Berngaluru: ರ್ಯಾಪಿಡೋ ಚಾಲಕನಿಂದ ಲೈಂಗಿಕ ಕಿರುಕುಳ: ಚಲಿಸುವ ಬೈಕ್‌ನಿಂದಲೇ ಜಿಗಿದ ಯುವತಿ

By Sathish Kumar KH  |  First Published Apr 26, 2023, 1:38 PM IST

ಬೆಂಗಳೂರಿನಲ್ಲಿ ರ್ಯಾಪಿಡೋ ಬೈಕ್‌ನಲ್ಲಿ ಹೋಗುವಾಗ ಆಕೆಯ ಮೈ- ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದರಿಂದ ಬೈಕ್‌ನಿಂದ ಜಿಗಿದು ಯುವತಿ ಕಾಮುಕನಿಂದ ತಪ್ಪಿಸಿಕೊಂಡಿದ್ದಾಳೆ.


ಬೆಂಗಳೂರು (ಏ.26): ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುವಾಗ ಯುವತಿ ರ್ಯಾಪಿಡೋ ಬೈಕ್‌ ಬುಕಿಂಗ್‌ ಮಾಡಿದ್ದರು. ಆದರೆ, ಬೈಕ್‌ನಲ್ಲಿ ಹೋಗುವಾಗ ಆಕೆಯ ಮೈ- ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಬೈಕ್‌ನಿಂದ ಜಿಗಿದು ಯುವತಿ ಕಾಮುಕನಿಂದ ತಪ್ಪಿಸಿಕೊಂಡಿದ್ದಾಳೆ.

ರ್ಯಾಪಿಡೋ ಚಾಲಕನಿಂದ (Rapido rider) ಯುವತಿಗೆ ಲೈಂಗಿಕ ಕಿರುಕುಳ ಉಂಟಾಗಿರುವ ಘಟನೆ ಬೆಂಗಳೂರಿನ ಯಲಹಂಕ ನಾಗೇನಹಳ್ಳಿ (Yalahanka Nagenahalli) ಸಮೀಪದ ಖಾಸಗಿ ಕಾಲೇಜು ನಡೆದಿದೆ. ಇನ್ನು ಬೈಕ್‌ ನಲ್ಲಿ ಹೋಗುವಾಗ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಇದರಿಂದ ಬೇಸತ್ತ ಯುವತಿ ಚಲಿಸುವ ಬೈಕ್‌ನಿಂದ ಜಂಪ್ ಮಾಡಿ (Running bike jump) ಆ ಕಾಮುಕ ಯುವಕನಿಂದ ತಪ್ಪಿಸಿಕೊಂಡಿದ್ದಾಳೆ. ಇನ್ನು ಈ ಘಟನೆ ಏಪ್ರಿಲ್‌ 21 ರಂದು ಕೃತ್ಯ ನಡೆದಿದೆ. ಆದರೆ, ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ ನಂತರ ಲೈಂಗಿಕ ಕಿರುಕುಳದ ಪ್ರಕರಣ ಬೆಳಕಿಗೆ ಬಂದಿದೆ.

Tap to resize

Latest Videos

Bengaluru: ಕೇರಳ ಯುವತಿ ಮೇಲೆ ರ್ಯಾಪಿಡೋ ಚಾಲಕ ಸೇರಿ ಇಬ್ಬರಿಂದ ಗ್ಯಾಂಗ್‌ ರೇಪ್

ಯಲಹಂಕ ಖಾಸಗಿ ಕಂಪನಿಯಲ್ಲಿ ಯುವತಿ ಕೆಲಸ: ಯಲಹಂಕದಲ್ಲಿ ಖಾಸಗಿ ಕಂಪನಿಯಲ್ಲಿ ಆರ್ಕಿಟೆಕ್ಚರ್ ಆಗಿ ಕೆಲಸ ಮಾಡ್ತಿದ್ದ ಯುವತಿ, ಇಂದಿರಾನಗರ ತೆರಳಲು ರ್ಯಾಪಿಡೋ ಬುಕ್ (Rapido Bike Booking) ಮಾಡಿದ್ದಳು. ಇನ್ನು ಬೈಕ್‌ನಲ್ಲಿ ಹೋಗುವಾಗ ಓಟಿಪಿ ಪಡೆಯುವ ನೆಪದಲ್ಲಿ ಯುವತಿ ಮೊಬೈಲ್ ಕಸಿದುಕೊಂಡಿದ್ದಾನೆ. ನಂತರ, ಬೈಕ್‌ನಲ್ಲಿ ಚಲಾಯಿಸಿಕೊಂಡೇ ಯುವತಿಯ ಮೈ, ಕೈ ಹಾಗೂ ತೊಡೆ ಭಾಗಗಳನ್ನು ಮುಟ್ಟುತ್ತಾ ಲೈಂಗಿಕ ಕಿರುಕುಳ  (Sexual Harassment) ನೀಡಲು ಮುಂದಾಗಿದ್ದಾನೆ. ಇನ್ನು ಬೈಕ್‌ನಿಂದ ಜಿಗಿದು ಕಾಮುಕನಿಂದ ತಪ್ಪಿಸಿಕೊಂಡು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಮೂರು ದಿನದಲ್ಲಿ ಆರೋಪಿ ಬಂಧಿಸಿದ ಪೊಲೀಸರು: ಇನ್ನು ಪೊಲೀಸರು ಪ್ರಕರಣ ದಾಖಲಿಸಿಕೊಂಡು ರ್ಯಾಪಿಡೋ ಬೈಕ್‌ನಲ್ಲಿ ಯುವತಿಯರನ್ನು ಕೂರಿಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನ ಬಂಧಿಸಿದ್ದಾರೆ. ಈತನನ್ನು ಆಂಧ್ರ ಪ್ರದೇಶ ಮೂಲದ ದೀಪಕ್ ರಾವ್ ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. 

