ಪತ್ನಿ ಶವ 3 ದಿನ ಫ್ರೀಜರ್‌ನಲ್ಲಿಟ್ಟ ಪಾಪಿ ಪತಿ: ಗಂಡನಿಂದ್ಲೇ ಕೊಲೆ ಎಂದು ಮಹಿಳೆ ಕುಟುಂಬಸ್ಥರ ಆರೋಪ

By BK Ashwin  |  First Published Jul 3, 2023, 12:50 PM IST

ಪತಿಯೇ ಮಹಿಳೆಯನ್ನು ಕೊಂದಿದ್ದಾನೆ ಎಂದು ಮೃತ ಮಹಿಳೆಯ ಸಹೋದರ ಆರೋಪಿಸಿದರೆ, ಆಕೆ ಜಾಂಡೀಸ್‌ಗೆ ಬಲಿಯಾಗಿರೋದಾಗಿ ಪತಿ ಹೇಳಿಕೊಂಡಿದ್ದಾರೆ.


ಭೋಪಾಲ್‌ (ಜುಲೈ 3, 2023): ಮಧ್ಯಪ್ರದೇಶದ ರೇವಾ ಜಿಲ್ಲೆಯ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಆಕೆಯ ಶವನ್ನು ಪತಿ 3 ದಿನಗಳ ಕಾಲ ಮನೆಯಲ್ಲಿ ಫ್ರೀಜರ್‌ನಲ್ಲಿಟ್ಟಿದ್ದ ಅಘಾತಕಾರಿ ಘಟನೆ ವರದಿಯಾಗಿದೆ. ಈ ಮಹಿಳೆಯ ಶವವನ್ನು ಪೊಲೀಸರು ಭಾನುವಾರ ವಶಪಡಿಸಿಕೊಂಡಿದ್ದಾರೆ.

ಇನ್ನು, ಪತಿಯೇ ಮಹಿಳೆಯನ್ನು ಕೊಂದಿದ್ದಾನೆ ಎಂದು ಮೃತ ಮಹಿಳೆಯ ಸಹೋದರ ಆರೋಪಿಸಿದರೆ, ಆಕೆ ಜಾಂಡೀಸ್‌ಗೆ ಬಲಿಯಾಗಿರೋದಾಗಿ ಪತಿ ಹೇಳಿಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಮಹಿಳೆ ಶುಕ್ರವಾರವೇ ನಿಧನರಾದರು. ಆದರೆ, ಆಕೆಯ ಅಂತ್ಯಕ್ರಿಯೆ ಮಾಡಲು ಮುಂಬೈನಿಂದ ತಮ್ಮ ಮಗ ಬರಲು ಕಾಯುತ್ತಿದ್ದೆ. ಈ ಹಿನ್ನೆಲೆ ಆಕೆಯ ಶವವನ್ನು ಮನೆಯಲ್ಲಿ ಫ್ರೀಜರ್‌ನಲ್ಲಿ ಇಟ್ಟಿದ್ದೆ ಎಂದೂ ಪತಿ ತಿಳಿಸಿದ್ದಾರೆ.

Tap to resize

Latest Videos

ಇದನ್ನು ಓದಿ: ಪಾಪಿಗೆ ತಕ್ಕ ಶಿಕ್ಷೆ! ಮನೆಗೆ ನುಗ್ಗಿ ರೇಪ್‌ ಮಾಡಿದವನ ಮರ್ಮಾಂಗವನ್ನೇ ಸೀಳಿದ ಸಂತ್ರಸ್ತೆ

ಈ ಸಂಬಂಧ ಮಹಿಳೆಯ ಸಾವಿಗೆ ಕಾರಣ ತಿಳಿಯಲು ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. "ಸುಮಿತ್ರಿ ಎಂದು ಗುರುತಿಸಲಾದ 40 ವರ್ಷದ ಮಹಿಳೆಯ ಶವವನ್ನು ನಾವು ವಶಪಡಿಸಿಕೊಂಡಿದ್ದೇವೆ. ಪತಿಯೇ ತನ್ನ ಸಹೋದರಿಯನ್ನು ಕೊಂದಿದ್ದಾನೆ ಎಂದು ಆಕೆಯ ಸಹೋದರ ಅಭಯ್ ತಿವಾರಿ ನಮಗೆ ದೂರು ನೀಡಿದ ನಂತರ ನಾವು ಶವವನ್ನು ಪಡೆದುಕೊಂಡಿದ್ದೇವೆ" ಎಂದು ಸಿಟಿ ಕೊತ್ವಾಲಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ.

