Belagavi: ಅತ್ತೆಗೆ- ಸೊಸೆ ಕಿರುಕುಳ ಕೊಟ್ಟಿದ್ದು ನಿಜ, ಆದ್ರೆ ಸಾವಿಗೆ ಕಾರಣವಲ್ಲವಂತೆ!

By Sathish Kumar KH  |  First Published Jun 13, 2023, 5:56 PM IST

ಹೊಸದಾಗಿ ಮದುವೆಯಾಗಿ ಬಂದ ಸೊಸೆ ಗಂಡನಿಗೆ ಬೇರೆ ಮನೆ ಮಾಡುವಂತೆ ಹೇಳಿದ್ದನ್ನು ವಿರೋಧಿಸಿದ ಅತ್ತೆಯನ್ನೇ ಕೊಲೆ ಮಾಡಿರುವ ಆರೋಪ ಸೊಸೆ ಮೇಲೆ ಕೇಳಿ ಬಂದಿದೆ.


ಬೆಳಗಾವಿ (ಜೂ.13): ಹೊಸದಾಗಿ ಮದುವೆಯಾದ ಬಹುತೇಕ ವಧುಗಳು ತನ್ನ ಗಂಡನೊಂದಿಗೆ ವೈಯಕ್ತಿಕವಾಗಿ ಜೀವನ ಮಾಡಬೇಕು ಎಂದು ಕನಸು ಕಾಣುವವರೇ ಹೆಚ್ಚಾಗಿರುತ್ತಾರೆ. ಬೆಳಗಾವಿಯಲ್ಲಿಯೂ ಕೂಡ ಪ್ರೀತಿಸಿ ಮದುವೆಯಾಗಿದ್ದ ಯುವತಿ ಆರಂಭದಿಂದಲೇ ಬೇರೆ ಮನೆ ಮಾಡುವಂತೆ ಗಂಡನಿಗೆ ಹೇಳಿದ್ದಾಳೆ. ಇದನ್ನು ವಿರೋಧಿಸಿದ್ದ ಅತ್ತೆಗೆ ಸೊಸೆ ಕಿರುಕುಳ ನೀಡಿ ಹಲ್ಲೆ ಮಾಡಿಸಿದ್ದಾಳೆ. ಆದರೆ, ಈಗ ಅತ್ತೆ ಏಕಾಏಕಿ ಸಾವನ್ನಪ್ಪಿದ್ದು, ಈ ಸಾವಿಗೆ ನಾನು ಕಾರಣವಲ್ಲ ಎಂದು ಸೊಸೆ ಹೇಳಿಕೊಂಡಿದ್ದಾಳೆ.

ಬೆಳಗಾವಿಯ ಬೈಲಹೊಂಗಲ ಪಟ್ಟಣದಲ್ಲಿ ಮಹಿಳೆ ಅನುಮಾನಸ್ಪದ ಸಾವು ಸಂಭವಿಸಿದೆ. ಈ ಮಹಿಳೆಯ ಸಾವಿಗೆ ಸಂಬಂಧಿಸಿದಂತೆ ಆಕೆಯ ಸೊಸೆ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ. ಬೈಲಹೊಂಗಲ ಪಟ್ಟಣದ ನಿವಾಸಿ ಮಹಾಬೂಬಿ ಯಾಕೂಶಿ (53) ಅನುಮಾನಾಸ್ಪದ ಸಾವನ್ನಪ್ಪಿದ ಮಹಿಳೆ ಆಗಿದ್ದಾರೆ. ಮೃತ ಮಹಾಬೂಬಿ ಸೊಸೆ ಮೆಹರೂಣಿ ವಿರುದ್ಧ ಕೊಲೆ ಆರೋಪ ದಾಖಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಮಹಾಬೂಬಿ ಅವರ ಮಗ ಸುವಾನ್‌ನನ್ನು ಪ್ರೀತಿಸಿ ಮೆಹರೂಣಿ ಮದುವೆ ಆಗಿದ್ದಳು. ಮನೆಗೆ ಬರುತ್ತಿದ್ದಂತೆ ಬೇರೆ ಮನೆ ಮಾಡುವಂತೆ ಗಂಡ ಸುಬಾನ್‌ಗೆ ಕಿರುಕುಳ ನೀಡುತ್ತಿದ್ದಳು. 

