ಇತ್ತೀಚೆಗೆ ಮೈಸೂರು ರಸ್ತೆಯ ಟಿಂಬರ್ ಲೇಔಟ್‌ನಲ್ಲಿ ನಡೆದಿದ್ದ ಆಟೋ ಚಾಲಕ ಅರುಣ್ ಕೊಲೆ ಪ್ರಕರಣ ಸಂಬಂಧ ಮೃತನ ಮಾಜಿ ಗೆಳೆತಿಯ ಸೋದರ ಸೇರಿದಂತೆ 11 ಮಂದಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಡಿ.12) : ಇತ್ತೀಚೆಗೆ ಮೈಸೂರು ರಸ್ತೆಯ ಟಿಂಬರ್ ಲೇಔಟ್‌ನಲ್ಲಿ ನಡೆದಿದ್ದ ಆಟೋ ಚಾಲಕ ಅರುಣ್ ಕೊಲೆ ಪ್ರಕರಣ ಸಂಬಂಧ ಮೃತನ ಮಾಜಿ ಗೆಳೆತಿಯ ಸೋದರ ಸೇರಿದಂತೆ 11 ಮಂದಿಯನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಳೇ ಗುಡ್ಡದಹಳ್ಳಿಯ ಜನತಾ ಕಾಲೋನಿ ನಿವಾಸಿಗಳಾದ ಹರೀಶ್, ಮಧುಸೂದನ್, ಅರುಣ್, ಸುಭಾಷ್ ಅಲಿಯಾಸ್ ಡಿಗಾ, ಶ್ಯಾಮ್, ವಸಂತ್ ಕುಮಾರ್ ಅಲಿಯಾಸ್ ವಸಂತ್, ಎಡಿಸನ್, ಕಾರ್ತಿಕ್, ಮೈಸೂರು ರಸ್ತೆಯ ಸಂಜಯನಗರದ ಪ್ರಶಾಂತ್, ಟಿಂಬರ್ ಲೇಔಟ್‌ನ ಅಭಿ ಹಾಗೂ ವಿಠ್ಠಲ್ ನಗರದ ದಿಲೀಪ್ ಕುಮಾರ್ ಬಂಧಿತರಾಗಿದ್ದು, ಆರೋಪಿಗಳಿಂದ ಎರಡು ಬೈಕ್‌ಗಳು ಹಾಗೂ ಮಾರಕಾಸ್ತ್ರಗಳು ಜಪ್ತಿಯಾಗಿವೆ.
ಬೆಂಗಳೂರು ಹೆಂಡ್ತಿ ಹಳ್ಳಿ ಮನೆಗೆ ಬರ್ತಿಲ್ಲಾಂತ ಆತ್ಮಹತ್ಯೆ ಮಾಡಿಕೊಂಡ ಚಾಮರಾಜನಗರ ಗಂಡ
ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆಗೆ ಹುಡುಕಾಟ ನಡೆದಿದೆ. ಟಿಂಬರ್ ಲೇಔಟ್‌ನಲ್ಲಿ ಡಿ.5ರಂದು ರಾತ್ರಿ ಆಟೋ ಚಾಲಕ ಅರುಣ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೊಂಚು ಹಾಕಿ ಹತ್ಯೆ: ಈ ಮೊದಲು ಜನತಾ ಕಾಲೋನಿಯಲ್ಲಿ ಮೃತ ಅರುಣ್ ವಾಸವಾಗಿದ್ದ. ಆಗ ಆತನಿಗೆ ಹರೀಶ್ ಸೇರಿದಂತೆ ಆರೋಪಿಗಳ ಪರಿಚಯವಿತ್ತು. ಬಳಿಕ ತನ್ನ ವಾಸ್ತವ್ಯವನ್ನು ಸ್ಯಾಟಲೈಟ್ ಬಸ್ ಹಿಂಭಾಗದ ಏರಿಯಾಗೆ ಅರುಣ್ ಬದಲಾಯಿಸಿದ್ದ. ಇನ್ನು ಜನತಾ ಕಾಲೋನಿಯಲ್ಲಿ ವಾಸವಾಗಿದ್ದಾಗ ಆತನಿಗೆ ಆರೋಪಿ ಹರೀಶ್‌ನ ಸೋದರಿ ಜತೆ ಗೆಳೆತನವಿತ್ತು. ಆದರೆ ನಂತರ ಇಬ್ಬರು ದೂರವಾಗಿದ್ದರು.
ತನ್ನ ಸೋದರಿ ಸ್ನೇಹದಿಂದ ಅರುಣ್ ಮೇಲೆ ಹರೀಶ್ ಕೋಪಗೊಂಡಿದ್ದ. ಇತ್ತೀಚೆಗೆ ಜನತಾ ಕಾಲೋನಿಗೆ ಆಗಾಗ್ಗೆ ಬರುತ್ತಿದ್ದ ಹರೀಶ್ ಗೆಳೆಯರ ಅಜಯ್ ಹಾಗೂ ಅರುಣ್ ಗಲಾಟೆ ಮಾಡಿದ್ದರು. ಈ ಆರೋಪಿಗಳ ಪೈಕಿ ಕೆಲವರಿಗೆ ಅರುಣ್, ಅಜಯ್ ಹೊಡೆದು ಬಡಿದಿದ್ದರು. ಈ ಹಿನ್ನೆಲೆಯಲ್ಲಿ ಕೆರಳಿದ ಆರೋಪಿಗಳು, ಅಜಯ್ ಹಾಗೂ ಅರುಣ್ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದರು. ಅಂತೆಯೇ ಡಿ.5ರಂದು ರಾತ್ರಿ ಅರುಣ್‌ನನ್ನು ಆರೋಪಿಗಳು ಹತ್ಯೆಗೈದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.