Bengaluru theft case: ಆಭರಣಗಳ ಫೋಟೋ ತೆಗೆವ ನೆಪದಲ್ಲಿ1.64 ಕೋಟಿ ಚಿನ್ನ ದೋಚಿದ್ದವರ ಸೆರೆ

Kannadaprabha News   | Kannada Prabha
Published : Jun 17, 2026, 05:34 AM IST
Arrest made for stealing Rs 1.64 crore gold on pretext of taking photos of jewellery

ಸಾರಾಂಶ

ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಸಿಬ್ಬಂದಿಗೆ 1.64 ಕೋಟಿ ರೂ. ವಂಚಿಸಿದ್ದ ಮುಂಬೈ ಮೂಲದ ಇಬ್ಬರನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಆಭರಣಗಳ ಫೋಟೋ ತೆಗೆಯುವ ನೆಪದಲ್ಲಿ ಪಕ್ಕದ ಕೋಣೆಗೆ ಹೋಗಿ, ಅಲ್ಲಿಂದಲೇ ಚಿನ್ನದೊಂದಿಗೆ ಪರಾರಿಯಾಗಿದ್ದರು. 

ಬೆಂಗಳೂರು (ಜೂ.17): ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಶಾಪ್‌ ಸಿಬ್ಬಂದಿಯಿಂದ 1.64 ಕೋಟಿ ರು. ಮೌಲ್ಯದ ಚಿನ್ನಾಭರಣ ದೋಚಿದ್ದ ಮುಂಬೈ ಮೂಲದ ಇಬ್ಬರು ಆರೋಪಿಗಳನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಮುಂಬೈ ಮೂಲದ ಪರೇಶ್‌ ಸೋನಿ(Paresh sony) (49) ಹಾಗೂ ಪ್ರವೀಣ್‌ ಅಲಿಯಾಸ್‌ ಪಪ್ಪು(44) ಬಂಧಿತರು. ಶ್ಯಾಮ್‌ ಹಾಗೂ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ.

ಆರೋಪಿಗಳು ಮೇ 16ರಂದು ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಿದ್ದ ಕಚೇರಿಯೊಂದರಲ್ಲಿ ಈ ಕೃತ್ಯ ನಡೆದಿತ್ತು. ಬಂಧಿತರಿಂದ 1.64 ಕೋಟಿ ರು. ಮೌಲ್ಯದ 1.08 ಕೆ.ಜಿ ಚಿನ್ನದ ಗಟ್ಟಿಗಳನ್ನು ಜಪ್ತಿ ಮಾಡಲಾಗಿದೆ.

ಚಿಕ್ಕಪೇಟೆಯ ಮಹೇಂದ್ರ ಕುಮಾರ್‌ ಡಿ. ಜೈನ್‌ ಎಂಬುವರು ಮೇ 16ರಂದು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ಮಹಾರಾಷ್ಟ್ರದಲ್ಲೂ ಆಭರಣ ಖರೀದಿಸುವುದಾಗಿ ನಂಬಿಸಿ ಆರೋಪಿಗಳು ವಂಚಿಸಿದ್ದರು. ಮಹಾರಾಷ್ಟ್ರದ 15 ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಇದೇ ಮೊದಲ ಬಾರಿ ಆರೋಪಿಗಳು ಕೈಚಳಕ ತೋರಿಸಿದ್ದಾರೆ. ಮಹಾರಾಷ್ಟ್ರ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿದ್ದು, ಅಲ್ಲಿನ ಪೊಲೀಸರು ಬಾಡಿ ವಾರಂಟ್ ಮೇಲೆ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಿದ್ದಾರೆ.