Tap to resize

Latest Videos

Bengaluru: ಅತ್ತೆಯೊಂದಿಗೆ ಜಗಳವಾಡ್ತಿದ್ದ ಅಮ್ಮನನ್ನೇ ಕೊಲೆ ಮಾಡಿ ಸೂಟ್ಕೇಸ್‌ನಲ್ಲಿ ಶವ ತಂದ ಮಗಳು

ಮಗ ಬೇರೆ ಮನೆ ಮಾಡುವುದನ್ನು ವಿರೋಧಿಸಿದ್ದಕ್ಕೆ ಹಲ್ಲೆ: ಮಗ ತಮ್ಮನ್ನು ಬಿಟ್ಟು ಬೇರೆ ಮನೆಗೆ ಹೋಗುವುದನ್ನು ವಿರೋಧಿಸಿದ್ದಕ್ಕೆ ತನ್ನ ತವರು ಮನೆಯವರನ್ನು ಕರೆಯಿಸಿ ಅತ್ತೆ ಹಾಗೂ ಪತಿ ಸುವಾನ್‌ ಮೇಲೆ ಮೆಹರೂಣಿ ಮಾರಣಾಂತಿಕ ಹಲ್ಲೆ ನಡೆಸಿದ್ದಳು. ಇದರಿಂದ ಗಾಯಗೊಂಡಿದ್ದ ಅತ್ತೆ ಮಹಾಬೂಬಿ ಯಾಕೂಶಿ ಮೇ 22 ರಂದು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲು ಆಗಿ, ಚಿಕಿತ್ಸೆ ಪಡೆದು ಜೂ.1ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಮನೆಗೆ ವಾಪಸ್‌ ಆಗಿದ್ದರು. ಮನೆಯಲ್ಲಿ ಯಾವುದೇ ಕೆಲಸ ಮಾಡುವುದಕ್ಕಾಗದೇ ವಿಶ್ರಾಂತಿಯಲ್ಲಿದ್ದರು.

ಮನೆಯಲ್ಲಿ ಏಕಾಏಕಿ ಸಾವನ್ನಪ್ಪಿದ ಅತ್ತೆ:  ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮಹಾಬೂಬಿ ಏಕಾಏಕಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸ್ಥಳೀಯರು ಹಾಗೂ ಅತ್ತೆಯ ಸಂಬಂಧಿಕರು ಸೊಸೆ ಮೆಹರೂಣಿ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ಈ ಪ್ರಕರಣದ ಬಗ್ಗೆ ಮನೆಯವರನ್ನು ಕೇಳಿದರೆ, ಮಹಾಬೂಬಿ ಲೋ ಬಿಪಿ ಇಲ್ಲವೇ ಹೃದಯಾಘಾತದಿಂದ ಸಾವನಪ್ಪಿದ್ದಾರೆಂದು ಹೇಳಿದ್ದಾರೆ. ಈಗ ಮೃತ ಅತ್ತೆಯ ಶವವನ್ನು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಈಗ ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಕಾಯುತ್ತಿದ್ದಾರೆ. ಬೈಲಹೊಂಗಲ ಠಾಣೆಯಲ್ಲಿ ಮೆಹರೂಣಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು ಆಗಿದೆ.

