ವಿಜಯನಗರದಲ್ಲಿ ನಡೆದ ಹೈಡ್ರಾಮಾ ಸಂಬಂಧ ಡಕಾಯಿತಿ ಪ್ರಕರಣ ದಾಖಲಿಸಿಕೊಂಡಿದ್ದ ವಿಜಯನಗರ ಪೊಲೀಸರು ಆರು ಮಂದಿ ಬಂಧಿಸಿದ್ದಾರೆ.
ಕಿರಣ್.ಕೆ.ಎನ್. ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಡಿ.26): ಅವರದ್ದು ಲಕ್ಷಾಂತರ ಮೌಲ್ಯದ ಹೈಫೈ ಬೈಕ್ ಗಳ ವ್ಯವಹಾರ. ಆರಂಭದಲ್ಲಿ ಚೆನ್ನಾಗಿ ವ್ಯವಹಾರ ಆರಂಭಿಸಿದ ಅವರ ಮಧ್ಯೆ ಸಣ್ಣದೊಂದು ಬಿರುಕು ಮೂಡಿತ್ತು. ಮಾತಿಗೆ ಅಂತ ಒಂದೆಡೆ ಸೇರಿದ ಅವರ ನಡುವೆ ಶುರುವಾದ ಜಗಳ ಸಿನಿಮಾ ಸ್ಟೈಲ್ ನಲ್ಲಿ ಟ್ವಿಸ್ಟ್ ಪಡೆದುಕೊಂಡಿತ್ತು. ಏನಾಗುತ್ತಿದೆ ಅಂತ ಅಲ್ಲಿನ ಜನ ನೊಡುವಷ್ಟರಲ್ಲಿ ಅಲ್ಲೊಂದು ಹೈಡ್ರಾಮ ಸೃಷ್ಟಿಯಾಗಿತ್ತು..
ಅದು ಕಳೆದ ತಿಂಗಳ 10ನೇ ತಾರೀಖು ವಿಜಯನಗರದ ಏರಿಯಾದಲ್ಲಿದ್ದ ಜನ ಎಂದಿನಂತೆ ತಮ್ಮ ದಿನನಿತ್ಯದ ಕೆಲಸದಲ್ಲಿ ಬ್ಯುಸಿಯಾಗಿದ್ರು.. ಆದ್ರೆ ಸಂಜೆ 6.30ರ ಸುಮಾರಿಗೆ ಅಲ್ಲಿ ನಡೆದ ಆ ಒಂದು ಘಟನೆ ಎಲ್ಲರ ಹುಬ್ಬೇರಿಸಿತ್ತು. ಯಾಕಂದ್ರೆ ಬೈಕ್ ಖರೀದಿ ವಿಚಾರವಾಗಿ ಮಾತು ಕಥೆ ನಡೆಸುತಿದ್ದ ಒಬ್ಬ ವ್ಯಕ್ತಿ ಮೇಲೆರಗಿದ ಒಂದಷ್ಟು ಜಗನ ಆತನ ಮೇಲೆ ಹಲ್ಲೆ ಮಾಡೊಕೆ ಶುರು ಮಾಡಿದ್ರು. ನಂತ್ರ ಆತನ ಕೈ ಮುರಿದು ಬಲವಂತವಾಗಿ ಕಾರ್ ಹತ್ತಿಸಿಕೊಳ್ಳುವ ಯತ್ನ ಮಾಡಿದ್ರು. ಆದ್ರೆ ಅಷ್ಟೊತ್ತಿಗಾಗಲೇ ಅಲ್ಲಿ ಜನ ಸೇರುತಿದ್ದದನ್ನು ಕಂಡ ಅವರು ತಾವು ಬಂದ ಕಾರ್ ಅಲ್ಲೇ ಬಿಟ್ಟು, ಹಲ್ಲೊಗೊಳಗಾದ ವ್ಯಕ್ತಿ ತಂದಿದ್ದ ಬರೊಬ್ಬರಿ 16 ಲಕ್ಷ ಮೌಲ್ಯದ ಬಿಎಂಡಬ್ಲ್ಯೂ ಬೈಕ್ ಸಮೇತ ಎಸ್ಕೇಪ್ ಆಗಿದ್ರು.