ಆದರೆ, ಮೃತ ಮಹಿಳೆಯ ಪತಿ ಭರತ್ ಮಿಶ್ರಾ ಅವರು ಆಕೆಯ ಅಂತ್ಯಕ್ರಿಯೆ ಮಾಡಲು ತಮ್ಮ ಮಗ ಮನೆಗೆ ಮರಳಲು ಪತ್ನಿಯ ಶವವನ್ನು ತಮ್ಮ ಮನೆಯಲ್ಲಿ ಫ್ರೀಜರ್‌ನಲ್ಲಿ ಇರಿಸಿದ್ದೆ ಎಂದು ಹೇಳಿದರು. ಹಾಗೂ, ಅವರು ಕಾಮಾಲೆಯಿಂದ ಬಳಲುತ್ತಿದ್ದಾರೆ ಮತ್ತು ಜೂನ್ 30 ರಂದು ಮೃತಪಟ್ಟರು ಎಂದು ಅವರ ಪತಿ ನಮಗೆ ಹೇಳಿದರು" ಎಂದೂ ಅವರು ಹೇಳಿದರು.

ಇದನ್ನೂ ಓದಿ: ವೃದ್ಧನ ಮೃತದೇಹ 2 ವರ್ಷ ಫ್ರೀಜರ್‌ನಲ್ಲಿಟ್ಟ: ಪಿಂಚಣಿ ಹಣವನ್ನು ಶಾಪಿಂಗ್‌ಗೆ ಬಳಸ್ತಿದ್ದ ಪಾಪಿ!

ಅಲ್ಲದೆ, ಭರತ್‌ ಮಿಶ್ರಾ ಅಥವಾ ಅವರ ಕುಟುಂಬದವರು ತಮ್ಮ ಸಹೋದರಿಯ ಸಾವಿನ ಬಗ್ಗೆ ತನಗೆ ಅಥವಾ ತನ್ನ ಸಂಬಂಧಿಕರಿಗೆ ತಿಳಿಸಲಿಲ್ಲ ಎಂದು ದೂರುದಾರ ಅಭಯ್‌ ತಿವಾರಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಮತ್ತು ಇಂದು ಬೆಳಗ್ಗೆಯಷ್ಟೇ ಈ ಬಗ್ಗೆ ತನಗೆ ತಿಳಿದುಬಂದಿದೆ ಎಂದು ಹೇಳಿರುವುದಾಗಿಯೂ ಪೊಲೀಸ್‌ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. 

ಹಾಗೂ, ಭರತ್‌ ಮಿಶ್ರಾ ತನ್ನ ಸಹೋದರಿಯನ್ನು ಥಳಿಸುತ್ತಿದ್ದರು ಮತ್ತು ಇದರಿಂದ ಆಕೆ ಮೃತಪಟ್ಟಿರಬಹುದು ಎಂದೂ ದೂರುದಾರರು ಆರೋಪಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸಿಟಿ ಕೊತ್ವಾಲಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಸಿಂಗ್ "ನಾವು ದೂರನ್ನು ಸ್ವೀಕರಿಸಿದ್ದೇವೆ ಮತ್ತು ಅದರ ಪ್ರಕಾರ ಕಾರ್ಯನಿರ್ವಹಿಸಲು ಶವಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ" ಎಂದೂ ಅವರು ಹೇಳಿದರು.

ಇದನ್ನೂ ಓದಿ: ಮದುವೆಯ ದಿನವೇ ಗರ್ಲ್‌ಫ್ರೆಂಡ್‌ ಕೊಲೆ ಮಾಡಿದ ಪಾತಕಿ: ಢಾಬಾದ ಫ್ರೀಜರ್‌ನಲ್ಲಿ ಮೃತದೇಹ..!

click me!