ಅತ್ತೆಯೊಂದಿಗೆ ಜಗಳವಾಡಿದ ತಾಯಿಯನ್ನೇ ಕೊಂದ ಸೊಸೆ:
ಬೆಂಗಳೂರು (ಜೂ.13): ಅಸ್ಸಾಂ ಮೂಲದ ವ್ಯಕ್ತಿ, ಪಶ್ಚಿಮ ಬಂಗಾಳ ಮೂಲದ ಮಹಿಳೆ ಮದುವೆಯಾಗಿ ಬೆಂಗಳೂರಿನಲ್ಲಿ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ಆದರೆ, ಹುಡುಗಿಯ ತಂದೆ ತೀರಿಕೊಂಡ ಹಿನ್ನೆಲೆಯಲ್ಲಿ ಅತ್ತೆ ಮನೆಗೆ ತಾಯಿಯನ್ನ ಕರೆದುಕೊಂಡು ಬಂದು ಇರಿಸಿಕೊಂಡಿದ್ದಳು. ಆದರೆ, ಪ್ರತಿನಿತ್ಯ ಅತ್ತೆಯೊಂದಿಗೆ ತಾಯಿ ಜಗಳ ಮಾಡುತ್ತಿದ್ದಳೆಂದು ತಾಯಿಗೆ 20ಕ್ಕೂ ಅಧಿಕ ನಿದ್ರೆ ಮಾತ್ರೆಗಳನ್ನು ಕೊಟ್ಟು ಕೊಲೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ಇಟ್ಟುಕೊಂಡು ಪೊಲೀಸ್‌ ಠಾಣೆಗೆ ಆಗಮಿಸಿದ  ಘಟನೆ ಬೆಂಗಳೂರಿನ ಮೈಕೋಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸೊಸೆ ತಂದ ಸೌಭಾಗ್ಯ, ಗಂಡನ ಇಡೀ ಕುಟುಂಬಕ್ಕೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಎಸ್ಕೇಪ್‌!

ತಾಯಿ ಕೊಂದು ಸೂಟ್ ಕೇಸ್‌ನಲ್ಲಿ ಶವ ತಂದಳು:  ಇನ್ನು ತಾಯಿಗೆ ಸೋಮವಾರ ಬೆಳಿಗ್ಗೆ 7 ಗಂಟೆಗೆ ತಾಯಿಗೆ 20ಕ್ಕೂ ಅಧಿಕ ನಿದ್ರೆ ಮಾತ್ರೆಯನ್ನು ಸೋನಾಲಿ ಕೊಟ್ಟಿದ್ದಾಳೆ. ಈ ಎಲ್ಲ ಮಾತ್ರೆಗಳನ್ನು ನುಂಗಿದ ವೃದ್ಧ ತಾಯಿ ಬೀವಾಪಾಲ್‌ ಬೆಳಗ್ಗೆ 11 ಗಂಟೆಗೆ ವೇಳೆಗೆ ಹೊಟ್ಟೆ ನೋವು ಎಂದು ಚೀರಾಡುತ್ತಿದ್ದಳು. ಇದರಿಂದ ಸುಮ್ಮನೆ ಮನೆಯವರಿಗೆ ತೊಂದರೆ ಆಗುತ್ತದೆಂದು ಆಕೆಯ ಚೀರಾಟ ಯಾರಿಗೂ ಕೇಳಬಾರದೆಂದು ತಾಯಿಯನ್ನು ಸೀರೆಯಿಂದ ಕುತ್ತಿಗೆಗೆ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಬಳಿಕ ತಾಯಿ ಮೃತದೇಹದ ಬಳಿ ಕುಳಿತುಕೊಂಡು ಆಲೋಚನೆ ಮಾಡಿ, ನಂತರ ಕ್ಯಾಬ್‌ ಮಾಡಿಕೊಂಡು ಶವವನ್ನು ಹೊರಗೆ ಸಾಗಿಸಲು ಯತ್ನಿಸಿದ್ದಾಳೆ. ಆದರೆ, ಇದಕ್ಕೆ ಮನಸ್ಸೊಪ್ಪದೇ ಸುಮಾರು 1 ಗಂಟೆ ಬಳಿಕ ಸೂಟ್‌ಕೇಸ್‌ನಲ್ಲಿ ತಾಯಿಯ ಮೃತದೇಹವನ್ನು ಇಟ್ಟುಕೊಂಡು ಮೈಕೋಲೇಔಟ್‌ ಪೊಲೀಸ್‌ ಠಾಣೆಗೆ ಶವವನ್ನು ತಂದಿದ್ದಾಳೆ. 

click me!