ಇನ್ನು ಘಟನೆಯಲ್ಲಿ ಹಲ್ಲೆಗೊಳಗಾದ ಆಸೀಫ್ ಎಂಬಾತ ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದ. ದೂರು ಸಂಬಂಧ ತನಿಖೆ ಕೈಗೊಂಡ ವಿಜಯನಗರ ಪೊಲೀಸರು, ಅಂದು ವಿಜಯನಗರದಲ್ಲಿ ಹೈಡ್ರಾಮಾ ಸೃಷ್ಟಿಸಿ ಹಲ್ಲೆ ಮಾಡಿ ಲಕ್ಷಾಂತರ ರೂ ಮೌಲ್ಯದ ಬೈಕ್ ಡಕಾಯಿತಿ ಮಾಡಿದ್ದ ವಿಶ್ವಾಸ್, ಜಗನ್ನಾಥ್, ಗಜೇಂದ್ರ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.
ಎದೆಹಾಲಿನ ಸಮಸ್ಯೆ; 20ನೇ ಮಹಡಿಯಿಂದ ಬಿದ್ದು ಬಾಣಂತಿ ಆತ್ಮಹತ್ಯೆಗೆ ಶರಣು
ಅಸಲಿಗೆ ಗಾಯಗೊಂಡ ಆಸೀಫ್ ಸ್ಪೊರ್ಟ್ಸ್ ಹಾಗೂ ಹೈ ಪ್ರೊಫೈಲ್ ಬೈಕ್ ಗಳ ಡೀಲರ್ ಆಗಿದ್ದಾರಂತೆ. ಇನ್ನು ವಿಶ್ವಾಸ್ ಅವರ ಜೊತೆ ಗಾಡಿ ಸಂಬಂಧಿತ ವ್ಯವಹಾರ ನಡೆಸಿದ್ದನಂತೆ. ಆರಂಭದಲ್ಲಿ ಇಬ್ಬರ ನಡುವೆ ಎಲ್ಲವೂ ಉತ್ತಮ ರೀತಿಯಲ್ಲಿ ವ್ಯವಹಾರ ನಡೆದಿದೆ. ಆದ್ರೆ ಈ ನಡುವೆ ಹಣಕಾಸಿನ ವಿಚಾರವಾಗಿ ಮನಸ್ತಾಪ ಶುರುವಾಗಿತ್ತಂತೆ. ಬಳಿಕ ಇಬ್ಬರ ನಡುವೆ ನಡೆದ ವ್ಯಾವಹಾರಿಕ ಭಿನ್ನಭಿಪ್ರಾಯಕ್ಕೆ ವಿಶ್ವಾಸ್ ಅಂದು ಹಲ್ಲೆ ಮಾಡಿ, ತನ್ನ ಕಾರ್ ಅಲ್ಲೇ ಬಿಟ್ಟು ಬೈಕ್ ತೆಗೆದುಕೊಂಡು ಹೊಗಿರೋದು ಬೆಳಕಿಗೆ ಬಂದಿದೆ.
Belagavi Crime: ಕ್ರಿಕೆಟ್ ಮೈದಾನಕ್ಕೆ ಕಾರು ನುಗ್ಗಿಸಬೇಡಿ ಎಂದ ಇಬ್ಬರು ಯುವಕರನ್ನು
ಸದ್ಯ ವಿಜಯನಗರದಲ್ಲಿ ನಡೆದ ಹೈಡ್ರಾಮಾ ಸಂಬಂಧ ಡಕಾಯಿತಿ ಪ್ರಕರಣ ದಾಖಲಿಸಿಕೊಂಡಿದ್ದ ವಿಜಯನಗರ ಪೊಲೀಸರು ಆರು ಮಂದಿ ಬಂಧಿಸಿದ್ದಾರೆ. ಇನ್ನು ಈ ಗಲಾಟೆ ಹಿಂದೆ ವ್ಯವಹಾರಿಕ ವೈಮನಸ್ಸು ಈ ಹಿಂದಿನಿಂದಲೂ ಇರೋದು ಸಹ ಪತ್ತೆಯಾಗಿದೆ. ಆದ್ರೆ ಅದೇನೆ ಇದ್ರು, ವ್ಯಾಪಾರ ಅನ್ನೊದನ್ನ ಮಾತು ಕಥೆ ಮಾಡಿ ಶಾಂತ ರೀತಿಯಲ್ಲಿ ಮುಗಿಸಿಕೊಳ್ಳೊದು ಬಿಟ್ಟು, ಹೀಗೆ ರಸ್ತೆಯಲ್ಲಿ ಹೈಡ್ರಾಮಾ ಸೃಷ್ಟಿಸಿಕೊಂಡು ಜೈಲು ಸೇರಿದ್ದು ವಿಪರ್ಯಾಸ.