ಆರೋಪಿಗಳು ಮುಂಬೈನ ಜವಾರಿ ಬಜಾರ್ ಸೇರಿ ಹಲವು ಕಡೆ ಆಭರಣಗಳನ್ನು ಆರೋಪಿಗಳು ಮಾರಾಟ ಮಾಡಿದ್ದರು. ನಗರ್ತಪೇಟೆಯ ಮೆಹ್ತಾ ಗೋಲ್ಡ್ ಮಳಿಗೆಯ ಮಾರಾಟ ವಿಭಾಗದ ವ್ಯವಸ್ಥಾಪಕರಾಗಿ ಮಹೇಂದ್ರ ಕುಮಾರ್ ಜೈನ್‌ ಹಾಗೂ ಸಹಾಯಕ ವ್ಯವಸ್ಥಾಪಕರಾಗಿ ಗೌತಮ್‌ ಕೆಲಸ ಮಾಡುತ್ತಿದ್ದರು. ಮಲ್ಲೇಶ್ವರದಲ್ಲಿ ಮಾಹಿ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಆರೋಪಿ ಪರೇಶ್‌ ಸೋನಿ ಮಳಿಗೆ ತೆರೆದಿದ್ದರು. ಮೇ 16ರಂದು ಗೌತಮ್‌ಗೆ ಕರೆ ಮಾಡಿ ತಮ್ಮ ಸಂಸ್ಥೆಗೆ ಭಾರಿ ಪ್ರಮಾಣದ ಆಭರಣಗಳು ಬೇಕಾಗಿವೆ ಎಂಬುದಾಗಿ ಹೇಳಿದ್ದರು. ಹೀಗಾಗಿ, ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ಕಚೇರಿಗೆ ಚಿನ್ನಾಭರಣಗಳ ಮಾದರಿಯನ್ನು ತಂದು ತೋರಿಸುವಂತೆ ಕೋರಿದ್ದರು. ಮಹೇಂದ್ರ ಕುಮಾರ್ ಜೈನ್‌ ಮತ್ತು ಸಿಬ್ಬಂದಿ ಪ್ರಕಾಶ್‌ ಮಲ್ಲೇಶ್ವರದಲ್ಲಿರುವ ಕಚೇರಿಗೆ ಆಭರಣಗಳ ಜತೆಗೆ ಬಂದಿದ್ದರು.

ಫೋಟೋ ತೆಗೆಯುವ ನೆಪದಲ್ಲಿ ಚಿನ್ನ ದೋಚಿದ್ದರು

ಆರೋಪಿಗಳಾದ ಪರೇಶ್ ಸೋನಿ, ಶ್ಯಾಮ್ ಹಾಗೂ ಚಂದ್ರಶೇಖರ್‌ ಅವರು ಚಿನ್ನಾಭರಣಗಳ ಮಾದರಿಯನ್ನು ನೋಡಿ, ಆಭರಣಗಳ ಫೋಟೋ ತೆಗೆಯುವ ನೆಪದಲ್ಲಿ ಪಕ್ಕದ ಕೋಣೆಗೆ ಆಭರಣಗಳನ್ನು ಕೊಂಡೊಯ್ದಿದ್ದರು. ಕೆಲ ಸಮಯ ಕಳೆದರೂ ಆರೋಪಿಗಳು ಕೋಣೆಯಿಂದ ಹೊರಕ್ಕೆ ಬಂದಿಲ್ಲ. ಕೋಣೆಯ ಒಳಗೆ ಹೋಗಿ ಪರಿಶೀಲಿಸಿದಾಗ, ಆಭರಣ ಸಹಿತ ಆರೋಪಿಗಳು ನಾಪತ್ತೆ ಆಗಿರುವುದು ಪತ್ತೆಯಾಗಿತ್ತು. ಬಳಿಕ ಠಾಣೆಗೆ ಬಂದು ಮಹೇಂದ್ರ ಕುಮಾರ್‌ ಡಿ. ಜೈನ್‌ ದೂರು ನೀಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಾಗ್ಪುರದಲ್ಲಿ ಬೆಚ್ಚಿಬೀಳಿಸುವ ಕೃತ್ಯ, ಏರ್ ಫೋರ್ಸ್ ಅಧಿಕಾರಿಯ ಪತ್ನಿ ಮೇಲೆ ಗ್ಯಾಂಗ್‌ನಿಂದ ದೌರ್ಜನ್ಯ: ಮತಾಂತರದ ವೀಡಿಯೋ ವೈರಲ್!
ಬುರುಡೆ ಗ್ಯಾಂಗ್‌ನಿಂದ ಜೀವ ಬೆದರಿಕೆಯಿದೆ: ಮಾಸ್ಕ್‌ಮ್ಯಾನ್ ಚಿನ್ನಯ್ಯ ಆರೋಪ! ಅಷ್ಟಕ್ಕೂ SIT ಗೆ ಸಲ್ಲಿಸಿದ ದೂರಿನಲ್ಲಿ ಏನಿದೆ?