ಮದುವೆ‌‌ ವಿಚಾರದಲ್ಲಿ ಬೇಸರ: ಬೆಂಗಳೂರಿನ ಬೆಸ್ಕಾಂ ಇಂಜಿನಿಯರ್ ಪಾವಗಡದಲ್ಲಿ ಆತ್ಮಹತ್ಯೆ

By Kannadaprabha News  |  First Published Jul 7, 2023, 9:24 AM IST

ಪಾವಗಡ ಪಟ್ಟಣದ ಖಾಸಗಿ ವಸತಿ ನಿಲಯದ ಕೊಠಡಿಯಲ್ಲಿ ಬುಧವಾರ ರಾತ್ರಿ ಬೆಳ್ಳಂದೂರಿನ ಬೆಸ್ಕಾಂ ಪೂರ್ವ ವಿಭಾಗದ ಸಹಾಯಕ ಜೂನಿಯರ್ ಇಂನಿಯರ್ ಎಸ್ ಮಂಜುನಾಥ್ (22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ತುಮಕೂರು (ಜು.07): ಪಾವಗಡ ಪಟ್ಟಣದ ಖಾಸಗಿ ವಸತಿ ನಿಲಯದ ಕೊಠಡಿಯಲ್ಲಿ ಬುಧವಾರ ರಾತ್ರಿ ಬೆಳ್ಳಂದೂರಿನ ಬೆಸ್ಕಾಂ ಪೂರ್ವ ವಿಭಾಗದ ಸಹಾಯಕ ಜೂನಿಯರ್ ಇಂನಿಯರ್ ಎಸ್ ಮಂಜುನಾಥ್ (22) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ 8 ಗಂಟೆಯಾದರೂ ಕೊಠಡಿಯಿಂದ ಹೊರಬಾರದಿರುವುದರಿಂದ ಅನುಮಾನಗೊಂಡ ವಸತಿ ಗೃಹದ ಸಿಬ್ಬಂದಿ ಕಿಟಕಿಯಿಂದ ನೋಡಿದಾಗ ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದು ತಿಳಿದುಬಂದಿದೆ. ಮದುವೆ ವಿಚಾರದಲ್ಲಿ ಬೇಸರಗೊಂಡು ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆಯಿದ್ದು, ಪಾವಗಡ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಬಾಧೆ, ವಿಷ ಸೇವಿಸಿದ್ದ ರೈತ ಆತ್ಮಹತ್ಯೆ: ಸಾಲಬಾಧೆಗೆ ಬೇಸತ್ತು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತನೋರ್ವ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಸಮೀಪದ ಶಿವನಗರ (ಗುತ್ತಲ ತಾಂಡಾ)ದ ಮಾಂತೇಶ ರಾಮಸಿಂಗ್‌ ಲಮಾಣಿ (45) ಮೃತರು. ಮೃತ ರೈತ ವಿಜಯಾ ಬ್ಯಾಂಕಿನಲ್ಲಿ . 90 ಸಾವಿರ ಬೆಳೆಸಾಲ ಹಾಗೂ ಗ್ರಾಮದ ಕೆಲವರಲ್ಲಿ ಕೈಗಡವಾಗಿ . 1ಲಕ್ಷಕ್ಕೂ ಅಧಿಕ ಸಾಲ ಮಾಡಿರುವುದಾಗಿ ಮೃತರ ಮಗ ಶೇಖಪ್ಪ ದೂರಿನಲ್ಲಿ ತಿಳಿಸಿದ್ದಾರೆ. ಮೃತ ಮಾಂತೇಶನು ತನ್ನ ತಂದೆ ಹಾಗೂ ಅವರ ಅಣ್ಣ-ತಮ್ಮಿಂದಿರ ಹೆಸರಲ್ಲಿದ್ದ 4 ಎಕರೆ 5ಗುಂಟೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದನು. 

Latest Videos

undefined

Karnataka Budget 2023 Live Updates | ಕರ್ನಾಟಕ ಬಜೆಟ್

ಕಳೆದ ವರ್ಷ ವಿಪರೀತ ಮಳೆಯಿಂದ ಬೆಳೆ ನಾಶವಾಗಿತ್ತು. ಈ ಬಾರಿ ನಿಗದಿತ ಸಮಯಕ್ಕೆ ಮಳೆ ಬಾರದ ಹಿನ್ನಲೆ, ಬೋರ್‌ವೆಲ್‌ ಇದ್ದರೂ ಬೆಳೆಗೆ ಸಮರ್ಪಕ ನೀರು ದೊರೆಯದೆ ಜಮೀನಿನಲ್ಲಿ ಬೆಳೆದ ಬೆಳೆ ಒಣಗುತ್ತಿರುವುದನ್ನು ನೋಡಿ ಮನನೊಂದಿದ್ದರು. ಇದನ್ನೆ ಮನಸ್ಸಿಗೆ ಹಚ್ಚಿಕೊಂಡು ಜೂ. 27ರಂದು ಹೊಲದಲ್ಲಿ ಕ್ರಿಮಿನಾಶಕ ಸೇವಿಸಿದ್ದರು. ತಕ್ಷಣ ಅವರನ್ನು ಹಾವೇರಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜು. 4ರಂದು ಮೃತಪಟ್ಟಿದ್ದಾರೆ. ಹಾವೇರಿಯ ಜಿಲ್ಲಾಸ್ಪತ್ರೆಗೆ ಪಿಎಸ್‌ಐ ಶಂಕರಗೌಡ ಪಾಟೀಲ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಗುತ್ತಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈತರನ್ನು ವಿಶ್ವಾಸಕ್ಕೆ ಪಡೆದು ಪೆರಿಫೆರಲ್‌ ರಸ್ತೆಗೆ ಭೂ ಪರಿಹಾರ ನಿರ್ಧಾರ: ಡಿಕೆಶಿ

ಯೋಗಿಕೊಳ್ಳ ಅರಣ್ಯ ಪ್ರದೇಶದಲ್ಲಿ ಯುವಕನೋರ್ವ ಆತ್ಮಹತ್ಯೆ: ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಮೀಪದ ಯೋಗಿಕೊಳ್ಳ ಅರಣ್ಯ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಕ್ಯಾಸಪನಟ್ಟಿಗ್ರಾಮದ ಅಡಿವೆಪ್ಪ ಶಿವಪ್ಪ ಹುಡೇದ (30) ಮೃತ ದುರ್ದೈವಿ. ಕಳೆದ ಹಲವು ವರ್ಷಗಳಿಂದ ಬೆಳಗಾವಿಯಲ್ಲಿ ವಾಸವಿದ್ದು, ನನ್ನ ಸಾವಿಗೆ ನಾನೇ ಕಾರಣ. ನನ್ನ ದುಶ್ಚಟಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ಕಿಸೆಯಲ್ಲಿ ಡೇತ್‌ನೋಟ ಪತ್ತೆಯಾಗಿದೆ. ಗೋಕಾಕ ಗ್ರಾಮೀಣ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು. ತನಿಖೆ ನಡೆಸಿರುವುದಾಗಿ ಗ್ರಾಮೀಣ ಠಾಣೆ ಪಿಎಸೈ ಕಿರಣ ಮೋಹಿತೆ ತಿಳಿಸಿದ್ದಾರೆ.

click me!