು ಎಂದು ತಿಳಿದು ಬಂದಿದೆ.