ರ್ಯಾಪಿಡೋ ಚಾಲಕರಿಂದ ಕಿರುಕುಳ ಪ್ರಮಾಣ ಹೆಚ್ಚಳ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರು ಹಾಗೂ ಉದ್ಯೋಗಿಗಳು ತಮ್ಮ ಪ್ರಯಾಣಕ್ಕಾಗಿ ಆಟೋ, ಟ್ಯಾಕ್ಸಿ, ರ್ಯಾಪಿಡೋ, ಓಲಾ, ಉಬರ್‌ ಸೇರಿದಂತೆ ಅನೇಕ ವ್ಯವಸ್ಥೆಗಳಿವೆ. ಆದರೆ, ಕಡಿಮೆ ಸಮಯದಲ್ಲಿ ಕಡಿಮೆ ಹಣದಲ್ಲಿ ಸುರಕ್ಷಿತ ಸ್ಥಳವನ್ನು ತಲುಪುವ ಉದ್ದೇಶದಿಂದ ಇತ್ತೀಚೆಗೆ ಮಹಿಳೆಯರು ಕೂಡ ರ್ಯಾಪಿಡೋ ಬೈಕ್‌ ಬುಕ್‌ ಮಾಡಿಕೊಂಡು ಹೋಗುತ್ತಾರೆ. ಇನ್ನು ಬಹುತೇಕರು ರ್ಯಾಪಿಡೋ ಆಪ್‌ ಮೂಲಕ ಬುಕಿಂಗ್ ಮಾಡಿಕೊಂಡು ಬೈಕ್‌ನಲ್ಲಿ ಬರುವ ಬವ್ಯಕ್ತಿಯೊಂದಿಗೆ ತಮ್ಮ ಸ್ಥಳಕ್ಕೆ ಹೋಗಬೇಕು. ಆದರೆ, ಜನನಿಬಿಡ ಪ್ರದೇಶಗಳಲ್ಲಿ ಹಾಗೂ ರಾತ್ರಿ ವೇಳೆಯಲ್ಲಿ ಈ ರ್ಯಾಪಿಡೋ ಚಾಲಕರಿಂದ ಮಹಿಳೆಯರು ಮತ್ತು ಯುವತಿಯರ ಮೇಲೆ ಲೈಂಗಿಕ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. 

'ಅಣ್ಣ ಅಂತ ಕರಿಬೇಡಿ': ಮಹಿಳೆಗೆ ರ‍್ಯಾಪಿಡೋ ಚಾಲಕ ಮೆಸೇಜ್‌, ಕಂಪನಿ ಹೇಳಿದ್ದೇನು?

ಆರು ತಿಂಗಳ ಹಿಂದೆ ರ್ಯಾಪಿಡೋ ಚಾಲಕನಿಂದ ಅತ್ಯಾಚಾರ: ಕಳೆದ ವರ್ಷದ ನವೆಂಬರ್‌ನಲ್ಲಿ ಕೂಡ ರ್ಯಾಪಿಡೋ ಬೈಕ್‌ ಬುಕಿಂಗ್ ಮಾಡಿಕೊಂಡು ಹೋಗುತ್ತಿದ್ದ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ಯುವತಿಯನ್ನು ರೂಮಿಗೆ ಕರೆದೊಯ್ದು ಗ್ಯಾಂಗ್‌ರೇಪ್‌ ಮಾಡಿದ್ದ ಘಟೆ ನಡೆದಿತ್ತು. ಇನ್ನು ಖಾಸಗಿ ಕಂಪನಿಯಲ್ಲ;ಿ ಕೆಲಸ ಮಾಡುತ್ತಿದ್ದ ಯುವತಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿಕೊಂಡು, ಕುಡಿದ ಮತ್ತಿನಲ್ಲಿ ರ್ಯಾಪಿಡೋ ಬೈಕ್‌ ಬುಕ್‌ ಮಾಡಿಕೊಂಡು ಮನೆಗೆ ಹೋಗುತ್ತಿದ್ದಳು. ಆದರೆ, ಯುವತಿ ಪ್ರಜ್ಞೆ ತಪ್ಪಿ ಮಂಪರಿನಲ್ಲಿ ಇರುವುದನ್ನು ಗಮನಿಸಿದ ರ್ಯಾಪಿಡೋ ಚಾಲಕ ಯುವತಿಯನ್ನು ತನ್ನ ಸ್ನೇಹಿತ ಕೊಠಡಿಗೆ ಕರೆದುಕೊಂಡು ಹೋಗಿ ಅಲ್ಲಿ ಇಡೀ ರಾತ್ರಿ ಇಬ್ಬರೂ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದ ಘಟನೆ ನಡೆದಿತ್ತು.

click me!