Bengaluru: ಕನ್ನಡ ಹಾಡು ಹಾಕದ್ದಕ್ಕೇ ಯುವಕನ ಕೊಲೆ!

By Gowthami K  |  First Published Nov 11, 2023, 12:32 PM IST

ಬಾಣಸವಾಡಿಯಲ್ಲಿ ನಡೆದ ಪ್ರವೀಣ್ ಕೊಲೆಗೆ ಬಿಗ್‌ ಟ್ವಿಸ್ಟ್ ಸಿಕ್ಕಿದೆ. ಕನ್ನಡ ಸಾಂಗ್ ಹಾಕದಿದ್ದುದ್ದಕ್ಕೇ  ಪ್ರವೀಣ್ ಕೊಲೆ ನಡೆದಿದೆ ಎಂದು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಹೇಳಿಕೆ ನೀಡಿದ್ದಾರೆ.  


ಬೆಂಗಳೂರು (ನ.11): ಬಾಣಸವಾಡಿಯಲ್ಲಿ ನಡೆದ ಪ್ರವೀಣ್ ಕೊಲೆಗೆ ಬಿಗ್‌ ಟ್ವಿಸ್ಟ್ ಸಿಕ್ಕಿದೆ. ಕನ್ನಡ ಸಾಂಗ್ ಹಾಕದಿದ್ದುದ್ದಕ್ಕೇ  ಪ್ರವೀಣ್ ಕೊಲೆ ನಡೆದಿದೆ ಎಂದು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಹೇಳಿಕೆ ನೀಡಿದ್ದಾರೆ.  

ಲಿಂಗರಾಜಪುರದ ಜಾತ್ರೆ ಹಬ್ಬ ಹಿನ್ನೆಲೆ ಡಿಜೆ ಸಾಂಗ್ ಹಾಕಿಸಲಾಗಿತ್ತು. ಕೆಜೆ ಹಳ್ಳಿ ಠಾಣಾ ವ್ಯಾಪ್ತಿಯ ಹಳೆಬಾಗಲೂರಿನ ನಾಲ್ಕು ಹುಡುಗರು ಬಂದಿದ್ದರು. ತಮಿಳು ಹಾಗೂ ಕನ್ನಡ ಸಾಂಗ್ ಹಾಕುವ ವಿಚಾರವಾಗಿ ಅವರಲ್ಲೇ ಜಗಳ ಆಗಿತ್ತು. ಈ ಜಗಳದಲ್ಲಿ ಪ್ರವೀಣ್ ಎಂಬಾತ ಮೂವರಲ್ಲಿ ಓರ್ವರಿಗೆ ಹೆಲ್ಮೆಟ್ ನಿಂದ ಹೊಡೆದಿದ್ದಾನೆ. ಬಳಿಕ ಅದೇ ಹೆಲ್ಮೆಟ್ ಕಸಿದುಕೊಂಡು ಹಲ್ಲೆ ಆತನ ಮೇಲೆ ಮೂವರು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಮೂವರ ಅರೆಸ್ಟ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇವರೆಲ್ಲರೂ ಕೂಡ ಸ್ನೇಹಿತರಾಗಿದ್ದಾರೆ.

Latest Videos

undefined

ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಆತ್ಮಹತ್ಯೆ ಪ್ರಕರಣ, 15 ವರ್ಷಗಳ ಬಳಿಕ ಆರೋಪಿಗೆ ಶಿಕ್ಷೆ

ಮೃತ ವ್ಯಕ್ತಿ ಡೆಲಿವರಿ ಬಾಯ್ ಆಗಿದ್ದ ಮೃತನಿಗೆ ಸಣ್ಣ ಸಣ್ಣ ವಿಚಾರಕ್ಕೂ ಕೋಪ ಮಾಡಿಕೊಳ್ಳುವ ಸ್ವಭಾವ ಇತ್ತು. ಈ ಹಿಂದೆ ಗೆಳೆಯರ ಜೊತೆ ಗಲಾಟೆ ಮಾಡಿಕೊಂಡಿದ್ದಾನೆ ಮಾತ್ರವಲ್ಲ ಈ ಹಿಂದೆ ಪೊಲೀಸ್ ಸಿಬ್ಬಂದಿ ಜೊತೆ ಕೂಡ ಗಲಾಟೆ ಮಾಡಿಕೊಂಡಿದ್ದ. 2021ರಲ್ಲಿ ಟ್ರಾಫಿಕ್ ಪೊಲೀಸ್ ಮೇಲೆ ಗಲಾಟೆ ಮಾಡಿಕೊಂಡಿದ್ದ. ಆ ಸಂಬಂಧ ಎಫ್ ಐಆರ್ ಸಹ ದಾಖಲಾಗಿತ್ತು. ಮೊನ್ನೆ ಸಹ ಇದೇ ರೀತಿ ಸಾಂಗ್ ವಿಚಾರವಾಗಿ ಗಲಾಟೆ ನಡೆದು ಕೊಲೆ ಆಗಿದೆ ಎಂದು ಡಿಸಿಪಿ ದೇವರಾಜ್  ಹೇಳಿದ್ದಾರೆ.

Bengaluru ಟೀ ಕುಡಿಯಲು ಬಂದಿದ್ದ ರೌಡಿಶೀಟರ್‌ ಬರ್ಬರ ಹತ್ಯೆ, 8 ಮಂದಿ ಅರೆಸ್ಟ್

ಕೊಲೆ ಸಂಬಂಧ ಮೃತ ಪ್ರವೀಣ್ ಸ್ನೇಹಿತರಾದ ಸುಂದರ್ (27), ಪ್ರಭು (25) ಮತ್ತು ಆರುಮುಗಂ (27) ಎಂಬುವವರನ್ನು ಬಂಧಿಸಲಾಗಿದೆ. ಮಂಗಳವಾರ ತಡರಾತ್ರಿ 12.30ರ ಸುಮಾರಿಗೆ ಲಿಂಗರಾಜಪುರದ ಆಯಿಲ್‌ ಮಿಲ್‌ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಪ್ರವೀಣ್ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ಈ ವೇಳೆ ಆರೋಪಿಗಳು ಪ್ರವೀಣ್‌ನನ್ನು ಎಚ್ಚರಿಸಲು ಪ್ರಯತ್ನಿಸಿದ್ದಾರೆ. ಆಗ ಪ್ರವೀಣ್‌ ಮೃತ ಪಟ್ಟಿರುವುದು ಖಚಿತವಾದ ಹಿನ್ನೆಲೆಯಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

click me!